ಗೊವಂಶ ಹತ್ಯೆ ನಿಷೇಧ ಕಾಯ್ದೆಗೆ ಪೇಜಾವರ ಶ್ರೀ ಆಗ್ರಹ: ಸಿಎಂಗೆ ಪತ್ರ

By Suvarna News  |  First Published Sep 16, 2020, 10:32 PM IST

ಪ್ರಬಲ ಗೊವಂಶ ಹತ್ಯೆ ನಿಷೇಧ ಕಾಯ್ದೆಗೆ ಜಾರಿಗೆ ತರುವಂತೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಗ್ರಹಿಸಿದ್ದಾರೆ.


ಉಡುಪಿ, (ಸೆ.16): ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ತಡೆಗೆ ಪ್ರಬಲ ಕಾನೂನು ಜಾರಿ ಮಾಡಿ ಎಂದು ಆಗ್ರಹಿಸಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ನಮ್ಮ ರಾಜ್ಯದಲ್ಲಿ, ಪರಿಸರದಲ್ಲಿ ಗೋಹತ್ಯೆ, ಕಳ್ಳತನ, ಹಿಂಸಾತ್ಮಕ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರಬಲ ಕಾನೂನು ಬೇಕು. ಪ್ರಸಕ್ತ ಅಧಿವೇಶನದಲ್ಲಿಯೇ ಅದನ್ನು ಮಂಡಿಸಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

Latest Videos

undefined

ಚೀನಾ-ಪಾಕ್‌ ಡೀಲ್‌, ಡಿಕೆಶಿ ಮಗಳವಿವಾಹಕ್ಕೆ ಡೇಟ್ ಫಿಕ್ಸ್: ಇಲ್ಲಿದೆ ಸೆ. 16ರ ಟಾಪ್ 10 ಸುದ್ದಿ! 

ಗೋ ವಂಶದ ಹತ್ಯೆ ತಡೆಗಟ್ಟಲು, ಗೋವಿನ ಸಂತತಿಯನ್ನು ಉಳಿಸಲು ಸರ್ಕಾರ ಮುಂದಾಗಬೇಕು. ಈ ಮೂಲಕ ನಾಡಿನ ಸಮಸ್ತ ಗೋಪ್ರೇಮಿಗಳು, ಪಶುಪ್ರೇಮಿಗಳ ಆಗ್ರಹವನ್ನು ಮನ್ನಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

click me!