ಸೋಶಿಯಲ್ ಮೀಡಿಯಾಗಳ ನಿರಂಕುಶ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಕಾರಕವೇ?

By Suvarna NewsFirst Published Jun 2, 2021, 5:11 PM IST
Highlights

* ಸೋಷಿಯಲ್‌ ಮೀಡಿಯಾಗಳು ಹಾಗೂ ನೆಲದ ಕಾನೂನು 

* ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೇ ಸೋಶಿಯಲ್ ಮೀಡಿಯಾ?

* ಐಟಿ ಕಾನೂನು ಹೇರಿಕೆ, ಕಂಪನಿಗಳು ಪಾಲಿಸಬೇಕೇ? ಬೇಡ್ವೇ?

Author: Akhilesh Mishra, New Delhi

ವಿಶ್ವಾದ್ಯಂತ ಸಾರ್ವಜನಿಕ ಚರ್ಚೆಗೆ ವೇದಿಕೆಯಾಗಿರುವ ತಂತ್ರಜ್ಞಾನ ಹಾಗೂ ಸೋಶಿಯಲ್ ಮೀಡಿಯಾ ಕಂಪನಿಗಳ ಪಾತ್ರದ ಬಗ್ಗೆ ಇತ್ತೀಚೆಗೆ ಹೊಸ ರೀತಿಯಲ್ಲಿ ಚರ್ಚೆ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಕಂಪನಿಗಳ ಮೇಲೆ ಯಾವಾಗಿನಿಂದ ನೂತನ ಐಟಿ ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೋ ಅಂದಿನಿಂದ ದೇಶದಲ್ಲೂ ಇವುಗಳ ಬಗ್ಗೆ ಚರ್ಚೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಸೋಶಿಯಲ್ ಮೀಡಿಯಾಗಳ ಅನಿಯಂತ್ರಿತ ವರ್ತನೆ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮೈಕ್ರಾನ್ ನೀಡಿರುವ ಪ್ರತಿಕ್ರಿಯೆ ಭಾರೀ ಸದ್ದು ಮಾಡಿದೆ. 

ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!

ಮಹತ್ವಪೂರ್ಣ ನಿರ್ಧಾರಗಳನ್ನು ಖಾಸಗಿ ಆಟಗಾರರು ಪಡೆಯುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಇರಲು ಬಯಸುವುದಿಲ್ಲ. ಸೋಶಿಯಲ್ ಮೀಡಿಯಾ ಹೇಗಿರಬೇಕೆಂಬ ಕಾನೂನು ನಿಮ್ಮ ಚುನಾಯಿತ ಪ್ರತಿನಿಧಿ, ಪ್ರಜಾಪ್ರಭುತ್ವ ವ್ಯವಸ್ಥೆ ಅಥವಾ ಚುನಾಯಿತ ಸರ್ಕಾರವು ನಿರ್ಧರಿಸಬೇಕು ಅಥವಾ ಅನುಮೋದಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಫ್ರಾನ್ಸ್ ಅಧ್ಯಕ್ಷರು ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡಿತ್ತು. ಟ್ವಿಟರ್ ಹಾಗೂ ಫೇಸ್‌ಬುಕ್ ಕಂಪನಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಮ್ಮ ಪ್ಲಾಟ್‌ಫಾರಂಗಳಲ್ಲಿ ನಿರ್ಬಂಧ ಹೇರಿದ್ದ ವೇಳೆ ಅವರು ಇಂತಹ ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ಸೋಶಿಯಲ್ ಮೀಡಿಯಾಗಳ ಮೇಲೆ ಹಿಡಿತ ಸಾಧಿಸಬೇಕೆಂಬ ಚರ್ಚೆಗೆ ಮತ್ತಷ್ಟು ಬಲ ಸಿಕ್ಕಿತು. ಹೀಗಿದ್ದರೂ ಸಾಮಾಜಿಕ ಮಾಧ್ಯಮ ಕಂಪನಿಗಳು, ತಾವು ಇತರರಂತೆ ಗ್ರಾಹಕರಿಗೆ ರಾಜಕೀಯ, ಇನ್ನಿತರ ವಿಚಾರಗಳ ಬಗ್ಗೆ ಯಾವುದೇ ಭಯವಿಲ್ಲದೇ ಮಾತನಾಡಲು ಅವಕಾಶ ನೀಡುವ ಮಾಧ್ಯಮಗಳು. ಹೀಗಾಗಿ ಕಂಪನಿಗಳ ಈ ವಾದವನ್ನು ಪರಿಶೀಲಿಸಲು ಈ ಸೋಶಿಯಲ್ ಮೀಡಿಯಾಗಳಿಗೆ ಸೂಕ್ತವಾದ ವಿಶೇಷವಾದ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕು.

