Drone Technology : ಆವಿಷ್ಕಾರಕ್ಕೆ ಕೊನೆ ಎಲ್ಲಿ.. ಡ್ರೋಣ್ ಮೂಲಕ ಬ್ಲಡ್ ಸ್ಯಾಂಪಲ್ !

By Contributor AsianetFirst Published Mar 6, 2022, 11:41 PM IST
Highlights

* ಡ್ರೋಣ್ ಮೂಲಕ ಬ್ಲಡ್ ಸ್ಯಾಂಪಲ್
* ಆಧುನಿಕ ತಂತ್ರಜ್ಸಾನದ ಅತ್ಯುತ್ತಮ ಬಳಕೆ
* ನೋಯ್ಡಾದ ಲ್ಯಾಬ್ ಸಾಹಸ

ಮೀರತ್(ಮೇ 06)  ಆಧುನಿಕ ತಂತ್ರಜ್ಞಾನಗಳನ್ನು(Technology) ಹೀಗಿದ್ದಕ್ಕೂ ಬಳಕೆ ಮಾಡಿಕೊಳ್ಳಬಹುದು.  ನೋಯ್ಡಾದ ಖಾಸಗಿ ಲ್ಯಾಬ್ ಒಂದು ಸಾಹಸ ಮಾಡಿದೆ. ಡ್ರೋಣ್ (Drone) ಮೂಲಕ ಬ್ಲಡ್ (Blood) ಸ್ಯಾಂಪಲ್ ತರಿಸಿಕೊಂಡಿದೆ. ಮೀರತ್ ನಿಂದ ನೋಯ್ಡಾಕ್ಕೆ (Noida) ಕೇವಲ ಒಂದು ಗಂಟೆ ಅವಧಿಯಲ್ಲಿ ರಕ್ತ ತರಿಸಿಕೊಳ್ಳಲಾಗಿದೆ,. ಒಂದು ವೇಳೆ ರಸ್ತೆ ಮಾರ್ಗದಲ್ಲಿ ತರಿಸಿಕೊಳ್ಳುವುದಾದರೆ ಇದಕ್ಕೆ 2-3  ತಾಸು ಹಿಡಿಯುತ್ತದೆ.

ರೆಡ್ ಕ್ಲಿಪ್ ಲ್ಯಾಬ್ ಟ್ರಯಲ್ ರನ್ ಮಾಡಿ ಯಶಸ್ಸು ಕಂಡಿದೆ.   ಗುಡ್ಡಗಾಡು, ಪರ್ವತ ಶ್ರೇಣಿಗಳನ್ನು ಹೊಂದಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಈ ರೀತಿಯ ಡ್ರೋಣ್ ಬಳಕೆ ಮಾಡಿಕೊಳ್ಳುವುದು ಮುಂದಿನ ಆಲೋಚನೆ.  ಎಲ್ಲವೂ ಅಂದುಕೊಂಡಂತೆ ಆಗಲಿದೆ ಎನ್ನುವುದು ಲ್ಯಾಬ್ ನ ವಿಶ್ವಾಸ.

ಆರು ವಿಂಗ್ ಹೊಂದಿರುವ ಸಣ್ಣ ಡ್ರೋಣ್ ನೋಯ್ಡಾದ ಆಕಾಶದಲ್ಲಿ ಹಾರಾಡುತ್ತ ಬಂದಿದೆ.   ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಡ್ರೋಣ್ hexa copter ಬ್ಲಡ್ ಸ್ಯಾಂಪಲ್ ಗಳನ್ನು ಟೆಫರೇಚರ್ ಕಂಟ್ರೋಲ್ ಬಾಕ್ಸ್ ನೊಂದಿಗೆ ಹೊತ್ತು ಹಾರಾಡಿದೆ. 73. 6  ಕಿಮೀ ದೂರವನ್ನು ಒಂದು  ಗಂಟೆ ಅವಧಿಯಲ್ಲಿ ಕ್ರಮಿಸಿದೆ.

