ದೃಷ್ಟಿ ಬೀಳದಿರಲಿ ದೊಡ್ಮನೆ ಕುಟುಂಬದ ಈ ಫೋಟೋಗೆ ಅಂತಿರೋದ್ಯಾಕೆ ನೆಟ್ಟಿಗರು!

By Shriram Bhat  |  First Published Nov 10, 2024, 1:32 PM IST

ಅಣ್ಣಾವ್ರು ಹಾಗೂ ಪಾರ್ವತಮ್ಮನವರು ನಿಧನರಾಗಿ ಸಾಕಷ್ಟು ವರ್ಷಗಳು ಕಳೆದಿವೆ. ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲದೇ ಮೂರು ವರ್ಷ ಕಳೆದಿವೆ. ರಾಘಣ್ಣ ಅವರಿಗೆ ಯಾವತ್ತೋ ಕೈ ಕೊಟ್ಟ ಅನಾರೋಗ್ಯ ಇವತ್ತಿಗೂ ಬಾಧಿಸುತ್ತಿದೆ. ಇವೆಲ್ಲ ಸಾಲದು ಎಂಬಂತೆ ಇದೀಗ..


ಸೋಷಿಯಲ್ ಮೀಡಿಯಾದಲ್ಲಿ (Social Media) ಅದೊಂದು ಫೋಟೋ ಸಖತ್ ವೈರಲ್ ಆಗ್ತಿದೆ. ಆ ಮನೆಯ ಇಡೀ ಕುಟುಂಬದ ಫೋಟೋ ಅದು! ಕನ್ನಡ ನಾಡಿದ ಮನೆಮಾತಾಗಿರುವ ಫ್ಯಾಮಿಲಿಯ ಮುದ್ದಾದ ಪೊಟೋ! ಗಂಡ-ಹೆಂಡತಿ, 'ತ್ರಿಮೂರ್ತಿ'ಗಳಂತೆ ಮೂರು ಗಂಡು ಮಕ್ಕಳು, ಆರತಿಗೊಂದು ಕೀರುತಿಗೊಂದು ಎಂಬಂತೆ ಎರಡು ಹೆಣ್ಣು ಮಕ್ಕಳು. ಕುಳಿತಿರುವ ಅಪ್ಪ-ಅಮ್ಮ, ಅವರ ಜೊತೆ ನಿಂತಿರುವ ಐದು ಮಕ್ಕಳು. ಅದೊಂದು ಫೋಟೋ ನೋಡಿದರೆ ಎಂಥವರ ಮುಖದಲ್ಲೂ ಒಮ್ಮೆ ಮೂಡುವ ಅಚ್ಚರಿ, ಮೆಚ್ಚುಗೆ!

ಹಾಗಿದ್ದರೆ ಆ ಫೋಟೋ ಯಾವುದು? ಅದು ಡಾ ರಾಜ್‌ಕುಮಾರ್ ಕುಟುಂಬದ (Dr Rajkumar Family) ಫೋಟೋ. ಅದ್ಯಾಕೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತೀರಾ ವೈರಲ್ ಆಗ್ತಿದೆ.  ಆ ಫೋಟೋದಲ್ಲಿ ಇರೋರಲ್ಲಿ ಮೂರು ಜನರು ಇಂದು ನಮ್ಮೊಂದಿಗಿಲ್ಲ. ಇರುವ ನಾಲ್ವರಲ್ಲಿ ಇಬ್ಬರು ಗಂಡು ಮಕ್ಕಳಿಗೆ ಸರಿಯಾಗಿ ಹುಶಾರು ಇಲ್ಲ, ಇಬ್ಬರು ಹೆಣ್ಣುಮಕ್ಕಳು ಮದುವೆ-ಮಕ್ಕಳು ಎಂದು ಅವರ ಪಾಡಿಗೆ ಅವರಿದ್ದಾರೆ. 

Tap to resize

Latest Videos

undefined

ಐಶ್ವರ್ಯಾ ರೈ ಮಗಳು ಆರಾಧ್ಯಾ ಪಾದಕ್ಕೆರಗಿದ್ದಕ್ಕೆ ಸ್ವತಃ ಶಿವಣ್ಣ ಹೇಳಿದ್ದೇನು? ಹೀಗೂ ಉಂಟೇ?!