ಆದರೆ ಸೋಶಿಯಲ್ ಮೀಡಿಯಾ ಕಂಪನಿಗಳು ಆರಂಭಗೊಂಡಾಗ ಇಂತಹುದ್ದೊಂದು ವಾದ ಒಪ್ಪಿಕೊಳ್ಳಬಹುದಿತ್ತು. ಅಂದಿಗೆ ಅದು ಹೋಲಿಕೆಯಾಗುತ್ತಿತ್ತು. ಆದರೆ ಯಾವಾಗ ಇದು ವಿಸ್ತರಿಸುತ್ತಾ ಅಭಿವೃದ್ಧಿ ಕಂಡಿತೋ ಅವುಗಳ ನೀತಿ ನಿಯಮಗಳಲ್ಲೂ ಬದಲಾವಣೆಗಳಾದವು. ಹೀಗಿರುವಾಗ ಮೂಡುವ ಪ್ರಮುಖ ಪ್ರಶ್ನೆ ಎಂದರೆ ಸೋಧಶಿಯಲ್ ಮೀಡಿಯಾಗಳು ಅಸ್ತಿತ್ವಕ್ಕೆ ಬಂದ ಒಂದೂವರೆ ದಶಕದ ಬಳಿಕವೂ ಕೇವಲ ಮಧ್ಯವರ್ತಿಗಳಾಗಿ ಉಳಿದಿವೆಯೋ ಅಥವಾ ಮಧ್ಯವರ್ತಿ ಭದ್ರತೆ ಸೋಗಿನಲ್ಲಿ ಬೇರೆ ಹಾದಿ ತುಳಿದಿವೆಯೋ ಎಂಬುವುದು. ಜಾಗತಿಕ ಮಟ್ಟದಲ್ಲಿ ಸದ್ಯ ಸೋಶಿಯಲ್ ಮೀಡಿಯಾಗಳು ಪ್ರಮುಖ ಸಾರ್ವಜನಿಕ ಮಾಧ್ಯಮಗಳಾಗಿ ಪರಿವರ್ತನೆಗೊಂಡಿರುವ ಸಂದರ್ಭದಲ್ಲಿ ಕೆಲ ವಿಚಾರಗಳ ಬಗ್ಗೆ ಗಮನಹರಿಸಲೇಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

