ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಬಡವರ ರೇಷನ್ ಕಾರ್ಡ್ ಬದಲಾವಣೆಗೆ ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಆರೋಪಿಸಿದ್ದಾರೆ. ಯೋಜನೆಗಳನ್ನು ಸಾಧಕ-ಬಾಧಕ ತಿಳಿಯದೆ ಜಾರಿಗೆ ತಂದ ಪರಿಣಾಮ ಇದಾಗಿದೆ ಎಂದು ಅವರು ಹೇಳಿದರು.
ಹಾಸನ (ನ.18): ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನಗೆಳಿಗೆ ಹಣ ಹೊಂದಿಸಲು ಸಾಧ್ಯವಾಗದ್ದಕ್ಕೆ ಬಡಜನರ ರೇಷನ್ ಕಾರ್ಡ್ ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಯಾವುದೇ ಯೋಜನೆಗಳನ್ನು ಸಾಧಕ-ಬಾದಕ ತಿಳಿದುಕೊಳ್ಳದೇ ಜಾರಿಗೆ ತಂದರೆ ಹೀಗೆಯೇ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಆಗಲಿ ನಿಯಮಗಳನ್ನು ಮಾಡುವ ಮೊದಲು ಯೋಚನೆ ಮಾಡಬೇಕಿತ್ತು. ಗ್ಯಾರೆಂಟಿಗಳನ್ನು ಮಾಡಿದರು ಈಗ ಅದನ್ನು ಪರಿಷ್ಕರಣೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ಒಂದು ಶಾಸನ ತಂದು ಅದನ್ನು ತಿದ್ದುಪಡಿ ಮಾಡಬೇಕು ಎನ್ನುವುದು ವ್ಯವಸ್ಥೆ ಅಲ್ಲ. ಕಾರ್ಡ್ ಇಟ್ಟುಕೊಂಡಿರುವವರಿಗೆ ಇದೀಗ ಅಕ್ಕಿ ಕೊಡಲ್ಲ ಎನ್ನುತ್ತಿದ್ದಾರೆ. ನೇರವಾಗಿ ಅವರಿಗೆ ಸವಲತ್ತು ಕೊಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ತನ್ನ ಪಂಚ ಗ್ಯಾರೆಂಟಿಗಳಿಗೆ ಹಣ ಹೊಂದಿಸಲು ಆಗದೇ, ನಾನಾ ರೀತಿ ವಾಮ ಮಾರ್ಗಗಳು ಅನುಸರಿಸಲು ಮುಂದಾಗಿದ್ದಾರೆ ಎಂದು ಆರೋಪ ಮಾಡಿದರು.
undefined
ರಾಜ್ಯ ಸರ್ಕಾರ ಏನೇ ನಿಯಮಗಳನ್ನು ಮಾಡಬೇಕಾದರೆ ಮುಂಚೆಯೇ ತೀರ್ಮಾನ ಮಾಡಿಕೊಂಡು ಐಎಎಸ್, ಕೆಎಎಸ್ ಅಧಿಕಾರಿಗಳು, ಕಾರ್ಯದರ್ಶಿ ಎಲ್ಲರ ಒಮ್ಮತದ ಅಭಿಪ್ರಾಯ ತಗೊಂಡು ನಂತರ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು ಈ ಹಿಂದೆಯೂ ಇದೇ ರೀತಿ ಆಗಿತ್ತು. ಅದನ್ನು ಬಗೆಹರಿಸುವಾಗ ಜನರಿಗೆ ಮಾತ್ರ ಯಾವುದೇ ತೊಂದರೆ ಕೊಡಲಿಲ್ಲ. ಇನ್ನು ಕೆಲವರು ಬಿಪಿಎಲ್ ಕಾರ್ಡ್‌ಗೆ ಅನರ್ಹತೆ ಇದ್ದವರು ತಾವಾಗಿಯೇ ಕಾರ್ಡ್ ಒಪ್ಪಿಸಿದ್ದರು. ಆದರೆ, ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಒಪ್ಪಲ್ಲ. ಇನ್ನು ವಾಲ್ಮೀಕಿ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.
