ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. ಈಗಾಗಲೇ ಯಶಸ್ವಿ ಮಹಿಳಾ ಗಗನಯಾತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಸುನೀತಾ ವಿಲಿಯಮ್ಸ್ ಯಶಸ್ಸಿನ ಗುಟ್ಟು ಬಹಿರಂಗವಾಗಿದೆ. ವಿಘ್ನ ವಿನಾಯಕ ನನಗೆ ಶುಭಸಂಕೇತ ಎಂದಿದ್ದಾರೆ.
ಕ್ಯಾಲಿಫೋರ್ನಿಯಾ(ಮೇ.06) ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಯಶಸ್ಸಿನ ಗುಟ್ಟು ಬಹಿರಂಗವಾಗಿದೆ. ಮೇ.07 ರಂದು ಮತ್ತೆ ಬಾಹ್ಯಾಕಾಶಕ್ಕೆ ಹಾರುತ್ತಿರುವ ಸುನೀತಾ ವಿಲಿಯಮ್ಸ್ ಇದೀಗ ಯಶಸ್ಸಿನ ಹಿಂದಿನ ರಹಸ್ಯ ಬಹಿರಂಗ ಪಡಿಸಿದ್ದಾರೆ. ಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭಸಂಕೇತ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.
ಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶನ ಎಲ್ಲಾ ಎಲ್ಲಾ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆ. ಗಣೇಶ ನನ್ನ ಎಲ್ಲಾ ಕೆಲಸಗಳಿಗೆ ಶುಭಹಾರೈಸಿದ್ದಾನೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. ಈ ಹಿಂದೆ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ದಿದ್ದರು.
undefined
ಭಾರತದ ಮಾನವಸಹಿತ ಗಗನಯಾತ್ರೆ: ಮಹಿಳೆಯರಿಗೆ ಏಕಿಲ್ಲ ಉಡ್ಡಯನ ಅವಕಾಶ?
ಮೇ.7ರ ಬೆಳಗ್ಗ 8.04ರ ವೇಳೆಗೆ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಮಿಷನ್ ಪೈಲೆಟ್ ಜವಾಬ್ದಾರಿ ಹೊತ್ತಿರುವ ಸುನಿತಾ ಬರೋಬ್ಬರ 322 ದಿನ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 58 ವರ್ಷದ ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗನನ ಯಾತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದುವರೆಗೆ ಸುನಿತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಒಟ್ಟು 50 ಗಂಟೆ 40 ನಿಮಿಷ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಇದೀಗ ಮಹತ್ವದ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರಲಿರುವ ಸುನೀತಾ ವಿಲಿಯಮ್ಸ್ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಯಾತ್ರೆ ನಡೆಸಿದ್ದರು. ಸಮೋಸಾ ಪ್ರಿಯೆ ಆಗಿರುವ ಸುನೀತಾ ವಿಲಿಯಮ್ಸ್ ಅಮೆರಿಕದಲ್ಲಿ ಖ್ಯಾತ ಗನನಯಾತ್ರಿಯಾಗಿದ್ದರೂ ಭಾರತೀಯತೆ ಮಾಸಿಲ್ಲ.
ಮತ್ತೆ ನಾಸಾದ ಬಾಹ್ಯಾಕಾಶ ಯಾನಕ್ಕೆ ಸುನೀತಾ ವಿಲಿಯಮ್ಸ್
ಭಾರತದ ಚಂದ್ರಯಾನ ಯಶಸ್ವಿಗೆ ಸಂತಸ ವ್ಯಕ್ತಪಡಿಸಿದ್ದ ಸುನೀತಾ ವಿಲಿಯಮ್ಸ್, ಇಸ್ರೋ ಭಾಗೂ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದರು.