ಫುಡ್ ಡಿಲೆವರಿ ಬಾಯ್ ದೀಪಿಂದರ್-ಮೆಕ್ಸಿಕೋ ಗರ್ಲ್‌ ಗಿಯಾ ಲವ್ ಮ್ಯಾರೇಜ್ ಸ್ಟೋರಿ ರಿವೀಲ್!

Published : Nov 10, 2024, 05:59 PM ISTUpdated : Nov 10, 2024, 06:07 PM IST
ಫುಡ್ ಡಿಲೆವರಿ ಬಾಯ್ ದೀಪಿಂದರ್-ಮೆಕ್ಸಿಕೋ ಗರ್ಲ್‌ ಗಿಯಾ ಲವ್ ಮ್ಯಾರೇಜ್ ಸ್ಟೋರಿ ರಿವೀಲ್!

ಸಾರಾಂಶ

'ನಾನು ಭಾರತದ ಪ್ರಸಿದ್ಧ ಫೂಡ್ ಡೆಲಿವರಿ ಅಪ್ಲಿಕೇಶನ್ ಸಂಸ್ಥೆಯಲ್ಲಿ ಉದ್ಯೋಗಿ. ನನಗೆ ಮದುವೆಯಾಗುವ ಕನಸು ಇದ್ದರೂ ಅದ್ಯಾಕೋ ಯಾವುದೇ ಹುಡುಗಿ ಇಷ್ಟವಾಗಿರಲಿಲ್ಲ. ನನ್ನ ಸ್ನೇಹಿತನೊಬ್ಬ 'ದೆಹಲಿಗೆ ಮೆಕ್ಸಿಕೋದಿಂದ ಹುಡುಗಿಯೊಬ್ಬಳು ಬಂದಿದ್ದಾಳೆ. ನೀನು ಅವಳನ್ನು.. 

ಹಿಂದಿಯ ಕಪಿಲ್ ಶೋ (The Great Indian Kapil show) ತುಂಬಾ ಫೇಮಸ್. ಉತ್ತರ-ದಕ್ಷಿಣ ಎಂಬ ಭೇದಭಾವಿಲ್ಲದೇ  ಬಹಳಷ್ಟು ಮನರಂಜನಾ ಪ್ರಿಯರು ಆ ಶೋವನ್ನು ನೋಡುತ್ತಾರೆ, ಅದರ ಬಗ್ಗೆ ಮಾತನ್ನಾಡುತ್ತಾರೆ. ಇತ್ತೀಚೆಗೆ ಕಪಿಲ್ ಶೋದಲ್ಲಿ ಬಿಸಿನೆಸ್ ಐಕಾನ್‌ಗಳಾದ ನಾರಾಯಣಮೂರ್ತಿ, ಸುಧಾ ಮೂರ್ತಿ , ದೀಪೆಂದರ್ ಗೋಯಲ್ ಹಾಗೂ ಗಿಯಾ ಗೋಯಲ್ ಅವರೆಲ್ಲರನ್ನೂ ಕರೆಸಲಾಗಿತ್ತು. ಅಲ್ಲಿ ದೀಪಿಂದರ್ ಅವರು ತಾವು ಹೇಗೆ ಗಿಯಾ ಜೊತೆ ಲವ್‌ನಲ್ಲಿ ಬಿದ್ದಿದ್ದು ಹಾಗೂ ಪ್ರಪೋಸ್ ಮಾಡಿದ್ದು ಎಂಬುದನ್ನು ಹೇಳಿಕೊಂಡಿದ್ದಾರೆ. ಅದೀಗ ಸಖತ್ ವೈರಲ್ ಆಗುತ್ತಿದೆ. 

