ಉರ್ಫಿ ಜಾವೇದ್ ಫ್ಯಾಶನ್ ಊಹೆಗೂ ನಿಲುಕದ್ದು. ಪ್ರತಿ ಭಾರಿ ಹೊಸ ಹೊಸ ಫ್ಯಾಶನ್ ಮೂಲಕ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಉರ್ಫಿಯ ಫ್ಯಾಶನ್ ನೋಡಿದರೆ ದಂಗಾಗುವುದು ಖಚಿತ. ಅಕ್ವೇರಿಯಂ ಬ್ರಾ ಧರಿಸಿರುವ ಉರ್ಫಿ, ಜೀವಂತ ಮೀನನ್ನು ಬ್ರಾದೊಳಗೆ ಬಿಟ್ಟಿದ್ದಾರೆ.
ಮುಂಬೈ(ಸೆ.03) ಮಾಡೆಲ್, ನಟಿ ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಮೂಲಕವೇ ಜನಪ್ರಿಯರಾಗಿದ್ದಾರೆ. ಪ್ರತಿ ಭಾರಿ ಹೊಸ ಹೊಸ ಫ್ಯಾಶನ್ ಮೂಲಕ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸುತ್ತಾರೆ. ಉರ್ಫಿಯ ಉಡುಗೆ ತೊಡಗೆ ಸಖತ್ ಹಾಟ್ ಮಾತ್ರವಲ್ಲ, ಅದರಾಚೆಗಿನ ಲೋಕವನ್ನು ತೆರೆದಿಡುತ್ತದೆ. ಇದೀಗ ಉರ್ಫಿ ಜಾವೇದ್ ಹೊಸ ಕ್ರಿಯೆಟಿವಿಟಿ, ಹೊಸ ಫ್ಯಾಶನ್ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಉರ್ಫಿ ತಮ್ಮ ಅಕ್ವೇರಿಯಂ ಬ್ರಾ ತೊಟ್ಟು ಝಲಕ್ ತೋರಿಸಿದ್ದಾರೆ. ಮೀನುಗಳು ತುಂಬಿದ ಫಿಶ್ ಟ್ಯಾಂಕ್ ಬ್ರಾ ಹಾಕಿ ಮೈಮಾಟ ಪ್ರದರ್ಶಿಸಿದ್ದಾರೆ.
ಉರ್ಫಿಯ ಅಕ್ವೇರಿಯಂ ಬ್ರಾದೊಳಗೆ ಜೀವಂತ ಮೀನುಗಳಿವೆ. ಕೆಂಪು ಬಣ್ಣದ ಮೀನುಗಳು ಓಡಾಡುತ್ತಿದೆ. ಹೀಗೂ ಬ್ರಾ ಬಳಕೆ ಮಾಡಬಹುದಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದರ ಅಚ್ಚರಿಯಿಲ್ಲ. ಕಾರಣ ಇದು ಟ್ರಾನ್ಸಪರೆಂಟ್ ಪ್ಲಾಸ್ಟಿಕ್. ಅದರೊಳಗೆ ನೀರು, ಆ ನೀರಿನಲ್ಲಿ ಬಣ್ಣ ಬಣ್ಣದ ಮೀನು. ಟಾಪ್ಲೆಸ್ ಆಗಿರುವ ಉರ್ಫಿ ಜಾವೇದ್ ಇದೇ ಅಕ್ವೇರಿಯೆಂ ಬ್ರಾ ಧರಿಸಿದ್ದಾರೆ.
ಆಡಿಷನ್ಗೆ ಕರ್ದು ತಬ್ಬಿಕೋ ಅಂದ್ರು, ಕ್ಯಾಮೆರಾನೇ ಇರ್ಲಿಲ್ಲ, ಆದ್ರೂ ನಾನು.. ಉರ್ಫಿ ಹೇಳಿದ್ದೇನು?
ಉರ್ಫಿ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಎಂದಿನಂತೆ ಕಮೆಂಟ್ಗಳ ಸುರಿಮಳೆಯಾಗಿದೆ. ಹಲವರು ಉರ್ಫಿಯಾ ಫ್ಯಾಶನ್ ಸೆನ್ಸ್ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಗಳಿದ್ದಾರೆ. ಇದರ ನಡುವೆ ಹಲವರು ಟ್ರೋಲ್ ಮಾಡಿದ್ದಾರೆ. ಅಕ್ವೇರಿಯಂ ಬ್ರಾದೊಳಗೆ ಮೀನಾಗುವ ಆಸೆ ಎಂದು ಕಮೆಂಟ್ ಮಾಡಿದ್ದಾರೆ.
ನಿಮ್ಮ ಫ್ಯಾಶನ್ ಏನೇ ಆಗರಲಿ ಪ್ಲಾಸ್ಟಿಕ್ಅಕ್ವೇರಿಯಂನಲ್ಲಿರುವ ಮೀನು ಆಮ್ಲಜನಕವಿಲ್ಲದೆ ಸತ್ತು ಹೋಗಲಿದೆ. ದಯವಿಟ್ಟು ನಿಮ್ಮ ಕ್ರಿಯೆಟಿವಿಟಿಗೆ ಮೀನುಗಳನ್ನು ಸಾಯಿಸಬೇಡಿ ಎಂದಿದ್ದಾರೆ. ಇನ್ನು ಕೆಲವರು ಟಾಪ್ ಲೆಸ್ ಉರ್ಫಿ ಮಾನ ಕಾಪಾಡಿದ ಮೀನು ಎಂದಿದ್ದಾರೆ. ಹಾಟ್ ಉರ್ಫಿಯ ಅವತಾರಕ್ಕೆ ಮೀನು ಅಕ್ವೇರಿಯಂನಲ್ಲೇ ಫ್ರೈ ಆಗಲಿದೆ ಎಂದಿದ್ದಾರೆ.
ಉರ್ಫಿ ಜಾವೇದ್ ಈ ರೀತಿಯ ಭಿನ್ನ ಫ್ಯಾಶನ್ ಇದೇ ಮೊದಲಲ್ಲ. ಇತ್ತೀಚೆಗೆ ಟಾಯ್ಸ್ ಕಾರುಗಳ ಮೂಲಕ ಬ್ರಾ ಮಾಡಿಕೊಂಡು ಫೋಸ್ ನೀಡಿದ್ದರು. ಉರ್ಫಿಯ ಒಂದೊಂದು ಅವತರಾವೂ ಭಿನ್ನ. ಒಂದೊಂದು ಫ್ಯಾಶನ್ ಕೂಡ ಹಾಟ್. ಇನ್ನು ಬಾಚಣಿಗೆ ಮೂಲಕ ಹಾಟ್ ಡ್ರೆಸ್ ಮಾಡಿಕೊಂಡು ಧರಿಸಿ ಫೋಸ್ ನೀಡಿದ ವಿಡಿಯೋಗಳು ವೈರಲ್ ಆಗಿತ್ತು.
ಉರ್ಫಿ ಜಾವೇದ್ ದ್ವಿಲಿಂಗಿ? ಕಾಜಲ್ ತ್ಯಾಗಿ ಜೊತೆ ಲಿಪ್ಲಾಕ್ ಫೋಟೋ ವೈರಲ್
ಉರ್ಫಿಯ ಹಲವು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಸೀರೆಯುಟ್ಟು ಭಾರಿ ಫೋಸ್ ನೀಡಿದ್ದರು. ಉರ್ಫಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಫೋಟೋ ಭಾರಿ ಸಂಚಲನ ಸೃಷ್ಟಿಸಿತ್ತು.