Elon Musk Jet: ತಮ್ಮ ಖಾಸಗಿ ವಿಮಾನ ಟ್ರ್ಯಾಕ್‌ ಮಾಡುತ್ತಿದ್ದವನಿಗೆ ₹3.75ಲಕ್ಷ ಆಫರ್‌ ನೀಡಿದ ಟೆಸ್ಲಾ ಸಿಇಓ

By Suvarna News  |  First Published Jan 30, 2022, 3:15 PM IST

ಜ್ಯಾಕ್ ಸ್ವೀನಿ ಎಂಬ 19 ವರ್ಷದ ಯುವಕ ಮಸ್ಕ್  ಖಾಸಗಿ ಜೆಟ್ ಅನ್ನು ಟ್ರ್ಯಾಕ್ ಮಾಡುತ್ತಿರುವುದು ಕಂಡುಬಂದಿದೆ. ಮಸ್ಕ್ ಯುವಕನನ್ನು ಟ್ವಿಟ್ಟರ್‌ ಮೂಲಕ ಸಂಪರ್ಕಸಿದ್ದು ಸ್ವೀನಿ  ಟ್ವಿಟರ್ ಖಾತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.


Tech Desk: ಸದಾ ಒಂದಿಲ್ಲೊಂದು ವಿಷಯಕ್ಕೆ ಟ್ರೆಂಡ್‌ ಆಗುವ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Tesla CEO Elon Musk) ಅನೇಕರಿಗೆ ಸ್ಫೂರ್ತಿ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅವರ ಆಳವಾದ ಉತ್ಸಾಹವು ಹಲವರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನುಸರಿಸಲು ಒಂದು ಕಾರಣವಾಗಿದೆ. ಎಲಾನ್‌ ಮಸ್ಕ್‌ ಸಾಮಾಜಿಕ ಮಾಧ್ಯಮದಲ್ಲಂತೂ ಹೈಪರ್‌ ಆಕ್ಟೀವ್. ಇತ್ತೀಚೆಗೆ 19ರ ಹದಿಹರೆಯದ ಯುವಕನೋರ್ವನಿಗೆ ಮಸ್ಕ್ ವೀಶೆಷ ಆಫರ್‌ವೊಂದನ್ನು ನೀಡಿದ್ದಾರೆ. ಯುವಕ ಮಸ್ಕ್‌ನ ಖಾಸಗಿ ಜೀವನ ಮತ್ತು ಇತರ ಹಲವು ಉನ್ನತ ವ್ಯಕ್ತಿಗಳ ಬಗ್ಗೆ ಟ್ರ್ಯಾಕ್ ಇಟ್ಟುಕೊಂಡಿದ್ದಾನೆ ಎಂದು ವರದಿಯಾಗಿದೆ.

ಮಸ್ಕ್ ಯುವಕನ್ನು ಟ್ವಿಟ್ಟರ್ ಮೂಲಕ ತಲುಪಿದ್ದು ತಮ್ಮನ್ನು ಟ್ರ್ಯಾಕ್‌ ಮಾಡುತ್ತಿರುವ ಟ್ವಿಟರ್ ಖಾತೆಯ ಬಗ್ಗೆ  ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಜ್ಯಾಕ್ ಸ್ವೀನಿ ಎಂಬ 19 ವರ್ಷದ ಯುವಕ ಮಸ್ಕ್ ಅವರ ಖಾಸಗಿ ಜೆಟ್ ಅನ್ನು ಟ್ರ್ಯಾಕ್ ಮಾಡುತ್ತಿರುವುದು ಕಂಡುಬಂದಿದೆ. ಎಲೋನ್ ಮಸ್ಕ್‌ನ ಟ್ವೀಟ್‌ ಮೂಲಕ ಸ್ವೀನಿ  ನಡೆಸುವ  Musk's Jet (@ElonJet) ಎಂಬ ಟ್ವಿಟರ್ ಖಾತೆ  ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ತನ್ನ ಜೆಟ್‌ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಮಸ್ಕ್ ಯುವಕನಿಗೆ $5,000 (ಸುಮಾರು ರೂ. 3.75 ಲಕ್ಷ) ಆಫರ್ ಮಾಡಿದ್ದಾರೆ.

Latest Videos

undefined

ಇದನ್ನೂ ಓದಿ: Tesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!

ಆದರೆ ಸ್ವೀನಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಪ್ರತಿಯಾಗಿ $50,000 (ಸುಮಾರು ರೂ. 37.55 ಲಕ್ಷ) ಬೇಡಿಕೆಯಿಟ್ಟಿದ್ದಾನೆ. ಈ ಮೊತ್ತವು ತನ್ನ ಶಾಲಾ ಶುಲ್ಕವನ್ನು ಭರಿಸುತ್ತದೆ ಮತ್ತು ಟೆಸ್ಲಾ ಕಾರು ಖರೀದಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾನೆ.