ಸೋಶಿಯಲ್ ಮಿಡಿಯಾ ಪೋಸ್ಟ್ ತೆಗೆದು ಹಾಕುವ ವಿಚಾರ

ಜಗತ್ತಿನ ಪ್ರತಿಯೊಂದು ದೇಶಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಬಂಧ ಮಾನದಂಡ ನಿಗದಿಪಡಿಸುವ ನಿರಂಕುಶ ಹಕ್ಕು ಯಾವುದಾದರೂ ಖಾಸಗಿ ಸೋಶಿಯಲ್ ಮೀಡಿಯಾಗೆ ಇರಬೇಕಾ? ಒಂದು ದೇಶದ ಸಾಂಸ್ಕೃತಿಕ ಮಾನದಂಡಗಳನ್ನೇ ಬೇರೆ ದೇಶಗಳಿಗೂ ಯಾಕೆ ಪರಿಗಣಿಸಬೇಕು? ಈಎಲ್ಲಾ ವಿಚಾರದ ಬಗ್ಗೆ ತಪಾಸಣೆ ನಡೆಸೋರು ಯಾರು? ವಿವಾದ ಹುಟ್ಟಿಕೊಂಡರೆ ಹೊಣೆ ಯಾರು? ಇದೆಲ್ಲವನ್ನೂ ಬೇಜವಾಬ್ದಾರಿ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಈ ಹಿಂದೆಯೂ ಅನೇಕ ಘಟನೆಗಳು ನಡೆದಿವೆ. ಸಾಮಾಜಿಕ ಮಾಧ್ಯಮ ಕಂಪನಿಗಳ ಕಾರ್ಯನಿರ್ವಾಹಕರ ರಾಜಕೀಯ ಸಿದ್ಧಾಂತ ಹಾಗೂ ಒಂದು ನಿರ್ದಿಷ್ಟ ದೃಷ್ಟಿಕೋನ ಅದನ್ನು ಹತ್ತಿಕ್ಕುವ ಸಂಪೂರ್ಣ ಶಕ್ತಿಯ ಅನಾವರಣ ಈ ಹಿಂದೆಯೂ ಆಗಿದೆ.

ರಾಷ್ಟ್ರಕ್ಕಿಂತ ದೊಡ್ಡವಲ್ಲ ಖಾಸಗಿ ಕಂಪನಿಗಳು

ಭಾರತದಲ್ಲಿ ಇತ್ತೀಚೆಗೆ ಟ್ವಿಟರ್‌ ವರ್ತಿಸಿದ ರೀತಿ ಈ ಗಮನಿಸಲೇಬೇಕು. 2021 ರ ಮೇ 25ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಗೆ, ಡಿಜಿಟಲ್‌ ಮಾಧ್ಯಮಗಳಿಗೆ ಹಾಗೂ ಓವರ್‌ ದಿ ಟಾಪ್‌ (ಒಟಿಟಿ) ಸೇವೆಗಳಿಗೆ ಅನ್ವಯಿಸುವಂತೆ ಹೊಸ ನಿಯಮ ಜಾರಿಗೆ ಬಂದಿದೆ. ಈ ಮಾಧ್ಯಮಗಳಲ್ಲಿ ಸುಳ್ಳು, ಮಾನಹಾನಿಕರ, ಅಪಾಯಕಾರಿ ಹಾಗೂ ಅಶ್ಲೀಲ ಸಂಗತಿಗಳ ಪ್ರಸಾರ ತಡೆಯುವುದಕ್ಕೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ನೀತಿ ಸಂಹಿತೆ ಜಾರಿಗೆ ತಂದಿದೆ. ಅದರ ಪ್ರಕಾರ ಈ ಎಲ್ಲ ಕಂಪನಿಗಳು ಸರ್ಕಾರದ ಜೊತೆಗೆ ವ್ಯವಹರಿಸುವುದಕ್ಕೆ ಒಬ್ಬ ಮಧ್ಯವರ್ತಿಯನ್ನು ನೇಮಿಸಬೇಕು ಮತ್ತು ಸರ್ಕಾರದ ಕಡೆಯಿಂದಲೂ ಈ ಕಂಪನಿಗಳ ಜೊತೆಗೆ ವ್ಯವಹರಿಸುವುದಕ್ಕೆ ನೋಡಲ್‌ ಅಧಿಕಾರಿಯಿರುತ್ತಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಅಶ್ಲೀಲ ಅಥವಾ ಅಪಾಯಕಾರಿ ಸಂದೇಶ ಅಥವಾ ಫೋಟೋ, ವಿಡಿಯೋಗಳು ಪೋಸ್ಟ್‌ ಮಾಡಲ್ಪಟ್ಟರೆ ಅವುಗಳನ್ನು 24 ಗಂಟೆಯಲ್ಲಿ ತೆಗೆಯಬೇಕು ಮತ್ತು ಸರ್ಕಾರ ಕೇಳಿದರೆ ಅವುಗಳ ಮೂಲವನ್ನು ಕಂಪನಿಗಳು ತಿಳಿಸಬೇಕು ಎಂಬುದು ಹೊಸ ನಿಯಮಗಳ ಸಾರಾಂಶ. 

ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಭಯಪಡಬೇಕಿಲ್ಲ; ಹೊಸ ನಿಯಮ ಕುರಿತು ಕೇಂದ್ರ ಸ್ಪಷ್ಟನೆ!

ಆದರೆ ಟ್ವಿಟರ್ ಮಾತ್ರ ಈ ಕಾನೂನನ್ನು ಒಪ್ಪಿಕೊಂಡಿಲ್ಲ. ಟ್ವಿಟರ್‌ ಬಿಟ್ಟು ಉಳಿದೆಲ್ಲಾ ಕಂಪನಿಗಳು ಈ ನಿಯಮವನ್ನು ಒಪ್ಪಿಕೊಂಡಿವೆ. ಧಾರೆ ಟ್ವಿಟರ್‌ನಲ್ಲಿ ಅವಮಾನ ಉಂಟುಮಾಡುವ ವಿಷಯಗಳು ಪ್ರಸ್ತಾಪವಾದರೆ ಅಥವಾ ದೂರು ನೀಡುವುದಾದರೆ ಬಳಕೆದಾರರು ಖುದ್ದು ತಾವೇ ಈ ಸಮಸ್ಯೆಗತಳನ್ನೆದುರಿಸಬೇಕಾಗಿದೆ.. ಸದ್ಯ ಈ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದು, ಸರ್ಕಾರ ಹಾಗೂ ಕಂಪನಿಗಳ ವಾದ ಪ್ರತಿವಾದ ಮುಂದುವರೆದಿದೆ. 

ರಾಷ್ಟ್ರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕೇ?

ಇನ್ನು ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಐಟಿ ಕಾನೂನಿನಡಿ ಗ್ರಾಹಕರ ವಿವರ, ಚಾಟಿಂಗ್ ಹೀಗೆ ಎಲ್ಲಾ ವಿಚಾರಗಳನ್ನೂ ಸಂಗ್ರಹಿಸಲು ಆದೇಶಿಸಿತ್ತು. ಅಲ್ಲದೇ ಅಪರಾಧ ಕೃತ್ಯಗಳು ಸಂಭವಿಸಿದಾಗ ಇದನ್ನು ನೀಡುವಂತೆ ಸೂಚಿಸಿತ್ತು. ಆದರೆ ಇದಕ್ಕೊಪ್ಪದ ಕಂಪನಿ ಇದು ಗ್ರಾಹಕರಿಗೆ ನಾವು ನೀಡುವ ಗೌಪ್ಯತಾ ಭರವಸೆಯನ್ನು ಉಲ್ಲಂಘಿಸಿದಂತಾಗುತ್ತದೆ. ಆದರೆ ಕೆಲ ಸಂದರ್ಭದಲ್ಲಿ ಬಳಕೆದಾರರ ಮಾಹಿತಿ ಇಟ್ಟುಕೊಳ್ಳುವುದು ಅಗತ್ಯವಾಗುತ್ತದೆ, ಅದರಲ್ಲೂ ರಾಷ್ಟ್ರದ ಭದ್ರತೆ ವಿಚಾರ ಬಂದಾಗ ಇದು ಅತೀ ಅಗತ್ಯ. ಉದಾ: ವಚಾಟ್ಸಾಪ್‌ ಮೂಲಕ ಉಗ್ರರು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆಂದಿಟ್ಟುಕೊಳ್ಳೋಣ. ಹೀಗಿರುವಾಗ ಈ ಬಗ್ಗೆ ತಿಳಿದು ಇದನ್ನು ತಡೆದು ಅನೇಕರ ಜೀವ ಕಾಪಾಡುವುದು ತಪ್ಪೇ? ಇನ್ನು ಕೆಲ ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ಮಕ್ಕಳ ಕಳ್ಳತನದ ಬಗ್ಗೆ ಸುಳ್ಳು ಸುದ್ದಿ ಹರಡಿ ಹಿಂಸಾಚಾರ ನಡೆದಿತ್ತು. ಈ ವೇಳೆ ಜೀವವೂ ಬಲಿಯಾಗಿತ್ತು. ಹೀಗಿರುವಾಗ ಅಪರಾಧಿಗಳನ್ನು ಪತ್ತೆಹಚ್ಚುವ ಶಕ್ತಿ ಕಂಪನಿಗಳಿಗಿರಬೇಕಲ್ಲವೇ? ಅಪರಾಧಿಗಳನ್ನು ಹಿಡಿದು ಶಿಕ್ಷೆ ವಿಧಿಸುವ ಹಾಗೆ ಮಾಡಬೇಕಲ್ಲವೇ? ಕೇವಲ ಗ್ರಾಹಕರ ಗೌಪ್ಯತೆಗೆ ಅಡ್ಡಿಯಾಗುತ್ತದೆ ಎಂಬ ವಿಚಾರವನ್ನು ಮುಂದಿಟ್ಟುಕೊಮಡು ದೇಶದಲ್ಲಿ ನಡೆಯುವ ದೇಶವಿರೋಧಿ ಚಟುವಟಿಕೆ, ದಾಳಿ ನಡೆಸಲು ರೂಪಿಸಲಾಗುವ ಸಂಚಿನ ಮಾಹಿತಿಯಿಂದ ಭದ್ರತಾ ಪಡೆಗಳು ದೂರ ಉಳಿಯಬೇಕೇ? ಹೀಗಾದಲ್ಲಿ ಇದರ ಪರಿಣಾಮ ಭಯಾನಕವಾಗಿರಲಿದೆ.