ಕೊರೋನಾ ನಿಯಂತ್ರಣಕ್ಕೂ ಬಳಕೆಯಾದ ಡ್ರೋಣ್

ಸ್ಕೈ ಏರ್ ಮೋಮಿಲಿಟಿ (Skye Air Mobility) ಗೆ ಸೇರಿದ ಡ್ರೋಣ್ ಇದು.  ಈಗ ಸಿಕ್ಕಿರುವ ಫಲಿತಾಂಶದಿಂದ ನಾವು ಸಂತಸಗೊಂಡಿದ್ದೇವೆ. ಈ ರೀತಿಯ ಇನಿಶೇಟಿವ್ ನಮಗೆ ಬಲ ತುಂಬಿದೆ ಎಂದು Redcliffe Life Diagnosticsನ ಸಂಸ್ಥಾಪಕ ಧೀರಜ್ ಜೈನ್ ಹೇಳುತ್ತಾರೆ.

ಡೈಗ್ನಾಸ್ಟಿಕ್ ಉದ್ಯಮದಲ್ಲಿ ಈ ರೀತಿ ರಕ್ತದ ಮಾದರಿಯನ್ನು ಡ್ರೋಣ್ ಮೂಲಕ ತರಿಸಿಕೊಳ್ಳುತ್ತಿರುವುದು  ಮೊಟ್ಟ ಮೊದಲನೆಯದಾಗಿ ದೊಡ್ಡ ಸಾಹಸ. ಭಾರತದಲ್ಲಿ ಇದೇ ಮೊದಲು.  ರಕ್ತದ ಮಾದರಿ ರೋಗಿಯಿಂದ ಲ್ಯಾಬ್ ಗೆ ತಲುಪಲು ಬಹಳ ಸಮಯ ಹಿಡಿಯುತ್ತದೆ. ಆದರೆ ಈ  ಮಾದರಿ ಬಳಕೆ ಮಾಡಿಕೊಂಡರೆ ಅತಿ ಬೇಗನೇ ಫಲಿತಾಂಶ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕಾಡಿನ ಬೆಂಕಿ ತಡೆಯಲುನ ಡ್ರೋಣ್ ಕಾವಲು:   ಕಾಡ್ಗಿಚ್ಚು ಅರಣ್ಯವನ್ನು ಅರಣ್ಯವನ್ನು ನಾಶ ಮಾಡಿ ಆಹುತಿ ಪಡೆದುಕೊಳ್ಳುವುದನ್ನು ತಡೆಯಲು ಡ್ರೋಣ್ ಕಣ್ಗಾವಲು ಆರಂಭಿಸಲಾಗಿತ್ತು. ಬೇಸಿಗೆಗೂ ಮುನ್ನವೇ ಬಿಸಿಲ ಬೇಗೆಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿರುವುದುರ ಜತೆಗೆ ಡ್ರೋಣ್ ಬಳಕೆ ಲಾಭ ಪಡೆದುಕೊಳ್ಳಲು ಮುಂದಾಗಿದೆ.

ಕರ್ನಾಟಕ  ಸರ್ಕಾರ ಕೂಡ ಜಿಲ್ಲೆಯ ನಾಲ್ಕು ವಲಯಗಳಿಗೂ ತಲಾ 9 ಲಕ್ಷ ಸೇರಿದಂತೆ ಒಟ್ಟು 36 ಲಕ್ಷ ಹಣ ಬಿಡುಗಡೆ ಮಾಡಿದೆ. ಅರಣ್ಯ ರಕ್ಷಣೆಗೆ ಬೇಕಾದ ವಾಹನ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ವಾಹನಗಳ ಲ್ಲಿ ಬೆಂಕಿ ಶಮನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲಾಗಿದೆ. ಅರಣ್ಯವಾಸಿಗಳಿಗೂ ಕಾಡಿನ ರಕ್ಷಣೆ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸೋ ಕೆಲಸ ಮಾಡ್ತಿದೆ.  ಡ್ರೋಣ್ ಕಣ್ಣು ಗಾವಲು ಸಹ ಇಡಾಗಿದೆ. 

 

 

click me!