ಹಾಗಿದ್ದರೆ ದೀಪಿಂದರ್ (Deepinder Goyal) ಮಾಡಿದ್ದೇನು? ಅದಕ್ಕೂ ಮೊದಲು ದೀಪಿಂದರ್ ಯಾರು ಎಂಬುದನ್ನು ಸಂಕ್ಷಿಪ್ತವಾಗಿ ನೋಡಿಬಿಡೋಣ. ಅವರೊಬ್ಬರು ಭಾರತದ ಮುಂಚೂಣಿಯಲ್ಲಿರುವ ಫುಡ್ ಡೆಲಿವರಿ ಆಪ್‌ನಲ್ಲಿ ಕೆಲಸ ಮಾಡುವವರು. ಅವರು ಮೆಕ್ಸಿಕೋಕ (Mexico) ಗಿಯಾ (Gia Goyal) ಅವರನ್ನು ಕಸ್ಟಮರ್‌ ಆಗಿ ಆಪ್‌ ಮೂಲಕ ಬೇಟಿಯಾಗಿದ್ದರಷ್ಟೇ. ಆದರೆ, ಅದಕ್ಕೂ ಮೀರಿ ಅವರಲ್ಲಿ ಮೊದಮೊದಲು ಏನೂ ಇರಲಿಲ್ಲ. ಆದರೆ, ಉಳಿದೆಲ್ಲವೂ ಆಗಿದ್ದು ಅವರ ಸ್ನೇಹಿತನ ಮೂಲಕ ಎಂಬುದನ್ನು ದೀಪಿಂದರ್ ಬಹಿರಂಗ ಪಡಿಸಿದ್ದಾರೆ. ಹಾಗಿದ್ರೆ, ಈ ಲವ್ ಸ್ಟೋರಿ ಏನು? ಓವರ್ ಟು ದೀಪೆಂದರ್.. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

'ನಾನು ಭಾರತದ ಪ್ರಸಿದ್ಧ ಫೂಡ್ ಡೆಲಿವರಿ ಅಪ್ಲಿಕೇಶನ್ ಸಂಸ್ಥೆಯಲ್ಲಿ ಉದ್ಯೋಗಿ. ನನಗೆ ಮದುವೆಯಾಗುವ ಕನಸು ಇದ್ದರೂ ಅದ್ಯಾಕೋ ಯಾವುದೇ ಹುಡುಗಿ ಇಷ್ಟವಾಗಿರಲಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಸೆಟ್ ಆಗಿರಲಿಲ್ಲ. ಪ್ರಯತ್ನ ಕೂಡ ಅಷ್ಟೊಂದೇನೂ ನಡೆಯುತ್ತಿರಲಿಲ್ಲ. ಆದರೆ, ನನ್ನ ಸ್ನೇಹಿತನೊಬ್ಬ 'ದೆಹಲಿಗೆ ಮೆಕ್ಸಿಕೋದಿಂದ ಹುಡುಗಿಯೊಬ್ಬಳು ಬಂದಿದ್ದಾಳೆ. ನೀನು ಅವಳನ್ನು ಭೇಟಿಯಾಗಬೇಕು.. ನಿನಗೆ ಅವಳು ಡೇಟಿಂಗ್ ಮಾಡಲು ಸೂಕ್ತ ವ್ಯಕ್ತಿ..' ಅಂದುಬಿಟ್ಟ. 

ನನಗೆ ಒಮ್ಮೆ ಅಚ್ಚರಿಯಾದರೂ ಕೂಡ ಸುಮ್ಮನಿದ್ದೆ. ಬಳಿಕ ನನಗೆ ಒತ್ತಾಯಿಸಿದ ಆತ 'ನೀನು ಡೇಟಿಂಗ್ ಮಾಡಿ ಅವಳನ್ನೇ ಮದುವೆ ಆಗಬೇಕು. ಅವಳು ಕೇಔಲ ಡೇಟಿಂಗ್ ಮಾಡುವಂಥ ಹುಡುಗಿ ಮಾತ್ರವಲ್ಲ, ಮದುವೆಗೆ ಕೂಡ ಯೋಗ್ಯಳಾದ ಕನ್ಯೆ..' ಎಂದುಬಿಟ್ಟ. ಸರಿ ಎಂದು ಆತನ ಮಾತಿನಂತೆ ನಾನು ಅವಳನ್ನು ದೆಹಲಿಯಲ್ಲಿ ಭೇಟಿಯಾಗಿ, ಡೇಟಿಂಗ್ ಬಳಿಕ ಅವಳಿಗೆ ಪ್ರಪೋಸ್ ಮಾಡಿದೆ. ಅಂದುಕೊಂಡಂತೆ ಎಲ್ಲವೂ ನಡೆದು, ಲವ್, ಬಳಿಕ ಮ್ಯಾರೇಜ್ ನಲ್ಲಿ ನಮ್ಮಿಬ್ಬರ ದಾಂಪತ್ಯ ಶುರುವಾಯ್ತು..' ಎಂದಿದ್ದಾರೆ ದೀಪಿಂದರ್ ಗೋಯಲ್. 

ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

ಎಲ್ಲರನ್ನೂ ತಮಾಷೆಗೆ ಗೋಳುಹುಯ್ದುಕೊಳ್ಳುವ ಕಪಿಲ್ ಸುಮ್ಮನೇ ಇದ್ದಾರೆಯೇ? ಗಿಯಾ ಅವರಿಗೆ 'ನಿಮಗೆ ಇಷ್ಟವಾದ ಪಂಜಾಬಿ ಫುಡ್ ಯಾವುದು?' ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಗಿಯಾ 'ಚೋಲೆ ಭಾತುರೆ' ಎಂದಿದ್ದಾರೆ. ಗಿಯಾ 'Chole Bhature' ಎಂದು ಹೇಳುವುದಕ್ಕೂ ಮೊದಲು ಮಾತನಾಡಿದ್ದ ಸುಧಾ ಮೂರ್ತಿಯವರು ಆ ಚೋಲೆ ಭಾತುರೆ ಅನಾರೋಗ್ಯಕರ ಆಹಾರ ಎಂದಿದ್ದರು. ಈ ಕಾರಣಕ್ಕೆ ಗಿಯಾ ಮಾತಿಗೆ ಎಲ್ಲರೂ ಮುಸಿಮುಸಿ ನಕ್ಕುಬಿಟ್ಟರು. ಬಳಿಕ ಸುಧಾ ಮೂರ್ತಿಯವರು 'ನೀವು ಅದನ್ನೇ ಇಷ್ಟಪಟ್ಟು ತಿಂದರೂ ತುಂಬಾನೇ ಸ್ಲಿಮ್ ಆಗಿದ್ದೀರಾ' ಎಂದು ಹೇಳಿ ಅವರನ್ನು ಸಂತೈಸಿದರು. 

ಬಳಿಕ ಕಪಲ್ ಶರ್ಮಾ ಅವರು 'ಗಿಯಾ ಜೀ, ನೀವು ಭಾರತದ ಸೊಸೆಯಾಗಿ ಯಾವತ್ತಾದರೂ ಮೊದಲ ಅಡುಗೆ ಅಂತೇನಾದರೂ ಊಟಕ್ಕೆ ನಿಮ್ಮ ಗಂಡನ ಮನೆಯಲ್ಲಿ ಸಿದ್ಧಪಡಿಸಿದ್ದೀರಾ?' ಎಂದು ಕೇಳಲು ಗಿಯಾ ಅವರನ್ನು ಸಂರಕ್ಷಿಸಲು ಥಟ್ಟನೇ ದೀಪಿಂದರ್ ಅಲ್ಲಿ ಎಂಟ್ರಿ ಕೊಟ್ಟರು. 'ನಮ್ಮ ಮನೆಯಲ್ಲಿ ಊಟ ಸಿದ್ಧಪಡಿಸುವುದನ್ನು ಬ್ಯಾನ್ ಮಾಡಲಾಗಿದೆ' ಎಂದ ದೀಪಿಂದರ್ ಮಾತಿಗೆ ಅಲ್ಲಿದ್ದವರೆಲ್ಲರೂ ಮನಸೋ ಇಚ್ಛೆ ನಕ್ಕುಬಿಟ್ಟರು. ಕಾರಣ, ನಿನಗೆಲ್ಲಾ ಗೊತ್ತಿರುವಂತೆ, ದೀಪಿಂದರ್ ಫೂಡ್ ಡಿಲೆವರಿ ಸಂಸ್ಥೆಯಲ್ಲಿ ಕೆಲಸ ಮಾಡುವುದು ತಾನೆ? 

ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?