Published : Apr 11, 2026, 07:23 AM ISTUpdated : Apr 11, 2026, 07:46 PM IST

State News Live: ಭದ್ರಾ ಹಿನ್ನೀರಿಂದ ದೂರವಾಗಿದ್ದವರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ, NR ಪುರದ 65 ವರ್ಷಗಳ ಕನಸು ನನಸು!

ಸಾರಾಂಶ

ಬೆಂಗಳೂರು (ಏ.11): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಬಳಿಕ ಎಲ್ಲರ ಗಮನವೀಗ ಲೋಕಲ್‌ ಸಮರದತ್ತ ನೆಟ್ಟಿದೆ. ಪಂಚಾಯತಿ ಹಾಗೂ ನಗರ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್‌ ಪತ್ರ ಬಳಕೆ ಮಾಡುವ ಬಿಲ್‌ ಮಾತ್ರ ಇನ್ನೂ ಪರಿಶೀಲನೆಯಲ್ಲಿದೆ. ಇವಿಎಂ ಬದಲು ಮತಪತ್ರ ಬಳಸಲು ಬಿಲ್ ಅನ್ನು ರಾಜ್ಯ ಸರ್ಕಾರ ಅಂಗೀಕರಿಸಿತ್ತು. ಆದರೆ, ಈ ವಿಧೇಯಕ ಇನ್ನೂ ರಾಜ್ಯಪಾಲರ ಬಳಿಯೇ ಬಾಕಿ ಉಳಿದಿದೆ. ಈ ಬಿಲ್‌ ಹೊರತುಪಡಿಸಿ ಉಳಿದ 10 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

07:46 PM (IST) Apr 11

ಭದ್ರಾ ಹಿನ್ನೀರಿಂದ ದೂರವಾಗಿದ್ದವರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ, NR ಪುರದ 65 ವರ್ಷಗಳ ಕನಸು ನನಸು!

ವರದಿ: ಯಡಗೆರೆ ಮಂಜುನಾಥ್

1957ರಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟಿನಿಂದಾಗಿ ನರಸಿಂಹರಾಜಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಇದೀಗ, ₹38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯು 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಿದೆ.

Read Full Story

07:35 PM (IST) Apr 11

ಟೀಂ ಇಂಡಿಯಾ ಸೇರ್ತಾರಾ ವೈಭವ್‌ ಸೂರ್ಯವಂಶಿ? BCCIಗೆ ಹೋಯ್ತು ಹೈ ಇನ್‌ಫ್ಲುಯೆನ್ಸ್ ಮೆಸೇಜ್!

Vaibhav Sooryavanshi: 15ನೇ ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಎಂಟ್ರಿ ಕೊಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಐಪಿಎಲ್ 2026ರಲ್ಲಿ ಸಂಚಲನ ಮೂಡಿಸಿದ ಬಿಹಾರದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಸತ್ಯ ಏನು?

Read Full Story

07:33 PM (IST) Apr 11

ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ಧುರಂಧರ್ ನಟಿ ಸಾರಾ ಅರ್ಜುನ್ - ಭಸ್ಮಾರತಿಯಲ್ಲಿ ಭಾಗಿ

ನಟಿ ಸಾರಾ ಅರ್ಜುನ್ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪವಿತ್ರ ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ. ಈ ಆಧ್ಯಾತ್ಮಿಕ ಅನುಭವದಿಂದ ತಮಗೆ 'ತುಂಬಾ ಸಂತೋಷವಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ. ಈ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

Read Full Story

06:55 PM (IST) Apr 11

ಬ್ಯಾಟ್ ಬೀಸಿದರೆ ಸಿಕ್ಸರ್ ಪಕ್ಕಾ! ವೈಭವ್‌ ಸೂರ್ಯವಂಶಿ ಯಶಸ್ಸಿಗೆ ಜ್ಯೋತಿಷ್ಯದ ಕೈವಾಡವಿದೆಯೇ?‌ ಸಾಕ್ಷಿ ಸಿಕ್ತು!

