ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನ ಕ್ರೌರ್ಯ; ಬಡವರ ಮೇಲೆ ಯಾಕಿಲ್ಲಾ ಕನಿಕರ?

Oct 15, 2019, 2:09 PM IST

ಬೆಂಗಳೂರು (ಅ.15): ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನೊಬ್ಬ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹರಿದಾಡುತ್ತಿರುವ ಈ ವಿಡಿಯೋ ಅದೆಲ್ಲೋ ಉತ್ತರ ಪ್ರದೇಶ ಅಥವಾ ಬಿಹಾರದ್ದು ಅಲ್ಲ! ನಮ್ಮ ಬೆಂಗಳೂರಿನದ್ದೇ! ಆ ಗಾರ್ಡ್ ಪೆಟ್ಟು ತಿನ್ನುತ್ತಿರುವುದು ನೋಡುವಾಗ ಅಯ್ಯೋ ಪಾಪ ಅನಿಸುತ್ತದೆ. 

ಅಮಾನವೀಯ ರೀತಿಯಲ್ಲಿ ಗಾರ್ಡ್ ಮೇಲೆ ಮಾಲೀಕ ಹಲ್ಲೆ ನಡೆಸುತ್ತಿದ್ದು,  ಅಲ್ಲೇ ಇದ್ದವರು ಯಾರೋ ಅದನ್ನು ರೆಕಾರ್ಡ್ ಮಾಡಿದ್ದಾರೆ. 

ಕಳೆದ ತಿಂಗಳು ಬೆಂಗಳೂರು ಪೊಲೀಸ್ ಪೇದೆಯೊಬ್ಬನ ದುಂಡಾವರ್ತನೆ ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್‌ನೊಳಗೊಬ್ಬ ಗೂಂಡಾ; ರಸೀದಿ ಕೇಳಿದ್ದಕ್ಕೆ ಗೂಸ!