ಶಂಕರ್‌ ನಾಗ್-ಕಿಚ್ಚ ಸುದೀಪ್ ಫೋಟೋ ಜಗತ್ತೆಲ್ಲಾ ಸುತ್ತಾಡ್ತಿರೋದು ಯಾಕೆ, ಏನಾಯ್ತುಈಗ?

By Shriram Bhat  |  First Published Nov 10, 2024, 3:55 PM IST

ಕನ್ನಡದ ಮೇರು ನಟ ಹಾಗೂ ನಿರ್ದೇಶಕ 'ಆಟೋ ರಾಜ' ಖ್ಯಾತಿಯ ನಟ ಶಂಕರ್‌ ನಾಗ್ ಅವರು ಬಹಳಷ್ಟು ಅಭಿಮಾನಿ ಸಂಘಗಳನ್ನು ಇಂದಿಗೂ ಹೊಂದಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರ ಬಗ್ಗೆ ಈಗಿನ ಜನರೇಶನ್ನಿಗೆ ಹೇಳುವುದೇ ಬೇಡ. ಅವರು ತಮ್ಮ ಸಿನಿಮಾಗಳ.. 


ಸ್ಯಾಂಡಲ್‌ವುಡ್ ನಟರಾದ ಶಂಕರ್‌ ನಾಗ್ (Shankar Nag) ಹಾಗೂ ಕಿಚ್ಚ ಸುದೀಪ್ (Kichcha Sudeep) ಅವರಿಬ್ಬರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಎರಡು ದಿನಗಳಿಂದ ಅವರಿಬ್ಬರೂ ಜೊತೆಯಾಗಿರುವ ಫೋಟೊ ಅದೆಷ್ಟು ವೈರಲ್ ಆಗುತ್ತಿದೆ ಎಂದರೆ, ನೋಡಿದವರು 'ಶಂಕರ್‌ ನಾಗ್ ಸರ್ ಇರಬೇಕಿತ್ತು, ಕಿಚ್ಚ ಮತ್ತು ಆಟೋರಾಜ ಒಟ್ಟಿಗೇ ನಟಿಸಬೇಕಿತ್ತು..' ಅಂತಿದಾರೆ. ಹಾಗಿದ್ದರೆ, ಇದ್ದಕ್ಕಿದ್ದಂತೆ ಈ ಇಬ್ಬರ ಫೋಟೋ ವೈರಲ್ ಆಗಲು ಕಾರಣವೇನು? ಇಲ್ಲಿದೆ ಉತ್ತರ ನೋಡಿ.. 

ಹೌದು, ನಟ-ನಿರ್ದೇಶಕರಾದ ಶಂಕರ್‌ ನಾಗ್ ಅವರು ಇಂದು ನಮ್ಮೊಂದಿಗಿಲ್ಲ. ಕೇವಲ ಮೂವತ್ತೈದು ವರ್ಷಗಳು ಬದುಕಿ, 82 ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟು ಶಂಕರ್‌ ನಾಗ್ ಅವರು ಹೋಗಿಯೇಬಿಟ್ಟರು. ಆದರೆ ಅವರ ನೆನಪು ಹಾಗೂ ಅವರ ನಟನೆ-ನಿರ್ದೇಶನದ ಸಿನಿಮಾಗಳು ಅಜರಾಮರ. ಕನ್ನಡದ ಮೇರು ನಟ ಹಾಗೂ ನಿರ್ದೇಶಕ 'ಆಟೋ ರಾಜ' ಖ್ಯಾತಿಯ ನಟ ಶಂಕರ್‌ ನಾಗ್ ಅವರು ಬಹಳಷ್ಟು ಅಭಿಮಾನಿ ಸಂಘಗಳನ್ನು ಇಂದಿಗೂ ಹೊಂದಿದ್ದಾರೆ. 

Tap to resize

Latest Videos

undefined

ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!

ಇನ್ನು ನಟ ಕಿಚ್ಚ ಸುದೀಪ್ ಅವರ ಬಗ್ಗೆ ಈಗಿನ ಜನರೇಶನ್ನಿಗೆ ಹೇಳುವುದೇ ಬೇಡ. ಏಕೆಂದರೆ, ನಟ ಸುದೀಪ್ ಅವರು ತಮ್ಮ ಸಿನಿಮಾಗಳ ಮೂಲಕ ಕರ್ನಾಟಕವನ್ನೂ ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಫೇಮಸ್. ಎಸ್‌ಎಸ್‌ ರಾಜಮೌಳಿ ನಿರ್ದೇಶನದ ತೆಲುಗು ಸಿನಿಮಾ 'ಈಗ' ಮೂಲಕ ನಟ ಕಿಚ್ಚ ಸುದೀಪ್ ಅವರು ಜಗತ್ತಿನಾದ್ಯಂತ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡದಲ್ಲಿ ಕೂಡ ಸುದೀಪ್ ಅವರು ಸ್ಟಾರ್ ನಟ ಎಂಬುದನ್ನು ಮತ್ತೆ ಹೇಳಬೇಕಿಲ್ಲ!

ಆದರೆ, ಅವರಿಬ್ಬರ ಫೋಟೋ ಈಗ್ಯಾಕೆ ಹೀಗೆ ವೈರಲ್ ಆಗ್ತಿದೆ ಅಂತ ಕಾರಣ ಹುಡುಕ ಹೊರಟರೆ, ಸಿಕ್ಕ ಉತ್ತರ ಕುತೂಹಲಕಾರಿಯಾಗಿದೆ. ನಿನ್ನೆ, ಅಂದರೆ ನವೆಂಬರ್ 9 (09 November 2024) ದಿವಂಗತ ನಟ ಶಂಕರ್‌ ನಾಗ್ ಅವರ ಹುಟ್ಟುಹಬ್ಬವಿತ್ತಲ್ಲ, ಅದಕ್ಕೇ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಆ ಫೋಟೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ. ಅದೀಗ ಅಸಂಖ್ಯಾತ ಶೇರ್ ಪಡೆದುಕೊಂಡು ಪ್ರಪಂಚ ಪರ್ಯಟನೆ ಮಾಡುತ್ತಿದೆ. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ಶಂಕರ್‌ ನಾಗ್ ಹಾಗೂ ಕಿಚ್ಚ ಸುದೀಪ್ ಈ ಇಬ್ಬರೂ ಬಹಳಷ್ಟು ಫ್ಯಾನ್ಸ್‌ ಪಾಲೋವರ್ಸ್ ಹೊಂದಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಇಬ್ಬರೂ ಅಭಿಮಾನಿಗಳು ಅವರಿಬ್ಬರ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ನಟ ಶಂಕರ್‌ ನಾಗ್ ಜೊತೆಗಿನ ಸುದೀಪ್ ಫೋಟೋ ತುಂಬಾ ಲೈಕ್ಸ್ ಹಾಗೂ ಶೇರ್ ಆಗುತ್ತಿವೆ. 

click me!