Vaccines for Children: CoWIN ನಲ್ಲಿ ಲಸಿಕೆಗಾಗಿ 15-18 ವಯಸ್ಸಿನ ಮಕ್ಕಳನ್ನು ನೋಂದಾಯಿಸುವುದು ಹೇಗೆ?

By Suvarna NewsFirst Published Dec 27, 2021, 3:58 PM IST
Highlights

15 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಜನವರಿ 1 ರಿಂದ CoWIN ಅಪ್ಲಿಕೇಶನ್‌ನಲ್ಲಿ COVID-19 ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
 

ನವದೆಹಲಿ (ಡಿ. 27): 15 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಶಾಲಾ ಗುರುತಿನ ಚೀಟಿಯನ್ನು‌ (school ID cards) ಬಳಸಿಕೊಂಡು ಜನವರಿ 1 ರಿಂದ CoWIN ಅಪ್ಲಿಕೇಶನ್‌ನಲ್ಲಿ ಕೋವಿಡ್‌ 19 ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ಸೋಮವಾರ ಬೆಳಿಗ್ಗೆ ತಿಳಿಸಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚುವರಿ ಸ್ಲಾಟ್ ಅನ್ನು ರಚಿಸಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್‌ಗಳನ್ನು ಲಸಿಕೆ ನೋಂದಾಯಿಸಲು ಬಳಸಬಹುದು ಎಂದು ಕೋವಿನ್ ಮುಖ್ಯಸ್ಥ ಡಾ ಆರ್ ಎಸ್ ಶರ್ಮಾ (Dr RS Sharma) ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

ವರದಿಗಳ ಪ್ರಕಾರ, COWIN ಅಪ್ಲಿಕೇಶನ್‌ನಲ್ಲಿ ಮಕ್ಕಳ ನೋಂದಣಿಯೂ ವಯಸ್ಕರರ ನೋಂದಣಿಯಂತೆ ಇರಲಿದೆ. 15-18 ವರ್ಷದೊಳಗಿನ ಮಕ್ಕಳು ಕೋವಿನ್ ಅಪ್ಲಿಕೇಶನ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿ ಅಥವಾ ನೇರವಾಗಿ ಯಾವುದೇ ಲಸಿಕೆ ಕೇಂದ್ರಕ್ಕೆ ತೆರಳಿ ಮತ್ತು ಅಗತ್ಯ  ದಾಖಲೆಗಳನ್ನು ಒದಗಿಸಿದ ನಂತರ ಲಸಿಕೆಯನ್ನು ಪಡೆಯಲು ಸಾಧ್ಯವಾಗಲಿದೆ .ಮಕ್ಕಳು ತಮ್ಮ ಶಾಲಾ ಗುರುತಿನ ಚೀಟಿಯನ್ನು (ID Card) ಬಳಸಿ ನೋಂದಾಯಿಸಿಕೊಳ್ಳಬಹುದು.

ಮಕ್ಕಳಿಗೆ Covaxin ಅಥವಾ ZyCoV-D ಲಸಿಕೆ!

ಭಾರತ್ ಬಯೋಟೆಕ್‌ನ ಡಬಲ್-ಡೋಸ್ ಕೋವಾಕ್ಸಿನ್ (Covaxin) ಅಥವಾ ಝೈಡಸ್ ಕ್ಯಾಡಿಲಾದ ಮೂರು-ಡೋಸ್ ZyCoV-D, 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಲು ಸರ್ಕಾರ ಅನುಮತಿ ನೀಡಿದೆ. ಇವುಗಳಲ್ಲಿ ಯಾವುದಾದರು ಒಂದು ಲಸಿಕೆಯನ್ನು  ಮಕ್ಕಳಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. 

