ರಾಜ್ಯಕ್ಕೆ ಮತ್ತೆ ಮಳೆ ಕಂಟಕ?: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

By Govindaraj SFirst Published Oct 30, 2022, 9:06 PM IST
Highlights

ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ನಗರದಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಬಿಡುವು ಕೊಟ್ಟಿರುವ ಮಳೆ ನವೆಂಬರ್ ತಿಂಗಳಲ್ಲಿ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು (ಅ.30): ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ನಗರದಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಬಿಡುವು ಕೊಟ್ಟಿರುವ ಮಳೆ ನವೆಂಬರ್ ತಿಂಗಳಲ್ಲಿ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಶಾನ್ಯ ಮಾನ್ಸೂನ್ ಪ್ರಾರಂಭವಾದ ನಂತರ ಮಳೆ ಹೆಚ್ಚಾಗಲಿದ್ದು, ನವೆಂಬರ್ 2ರಿಂದ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. 

ಮುಂದಿನ ದಿನಗಳಲ್ಲಿ ನಗರದಲ್ಲಿ ಹಿತಕರ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ನವೆಂಬರ್‌ 2 ರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಕೊಡಗು ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಳೆಯಾಗಲಿದ್ದು, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ

ಮಳೆ ಸಾಧ್ಯತೆ, ಭತ್ತ ಬೆಳೆಗಾರರಿಗೆ ಸಲಹೆ: ಜಿಲ್ಲೆಯಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದ್ದು, ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ ವಿಭಾಗ ಸೂಚಿಸಿದೆ. ಬೆಳಗಿನ ವೇಳೆ ಶೇ. 93 ರಿಂದ 95ರಷ್ಟುತೇವಾಂಶ ಇರುತ್ತದೆ. ಗಾಳಿಯು ಗಂಟೆಗೆ ಸರಾಸರಿ 5 ರಿಂದ 7 ಕಿ.ಮೀ ವೇಗದಲ್ಲಿ ಬೀಸುತ್ತದೆ. ಭತ್ತಕ್ಕೆ ಕೊಳವೆ ಹುಳಿ, ಬೆಂಕಿ ರೋಗ ಕಾಡುವ ಸಾಧ್ಯತೆ ಇದ್ದು, ರೈತರು ಮುಂಜಾಗ್ರತ ಕ್ರಮ ಕೈಗೊಳ್ಳುವ ಜೊತೆಗೆ ಅಗತ್ಯ ಔಷಧ ಸಿಂಪಡಿಸಬೇಕು. 

ಕೊಳವೆ ಹುಳುವಿಗೆ ಯಾವುದಾದರೂ ಕ್ರಿಮಿನಾಶಕವನ್ನು 35 ಇಸಿ- 2.0ಮಿಲೀ ಅಥವಾ ಡಯಾಜಿನಾನ್‌ 60 ಇಸಿ- 1.0 ಮಿಲೀ ಅಥವಾ ಪೆಂಥೋಯೇಟ್‌ 100 ಇಸಿ- 1.0 ಮಿ.ಲೀ ಅನ್ನು ಎಕರೆಗೆ 200- 250 ಲೀ. ದ್ರಾವಣ ಸಿಂಪಡಿಸಬೇಕು. ಬೆಂಕಿ ರೋಗಕ್ಕೆ ಕಾರ್ಬೆಂಡಜಿಮ್‌ 50 ಡಬ್ಲ್ಯೂಪಿ 1 ಗ್ರಾಂ ಅಥವಾ ಟ್ರೈಸೈಕ್ಲೆಜೋಲ್‌ 75 ಡಬ್ಲ್ಯೂಪಿ 0.6 ಗ್ರಾಪಂ ಅಥವಾ ಕಿಟಾಜಿನ್‌ 48 ಇಸಿ 1 ಮಿ.ಲೀ ಔಷಧಿಯನ್ನು ಒಂದು ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.

Bengaluru: ಸಿಲಿಕಾನ್ ಸಿಟಿಯಲ್ಲಿ 18 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು

ಟೊಮ್ಯಾಟೊ, ಮಣಸಿನಕಾಯಿ, ಬದನೆಗೆ ಸಸಿಗಳ ಉಪಚಾರ ಅಗತ್ಯವಿದೆ. ತರಕಾರಿ ಬೆಳೆಗಳ ಸಸಿಗಳನ್ನು ಟ್ರೈಕೋಡಮ್‌ರ್‍ ಜೀವಾಣುಗಳಿಂದ ಉಪಚಾರ ಮಾಡುವುದರಿಂದ ಸೊರಗು ರೋಗ ತಡೆಯಬಹುದು. ಜಾನುವಾರಿಗೆ ಚರ್ಮಗಂಡು ರೋಗ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವೈದ್ಯರಿಂದ ಸೂಕ್ತ ವೈದ್ಯೋಪಚಾರ ಪಡೆಯಬೇಕು, ರೋಗ ನಿರೋಧಕ ಶಕ್ತಿ ಕಾಪಾಡಬೇಕು, ಸೊಳ್ಳೆ ನಿಯಂತ್ರಣಕ್ಕೆ ಪರದೆ ಬಳಸಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌ ಅವರ ಮೊ. 94498 69914, 0821- 2591267 ಸಂಪರ್ಕಿಸಬಹುದು.

click me!