ಕೊರೋನಾ ನಿಗ್ರ​ಹಕ್ಕೆ ಸರ್ಕಾರದ 3 ಮೆಗಾ ನಿರ್ಧಾ​ರ!

By Kannadaprabha NewsFirst Published Jun 30, 2020, 7:34 AM IST
Highlights

ಕೊರೋನಾ ನಿಗ್ರ​ಹಕ್ಕೆ 3 ಮೆಗಾ ನಿರ್ಧಾ​ರ| ಸೋಂಕು ತಡೆಗೆ ಹೋರಾ​ಟ- ಕೊರೋನಾ ಸಮುದಾಯಕ್ಕೆ ಹರಡಿದೆಯೇ ಎಂದು ಪರೀಕ್ಷಿಸಲು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಮಹತ್ವದ ನಿರ್ಧಾರ| 

ಬೆಂಗಳೂರು(ಜೂ.30): ವಾರಿ​ಯ​ರ್‍ಸ್ಗೆ ಸೋಂಕಿನ ಲಕ್ಷಣಗಳ​ಲ್ಲಿ​ಲ್ಲ​ದಿ​ದ್ದರೆ ಹೋಮ್‌ ಐಸೋ​ಲೇ​ಷನ್‌

ರಾಜ್ಯವ್ಯಾಪಿ 1.5 ಲಕ್ಷ ಆ್ಯಂಟಿಬಾಡಿಸ್‌, ಆ್ಯಂಟಿಜೆನ್‌ ಟೆಸ್ಟ್‌

ಬೆಂಗ​ಳೂ​ರಲ್ಲಿ 50000 ಮಂದಿಗೆ Random‌ ಟೆಸ್ಟ್‌

ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬುದರ ಪತ್ತೆಗಾಗಿ ರಾಜ್ಯಾದ್ಯಂತ 1 ಲಕ್ಷ ಮಂದಿಗೆ ಆ್ಯಂಟಿಬಾಡಿಸ್‌ (ಪ್ರತಿಕಾಯ) ಪರೀಕ್ಷೆ ಹಾಗೂ ಬೆಂಗಳೂರಿನಲ್ಲಿ 50 ಸಾವಿರ ಮಂದಿಗೆ Rapid ಆ್ಯಂಟಿಜೆನ್‌ ಮೂಲಕ ತ್ವರಿತವಾಗಿ ಸೋಂಕು ಪರೀಕ್ಷೆ ನಡೆಸಲು ಸೋಮವಾರ ನಡೆದ ಕೊರೋನಾ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?: 6 ತಿಂಗಳು ಇದೇ ಸ್ಥಿತಿ

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಸೋಂಕು ಸಮುದಾಯಕ್ಕೆ ಸೋಂಕು ಹಬ್ಬಿರುವ ಸಾಧ್ಯತೆ ಬಗ್ಗೆ ಸಭೆಯಲ್ಲಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಹಲವರಿಗೆ ಸೋಂಕು ತಗಲಿ ತನ್ನಿಂತಾನೇ ವಾಸಿಯಾಗಿರಬಹುದು. ಇದನ್ನು ಪತ್ತೆ ಹಚ್ಚಲು ಮೇ ತಿಂಗಳಲ್ಲಿ ಬೆಂಗಳೂರು, ಕಲಬುರಗಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸೆರೊ ಸರ್ವೆ ನಡೆಸಲಾಗಿತ್ತು. ಜೂನ್‌ ತಿಂಗಳಲ್ಲಿ ಜಯದೇವ ಆಸ್ಪತ್ರೆಯ ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಒಟ್ಟು ಹನ್ನೆರಡು ಮಂದಿಯಲ್ಲಿ ಕೊರೋನಾ ಸೋಂಕಿನ ಆ್ಯಂಟಿಬಾಡಿಸ್‌ ಪತ್ತೆಯಾಗಿತ್ತು.

ಇದೇ ರೀತಿ ರಾಜ್ಯಾದ್ಯಂತ ಸಮುದಾಯಕ್ಕೆ ಸೋಂಕು ಹರಡಿದೆಯೇ ಎಂಬುದನ್ನು ಪತ್ತೆ ಹಚ್ಚಲು 1 ಲಕ್ಷ ಮಂದಿಗೆ ಆ್ಯಂಟಿಬಾಡಿಸ್‌ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ನೂರಾರು ಮಂದಿಯಲ್ಲಿ ಆ್ಯಂಟಿಬಾಡಿಸ್‌ ಪತ್ತೆಯಾದರೆ ಸೋಂಕು ಸಮುದಾಯಕ್ಕೆ ಹರಡಿರುವುದು ದೃಢವಾಗಲಿದೆ.

ಬುಲೆಟಿನ್ ಶಾಕ್, ಕೊರೋನಾ ಗಂಡಾಂತರ, ಮತ್ತೆ ಸಾವಿರ, ಬೆಂಗಳೂರೆಷ್ಟು?

