ಹಾಲಿನಂತ ಯೋಚನೆ! ಬಾಣಂತಿಯರಿಗಾಗಿ ಬರುತಿದೆ ಹೊಸ ಯೋಜನೆ

Nov 7, 2019, 8:25 PM IST

ಬೆಂಗಳೂರು (ನ.07): ಬಾಣಂತಿಯರ ಆರೋಗ್ಯ ಕಾಪಾಡಲು BBMP ಮುಂದಾಗಿದೆ. ಬಾಣಂತಿಯರಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಲು BBMP ಹೆರಿಗೆ ಆಸ್ಪತ್ರೆಗಳಲ್ಲಿ ಸದ್ಯದಲ್ಲೆ ಹಾಲು ವಿತರಣೆಗೆ ಚಾಲನೆ ನೀಡಲಿದೆ. 

ಬೆಂಗಳೂರಿನಲ್ಲಿರುವ ಒಟ್ಟು 32 ಹೆರಿಗೆ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಹಾಲು ನೀಡಲು ಯೋಜನೆಯನ್ನು BBMP ಆರೋಗ್ಯ ಇಲಾಖೆ ಹಾಕಿಕೊಂಡಿದ್ದು,  ದಿನಕ್ಕೆ ಎರಡು ಬಾರಿ ಬಾಣಂತಿಯರಿಗೆ ಹಾಲು ನೀಡುವ ಯೋಚನೆ ಇದೆ. ಪ್ರತಿ ಅವಧಿಗೆ 250 ml ಹಾಲು ನೀಡಲಿರುವ ಈ ಯೋಜನೆಗೆ ಒಟ್ಟು ವಾರ್ಷಿಕ 15 ಲಕ್ಷ ರೂ. ಖರ್ಚಾಗಲಿದೆ. 

ಇದನ್ನೂ ನೋಡಿ | ಹೀಗೂ ಉಂಟು! ಇನ್ನೊಂದು ಕಡೆ ಗರ್ಭಿಣಿಯರು ನರಳಬೇಕಾದ ಪರಿಸ್ಥಿತಿ!  

"