ಹೊಸ ಪ್ರಯತ್ನಕ್ಕೆ ಮುಂದಾದ ಟ್ವೀಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸೆ: ಹಾರ್ಡ್‌ವೇರ್ ಕ್ರಿಪ್ಟೋ ವ್ಯಾಲೆಟ್ ಬಹಿರಂಗ

By Suvarna NewsFirst Published Apr 8, 2022, 1:59 PM IST
Highlights

ಹಾರ್ಡ್‌ವೇರ್ ವ್ಯಾಲೆಟ್ ಎನ್ನುವುದು ವಿಶೇಷ ರೀತಿಯ ಬಿಟ್‌ಕಾಯಿನ್ ವ್ಯಾಲೆಟ್ ಆಗಿದ್ದು ಅದು ಬಳಕೆದಾರರ ಖಾಸಗಿ ಕೀಗಳನ್ನು ಸುರಕ್ಷಿತ ಹಾರ್ಡ್‌ವೇರ್ ಸಾಧನದಲ್ಲಿ ಸಂಗ್ರಹಿಸುತ್ತದೆ

Hardware Crypto Wallet: ಟ್ವೀಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಗಳತ್ತ ತಮ್ಮ ಗಮನವನ್ನು ಹರಿಸಿದ್ದಾರೆ. ಇದೀಗ ಅವರ ಸಂಸ್ಥೆ ಬ್ಲಾಕ್(Block), ಹಾರ್ಡ್‌ವೇರ್ ಕ್ರಿಪ್ಟೋ ವ್ಯಾಲೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದುಇದು ಜನರಿಗೆ ತಮ್ಮ ಬಿಟ್‌ಕಾಯಿನ್ ಮಾಹಿತಿಯನ್ನು ಸುರಕ್ಷಿತವಾಗಿಡಲು  ಮತ್ತು ನಿರ್ವಹಿಸಲು ಸಹಾಯ ಮಾಡುವ ಸಾಧನವಾಗಿದೆ. ಡಿಸೆಂಬರ್‌ನಲ್ಲಿ, ಡಾರ್ಸೆಯ ಹಣಕಾಸು ಸೇವೆಗಳ ಕಂಪನಿ ಸ್ಕ್ವೇರ್ ತನ್ನ ಹೆಸರನ್ನು ಬ್ಲಾಕ್ ಎಂದು ಬದಲಾಯಿಸಿದೆ. 

ವಿಶ್ವದಾದ್ಯಂತ ಕ್ರಿಪ್ಟೋಕರೆನ್ಸಿ ಈಗ ಟ್ರೆಂಡಿಂಗ್‌ ಟಾಪಿಕ್.‌ ಭಾರತದಲ್ಲೂ ಕೂಡ ಕ್ರಿಪ್ಟೋಕರೆನ್ಸಿ ಸಾಕಷ್ಟು ಸದ್ದು ಮಾಡುತ್ತಿದ್ದು, ಕೇಂದ್ರ ಬಜೆಟ್‌ನಲ್ಲೂ ಕ್ರಿಪ್ಟೋ ಬಗ್ಗೆ ಚರ್ಚೆಯಾಗಿತ್ತು. ಅಲ್ಲದೇ 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಡಿಜಿಟಲ್‌ ಕರೆನ್ಸಿ ಕೂಡ ಬಿಡುಗಡೆ ಮಾಡಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇಂಥಹ ಸಾಧನಗಳ  ಡಿಮ್ಯಾಂಡ್‌ ಹೆಚ್ಚಲಿದೆ.  ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಹಾರ್ಡ್‌ವೇರ್ ವ್ಯಾಲೆಟ್ ಲಭ್ಯವಿದ್ದು ಈ ಪಟ್ಟಿಗೆ ಬ್ಲಾಕ್ ಸಾಧನ ಸೇರ್ಪಡೆಯಾಗಲಿದೆ. 

Latest Videos

ಇದನ್ನೂ ಓದಿಗೂಗಲ್ ಪ್ಲೇ ಸ್ಟೋರ್‌ ಮಹತ್ವದ ಬದಲಾವಣೆ: ನವೆಂಬರ್‌ನಿಂದ ಈ ಆ್ಯಪ್ಸ್‌ ಡೌನ್‌ಲೋಡ್‌ ಅಸಾಧ್ಯ

ಹಾರ್ಡ್‌ವೇರ್ ವ್ಯಾಲೆಟ್ ಎಂದರೇನು?:  ಹಾರ್ಡ್‌ವೇರ್ ವ್ಯಾಲೆಟ್ ಎನ್ನುವುದು ವಿಶೇಷ ರೀತಿಯ ಬಿಟ್‌ಕಾಯಿನ್ ವ್ಯಾಲೆಟ್ ಆಗಿದ್ದು ಅದು ಬಳಕೆದಾರರ ಖಾಸಗಿ ಕೀಗಳನ್ನು ಸುರಕ್ಷಿತ ಹಾರ್ಡ್‌ವೇರ್ ಸಾಧನದಲ್ಲಿ ಸಂಗ್ರಹಿಸುತ್ತದೆ. ಅವು ಪ್ರಮಾಣಿತ ಸಾಫ್ಟ್‌ವೇರ್ ವ್ಯಾಲೆಟ್‌ಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿವೆ. ಇದರಲ್ಲಿ ಖಾಸಗಿ ಕೀಲಿಗಳನ್ನು ( Private keys) ಮೈಕ್ರೋಕಂಟ್ರೋಲರ್‌ನ ಸಂರಕ್ಷಿತ ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸರಳ ಪಠ್ಯದಲ್ಲಿ ಸಾಧನದಿಂದ ಹೊರಗೆ ವರ್ಗಾಯಿಸಲಾಗುವುದಿಲ್ಲ. 