50 ಸಾವಿರ ಆ್ಯಂಟಿಜೆನ್‌ ಪರೀಕ್ಷೆ:

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಪ್ರಮಾಣದ ಸೋಂಕು ಪ್ರಕರಣ ವರದಿಯಾಗುತ್ತಿವೆ. ಹೀಗಾಗಿ Rapid ಆ್ಯಂಟಿಜೆನ್‌ ಪರೀಕ್ಷೆ ಮೂಲಕ ತ್ವರಿತವಾಗಿ ಸೋಂಕು ಪತ್ತೆ ಮಾಡಲು 50 ಸಾವಿರ ಪರೀಕ್ಷೆಗೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಆರ್‌ಟಿ-ಪಿಸಿಆರ್‌ ಮೂಲಕ ಸೋಂಕು ಪರೀಕ್ಷೆ ನಡೆಸಿದರೆ ವರದಿಗೆ 24 ರಿಂದ 48 ಗಂಟೆಗಳ ಕಾಲದವರೆಗೆ ಕಾಯಬೇಕಾಗುತ್ತದೆ. ಅದೇ ಆ್ಯಂಟಿಜೆನ್‌ ಮಾದರಿಯಲ್ಲಿ ಮೂಗು ಅಥವಾ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಿದರೆ 5-10 ನಿಮಿಷಗಳಲ್ಲೇ ಸೋಂಕಿದ್ದರೆ ದೃಢಪಡುತ್ತದೆ. ಸೋಂಕು ನೆಗೆಟಿವ್‌ ಬಂದರೆ ಮತ್ತೊಮ್ಮೆ ಅವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಬಹುದು. ಸೋಂಕು ದೃಢಪಟ್ಟಿದ್ದರೆ ಅವರಿಗೆ ಸೋಂಕು ಇದೆ ಎಂದು ಪರಿಗಣಿಸಬಹುದು ಎಂದು ಸಭೆಯಲ್ಲಿ ಜಯದೇವ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

ಖಾಸಗಿ ವೈದ್ಯರು, ಶುಶ್ರೂಷಕರೂ ಕೊರೋನಾ ವಾರಿಯರ್ಸ್

ಖಾಸಗಿ ಆಸ್ಪತ್ರೆ ವೈದ್ಯರು, ಶುಶ್ರೂಷಕ ಸಿಬ್ಬಂದಿಯೂ ಕೊರೋನಾ ವಾರಿಯರ್ಸ್‌ ಪಟ್ಟಿಗೆ ಸೇರ್ಪಡೆ ಮಾಡಲು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೊರೋನಾ ವಾರಿಯರ್ಸ್‌ಗೆ ಇರುವ ವಿಮಾ ಸೌಲಭ್ಯವನ್ನು ಖಾಸಗಿಯವರಿಗೂ ವಿಸ್ತರಿಸಲಾಗುವುದು. ಸೇವೆಯ ಅವಧಿಯಲ್ಲಿ ಕೊರೋನಾದಿಂದ ಮೃತಪಟ್ಟರೆ 50 ಲಕ್ಷ ರು. ಪರಿಹಾರ ಅನ್ವಯವಾಗಲಿದೆ. ಇದನ್ನು ಮುಖ್ಯಮಂತ್ರಿಗಳ ಅನುಮತಿಗಾಗಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಮ್, ಸಿನಿಮಾ? ಹೊಸ ಲಾಕ್ ಡೌನ್ ನಿಯಮ ಪ್ರಕಟ, ಮಂಗಳವಾರದ ಮೋದಿ ಭಾಷಣ ಕುತೂಹಲ!

ಮತ್ತೆ ಲಾಕ್‌ಡೌನ್‌ ಸಿಎಂ ತೀರ್ಮಾನಕ್ಕೆ

ಕೊರೋನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡುವ ಕುರಿತ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಬಿಡಲು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಲಾಕ್‌ಡೌನ್‌ ಅನಿವಾರ್ಯತೆ ಬಗ್ಗೆ ಈಗಾಗಲೇ ತಜ್ಞರು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದ್ದಾರೆ. ಮುಂದಿನ ಕೆಲವು ದಿನಗಳ ಪ್ರಕರಣಗಳನ್ನು ಪರಿಶೀಲಿಸಿ ಜು.7 ರೊಳಗಾಗಿ ಲಾಕ್‌ಡೌನ್‌ ನಿರ್ಧಾರವನ್ನು ಮುಖ್ಯಮಂತ್ರಿಯವರೇ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಸಭೆಯಲ್ಲಿ ಈಬಗ್ಗೆ ಚರ್ಚಿಸುವ ಬದಲು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಡುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ಬರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಲಾಕ್‌ಡೌನ್‌ ಕುರಿತು ಸಭೆಯಲ್ಲಿ ಯಾವುದೇ ನಿರ್ಧಾರ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಬಳಸಿಕೊಳ್ಳುವ ಬಗ್ಗೆ, ಪರೀಕ್ಷೆಗಳ ಬಗ್ಗೆ, ಸಮನ್ವಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

click me!