ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್!

By Chethan KumarFirst Published Oct 8, 2024, 7:19 PM IST
Highlights

ಪೋರ್ಟ್ ತಪ್ಪಿಸಲು ಅಂಬಾನಿಯ ಜಿಯೋ ಈಗಾಲೇ ಆಫರ್ ನೀಡುತ್ತಿದೆ. ಇದರ ನಡುವೆ ವೋಡಾಫೋನ್ ಐಡಿಯಾ ಇದೀಗ ಹೊಸ ಆಫರ್ ಘೋಷಿಸಿದೆ. ಕೇವಲ 175 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, ಉಚಿತ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ.

ನವದೆಹಲಿ(ಅ.08) ಭಾರತದ ಟೆಲಿಕಾಂ ಸರ್ವೀಸ್‌ಗಳ ರಿಚಾರ್ಜ್ ಮೊತ್ತ ದುಬಾರಿಯಾದ ಕಾರಣ ಹಲವರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುತ್ತದ್ದಾರೆ. ಇದನ್ನು ತಪ್ಪಿಸಲು ಜಿಯೋ, ಏರ್‌ಟೆಲ್ ಸೇರಿದಂತೆ ಸ್ಪರ್ಧಿಗಳು ಹೊಸ ಹೊಸ ಆಫರ್ ನೀಡುತ್ತಿದ್ದಾರೆ. ಇದೀಗ ವೋಡಾಫೋನ್ ಐಡಿಯಾ(ವಿಐ) ಎಂಟ್ರಿಕೊಟ್ಟಿದೆ. ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಹಾಗೂ ಹತ್ತು ಹಲವು ಸೌಲಭ್ಯ ಘೋಷಿಸುವ ಮೂಲಕ ಮುಕೇಶ್ ಅಂಬಾನಿಯ ಜಿಯೋ, ಏರ್‌ಟೆಲ್ ನಿದ್ದೆಗೆಡಿಸಿದೆ. ಕೇವಲ 175 ರೂಪಾಯಿ ರೀಚಾರ್ಜ್‌ಗೆ 15 ಒಟಿಟಿ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ, 10 ಜಿಬಿ ಉಚಿತ ಡೇಟಾ ಸೇರಿದಂತೆ ಹಲವು ಪ್ರಯೋಜನಗಳು ಈ ಆಫರ್‌ನಲ್ಲಿ ಲಭ್ಯವಿದೆ.

ಇದು ಎಂಟರ್ಟೈನ್ಮೆಂಟ್ ಆಫರ್. ಪ್ರಮುಖವಾಗಿ ಒಟಿಟಿ ಮೂಲಕ ಸೀರಿಸ್, ಮೂವಿ ವೀಕ್ಷಿಸಲು ಬಯಸುವ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಪ್ಲಾನ್ ನೀಡಿದೆ. ಸೋನಿ ಲೈವ್, ಜೀ5, ಪ್ಲೇಫ್ಲಿಕ್ಸ್, ಪ್ಲಸ್, ಮನೋರಮಾ ಮ್ಯಾಕ್ಸ್, ಫ್ಯಾನ್‌ಕೋಡ್ ಸೇರಿದಂತೆ 15ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ.  ಜೊತೆಗೆ ಯಾವುದೇ ಅಡೇ ತಡೆ ಇಲ್ಲದೆ ವೀಕ್ಷಿಸಲು 10 ಜಿಬಿ ಉಚಿತವಾಗಿ ನೀಡಲಿದೆ.

Latest Videos

BSNL ಘೋಷಣೆಗೆ ಬೆಚ್ಚಿದ ಅಂಬಾನಿ, ಕರ್ನಾಟಕದ ಕಂಪನಿ ಜೊತೆ ಸೇರಿ ಸ್ಮಾರ್ಟ್‌ಫೋನ್ ಉತ್ಪಾದನೆ!

ವಿಐ ಕಳೆದ ವರ್ಷ ವಿಐ ಮೂವೀಸ್ ಹಾಗೂ ಟಿವಿ ಆ್ಯಪ್ ಲಾಂಚ್ ಮಾಡಿದೆ. ಇದರಲ್ಲಿ ವಿಐ ಗ್ರಾಹಕರು 17 ಒಟಿಟಿ ಆ್ಯಪ್, 350 ಲೈವ್ ಟಿವಿ ಚಾನೆಲ್ ಸೇರಿದಂತೆ ಹಲವು ಪ್ರಯೋಜನ ಇದರಲ್ಲಿದೆ. ಇದು ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ಲಭ್ಯವಿದೆ. ಹಲವರು ವಿಐ ಹಾಗೂ ಜಿಯೋ ಪ್ಲಾನ್ ಹೋಲಿಕೆ ಮಾಡಿದ್ದಾರೆ. ಈ ವೇಳೆ ವಿಐ ಅತೀ ಕಡಿಮೆ ಬೆಲೆಗೆ ಜಿಯೋಗಿಂತ ಹೆಚ್ಚಿನ ಸೌಲಭ್ಯ ನೀಡುತ್ತಿದ್ದಾರೆ ಎಂದಿದ್ದಾರೆ.

ಇದರ ಜೊತೆಗೆ ವಿಐ ಹಲವು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಪೈಕಿ ಕೇವಲ 155 ರೂಪಾಯಿಗೆ 20 ದಿನದ ವ್ಯಾಲಿಟಿಡಿ ನೀಡುತ್ತಿದೆ. 1 ಜಿಬಿ ಡೇಟಾ, 300 ಎಸ್‌ಎಂಎಸ್ ಸೇರಿದಂತೆ ಕೆಲ ಪ್ರಯೋಜನ ಪಡೆಯಲಿದ್ದಾರೆ. ಇನ್ನು 249 ರೂಪಾಯಿ ರಿಚಾರ್ಜ್ ಪ್ಲಾನ್‌ನಲ್ಲಿ ಪ್ರತಿ ದಿನ 1 ಜಿಬಿ ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೇರಿದಂತೆ ಇತರ ಕೆಲ ಪ್ರಯೋಜನ ಪಡೆಯಲಿದ್ದಾರೆ.

ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋದಿಂದ ಡಬಲ್ ಧಮಾಕಾ , ಇದು ಸಂಪೂರ್ಣ ಉಚಿತ ಆಫರ್

48  ದಿನದ ವ್ಯಾಲಿಟಿಡಿ ಪ್ಲಾನ್ 479 ರೂಪಾಯಿಗೆ ನೀಡುತ್ತಿದೆ. ಈ ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿ ದಿನ 1 ಜಿಬಿ ಡೇಟಾ, ಪ್ರತಿ ದಿನ 100 ಎಸ್‌ಎಂಎಸ್, ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿದೆ. 64 ದಿನದ ವ್ಯಾಲಿಟಿಡಿ ಪ್ಲಾನ್ ಬೇಕಾದಲ್ಲಿ 666 ರೂಪಾಯಿ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಪ್ರತಿ ದಿನ 100 ಎಸ್ಎಂಎಸ್ ಸೇರಿದಂತೆ ಇತರ ಪ್ರಯೋಜನ ಪಡೆಯಲಿದ್ದಾರೆ.
 

click me!