Vaibhav Suryavanshi: ವೈಭವ್‌ ಸೂರ್ಯವಂಶಿ ಅವರು ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಮೂಲಕ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆ ಬಳಿಕ ಅವರು ಐಪಿಎಲ್‌ನಲ್ಲಿ ಒಂದಿಷ್ಟು ಸಿಕ್ಸರ್‌, ಫೋರ್‌ ಹೊಡೆದು ದಾಖಲೆ ಮಾಡಿದ್ದಾರೆ ಎನ್ನಲಾಗಿದೆ. ಏನದು?

 

Read Full Story

06:50 PM (IST) Apr 11

ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!

ಭಾರತದಲ್ಲಿ ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಹೊಸ ರೈಲುಗಳು ಸಂಚಾರ ಆರಂಭಿಸಿದರೆ, ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು. ವಂದೇ ಭಾರತ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

06:50 PM (IST) Apr 11

ಆರ್‌ಡಿ ಪಾಟೀಲ್ ಜೈಲು ವರ್ಗಾವಣೆ ರದ್ದು, ಹೈಕೋರ್ಟ್ ಮಹತ್ವದ ತೀರ್ಪು ಮತ್ತೆ ಕಲಬುರಗಿಗೆ ಶಿಫ್ಟ್

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪಾಟೀಲ್ ಅವರನ್ನು ತಕ್ಷಣವೇ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳಿ ಸ್ಥಳಾಂತರಿಸಲು ಆದೇಶಿಸಿದೆ.
Read Full Story

06:35 PM (IST) Apr 11

ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral

ಬಿಗ್‌ ಬಾಸ್‌ ಹಾಗೂ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಖ್ಯಾತಿಯ ನಟಿ ಹಂಸಾ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಿಗರೇಟ್ ಮಾದರಿಯಲ್ಲಿ ಕೇಕ್ ಹಚ್ಚುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಈ ವಿಡಿಯೋ ಗಮನ ಸೆಳೆದಿದೆ.
Read Full Story

06:22 PM (IST) Apr 11

ದೆಹಲಿ ಕರ್ನಾಟಕ ಸಂಘ - ಜೂಮ್‌ ಮೀಟಿಂಗ್‌ಗಾಗಿಸದಸ್ಯರು-ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ

ದೆಹಲಿ ಕರ್ನಾಟಕ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಜೂಮ್ ಮೀಟಿಂಗ್‌ಗೆ ಅವಕಾಶ ನೀಡುವ ವಿಚಾರವಾಗಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ವಿರೋಧದಿಂದಾಗಿ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಿಂದ ಹೊರನಡೆದರು.

Read Full Story

06:09 PM (IST) Apr 11

Numerology - ಮೊದಲ ಪ್ರೇಮವೇ ಕೊನೆಯ ಪ್ರೀತಿ - ಈ ದಿನಾಂಕದಂದು ಜನಸಿದವರಿಗೆ ಗಂಡನೇ ಸರ್ವಸ್ವ!

ಮಹಿಳೆಯರು ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಇವರು ಗಂಡನಿಗೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ವ್ಯವಹಾರದಲ್ಲಿಯೂ ಜಾಣತನ ಪ್ರದರ್ಶಿಸುತ್ತಾರೆ. ತಮ್ಮ ಭಾವನೆಗಳನ್ನು ಸುಲಭವಾಗಿ ಬಹಿರಂಗಪಡಿಸದ ಇವರು ಆಳವಾದ ಚಿಂತನಾಶಕ್ತಿಯನ್ನು ಹೊಂದಿರುತ್ತಾರೆ.

Read Full Story

06:07 PM (IST) Apr 11

ಬೆಂಗಳೂರು - ಅಜ್ಜಿ ಮನೆಯಲ್ಲೇ 5 ಲಕ್ಷದ ಚಿನ್ನ ಕದ್ದ ಮೊಮ್ಮಗ! ಪೊಲೀಸರು ಬಂಧನಕ್ಕೆ ಬಂದಾಗ ಅದಾಗಲೇ ಅಪ್ರಾಪ್ತ ಜೈಲಲಿದ್ದ!

ಬೆಂಗಳೂರಿನಲ್ಲಿ ತನ್ನ ಅಜ್ಜಿಯ ಮನೆಯಲ್ಲೇ ₹5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಅಪ್ರಾಪ್ತ ಬಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಅಜ್ಜ-ಅಜ್ಜಿ ಆಸ್ಪತ್ರೆಗೆ ಹೋಗಿದ್ದಾಗ ಕೃತ್ಯ ಎಸಗಿದ್ದ ಈತ, ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಚಿಕ್ಕಮಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದನು.

