ನಾಗರ ಪಂಚಮಿ ಸಂಭ್ರಮಕ್ಕೆ ಅಡ್ಡಿಯಾದ ಮಹಾಮಾರಿ ಕೊರೋನಾ

Kannadaprabha News   | Asianet News
Published : Jul 25, 2020, 08:38 AM ISTUpdated : Jul 25, 2020, 08:46 AM IST
ನಾಗರ ಪಂಚಮಿ ಸಂಭ್ರಮಕ್ಕೆ ಅಡ್ಡಿಯಾದ ಮಹಾಮಾರಿ ಕೊರೋನಾ

ಸಾರಾಂಶ

ಕೋವಿಡ್‌-19 ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ ಜನತೆ| ಕೊರೋನಾ ಕಂಟಕದ ಮಧ್ಯೆಯೂ ಶುಕ್ರವಾರ ಕೆಲವರು ಆಚರಿಸಿದ್ದು, ಇಂದು ಹೆಚ್ಚಿನ ಮಂದಿ ಹಬ್ಬ ಮಾಡಲಿದ್ದಾರೆ| ನಗರದ ನಾನಾ ಬಡಾವಣೆಗಳಲ್ಲಿರುವ ಸುಬ್ರಹ್ಮಣ್ಯ ಮತ್ತು ನಾಗ ದೇವರ ದೇವಾಲಯಗಳು, ಅಶ್ವತ್ಥಕಟ್ಟೆಗಳು ಅಲಂಕೃತಗೊಂಡಿವೆ|

ಬೆಂಗಳೂರು(ಜು.25):  ಕೊರೋನಾ ಸೋಂಕು ಭೀತಿಯ ನಡುವೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಆಚರಣೆಗೆ ಸಿದ್ಧತೆ ನಡೆದಿದೆ. ಕೆಲವರು ಶುಕ್ರವಾರವೇ ನಾಗರ ಪಂಚಮಿ ಮಾಡಿದರೆ, ಬಹುತೇಕರು ಇಂದು(ಶನಿವಾರ) ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲು ಸಜ್ಜಾಗಿದ್ದಾರೆ.

ನಾಗರ ಪಂಚಮಿಯಂದು ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದವು. ಭಕ್ತರು ಸುಬ್ರಹ್ಮಣ್ಯ, ಶಿವ, ವಿಷ್ಣು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೆ ನಾಗರ ಕಲ್ಲುಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದರು. ಆದರೆ, ಈ ಬಾರಿ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಕೊರೋನಾ ಕಂಟಕದ ಮಧ್ಯೆಯೂ ಶುಕ್ರವಾರ ಕೆಲವರು ಆಚರಿಸಿದ್ದು, ಶನಿವಾರ ಹೆಚ್ಚಿನ ಮಂದಿ ಹಬ್ಬ ಮಾಡಲಿದ್ದಾರೆ. ನಗರದ ನಾನಾ ಬಡಾವಣೆಗಳಲ್ಲಿರುವ ಸುಬ್ರಹ್ಮಣ್ಯ ಮತ್ತು ನಾಗ ದೇವರ ದೇವಾಲಯಗಳು, ಅಶ್ವತ್ಥಕಟ್ಟೆಗಳು ಅಲಂಕೃತಗೊಂಡಿವೆ. ಸೋಂಕಿನ ಹಿನ್ನೆಲೆ ಜನ ಒಟ್ಟಾಗಿ ಸೇರಲು ಅವಕಾಶವಿಲ್ಲದೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದು ಕೊಂಡು ಪೂಜೆ ಸಲ್ಲಿಸಬೇಕಾಗಿದೆ.

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ದೇವಾಲಯಗಳಿಗೆ ಸರ್ಕಾರ ಈ ಹಿಂದೆ ಆದೇಶಿಸಿರುವಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೇರೆ ಯಾವುದೇ ಸೇವೆಗಳು ಇರುವುದಿಲ್ಲ ಎಂದು ದೇವಾಲಯಗಳ ಆಡಳಿತ ಮಂಡಳಿಗಳು ತಿಳಿಸಿವೆ.