ದೊಡ್ಡ  ಹಾಗೂ ದೀರ್ಘ ಕಾಲದ ಚರ್ಚೆ

ಈ ಮೇಲಿನ ಪ್ರಶ್ನೆಗಳ ಜೊತೆ ಕಾಡುವ ಇನ್ನೂ ಕೆಲ ಪ್ರಶ್ನೆಗಳು ಹೀಗಿವೆ. ಸೋಶಿಯಲ್ ಮೀಡಿಯಾ ಕಂಪನಿಗಳು ಕೇವಲ ಖಾಸಗಿ ಕಂಪನಿಗಳಾಗಿ ಉಳಿದಿವೆಯೇ? ಅಥವಾ ಅವರು ಆ ದೇಶದ ರಾಷ್ಟ್ರೀಯ ಶಕ್ತಿಯನ್ನು ವಿಸ್ತರಿಸುವಲ್ಲಿ ನಿರತರಾಗಿದ್ದಾರೆ? ಭೌಗೋಳಿಕ ರಾಜಕೀಯ ಸಾಧನಗಳಾಗಿ ಬಳಸಲ್ಪಡುವುದಿಲ್ಲ ಎಂದು ನಂಬಬಹುದೇ?

ಭಾರತದ ಕಾನೂನಿಗೆ ಗೂಗಲ್ ಬದ್ಧ; ನೂತನ ಡಿಜಿಟಲ್ ನಿಯಮ ಕುರಿತು ಸುಂದರ್ ಪಿಚೈ ಸ್ಪಷ್ಟನೆ!

ಸರ್ವಾಧಿಕಾರ ಅಥವಾ ಮಿಲಿಟರಿ ಆಡಳಿತದ ಅಡಿಯಲ್ಲಿರುವ ದೇಶದಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಯು ಜಾಗತಿಕವಾಗಿ ಈ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡರೆ ಭವಿಷ್ಯದಲ್ಲಿ ನಾವು ಆಶಾವಾದಿಗಳಾಗಬಹುದೇ? ಸೋಶಿಯಲ್ ಮೀಡಿಯಾ ಕಂಪನಿಯು ಕೇವಲ ಒಂದು ಖಾಸಗಿ ಕಂಪನಿ ಮತ್ತು ಆ ದೇಶದ ಆಳವಾದ ಸ್ಥಿತಿಯ ವಿಸ್ತರಣೆಯಲ್ಲ ಎಂದು ಖಚಿತೊಪಡಿಸುತ್ತದೆಯೇ?

ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮದೇ ಆದ ರೀತಿ ಹಿತಾಸಕ್ತಿಗಳಲ್ಲಿ ವಿವಿಧ ದೇಶಗಳಲ್ಲಿ ಚರ್ಚೆಯಾಗುತ್ತಿರುವ ವಿಷಯಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದರೆ ಪರಿಸ್ಥಿತಿ ಹೇಗಿರುತ್ತದೆ? ಉದಾಹರಣೆಗೆ, COVID ವೈರಸ್ ಅನ್ನು ಅದರ ಮೂಲ ದೇಶದಿಂದ ಗುರುತಿಸಬೇಕೇ, ಬೇಡವೇ?  ಪೋಸ್ಟ್‌ಗಳಲ್ಲಿ ಜಿಪಿಎಸ್ ಟ್ಯಾಗಿಂಗ್ ಮೂಲಕ ಉಭಯ ದೇಶಗಳ ನಡುವಿನ ವಿವಾದಿತ ಭೂಮಿಯನ್ನು ಹೇಗೆ ಗುರುತಿಸಬೇಕು?

ಸಾಂಸ್ಕೃತಿಕ ಸನ್ನಿವೇಶದ ಸೂಕ್ಷ್ಮತೆಯನ್ನು ಪರಿಗಣಿಸದೆ ಪ್ರಪಂಚದ ಒಂದು ಭಾಗದಲ್ಲಿನ ಮಾನದಂಡಗಳನ್ನು ಅಥವಾ ಭಾಷಣವನ್ನು ವಿಶ್ವದ ಇತರ ಭಾಗಗಳಿಗೆ ಅನ್ವಯಿಸಬೇಕೇ?

ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?

ಸಾಮಾಜಿಕ ಮಾಧ್ಯಮ ಕಂಪನಿಗಳು ಖಾಸಗಿ ಘಟಕಗಳಾಗಿರುವುದರಿಂದ  ಷೇರುದಾರರಿಗೆ ಜವಾಬ್ದಾರರಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಂಶಯಾಸ್ಪದ ಹಣವನ್ನು ಭೌಗೋಳಿಕ-ರಾಜಕೀಯ ಅಥವಾ ಭೌಗೋಳಿಕ-ಕಾರ್ಯತಂತ್ರದ ಉದ್ದೇಶಗಳಿಗಾಗಿ ಬಳಸುವುದರ ಮೂಲಕ ಈ ಸಾಮಾಜಿಕ ಮಾಧ್ಯಮಗಳ ಮೂಲಕ ಆಸಕ್ತಿಯನ್ನು ಪೂರೈಸುವ ಸಾಧ್ಯತೆ ಇದೆ, ಆದ್ದರಿಂದ ಅವರಿಗೆ ಅಂತಹ ಸ್ವಾತಂತ್ರ್ಯವನ್ನು ನೀಡಬೇಕೇ?. ಆದಾಗ್ಯೂ, ಸಾಮಾಜಿಕ ಮಾಧ್ಯಮ ಕಂಪನಿಗಳ ಪಾತ್ರ ಜಾಗತಿಕವಾಗಿ ಸಕಾರಾತ್ಮಕವಾಗಿದೆ. ಅವರು ಲಕ್ಷಾಂತರ ಮಂದಿಯನ್ನು ಶಕ್ತಶಾಲಿಯಾಗಿಸಿದ್ದಾರೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಕಂಪನಿಗಳು 2000 ರ ದಶಕದ ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಶೈಶವಾವಸ್ಥೆಯಿಂದ ಹೊರಬಂದವು. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ನಿಯಂತ್ರಿಸಲು ನಿಮಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕ.

ಲೇಖಕರು: ಅಖಿಲೇಶ್ ಮಿಶ್ರಾ
ಸಿಇಒ, ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಹಾಗೂ MyGovನ ಮಾಜಿ ನಿರ್ದೇಶಕ.

click me!