15 ಫ್ಲೈಟ್-ಟ್ರ್ಯಾಕಿಂಗ್ ಖಾತೆ:  ಸುದ್ದಿ ವೆಬ್‌ಸೈಟ್ ಪ್ರೋಟೋಕಾಲ್ (Protocol), ಪ್ರಕಾರ, ಸ್ವೀನಿ ರಚಿಸಿದ 15 ಫ್ಲೈಟ್-ಟ್ರ್ಯಾಕಿಂಗ್ ಖಾತೆಗಳಲ್ಲಿ @ElonJet ಕೂಡ ಒಂದಾಗಿದೆ. ಖಾತೆಯು ಬಾಟ್‌ಗಳಿಂದ (Bot) ನಡೆಸಲ್ಪಡುತ್ತದೆ.  ಪ್ರತಿ ಬಾರಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗನ್ನು ಟ್ರ್ಯಾಕ್ ಮಾಡಲು ಯುವಕ ಪ್ರೋಗ್ರಾಮ್ ರಚಿಸಿದ್ದಾನೆ.

ಸ್ವೀನಿ ಮಸ್ಕ್‌ನ ಖಾಸಗಿ ಜೆಟ್‌ಗಳನ್ನು ಮಾತ್ರವಲ್ಲದೆ ಬಿಲ್ ಗೇಟ್ಸ್ (Bill Gates) ಮತ್ತು ಜೆಫ್ ಬೆಜೋಸ್ (Jeff Bezos) ಸೇರಿದಂತೆ ಉನ್ನತ ಮಟ್ಟದ ಜನರನ್ನೂ ಸಹ ಟ್ರ್ಯಾಕ್ ಮಾಡುತ್ತಾನೆ. ಆದಾಗ್ಯೂ, ವಿಶೇಷವಾಗಿ ಮಸ್ಕ್‌ನ ವಿಮಾನಗಳನ್ನು ಟ್ರ್ಯಾಕ್ ಮಾಡುವ Elonjet ಖಾತೆಯು ಹೆಚ್ಚಿನ ಅನುಯಾಯಿಗಳನ್ನು ಹೊಂದಿದೆ.  ಖಾತೆಯು ಒಂದು ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ಇದನ್ನೂ ಓದಿ: Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

ಈ ಬೆನ್ನಲ್ಲೇ ಮಸ್ಕ್ ಮತ್ತು ಸ್ವೀನಿ ಟ್ವಿಟ್ಟರ್ DMನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಸ್ಕ್ ಅವರು ಕೇಳಿದ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡರು ಆದರೆ ಇದುವರೆಗೆ ಸ್ವೀನಿಗೆ ಒಂದು ಬಿಡಿಗಾಸನ್ನೂ ಪಾವತಿಸಿಲ್ಲ ಎಂದು ವರದಿಯಾಗಿದೆ. ತನ್ನನ್ನು ಮಸ್ಕ್ ಅಭಿಮಾನಿ ಎಂದು ಕರೆದುಕೊಳ್ಳುವ ಯುವಕ, ಮಸ್ಕ್ ತನಗೆ ಹಣ ನೀಡದಿದ್ದರೂ ಯಾವುದೇ ಸಮಸ್ಯೆಗಳಿಲ್ಲ ಎಂದು ಪ್ರಕಟಣೆಗೆ ತಿಳಿಸಿದ್ದಾನೆ. ಯುವಕ @ElonJet ಮತ್ತು ಇತರ ಖಾತೆಗಳಿಂದ ಸಾಕಷ್ಟು ಲಾಭ ಪಡೆಯುತ್ತಿದ್ದಾನೆ ಎಂದು ಬಹಿರಂಗಪಡಿಸಿದ್ದಾನೆ. 

ಯುವಕ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದು, ಕೋಡ್ ಮಾಡುವುದು ಹೇಗೆಂದು ಕಲಿತು  UberJetsನಲ್ಲಿ ಅಪ್ಲಿಕೇಶನ್ ಡೆವಲಪರ್ ಆಗಿ ಅರೆಕಾಲಿಕ ಕೆಲಸವನ್ನು ಸಹ ಪಡೆದಿದ್ದ. ಸ್ವೀನಿಗೆ ಇಷ್ಟು ವರ್ಷಗಳ ಕಾಲ ತಾನು ಫ್ಯಾನ್‌ ಆಗಿದ್ದ ವ್ಯಕ್ತಿಯೊಂದಿಗೆ ಮಾತನಾಡಲು ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಮಸ್ಕ್ ಹವಾಯಿಯಲ್ಲಿ ರಜೆ ದಿನಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ ಹೀಗಾಗಿ  ಹಣ ಕೊಡಲು ಒಪ್ಪಿಗೆ ನೀಡಿ ಸುಮ್ಮನಾದದ್ದು ಗೊತ್ತಾಗಿದೆ ಎಂದೂ ಯುವಕ ತಿಳಿಸಿದ್ದಾನೆ. ಅಂದರೆ ಈಗಲೂ ಎಲಾನ್‌ ಮಸ್ಕ್ ಎಲ್ಲಿದ್ದಾರೆ ಎಂದು ತನಗೆ ತಿಳಿದಿದೆ ಎಂದು ಯುವಕ ಪರೋಕ್ಷವಾಗಿ ಹೇಳಿದ್ದಾನೆ.

click me!