ಡ್ರಗ್ ಕಂಟ್ರೋಲರ್ 7 ಮತ್ತು 11 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಗಳಿಗಾಗಿ ಸೀರಮ್ ಇನ್‌ಸ್ಟಿಟ್ಯೂಟ್‌ನ ನೊವಾವ್ಯಾಕ್ಸ್ (Novavax)ಗೆ ಅನುಮತಿ ನೀಡಿದೆ ಮತ್ತು 5 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲಿನ ಪ್ರಯೋಗಗಳಿಗಾಗಿ ಬಯೋಲೋಜಿಕಲ್ ಇ ನ ಕಾರ್ಬೆವಾಕ್ಸ್ (Biological E's Corbevax)ಗೆ ಅನುಮತಿ ನೀಡಿದೆ. Novavax ಅಥವಾ Corbevax ಅನ್ನು ಕೇವಲ ಪ್ರಯೋಗಗಳಿಗಾಗಿ ಅನುಮತಿ ನೀಡಲಾಗಿದೆ ಆದರೆ ಇನ್ನೂ ಬಳಕೆಗೆ ಅನುಮತಿಸಲಾಗಿಲ್ಲ

ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ! 

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ತಲೆನೋವು ಕೊಡಲಾರಂಭಿಸಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಹೊಸ ವರ್ಷಾಚರಣೆ ಮತ್ತೊಂದು ಹೊಸ ಅಲೆಗೆ ಕಾರಣವಾಗುತ್ತಾ ಎಂಬ ಭೀತಿ ಹುಟ್ಟಿಕೊಂಡಿದೆ. ಈಗಾಗಲೇ ಕರ್ನಾಟಕ ಸೇರಿ ಅನೇಕ ರಾಜ್ಯಗಳು ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿವೆ. ಈ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ಆರಂಭಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದರು

ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳು ತಮ್ಮ ಮೊದಲ ಸುತ್ತಿನ ಕೋವಿಡ್ ಲಸಿಕೆಗಳನ್ನು ಪಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದ್ದರು. ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ (Booster Dose) ಘೋಷಿಸಿದ ಪ್ರಧಾನಿ, "ಈಗಾಗಲೇ ಹಲವು ದೇಶಗಳು ಮಕ್ಕಳಿಗೆ ಲಸಿಕೆ ನೀಡಿವೆ, ಮಕ್ಕಳಿಗೆ ಲಸಿಕೆ ಹಾಕುವುದು  ಶಾಲೆಗಳು ಮತ್ತು ವಿದ್ಯಾರ್ಥಿಗಳು ಸಾಮಾನ್ಯ ಸ್ಥಿತಿಗೆ ಮರಳಲು ಸಹಾಯ ಮಾಡುತ್ತದೆ" ಎಂದು ಹೇಳಿದ್ದರು.

ಕೊರೋನಾ ವಿರುದ್ಧ ಹೋರಾಡಲು ನಾಲ್ಕು ಲಕ್ಷ ಆಕ್ಸಿಜನ್ ಸಿಲಿಂಡರ್ ದೇಶಾದ್ಯಂತ ಕೊಟ್ಟಿದ್ದೇವೆ. ಒಂದು ಲಕ್ಷ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿಯೇ ವಿಶೇಷ ವಾರ್ಡ್‌ಗಳನ್ನು ನಿರ್ಮಿಸಿದ್ದೇವೆ. ಕೊರೋನಾ ಯುದ್ಧದಲ್ಲಿ ಹೋರಾಡಲು ಮೂರು ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಪ್ಲಾಂಟ್‌ಗಳನ್ನು ನಿರ್ಮಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದರು.

ಇದನ್ನೂ ಓದಿ:

1) PM Modi Address ಹೊಸ ವರ್ಷದ ಹೊಸ್ತಿಲಲ್ಲಿ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ!

2) CJI NV Ramana : ಭಾರತದಲ್ಲಿ ಅಭಿವೃದ್ಧಿ ಮಾಡಿದ ಕಾರಣಕ್ಕಾಗಿ Covaxin ಲಸಿಕೆಯನ್ನ ಟೀಕಿಸ್ತಾರೆ!

3) Omicron In India: ಎಚ್ಚರ ತಪ್ಪಬೇಡಿ, ರಾಜ್ಯಗಳಿಗೆ ಸಕಲ ನೆರವಿಗೆ ಸಿದ್ಧ: ಮೋದಿ

click me!