ಇದನ್ನೂ ಓದಿ :ಕೋವಿಡ್-19 ಹಗರಣದ ಕರಾಳ ಸತ್ಯ ಬಿಚ್ಚಿಟ್ಟ ನ್ಯಾ.ಮೈಕಲ್ ಡಿ. ಕುನ್ಹಾ ಪ್ರಥಮ ವರದಿ
ನಿಖಿಲ್ ಕುಮಾರಸ್ವಾಮಿ ಗೆದ್ದು ಶಾಸಕರಾಗುತ್ತಾರೆ: ಮುಂದಿನ ಮೂರ್ನಾಲ್ಕು ದಿನದಲ್ಲಿ ಉಪ ಚುನಾವಣೆ ಫಲಿತಾಂಶ ಬರುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಗೆದ್ದು ಶಾಸಕರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಭಗವಂತನ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರುತ್ತದೆ. ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜನರ ಆಶೀರ್ವಾದ ಮುಂದಿನ ದಿನಗಳಲ್ಲಿ ನಮ್ಮ ಮೇಲೆ ಹೆಚ್ಚು ಇರುತ್ತದೆ. ಇನ್ನು ನಮ್ಮ ಅಜ್ಜಿ ಚೆನ್ನಮ್ಮ ಅವರ ಆರೋಗ್ಯ ಸ್ವಲ್ಪ ಪರ್ವಾಗಿಲ್ಲ. ಅವರು ಎದ್ದು ಓಡಾಡಬೇಕಿದೆ, ಶ್ವಾಸಕೋಶದಲ್ಲಿ ಸೋಂಕಿತ್ತು, ಅದೆಲ್ಲ ಕ್ಲಿಯರ್ ಆಗಿದೆ. ಒಂದು ರೀತಿ ಬೆಟ್ಟರ್ ಆಗಿ ಇದ್ದಾರೆ ಎಂದು ತಿಳಿಸಿದರು.
ಹರದನಹಳ್ಳಿ ದೇವಾಲಯದಲ್ಲಿ ಪೂಜೆ ಸಲ್ಲಿಕೆ: ಹರದನಹಳ್ಳಿ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಆರು ತಿಂಗಳು, ವರ್ಷಕ್ಕೊಮ್ಮೆ ದೇವಾಲಯಕ್ಕೆ ಬಂದು ಹೋಗುತ್ತಾರೆ. ಆದರೆ, ಇಂದು ನಾನು ಇಲ್ಲಿಗೆ ಬರುವುದು ಸ್ವಲ್ಪ ತಡವಾಯಿತು. ಇವತ್ತು ಕಾರ್ಯಕ್ರಮಗಳು ಜಾಸ್ತಿ ಇದ್ದವು. ಆದ್ದರಿಂದ ಅರ್ಧ ಗಂಟೆ ತಡವಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿ ಮೊದಲು ಇಲ್ಲಿಗೆ ಬರ್ತಿನಿ ಅಂದಿದ್ದರು. ಆದರೆ, ಕೊನೇ ಕ್ಷಣದಲ್ಲಿ ನಮ್ಮ ಮನೆ ಹೆಣ್ಣು ದೇವರು ಯಲಿಯೂರು ದೇವಿರಮ್ಮ ದೇವಸ್ಥಾನಕ್ಕೆ ಮೊದಲು ಹೋದರು. ಹಾಗಾಗಿ, ನಾನು ಇಲ್ಲಿದೆ ಬರುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆಯ್ತು ಎಂದು ಹೇಳಿದರು.
ಇದನ್ನೂ ಓದಿ :ಕೇಂದ್ರ ಮಂತ್ರಿಯಾದ ತಕ್ಷಣ 2 ಕೊಂಬು ಬರೋದಿಲ್ಲ: ಹೆಚ್‌ಡಿಕೆ ವಿರುದ್ಡ ಸಚಿವ ಚಲುವರಾಯಸ್ವಾಮಿ ಕಿಡಿ