ಜಿಯೋ-ಹಾಟ್ ಸ್ಟಾರ್ ಒಂದಾಗಿ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗಿಫ್ಟ್

By Web DeskFirst Published Jun 4, 2019, 11:10 PM IST
Highlights

ಏಕದಿನ ವಿಶ್ವಕಪ್ ಜ್ವರ ಆರಂಭವಾಗಿದೆ. ಪಂದ್ಯದ ನೇರ ಪ್ರಸಾರ ಸವಿಯಲು ಅಭಿಮಾನಿಗಳು ಸದಾ ಕಾತರರಾಗಿರುತ್ತಾರೆ. ಈಗೆಂತಲೂ ಮೊಬೈಲ್ ಜಮಾನಾ,, ಡೇಟಾ ಖರ್ಚಿಲ್ಲದೆ ನೇರ ಪ್ರಸಾರ ವೀಕ್ಷಣೆ ಮಾಡುವಂತೆ ಇದ್ದರೆ ಹೇಗೆ?

ಬೆಂಗಳೂರು[ಜೂ. 04] ಕ್ರಿಕೆಟ್ ಅಭಿಮಾನಿಗಳಿಗೆ ಜಿಯೋ ಮತ್ತು ಹಾಟ್ ಸ್ಟಾರ್ ಒಂದಾಗಿ ಗುಡ್ ನ್ಯೂಸ್ ನೀಡಿವೆ. ಹೌದು ಜಿಯೋ ಟಿವಿ ಮುಖಾಂತರ ಹಾಟ್ ಸ್ಟಾರ್ ನಲ್ಲಿ ಡೇಟಾ ಖರ್ಚಿಲ್ಲದೆ ವಿಶ್ವ ಕಪ್ ವೀಕ್ಷಣೆ ಮಾಡಬಹುದು.

ಹಾಗಾದರೆ ನೇರ ಪ್ರಸಾರವನ್ನು ಉಚಿತವಾಗಿ ವೀಕ್ಷಣೆ ಮಾಡೋದು ಹೇಗೆ?

* ಈಗಾಗಲೇ ಹೇಳಿರುವಂತೆ ಜಿಯೋ ಮತ್ತು ಹಾಟ್ ಸ್ಟಾರ್ ಹೊಂದಾಣಿಕೆ ಮಾಡಿಕೊಂಡಿವೆ.

* ಜಿಯೋ ಟಿವಿ ಮೂಲಕ ಪಪಂದ್ಯದ ನೇರ ಪ್ರಸಾರಕ್ಕೆ ತೆರಳಬೇಕು. ಆಟೋಮ್ಯಾಟಿಕ್ ಆಗಿ ಅಲ್ಲಿಂದ ಹಾಟ್ ಸ್ಟಾರ್ ಗೆ ರಿ-ಡೈರೆಕ್ಟ್ ಆಗುತ್ತದೆ.

ಜಿಯೋ ಬಳಕೆದಾರರು ಹಾಟ್‌ಸ್ಟಾರ್ ಅಥವಾ ಜಿಯೋಟೀವಿ ಮೂಲಕ ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ
ಹಾಟ್‌ಸ್ಟಾರ್‌ಗೆ ಭೇಟಿಕೊಟ್ಟಾಗ, ಎಲ್ಲ ಜಿಯೋ ಗ್ರಾಹಕರಿಗೆ ಎಲ್ಲ ವಿಶ್ವಕಪ್ ಪಂದ್ಯಗಳನ್ನೂ ನೋಡುವ ಅವಕಾಶ ದೊರಕಲಿದೆ
ಜಿಯೋಟೀವಿಯಲ್ಲಿ, ಪಂದ್ಯ ವೀಕ್ಷಣೆಗಾಗಿ ಬಳಕೆದಾರರನ್ನು ಯಾವುದೇ ತೊಡಕಿಲ್ಲದಂತೆ ಹಾಟ್‌ಸ್ಟಾರ್‌ಗೆ ಪುನರ್ನಿರ್ದೇಶಿಸಲಾಗುತ್ತದೆ

ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?

*ನೀವು ಯಾವ ಪ್ಯಾಕ್ ನಲ್ಲಿ ಇದ್ದೀರಿ ಎಂಬುದನ್ನು ಈ ವೇಳೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. 

*ಹಾಟ್ ಸ್ಟಾರ್ ವಿಐಪಿಯಲ್ಲಿ ಸಹ ಉಚಿತವಾಗಿ ಪಂದ್ಯ ವೀಕ್ಷಣೆ ಮಾಡುವ ಅವಕಾಶ ಮಾಡಿಕೊಡಲಾಗಿದೆ.

* ಜಿಯೋ ಇನ್ನೊಂದು ಪ್ಲ್ಯಾನ್ ಸಹಿತ ನೀಡಿದ್ದು 251 ರೂ. ಗೆ 51 ದಿನದ ವ್ಯಾಲಿಡಿಟಿಯೊಂದಿಗೆ 102 ಜಿಬಿ 4 ಜಿ ಡೇಟಾ ದೊರೆಯಲಿದೆ.