ಇಂಥ ಫೋಟೋ ನೋಡಿ ಬಹಳಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಜ್‌ಕುಮಾರ್, ಲಕ್ಷ್ಮೀ ರಾಜ್‌ಕುಮಾರ್ ಹಾಗೂ ಪೂರ್ಣಿಮಾ ರಾಜ್‌ಕುಮಾರ್ ಹೀಗೆ ಅಪ್ಪ-ಅಮ್ಮ ಹಾಗೂ ಮಕ್ಕಳು ಯಾವತ್ತೋ ಒಂದು ದಿನ ಒಟ್ಟಿಗೇ ಇದ್ದಾಗ ತೆಗೆಸಿಕೊಂಡಿದ್ದ ಫೋಟೋ ಅದು. ಆದರೆ, ಇಂದು ಹಾಗೆ ಎಲ್ಲರೂ ಒಟ್ಟಿಗೇ ಇರುವ ಫೋಟೋ ತೆಗೆಯಲು ದೇವರಿಂದ ಮಾತ್ರ ಸಾಧ್ಯ ಎಂಬಂತಾಗಿದೆ. 

ಹೌದು, ಅಣ್ಣಾವ್ರು ಹಾಗೂ ಪಾರ್ವತಮ್ಮನವರು ನಿಧನರಾಗಿ ಸಾಕಷ್ಟು ವರ್ಷಗಳು ಕಳೆದಿವೆ. ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲದೇ ಮೂರು ವರ್ಷ ಕಳೆದಿವೆ. ರಾಘಣ್ಣ ಅವರಿಗೆ ಯಾವತ್ತೋ ಕೈ ಕೊಟ್ಟ ಅನಾರೋಗ್ಯ ಇವತ್ತಿಗೂ ಬಾಧಿಸುತ್ತಿದೆ. ಇವೆಲ್ಲ ಸಾಲದು ಎಂಬಂತೆ ಇದೀಗ ನಟ ಶಿವರಾಜ್‌ಕುಮಾರ್ ಅವರಿಗೂ ಗಂಭೀರ ಅನಾರೋಗ್ಯ ಕಾಡುತ್ತಿದೆ. ಈ ಕಾರಣಕ್ಕೆ, ಹಲವರು 'ಕಣ್ಣು ಬೀಳದಿರಲಿ, ದೊಡ್ಮನೆ ಕುಟುಂಬದ ಮೇಲೆ..' ಅಂತ ಕಾಮೆಂಟ್ ಹಾಕ್ತಿದಾರೆ ಅನ್ನಿಸುತ್ತೆ.. 

ಯಾರಿಗೂ ಹೇಳದ 'ಬಂಗಾರದ ಮನುಷ್ಯ' ಭಾರೀ ಸಕ್ಸಸ್‌ ಗುಟ್ಟು ಉಪೇಂದ್ರಗೆ ಹೇಳಿದ್ರಂತೆ ಅಣ್ಣಾವ್ರು!

ಅದೇನೇ ಇದ್ದರೂ,  ಈ ಫೋಟೋ ನೋಡಿದರೂ ಸಾಕು, ನೆನಪುಗಳು ಬೇಡಬೇಡವೆಂದರೂ ಕಣ್ಣಿಗೆ ಕಟ್ಟುತ್ತವೆ. ನಟ ಸಾರ್ವಭೌಮ ಡಾ ರಾಜ್‌ಕುಮಾರ್, ನಿರ್ಮಾಪಕಿ ಪಾರ್ವತಮ್ಮ, ಮಕ್ಕಳಾದ ಮೂವರು ನಟರು, ಹಾಗೂ ಅಪ್ಪಟ ಗೃಹಿಣಿಯರಾಗಿ ಸಂಸಾರ ನಡೆಸುತ್ತಿರುವ ಆ ದೊಡ್ಮನೆಯ ಹೆಣ್ಣು ಮಕ್ಕಳು! ಆ ಐವರು ಮಕ್ಕಳಲ್ಲಿ ಕಿರಿಯ ಮಗ ಪುನೀತ್ ಹಾಗೂ ಮನೆಯ ಹಿರಿಯರಾದ ಡಾ ರಾಜ್-ಪಾರ್ವತಮ್ಮನವರು ಈಗ ನೆನಪುಗಳು ಮಾತ್ರ.. 

ಈಗ ಉಳಿದವರಿಗಾದರೂ ದೇವರು ಆರೋಗ್ಯ ಹಾಗೂ ಆಯುಷ್ಯ ದಯಪಾಲಿಸಲಿ ಎಂದು ಕರುನಾಡಿದ ಎಲ್ಲರೂ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ. ಕನ್ನಡಿಗರ ಹಾರೈಕೆ ಕಾಮೆಂಟ್ಸ್ ರೂಪದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಕರುನಾಡಿನ ಈ ಹಾರೈಕೆ ದೊಡ್ಮನೆಯ 'ಆರೈಕೆ'ಯೂ ಹೌದು! 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

click me!