Read Full Story

05:32 PM (IST) Apr 11

ಹಾವೇರಿ - ಏಕಾಏಕಿ ಹಸು ದಾಳಿ, ಒಂದೇ ಗುದ್ದಿಗೆ ಟಾಟಾ ಎಸಿ ವಾಹನದ ಮೇಲೆ ಹೋಗಿ ಬಿದ್ದ ಅಜ್ಜಿ! ದೃಶ್ಯ ವೈರಲ್

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ, ಮನೆಯ ಮುಂದೆ ನಿಂತಿದ್ದ ಪಾರ್ವತವ್ವ ಎಂಬ ವೃದ್ಧೆಯ ಮೇಲೆ ಹಸುವೊಂದು ದಾಳಿ ನಡೆಸಿದೆ. ಹಸು ಗುದ್ದಿದ ರಭಸಕ್ಕೆ ಅವರು ವಾಹನದ ಮೇಲೆ ಬಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read Full Story

05:28 PM (IST) Apr 11

Netflix Series - ಅಬ್ಬಬ್ಬಾ..ಒಂದಕ್ಕಿಂತ ಒಂದು ರೋಚಕ ಸಸ್ಪೆನ್ಸ್‌ ಥ್ರಿಲ್ಲರ್‌ 10 ಸಿನಿಮಾ, ಸಿರೀಸ್‌ ರಿಲೀಸ್!

Netflix Series To Watch: ಈ ವಾರ ನೆಟ್‌ಫ್ಲಿಕ್ಸ್ ಇಂಡಿಯಾದ ಟಾಪ್ 10 ಟ್ರೆಂಡಿಂಗ್ ಸೀರೀಸ್‌ಗಳ ಪಟ್ಟಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಸರಣಿಗಳೇ ಇವೆ.4 ಹಿಂದಿ ವೆಬ್ ಸೀರೀಸ್‌ಗಳು ಕೂಡ ಇದರಲ್ಲಿ ಸ್ಥಾನ ಪಡೆದಿವೆ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ವೆಬ್ ಸೀರೀಸ್ ಒಂದು ನಂಬರ್ 1 ಸ್ಥಾನದಲ್ಲಿದೆ.

 

Read Full Story

05:25 PM (IST) Apr 11

ರಾಮಾಯಣ ಸಿನಿಮಾದ ರಾವಣ ಪಾತ್ರವನ್ನು ಯಶ್‌ ಒಪ್ಪಿದ್ದು ಏಕೆ? ನಿತೀಶ್‌ ತಿವಾರಿ ಹೇಳಿದ್ದೇನು?

ಕೆಜಿಎಫ್‌-2 ನಂತರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ರಾಕಿಂಗ್‌ ಸ್ಟಾರ್‌. ರಾವಣ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್‌. ರಾವಣನ ಪಾಸಿಟಿವ್‌, ನೆಗೆಟಿವ್‌ ವ್ಯಕ್ತಿತ್ಳವನ್ನು ಹೇಳಿದ ಬಳಿಕ ಅವರು ಪಾತ್ರ ಮಾಡಲು ಒಪ್ಪಿಗೆ ಕೊಟ್ಟರು ಅಂತಾರೆ ನಿರ್ದೇಶಕ ನಿತೀಶ್‌ ತಿವಾರಿ.

Read Full Story

05:05 PM (IST) Apr 11

ಕ್ಯಾಲೆಂಡರ್ ಸಿನಿಮಾ ವಿಮರ್ಶೆ - ಭಗ್ನಪ್ರೇಮ, ತನಿಖೆ, ಗೊಂದಲ ಮತ್ತು ಕುತೂಹಲದ ನಡುವೆ ಕಥೆ

ಆತ ಪ್ರೇಕ್ಷಕನಿಗೆ ಎದುರಾಗುವುದು ಮೂರು ಹೊತ್ತೂ ಕುಡಿದು ತೂರಾಡುವ ಭಗ್ನಪ್ರೇಮಿಯಾಗಿ. ಇಂಥಾ ಅವಸ್ಥೆಯಲ್ಲಿ ನಾಯಕನ ಗ್ರಹಗತಿಗಳೆಲ್ಲ ಉಲ್ಟಾ ಹೊಡೆದು ಇಡೀ ಪರಿಸ್ಥಿತಿ ಆತನ ವಿರುದ್ಧ ತಿರುಗುತ್ತ ಹೋಗುತ್ತದೆ.