ಮೊಬೈಲ್ ಅಪ್ಲಿಕೇಶನ್‌ ಜತೆಗೆ ಹಾರ್ಡವೇರ್:  ಜೂನ್ 2021 ರಲ್ಲಿ ಕ್ರಿಪ್ಟೋ ವ್ಯಾಲೆಟ್‌ನಲ್ಲಿ ತನ್ನ ಕಂಪನಿಯ ಕೆಲಸವನ್ನು ಡಾರ್ಸೆ ಘೋಷಿಸಿದ್ದರು. ಬ್ಲಾಕ್‌ನ ಹಾರ್ಡ್‌ವೇರ್ ಲೀಡ್, ಜೆಸ್ಸಿ ಡೊರೊಗುಸ್ಕರ್, ಈಗ ಫಿಂಗರ್‌ಪ್ರಿಂಟ್ ರೀಡರ್‌ಗಳು ಮತ್ತು ಯುಎಸ್‌ಬಿ-ಸಿ ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಂತೆ ಹಲವಾರು ಸಾಧನಗಳನ್ನು ತೋರಿಸುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಎರಡೂ ಸಾಧನಗಳು ಬ್ಲಾಕ್ ತನ್ನ ಹಾರ್ಡ್‌ವೇರ್ ವ್ಯಾಲೆಟ್ ಒಳಗೊಂಡಿರುತ್ತದೆ ಎಂದು ದಿ ವರ್ಜ್ ಕಳೆದ ತಿಂಗಳು ಬ್ಲಾಗ್ ಪೋಸ್ಟ್‌ನಲ್ಲಿ ವರದಿ ಮಾಡಿತ್ತು. 

ಹಾರ್ಡ್‌ವೇರ್ ವ್ಯಾಲೆಟ್ ತನ್ನ ಕ್ರಿಪ್ಟೋ ಶೇಖರಣಾ ವ್ಯವಸ್ಥೆಯ ಕೇವಲ ಒಂದು ಭಾಗವಾಗಿದೆ ಮತ್ತು ಅದು ನಿಮ್ಮ ಫೋನ್‌ಗೆ ಅನುಗುಣವಾದ ಮೊಬೈಲ್ ಅಪ್ಲಿಕೇಶನನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಟ್ವೀಟರ್ ಎಡಿಟ್ ಬಟನ್ ಶೀಘ್ರದಲ್ಲೇ ಲಭ್ಯ: ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಟ್ವೀಟ್‌ ಫಲುಶ್ರುತಿ?

ನಿಮ್ಮ ವ್ಯಾಲೆಟ್ ಅಥವಾ ನಿಮ್ಮ ಫೋನನ್ನು ನೀವು ಕಳೆದುಕೊಂಡರೆ ಲಭ್ಯವಿರುವ ಸಂಭಾವ್ಯ ಮರುಪಡೆಯುವಿಕೆ ಪ್ರಕ್ರಿಯೆಗಳ ಬಗ್ಗೆಯೂ ಸಹ ಬ್ಲಾಕ್ ವಿವರ ಒದಗಿಸಿದೆ. ನೀವು ಎರಡನ್ನೂ ಕಳೆದುಕೊಂಡರೆ ನೀವು ಏನು ಮಾಡಬಹುದು ಎಂಬುದರ ಕುರಿತು  ವಿವರಗಳನ್ನು ನಂತರ ಬಿಡುಗಡೆ ಮಾಡಲಾಗುವುದು  ಎಂದು ಅದು ಹೇಳಿದೆ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಇದು ಸ್ವಲ್ಪ ರಾಕಿ ( rocky) ಅಥವಾ "rockey" ಯಂತೆ ಎಂದು ಕಾಣುತ್ತದೆ ಎಂದು ಚಿತ್ರದ ಜತೆಗೆ ಡಾರ್ಸೆ ಟ್ವೀಟ್ ಮಾಡಿದ್ದಾರೆ. 

 

rockey https://t.co/emCaqMybep

— jack⚡️ (@jack)

 

ಚಿತ್ರಗಳು "ವಾಲೆಟ್‌ನ ಹಾರ್ಡ್‌ವೇರ್ ಘಟಕಕ್ಕಾಗಿ ನಾವು ಪ್ರಯೋಗಿಸುತ್ತಿರುವ ಕೆಲವು ಮೂಲಮಾದರಿಗಳಾಗಿವೆ, ಇದು ಮೊಬೈಲ್ ಅಪ್ಲಿಕೇಶನನ್ನು ಸಹ ಒಳಗೊಂಡಿರುತ್ತದೆ ಮತ್ತು ಸೆಲ್ಫ್‌ ರಿಕವರಿ ಉಪಕರಣಗಳ ಒಂದು ಸೆಟ್ ಇರಲಿದೆ" ಎಂದು ದಿ ಬ್ಲಾಕ್‌ನ ವ್ಯಾಲೆಟ್‌ನ ಉತ್ಪನ್ನ, ಮಾರ್ಕೆಟಿಂಗ್ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಲಿಂಡ್ಸೆ ಗ್ರಾಸ್‌ಮನ್ ಹೇಳಿದ್ದರೆ ಎಂದು ದಿ ವರ್ಜ್‌ ವರದಿ ಮಾಡಿದೆ.

ಕಂಪನಿಯು "ಭವಿಷ್ಯದ ಯೋಜನೆಗಳನ್ನು" ಹಂಚಿಕೊಳ್ಳುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ  ಈ ಮೂಲಮಾದರಿಗಳು ಯಾವಗ ನಿಜವಾದ ಉತ್ಪನ್ನವಾಗಲಿವೆ ಎಂಬುದು ಸ್ಪಷ್ಟವಾಗಿಲ್ಲ. 

click me!