ಮಕ್ಕಳ ಜೊತೆ ಚೆನ್ನಾಗಿರದೇ ಮೊಮ್ಮಕ್ಕಳನ್ನ ಪ್ರೀತಿಸ್ತಾರೆ; ಸಮಾಜದ ಹುಳುಕು ಹೇಳಿದ ನಟಿ ನೀತೂ!

Published : Apr 30, 2024, 09:59 PM ISTUpdated : Apr 30, 2024, 10:01 PM IST
ಮಕ್ಕಳ ಜೊತೆ ಚೆನ್ನಾಗಿರದೇ ಮೊಮ್ಮಕ್ಕಳನ್ನ ಪ್ರೀತಿಸ್ತಾರೆ; ಸಮಾಜದ ಹುಳುಕು ಹೇಳಿದ ನಟಿ ನೀತೂ!

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಅದೊಂದು ಕಾಲದಲ್ಲಿ ಮಿಂಚಿ ಬಳಿಕ ನಿಧಾನಕ್ಕೆ ಮರೆಯಾದ ನಟಿ ನೀತೂ. ಮೂಲತಃ ಮಂಗಳೂರಿನವರಾದ ನಟಿ ನೀತು, ಕನ್ನಡದಲ್ಲಿ ಗಾಳಿಪಟ, ಫೋಟೋಗ್ರಾಫರ್, ಜೋಕ್‌ ಫಾಲ್ಸ್, ಪೂಜಾರಿ, ಮೊಂಬತ್ತಿ ..

ಸ್ಯಾಂಡಲ್‌ವಡ್ ನಟಿ ನೀತೂ (Neethu) ಸಂದರ್ಶನವೊಂದರಲ್ಲಿ ಅಪ್ಪ-ಅಮ್ಮ ಹೇಗಿರಬೇಕು ಎಂಬ ಬಗ್ಗೆ ಹೇಳಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದರೆ, ಪೋಷಕರು ತಮ್ಮ ಮಕ್ಕಳ ಮುಂದೆ ಜಗಳವಾಡಬಾರದು ಎಂದಿದ್ದಾರೆ. ಅಷ್ಟೇ ಅಲ್ಲ, ಸಾಧ್ಯವಾದಷ್ಟೂ ಭಿನ್ನಾಭಿಪ್ರಾಯಗಳನ್ನು ಮರೆತು  ಆತ್ಮೀಯತೆಯಿಂದ ಇರಬೇಕು ಎಂದಿದ್ದಾರೆ. ಕಾರಣ, ಪೋಷಕರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು, ಅದನ್ನು ಮಕ್ಕಳ ಮುಂದೆ ತೋರಿಸದೇ ನಾಟಕವಾಡಿದರೆ ಅದನ್ನು ಮಕ್ಕಳು ಖಂಡಿತ ಗಮನಿಸುತ್ತಾರೆ. ಅದು ಮಕ್ಕಳಿಗೆ ತಿಳಿಯುವುದಿಲ್ಲ ಎಂಬುದು ಶುದ್ಧ ಸುಳ್ಳು. ಯಾಕೆಂದರೆ, ಎಲ್ಲ ಮಕ್ಕಳೂ ಕೂಡ ಹೇಳಿದನ್ನು ಕೇಳುವುದಕ್ಕಿಂತ ನೋಡಿ, ಅರ್ಥೈಸಿಕೊಂಡು ಕಲಿಯುವುದೇ ಉತ್ತಮ. 

ಸಮಾಜದಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಅದೇನು ಎಂದರೆ, ಬಹುತೇಕ ಪೋಷಕರು ತಮ್ಮ ಮಕ್ಕಳ ಜತೆ ಚೆನ್ನಾಗಿ ಇರುವುದಿಲ್ಲ. ಆದರೆ, ತಮ್ಮ ಮಕ್ಕಳ ಮಕ್ಕಳ ಜತೆ, ಅಂದರೆ, ಮೊಮ್ಮಕ್ಕಳ ಜತೆ ಚೆನ್ನಾಗಿ ಇರುತ್ತಾರೆ. ಅಂದರೆ, ಅವರು ಮಕ್ಕಳಿಗೆ ಯಾವ ಪಾಠ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ಮಕ್ಕಳ ಜತೆ ಚೆನ್ನಾಗಿಲ್ಲದೇ ಮೊಮ್ಮಕ್ಕಳ ಜತೆ ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರಾ? ಇವೆಲ್ಲ ಸೂಕ್ಷ್ಮ ಸಂಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂಬಾರ್ಥದಲ್ಲಿ 'ಗಾಳಿಪಟ' ಸಿನಿಮಾ ಖ್ಯಾತಿಯ ನಟಿ ನೀತೂ ಮಾತನಾಡಿದ್ದಾರೆ. 

