ದೀಪಾವಳಿ ಹಬ್ಬಕ್ಕೆ ಫೋನ್ ಖರೀದಿಸೋ ಪ್ಲಾನ್ ಇದೆಯಾ? ನಿಮಗಿದೆ ಎಚ್ಚರಿಕೆ!

By Web DeskFirst Published Sep 14, 2018, 7:13 PM IST
Highlights

ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳಿಗೆ ಮೊಬೈಲ್ ಫೋನ್ ಕಂಪೆನಿಗಳು ಆಫರ್ ನೀಡುವುದು ಸಹಜ. ಆದರೆ ಈ ಸಂಪ್ರದಾಯ ಈ ಬಾರಿಯ ಹಬ್ಬಕ್ಕೆ ಅನ್ವಯವಾಗೋದು ಅನುಮಾನ. ಇದಕ್ಕೆ ಕಾರಣ ಇಲ್ಲಿದೆ.

ನವದೆಹಲಿ(ಸೆ.14): ದೀಪಾವಳಿ, ನವರಾತ್ರಿ ಹಬ್ಬಗಳಿಗೆ ಸ್ಮಾರ್ಟ್ ಫೋನ್ ಕಂಪೆನಿಗಳು ಭರ್ಜರಿ ಆಫರ್ ನೀಡುತ್ತದೆ. ಹೀಗಾಗಿ ಹಲವರು ಹಬ್ಬದ ದಿನ ಫೋನ್ ಖರೀದಿಸಿ ಹಣ ಉಳಿತಾಯದ ಜೊತೆಗೆ ಹಲವು ಗಿಫ್ಟ್ ಕೂಡ ಪಡೆಯಬಹುದು.

ಇಲ್ಲೀವರೆಗೂ ಭಾರತದಲ್ಲಿ ಇದೇ ಸಂಪ್ರದಾಯದ ಮುಂದುವರಿದಿದೆ. ಆದರೆ ಈ ಬಾರಿಯ ದೀಪಾವಳಿ ಹಬ್ಬ ಹಾಗೂ ಇತರ ಹಬ್ಬಕ್ಕೆ ಫೋನ್ ಖರೀದಿಸಲು ಪ್ಲಾನ್ ಹಾಕಿಕೊಂಡಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸುವುದು ಸೂಕ್ತ.

ಈ ಬಾರಿಯ ಹಬ್ಬಕ್ಕೆ ಫೋನ್ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕಾರಣ ಡಾಲರ್ ಎದರು ರೂಪಾಯಿ ಮೌಲ್ಯ ಕುಸಿದ ಕಾರಣ ಆಮದು ಮಾಡಿಕೊಳ್ಳುವ ಫೋನ್ ಬೆಲೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಹಬ್ಬಕ್ಕೆ ಆಫರ್ ನಿರೀಕ್ಷಿಸುವ ಗ್ರಾಹಕರು ಬೆಲೆ ಏರಿಕೆ ನಿರಾಸೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.

ಎಲ್ಲಾ ಬ್ರ್ಯಾಂಡ್ ಫೋನ್‌ಗಳು ಬೆಲೆ ಏರಿಕೆ ಮಾಡಿಲ್ಲ. ಕೆಲ ಫೋನ್‌ಗಳು ಮಾತ್ರ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಇನ್ನು ಕೆಲ ಕಂಪೆನಿಗಳು ಇತರ ಆಫರ್ ಕಡಿತಗೊಳಿಸಲು ಮುಂದಾಗಿದೆ.

ಆನ್ ಲೈನ್‌ನಲ್ಲಿ ಫೋನ್ ಖರೀದಿಸೋ ಗ್ರಾಹಕರಿಗೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಸಾಧ್ಯತೆ ಕಡಿಮೆ. ಆದರೆ ಆಫರ್ ಕಡಿತಗೊಳ್ಳಲಿದೆ. ಹೀಗಾಗಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟುವ ಎಲ್ಲಾ ಸಾಧ್ಯತೆಗಳಿವೆ.

click me!