ಹೂವಿಗೆ ಬೇಡಿಕೆ ಕಡಿಮೆ

ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಭಾಗಗಳಿಗೆ ನಗರದ ಕೆ.ಆರ್‌. ಮಾರುಕಟ್ಟೆಯಿಂದ ಸಾಕಷ್ಟುಪ್ರಮಾಣದಲ್ಲಿ ಹೂವು ಸರಬರಾಜಾಗುತ್ತಿತ್ತು. ಈ ವರ್ಷ ಕೊರೋನಾದಿಂದ ಅಲ್ಲಿಗೆ ಹೂವು ಹೋಗುತ್ತಿಲ್ಲ. ಸ್ಥಳೀಯವಾಗಿಯೂ ಜನರಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿ ಇಲ್ಲದಿರುವುದರಿಂದ ಬೇಡಿಕೆಯೂ ಕಡಿಮೆಯಾಗಿದ್ದು, ಬೆಲೆಯೂ ಇಲ್ಲ ಎಂದು ಕೆ.ಆರ್‌. ಮಾರುಕಟ್ಟೆಯ ವರ್ತಕರೊಬ್ಬರು ಹೇಳಿದರು.

ಪ್ರತಿ ವರ್ಷ ಹಬ್ಬದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಹೂವಿನ ವ್ಯಾಪಾರ ಜೋರಾಗಿರುತ್ತಿತ್ತು. ಈ ಬಾರಿ ಹೂವಿನ ಮಾರಾಟಕ್ಕೆ ಹೆಸರಾದ ಪ್ರಮುಖ ಕೆ.ಆರ್‌. ಮಾರುಕಟ್ಟೆಯನ್ನು ಕೊರೋನಾ ಸೋಂಕಿನ ಕಾರಣಗಳಿಂದ ಬಂದ್‌ ಮಾಡಲಾಗಿದೆ. ಹೀಗಾಗಿ ಸಗಟು ಹೂವಿನ ವರ್ತಕರು ನಗರದ ಅಲ್ಲಲ್ಲಿ ಹೂವು ಮಾರಾಟ ಮಳಿಗೆಗಳನ್ನು ತೆರೆದು ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ಉತ್ತಮ ಮಳೆ, ಬೆಳೆ ಆಗಿರುವುದರಿಂದ ಸಾಕಷ್ಟುಪ್ರಮಾಣದಲ್ಲಿ ಹೂವು ಸರಬರಾಜಾಗುತ್ತಿದೆ. ಬೇಡಿಕೆ ಇಲ್ಲದೆ ಹೂವಿನ ಬೆಲೆಯಲ್ಲೂ ಏರಿಕೆಯಾಗಿಲ್ಲ. ನಗರಕ್ಕೆ ತಮಿಳುನಾಡು ಮತ್ತಿತರ ಪ್ರದೇಶಗಳಿಂದ ಮಲ್ಲಿಗೆ ಮೊಗ್ಗು, ಮಳ್ಳೆ ಮೊಗ್ಗು ಬರುತ್ತಿದೆ. ಉಳಿದಂತೆ ಕೋಲಾರ, ಚಿಕ್ಕಬಳ್ಳಾಪುರ ವಿವಿಧೆಡೆಯಿಂದ ಸೇವಂತಿ, ಕನಕಾಂಬರ, ಗುಲಾಬಿ ಹೂವು ಪೂರೈಕೆಯಾಗುತ್ತಿದೆ. ಆದರೆ, ಈ ಹಿಂದಿನಂತೆ ಹೂವಿಗೆ ಬೇಡಿಕೆ ಇಲ್ಲದಿರುವುದರಿಂದ ಹೂವಿನ ಬೆಲೆಯಲ್ಲೂ ಏರಿಕೆ ಇಲ್ಲ.

ಸಗಟು ಹೂವಿನ ದರ (ಕೆ.ಜಿ.ಗಳಲ್ಲಿ)

ಮಲ್ಲಿಗೆ 200-300 ರು.
ಮಳ್ಳೆ ಹೂವು 200-250 ರು.
ಕನಕಾಂಬರ 400-600 ರೂ.
ಸೇವಂತಿಗೆ 120-160 ರು.
ರೋಸ್‌ 120-160 ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್