ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್‌ಗೆ ಬಳಕೆದಾರರ ಆಕ್ರೋಶ, ಯಾವಾಗ ಪರಿಹಾರವಾಗುತ್ತೆ ಸಮಸ್ಯೆ?

By Chethan KumarFirst Published Oct 8, 2024, 2:04 PM IST
Highlights

ಇಂದು ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಇದರಿಂದ ಬಳಕೆದಾರರು ಪರದಾಡಿದ್ದಾರೆ. ಮೆಟಾ ಮಾಲೀಕತ್ವದ ಇನ್‌ಸ್ಟಾ ಸಮಸ್ಯೆಯಿಂದ ಹಲವರು ಇತರ ಸೋಶಿಯ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಸಮಸ್ಯೆ ಯಾವಾಗ ಪರಿಹಾರವಾಗಲಿದೆ?

ನವದೆಹಲಿ(ಅ.08) ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಭಾರತದಲ್ಲಿ ಡೌನ್ ಆಗಿದೆ. ಭಾರತದ ಹಲವು ಬಳಕೆಗಾರರು ಇನ್‌ಸ್ಟಾಗ್ರಾಂ ಡೌನ್ ಕುರಿತು ದೂರು ನೀಡಿದ್ದಾರೆ. ಎಕ್ಸ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಡೌನ್‌ಡಿಟೆಕ್ಟರ್ ಕೂಡ ಈ ಕುರಿತು ವರದಿ ಮಾಡಿದೆ. ಬೆಳಗ್ಗೆ 11.15ರಿಂದ ಭಾರತದಲ್ಲಿ ಹಲವು ಬಳಕೆದಾರರಿಗೆ ಇನ್‌ಸ್ಟಾಗ್ರಾಂ ಸಮಸ್ಯೆ ಎದುರಾಗುತ್ತಿದೆ ಎಂದು ವರದಿಯಾಗಿದೆ.

ಸಮಸ್ಯೆಗಳ ಪತ್ತೆ ಹಚ್ಚುವ ಡೌನ್ ಡಿಟೆಕ್ಟರ್ ಸಮಸ್ಯೆಯನ್ನು ವರದಿ ಮಾಡಿದೆ. ಭಾರತದ ಶೇಕಡಾ 64 ರಷ್ಟು ಮಂದಿಗೆ ಇನ್‌ಸ್ಟಾಗ್ರಾಂ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇನ್ನು ಶೇಕಡಾ 24 ರಷ್ಟು ಮಂದಿ ಸರ್ವೀಸ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ್, ಲಖನೌ, ಅಹಮ್ಮಾದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವು ಭಾಗಗಳಿಂದ ಬಳೆಕೆದಾರರು ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ. 

Latest Videos

ವ್ಯಾಟ್ಸ್ಆ್ಯಪ್ ಮೂಲಕ ನೋಡಿ ಇನ್‌ಸ್ಟಾಗ್ರಾಂ ರೀಲ್ಸ್, ವೀಕ್ಷಿಸಲು ಸುಲಭ ಟಿಪ್ಸ್ ಫಾಲೋ ಮಾಡಿ!

ಎಕ್ಸ್ ಮೂಲಕ ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಇನ್‌ಸ್ಟಾ ಇಲ್ಲದೆ ಜೀವನ ಸುಂದರವಾಗಿ ಕಾಣುತ್ತಿದೆ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಇನ್ನಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 11.15ರ ವೇಳೆಗೆ ಸುಮಾರು 2,000 ಇನ್‌ಸ್ಟಾಗ್ರಾಂ ಬಳಕೆದಾರರು ಸಮಸ್ಯೆ ಕುರಿತು ವರದಿ ಮಾಡಿದ್ದಾರೆ. ಬಹುತೇಕರು ಸರ್ವರ್ ಹಾಗೂ ಲಾಗಿನ್ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ.

 

People coming to Twitter to check whether Instagram is down pic.twitter.com/rdKim88Tln

— Patel Meet 𝕏 (@mn_google)

 

ಹಲವು ಮೀಮ್ಸ್ ಹರಿದಾಡುತ್ತಿದೆ. ಇನ್‌ಸ್ಟಾ ಡೌನ್ ಸಮಸ್ಯೆ ಕುರಿತು ಖಚಿತಪಡಿಸಲು ಬಳಕೆದಾರರು ಇದೀಗ ಟ್ವಿಟರ್‌ಗೆ ಆಗಮಿಸುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ರೀಲ್ಸ್, ವಿಡಿಯೋ, ಫೋಟೋ, ಯಾವುದೂ ಪೋಸ್ಟ್ ಆಗುತ್ತಿಲ್ಲ ಎಂದು ಆಕ್ರೋಶಗಳ ಮೀಮ್ಸ್ ಹರಿದಾಡುತ್ತಿದೆ. ಮಾರ್ಕ್ ಜುಕರ್‌ಬರ್ಗ್ ಅಣ್ಣಾ ನೀವಾದರೂ ಬಂದು ಸರಿಮಾಡಿಕೊಡಿ ಎಂದು ಹೇಳುವ ಮೀಮ್ಸ್ ಭಾರಿ ವೈರಲ್ ಆಗಿದೆ.

ಭಾರತದಲ್ಲಿ ಇನ್‌ಸ್ಟಾಗ್ರಾಂ ಡೌನ್ ಕುರಿತು ಆಕ್ರೋಶ,ದೂರುಗಳು ವ್ಯಕ್ತವಾಗುತ್ತಿದ್ದರೂ, ಮೆಟಾ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ತಾಂತ್ರಿಕ ಸಮಸ್ಯೆ ಕುರಿತು ಯಾವುದೇ ಮಾಹಿತಿ ಇಲ್ಲ. ಸದ್ಯ ಕೆಲವರಿಗೆ ಇನ್‌ಸ್ಟಾಗ್ರಾಂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸಮಸ್ಯೆ ಯಾವಾಗ ಪರಿಹಾವಾಗುತ್ತೆ ಅನ್ನೋದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ನೀವು ಯೂಟ್ಯೂಬ್ ಶಾರ್ಟ್ಸ್ ಮಾಡುತ್ತೀರಾ? ಅ.15ರಿಂದ ಬದಲಾಗುತ್ತಿದೆ ನಿಯಮ!
 

का इंस्टाग्राम हो गया बंद.... pic.twitter.com/zbQO0NROf2

— Satish Singh (@satishjourno91)
click me!