Read Full Story

04:54 PM (IST) Apr 11

ಒಂದೇ ಒಂದು ಬೆಳ್ಳುಳ್ಳಿ ಸಾಕು; ನಾಲಿಗೆ ಚುರುಕು ಮುಟ್ಟಿಸೋ 'ಮರಿಗೆ ಗೊಜ್ಜು' ಮಾಡಬಹುದು!

Garlic Gojju Recipe In Kannada:  ಮನೆಯಲ್ಲಿ ತರಕಾರಿ ಇಲ್ಲ, ಊಟಕ್ಕೆ ಏನು ಮಾಡೋದು ಎಂದು ಕೆಲವರು ಅಂದುಕೊಂಡಿರಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ತಂಪು ಆಹಾರವೇ ಇಷ್ಟ ಆಗುತ್ತದೆ. ಬೇಸಿಗೆಯಲ್ಲಿ ಅನ್ನ ಸಾಂಬಾರ್‌ ಊಟ ಮಾಡೋದು ಕೂಡ ಕಷ್ಟ. ಈಗ ಒಂದೇ ಬೆಳ್ಳುಳ್ಳಿಯಿಂದ ಮರಿಗೆ ಗೊಜ್ಜು ಮಾಡೋದು ಹೇಗೆ?

Read Full Story

04:53 PM (IST) Apr 11

ಪೀಟರ್ ಸಿನಿಮಾ ವಿಮರ್ಶೆ - ಪ್ರೀತಿಯ ಬಿರುಕು, ಚಂಡೆ ನಾದದೊಳಗಿನ ವಿಷಾದದ ಕಥೆ

ಪೀಟರ್‌ ಎಂಬ ತರುಣ ನಮಗೆ ಎದುರಾಗುವುದೂ ಇಂಥಾದ್ದೊಂದು ವಿಷಾದದಲ್ಲಿ ಅದ್ದಿ ತೆಗೆದಂಥಾ ಮುಖದಲ್ಲಿ. ಆತನ ವೇದನೆಗೆ ಕಾರಣವಾದ ಸಂಗತಿಗಳು ಅಸ್ಪಷ್ಟವಾಗಿ ತೆರೆದುಕೊಳ್ಳುತ್ತಾ, ಭೂತ ವರ್ತಮಾನಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತದೆ.

Read Full Story

04:42 PM (IST) Apr 11

ಬೆಳಗಾವಿ - ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಯ ₹14 ಕೋಟಿ ಅಕ್ರಮ ಆಸ್ತಿ ಪತ್ತೆ! ಕೆಜಿ ಗಟ್ಟಲೆ ಚಿನ್ನ!

ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯಸಿಂಗ್ ರಜಪೂತ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ₹14 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 18 ನಿವೇಶನಗಳು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಸೇರಿದೆ.  

Read Full Story

04:35 PM (IST) Apr 11

ಗ್ಯಾಂಗ್ಸ್ ಆಫ್‌ ಯುಕೆ ಸಿನಿಮಾ ವಿಮರ್ಶೆ - ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ

ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ.

Read Full Story

04:33 PM (IST) Apr 11

ನಂಗೂ ಫ್ರೀ, ನಿಂಗೂ ಫ್ರೀ ಎಂದ ರಾಮೇಶ್ವರಂ ಕೆಫೆ - ಸುಡು ಬಿಸಿಲನ್ನೂ ಲೆಕ್ಕಿಸದೆ ಪಾಪ ಹೇಗೆ ನಿಂತಿದ್ದಾರೆ ನೋಡಿ ಜನ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಹೊಸದಾಗಿ ಆರಂಭವಾದ ರಾಮೇಶ್ವರಂ ಕೆಫೆ, ಉದ್ಘಾಟನೆಯ ಅಂಗವಾಗಿ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಈ ಉಚಿತ ಊಟಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.
Read Full Story