ಗಮನಿಸಿ - ಉಚಿತ ಎನ್ನುವುದು ಕಾರ್ಯಕ್ರಮದ ಚಂದಾಗೆ ಅನ್ವಯಿಸುತ್ತದೆ. ಡೇಟಾ ಬಳಕೆಗೆ ಡೇಟಾ ಪ್ಯಾಕ್ ದರಗಳಂತೆ ಶುಲ್ಕ ವಿಧಿಸಲಾಗುತ್ತದೆ.

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್:
ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಅನ್ನು ರೂ. 251 ಪಾವತಿಸುವ ಮೂಲಕ ಎಲ್ಲ ಜಿಯೋ ಬಳಕೆದಾರರೂ ಪಡೆದುಕೊಳ್ಳಬಹುದಾಗಿದೆ. ಹೆಚ್ಚು ಡೇಟಾ ಬಳಕೆಯಾಗುವ ಇಂತಹ ಸನ್ನಿವೇಶಗಳಿಗೆ ಸೂಕ್ತವಾಗುವಂತೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗಾಗಿ ಈ ವಿಶೇಷ ಅವಕಾಶವನ್ನು ರೂಪಿಸಲಾಗಿದೆ. 51 ದಿನಗಳ ಅವಧಿಗೆ ಈ ಪ್ಯಾಕ್ ಒಟ್ಟು 102 ಜಿಬಿ ಅತಿವೇಗದ ಡೇಟಾ ಒದಗಿಸಲಿದ್ದು, ಅದು ಎಲ್ಲ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಸಾಕಾಗುವಷ್ಟಿರಲಿದೆ. 

ಕ್ರಿಕೆಟ್ ಪಂದ್ಯಗಳಷ್ಟೇ ಅಲ್ಲದೆ ಈ ಡೇಟಾ ಅನ್ನು ಅಂತರಜಾಲದಿಂದ ಯಾವುದೇ ಮಾಹಿತಿ ಪಡೆಯಲು ಬಳಸಿಕೊಳ್ಳಬಹುದು.

ಇದರೊಡನೆ, ಕ್ರಿಕೆಟ್ ಪ್ರೇಮಿಗಳು ತಮ್ಮ ಅಚ್ಚುಮೆಚ್ಚಿನ ಎಲ್ಲ ಪಂದ್ಯಗಳನ್ನೂ, ಯಾವುದೇ ಅಡಚಣೆ ಅಥವಾ ದೈನಂದಿನ ಡೇಟಾ ಮಿತಿಯನ್ನು ಮೀರುವ ಚಿಂತೆಯಿಲ್ಲದೆ, ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:
1. ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಒಂದು ಇಂಟರ್‍ಯಾಕ್ಟಿವ್ ಪರಿಕಲ್ಪನೆಯಾಗಿದ್ದು, ಪಂದ್ಯಗಳು ನಡೆಯುವಾಗ ಜೊತೆಯಲ್ಲಿ ತಾವೂ ಭಾಗವಹಿಸಿ ಆನಂದಿಸುವ ಅವಕಾಶವನ್ನು ಬಳಕೆದಾರರಿಗೆ ಪ್ರತಿ ಕ್ರಿಕೆಟ್ ಋತುವಿನಲ್ಲೂ ನೀಡುತ್ತಿದೆ.
2. ಟೀವಿಯಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಿಸುತ್ತಿರುವಂತೆಯೇ ಬಳಕೆದಾರರು ತಮ್ಮ ಮೊಬೈಲ್ ಪರದೆಯ ಮೇಲೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನೊಡನೆ ಒಡನಾಡಬಹುದು.
3. ಪಂದ್ಯವನ್ನು ವೀಕ್ಷಿಸುವುದಷ್ಟೇ ಅಲ್ಲದೆ ಅದರ ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಮೂಲಕ ಬಳಕೆದಾರರೂ ಆಟದಲ್ಲಿ ಭಾಗವಹಿಸುವುದು ಇದರ ಇಂಟರ್‍ಯಾಕ್ಟಿವ್ ಸ್ವರೂಪದಿಂದಾಗಿ ಸಾಧ್ಯವಾಗುತ್ತದೆ.   
4. ಈ ಆಟ ಜಿಯೋ ಚಂದಾದಾರರು ಮತ್ತು ಚಂದಾದಾರರಲ್ಲದವರಿಗೂ ಲಭ್ಯವಿದೆ.
5. ಆಟದಲ್ಲಿ ಭಾಗವಹಿಸಲು ಬಳಕೆದಾರರು ಮೈಜಿಯೋ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. 
6. ತತ್‍ಕ್ಷಣದ ಫಲಿತಾಂಶಗಳನ್ನು ಊಹಿಸಿ ಸರಿಯಾದ ಊಹೆಗೆ ಅಂಕಗಳನ್ನು ಪಡೆಯುವ ಜೊತೆಗೆ ಆಟಗಾರರು ತಮ್ಮ ಕ್ರಿಕೆಟ್ ಜ್ಞಾನವನ್ನೂ ಪರೀಕ್ಷಿಸಿಕೊಳ್ಳಬಹುದು. 

click me!