
ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದೆ. ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಟ್ಟೆ, ಚಿನ್ನಾಭರಣ ಸೇರಿದಂತೆ ಎಲ್ಲಾ ಮಾರುಕಟ್ಟೆಯಲ್ಲಿ ಬೆಳವಣಿಗೆ ದಿಢೀರ್ ಹೆಚ್ಚಳವಾಗುತ್ತದೆ. ಬಟ್ಟೆ, ಚಿನ್ನ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಭರಾಟೆಯೂ ಹೆಚ್ಚಾಗೋದರ ಜೊತೆಗೆ ಕಲ್ಯಾಣ ಮಂಟಪ, ವಾಹನ, ಹೋಟೆಲ್, ರೂಮ್‌ಗಳ ಬುಕ್ಕಿಂಗ್ ಸಹ ಮುಂಗಡವಾಗಿಯೇ ಮಾಡಿಕೊಳ್ಳಲಾಗುತ್ತದೆ. ವಧುವನ್ನು ಕರೆತರಲು, ವರನಿಗಾಗಿ ವಿಶೇಷ ವಾಹನ ಮತ್ತು ಸಂಬಂಧಿಕರು ಆಪ್ತರಿಗಾಗಿಯೂ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಮದುವೆ ಸೀಸನ್‌ಗಳಲ್ಲಿ ಬಾಡಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಎರಡುಪಟ್ಟು ಬಾಡಿಗೆ ಹಣ ಕೊಡಲು ಸಿದ್ಧವಿದ್ದರೂ ವಾಹನಗಳು ಸಿಗಲ್ಲ. ವಾಹನಗಳು ಸಿಗದಿದ್ದರೆ ನೀವು ರೈಲುಗಳನ್ನು ಅಡ್ವಾನ್ಸ್ ಆಗಿ ಬುಕ್ ಮಾಡಿಕೊಳ್ಳಬಹುದು.
ಕೆಲವು ಸಂದರ್ಭದಲ್ಲಿ ಮದುವೆಗಾಗಿ ದೀರ್ಘ ಪ್ರಯಾಣ ಮಾಡುತ್ತಿದ್ದರೆ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ರೈಲು ಬುಕ್ ಮಾಡಬಹುದು. ನಿಮ್ಮ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಕೋಚ್ ಕಾಯ್ದಿರಿಸಬಹುದು. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದರೆ ಇಡೀ ರೈಲನ್ನೇ ಸ್ವಂತಕ್ಕೆ ಸೀಮಿತ ಅವಧಿಗಾಗಿ ಮುಂಗಡವಾಗಿ ಕಾಯ್ದಿರಿಸಬಹುದು. ರಾಜಕೀಯ ಕಾರ್ಯಕ್ರಮಕ್ಕಾಗಿ ಪಕ್ಷಗಳು ಕೆಲವೊಮ್ಮೆ ಇಡೀ ರೈಲನ್ನು ಕಾಯ್ದಿರಿಸಿರುತ್ತವೆ. ಇತ್ತೀಚೆಗೆ ರಾಮಮಂದಿರ ದರ್ಶನಕ್ಕಾಗಿ ಹಲವು ರಾಜ್ಯಗಳಿಂದ ರೈಲು/ಕೋಚ್ ಬುಕ್ ಮಾಡಲಾಗಿತ್ತು.
ಭಾರತದ ಅತ್ಯಂತ ಜನನಿಬಿಡ ಈ ನಿಲ್ದಾಣಕ್ಕೆ ಪ್ರತಿದಿನ ಬರುತ್ತವೆ 600ಕ್ಕೂ ಅಧಿಕ ರೈಲುಗಳು!
ಕೇವಲ ಒಂದು ಅಥವಾ ಎರಡು ಅದಕ್ಕಿಂತ ಹೆಚ್ಚು ಕೋಚ್ ಬುಕ್ ಮಾಡುವ ದರ ಅಧಿಕವಾಗಿರುತ್ತದೆ. ಕೋಚ್ ಬುಕಿಂಗ್‌ನಲ್ಲಿ ಪ್ರಯಾಣಿಕರು ತಮ್ಮ ಗಮ್ಯಸ್ಥಾನ ಅಥವಾ ನಿಲ್ದಾಣದಲ್ಲಿ ಇಳಿದ ಬಳಿಕ ತನ್ನ ಸಂಚಾರವನ್ನು ಮುಂದುವರಿಸುತ್ತದೆ. ಆದ್ರೆ ಇಡೀ ರೈಲು ಬುಕ್ಕಿಂಗ್ ನೀವು ಸೂಚಿಸಿದ ನಿಲ್ದಾಣದವರೆಗೆ ಮಾತ್ರ ಚಲಿಸುತ್ತದೆ. ಆದ್ರೆ ರೈಲು ಬುಕ್ಕಿಂಗ್ ದುಬಾರಿಯಾಗಿರುತ್ತದೆ. ಕೋಚ್ ಬುಕಿಂಗ್ ದರದ ಜೊತೆಯಲ್ಲಿ ಇಂಜಿನ್ ಬಾಡಿಗೆಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಎಂಜಿನ್ ದರ ಅದು ಡೀಸೆಲ್ ಅಥವಾ ಎಲೆಕ್ಟ್ರಿಕ್ ಎಂಬುದರ ಮೇಲೆ ನಿಗಧಿಯಾಗುತ್ತದೆ. ಮಾರ್ಗ ಮಧ್ಯೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ರೈಲನ್ನು ಅಲ್ಲಿ ನಿಲ್ಲಿಸಿದರೆ ಅದು ಬಾಡಿಗೆ ದರ ಮತ್ತಷ್ಟು ದುಬಾರಿಯಾಗಬಹುದು.
ಬುಕ್ ಮಾಡೋದು ಹೇಗೆ?
ಮೊದಲು ನಿಮಗೆ ಎಲ್ಲಿಂದ ಎಲ್ಲಿಯವರೆಗೆ ರೈಲು ಅಥವಾ ಕೋಚ್ ಬೇಕು ಎಂಬುದನ್ನು ನಿರ್ಧರಿಸಿಕೊಂಡು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಭೇಟಿಯಾಗಬೇಕು. ಭಾರತೀಯ ರೈಲ್ವೆಯ ಅಧಿಕಾರಿಗಳು ಆಸನಗಳ ಲೆಕ್ಕದಲ್ಲಿ ದರವನ್ನು ಲೆಕ್ಕ ಹಾಕಿ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ನಂತರ ನೀವು ಬುಕಿಂಗ್ ಕಚೇರಿಯಿಂದ ಸರ್ಕ್ಯೂಲರ್ ಟಿಕೆಟ್ ಖರೀದಿಸಬೇಕು. ಈ ರೀತಿಯಾಗಿ ರೈಲನ್ನು ಬುಕ್ ಮಾಡಬಹುದಾಗಿದೆ. ಕೋಚ್ ಅಥವಾ ಇಡೀ ರೈಲು ಬುಕ್ ಮಾಡೋದು ನಿಮ್ಮ ಆಯ್ಕೆಗೆ ಬಿಟ್ಟಿದಾಗಿರುತ್ತದೆ.
ಭಾರತದ ಈ ರೈಲು ನಿಲ್ದಾಣ ಪ್ರವೇಶಕ್ಕೆ ಬೇಕು ಪಾಸ್‌ಪೋರ್ಟ್, ವೀಸಾ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.