04:22 PM (IST) Apr 11

ಟೆರರ್ ಸಿನಿಮಾ ವಿಮರ್ಶೆ - ಟ್ರಸ್ಟ್ ಮಾಫಿಯಾ, ಅಧಿಕಾರದ ಆಟ, ಗುದ್ದಾಟದ ಮಧ್ಯೆ ಕಥೆಯ ಹರಿವು

ಯಾರು ಯಾರಿಗೆ ಯಾಕೆ ಹೊಡೆಯುತ್ತಿದ್ದಾರೆ ಅಂತ ಯೋಚಿಸಲೂ ಪುರುಸೊತ್ತಿಲ್ಲದಂತೆ ಹೊಡೆತ ಬೀಳುತ್ತಿರುತ್ತದೆ, ಗನ್ ಘರ್ಜಿಸುತ್ತಿರುತ್ತದೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಇದು ಶ್ರೀಮಂತನಾಗಿ ಬೆಳೆದ ರಾಯ್‌ ಸಾಹಸಯಾತ್ರೆ.

Read Full Story

04:12 PM (IST) Apr 11

ಕೇವಲ 12 ರೂಪಾಯಿಯಿಂದ 15,000 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಡೈಮಂಡ್ ಕಿಂಗ್

Diamond King of India; ಕೆಲವು ಕನಸುಗಳು ಶುರುವಾಗುವುದೇ ಹಾಗೆ, ಶೂನ್ಯದಿಂದ. ಏನು ಇಲ್ಲದೆಯೇ ಶುರುವಾಗುವ ಕನಸೊಂದು ನಂತರ ಬೃಹದಾಕಾರವಾಗಿ ಬೆಳೆಯುತ್ತದೆ. ತಾನು ಬೆಳೆಯುವ ಜೊತೆಗೆ ಹಲವರಿಗೆ ಬದುಕು ನೀಡುತ್ತದೆ. ಹಾಗೆಯೇ ಶೂನ್ಯದಿಂದ ತಮ್ಮ ಉದ್ಯಮವನ್ನು ಆರಂಭಿಸಿದ ಸವ್ಜಿ ಧೋಲಕಿಯ ಅವರ ಕತೆ ಇಲ್ಲಿದೆ.

Read Full Story

03:25 PM (IST) Apr 11

ಧಾರವಾಡ ಯುವ ಕಾಂಗ್ರೆಸ್‌ ನಾಯಕನ ಬರ್ಬರ ಹ*ತ್ಯೆ, ತನ್ನ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾತ ರಾಜಕೀಯ ದ್ವೇಷಕ್ಕೆ ಬಲಿ?

ಧಾರವಾಡದಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹ*ತ್ಯೆ ಮಾಡಿದ್ದಾರೆ. ಮದುವೆ ಸಿದ್ಧತೆಯಲ್ಲಿದ್ದ ಫೈರೋಜ್ ಅವರ ಹ*ತ್ಯೆಗೆ ವೈಯಕ್ತಿಕ ದ್ವೇಷ ಹಾಗೂ ರಾಜಕೀಯ ಸಂಚಿನ ಆರೋಪಗಳು ಕೇಳಿಬಂದಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:20 PM (IST) Apr 11

'ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಕೇಸ್‌ನಿಂದ ಕೈಬಿಡಿ..' ಹೈಕೋರ್ಟ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನವಿ

ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು, ತಮ್ಮ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್‌ಪೋರ್ಟ್ ಸಮಸ್ಯೆ ಎದುರಿಸುತ್ತಿರುವ ಕಾರಣ, ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Read Full Story

03:02 PM (IST) Apr 11

Washing Machine ಆನ್‌ ಇದ್ದಾಗ, ಬೇರೆ ಬೇರೆ ಕೆಲಸ ಮಾಡ್ತಿರ್ತೀರಾ? ಸ್ನಾನಕ್ಕೆ ಹೋದ್ರೆ ಮಾತ್ರ ಅಷ್ಟೇ ಕಥೆ!