ಲವ್ ಬಗ್ಗೆ ಅದಿನ್ನೆಂಥಾ ಸ್ಟಡಿ ಮಾಡಿದಾರೋ ಏನೋ, ಮೃಣಾಲ್ ಠಾಕೂರ್ ಮಾತಿಗೆ ನೆಟ್ಟಿಗರು ಫಿದಾ!

ಸ್ಯಾಂಡಲ್‌ವುಡ್‌ನಲ್ಲಿ ಅದೊಂದು ಕಾಲದಲ್ಲಿ ಮಿಂಚಿ ಬಳಿಕ ನಿಧಾನಕ್ಕೆ ಮರೆಯಾದ ನಟಿ ನೀತೂ. ಮೂಲತಃ ಮಂಗಳೂರಿನವರಾದ ನಟಿ ನೀತು, ಕನ್ನಡದಲ್ಲಿ ಗಾಳಿಪಟ, ಫೋಟೋಗ್ರಾಫರ್, ಜೋಕ್‌ ಫಾಲ್ಸ್, ಪೂಜಾರಿ, ಮೊಂಬತ್ತಿ ಹಾಗೂ 1988 ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದವರು. ಯೋಜರಾಜ್ ಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಂತೂ ದಿಗಂತ್ ಎದುರು ಬಜಾರಿ ಪಾತ್ರದಲ್ಲಿ ಅಕ್ಷರಶಃ ಮಿಂಚಿದ್ರು ನೀತೂ. ತಮ್ಮದೇ ಹೆಸರಿನ ಕೊನೆಯ ಅಕ್ಷರವನ್ನು ಅವರು ಬಳಸುವ ಸಂಭಾಷಣೆಯಲ್ಲಿ 'ಥೂ' ಎಂದು ಬಳಸಿ ಜನರಿಗೆ ಸಖತ್ ಮನರಂಜನೆ ನೀಡಿದ್ದರು ನೀತೂ. 

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಭಾರೀ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

ಒಟ್ಟಿನಲ್ಲಿ, ಸಮಾಜದಲ್ಲಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ಬೆಗೆ ಉತ್ತರಿಸಿ ಕೆಲವೊಂದು ಸಂಗತಿಗಳನ್ನು ಹೇಳಿದ್ದಾರೆ ನೀತೂ. 'ಕಾಲಾಯ ತಸ್ಮೈ ನಮಃ' ಎಂಬಂತೆ, ಒಬ್ಬೊಬ್ಬರದೂ ಒಂದೊಂದು ಕಾಲದಲ್ಲಿ ವಿಭಿನ್ನ ಸ್ಟೋರಿ, ವಿಭಿನ್ನ ಅನಿಸಿಕೆ ಎನ್ನಬಹುದು. ಇನ್ನು ನಟಿ ನೀತೂ ಬಗ್ಗೆ ಹೇಳಬೇಕು ಎಂದರೆ, ಹಲವರು ಚಿತ್ರರಂಗದಲ್ಲಿ ಅಥವಾ ಬೇರೆ ಕ್ಷೇತ್ರದಲ್ಲಿ ಒಮ್ಮೆ ಮಿಂಚಿ ಬಳಿಕ ಮರೆಯಾಗುತ್ತಾರೆ. ಆ ಸಾಲಿಗೆ ನಟಿ ನೀತೂ ಸೇರಿದ್ದಾರೆ ಎನ್ನಬಹುದು. ಆದರೆ, ಅವರು ಯಾವತ್ತೂ ಕೂಡ ತಮ್ಮ ಪಾತ್ರದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಇರುತ್ತಾರೆ ಎಂಬುದಂತೂ ನಿತ್ಯಸತ್ಯ. 

'ಆ ಕರಾಳ ರಾತ್ರಿ'ಯ ಬಗ್ಗೆ ಮಾತನಾಡಿದ ಅನುಪಮಾ ಗೌಡ; ಅಲ್ಲಿಂದ ಮುಂದಕ್ಕೆ ಜೀವನ ಹೇಗೆ ನಡೀತಿದೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?