Washing Machine: ವಾಶಿಂಗ್ ಮಶಿನ್ ಬಳಸುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮುಂದೆ ದೊಡ್ಡ ಅನಾಹುತವೇ ಸಂಭವಿಸಬಹುದು. ಅನೇಕ ಮಹಿಳೆಯರು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಅವರು ಒಂದೇ ಬಾರಿಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಇದು ತಪ್ಪು.

 

Read Full Story

02:35 PM (IST) Apr 11

ವಿಜಯಪುರ ಪೊಲೀಸರಿಂದ ಸೂಪರ್ ಮೆಗಾ ಆಪರೇಷನ್ - ಮೂರೂವರೆ ಕೋಟಿ ಮೌಲ್ಯದ ಮೊಬೈಲ್ ಪತ್ತೆ

ವಿಜಯಪುರ ಜಿಲ್ಲಾ ಪೊಲೀಸರು ಸಿಇಐಆರ್‌ ಪೋರ್ಟಲ್‌ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ₹3.5 ಕೋಟಿ ಮೌಲ್ಯದ 340 ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಈ ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದ್ದು, ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಆರೋಪಿಯನ್ನೂ ಬಂಧಿಸಲಾಗಿದೆ.
Read Full Story

02:24 PM (IST) Apr 11

Expired Lotion Re Uses - ಎಕ್ಸ್‌ಪೈರ್‌ ಆದ ಲೋಶನ್‌ ಬಿಸಾಕಬೇಡಿ; ಎಂಥೆಂಥ ಪ್ರಯೋಜನ ಇದೆ ಅನ್ನೋದೇ ಗೊತ್ತಿಲ್ಲ

Body Lotion: ಎಕ್ಸ್‌ಪೈರ್ ಆದ ಲೋಷನ್ ಅನ್ನು ಕಸಕ್ಕೆ ಹಾಕುವ ಬದಲು, ಅದರಿಂದ ಹಲವು ಸ್ಮಾರ್ಟ್ ಕೆಲಸಗಳನ್ನು ಮಾಡಬಹುದು. ಫರ್ನಿಚರ್ ಪಾಲಿಶ್, ಲೆದರ್ ವಸ್ತುಗಳ ಕ್ಲೀನಿಂಗ್, ಜಿಪ್ ಸರಿಪಡಿಸುವುದು ಮತ್ತು ಬಾಗಿಲಿನ ಸದ್ದು ನಿಲ್ಲಿಸಲು ಇದು ಸೂಪರ್ ಐಡಿಯಾ. ಇದರಿಂದ ವಸ್ತುಗಳು ವೇಸ್ಟ್ ಆಗುವುದೂ ತಪ್ಪುತ್ತದೆ.

 

Read Full Story

02:23 PM (IST) Apr 11

ಮಾಣಿಕ್ಯಧಾರಾದಲ್ಲಿ ಕೇರಳ ಬಾಲಕಿ ಸಾವು - ನಾಪತ್ತೆಯಾಗುವುದಕ್ಕೂ ಮುನ್ನ15 ನಿಮಿಷ ಫೋನ್‌ ನಲ್ಲಿ ಮಾತಾಡಿದ್ದ ಶ್ರೀನಂದಾ!

ಚಿಕ್ಕಮಗಳೂರಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಶವವಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗುವ ಮುನ್ನ ಆಕೆ ದೀರ್ಘಕಾಲ ಮೊಬೈಲ್‌ನಲ್ಲಿ ಮಾತನಾಡಿದ್ದು, ತಂದೆಯ ಗದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಕುಟುಂಬಸ್ಥರು ದೂರು ನೀಡಿರುವುದರಿಂದ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.
Read Full Story

01:11 PM (IST) Apr 11

ಪ್ರೀತಿಸಿ ಮದುವೆಯಾದ ಅಂತರ್‌ಧರ್ಮೀಯ ಕೊಪ್ಪಳ ಜೋಡಿ, ತಸ್ಲೀಮಾ ಹಣೆಗೆ ಸಿಂಧೂರವಿಟ್ಟ ಕೇಶವ, ಠಾಣೆ ಮೆಟ್ಟಿಲೇರಿದ್ದೇಕೆ?

ಕೊಪ್ಪಳ ಜಿಲ್ಲೆಯಲ್ಲಿ, ಕನಕಗಿರಿಯ ಹಿಂದೂ ಯುವಕ ಕೇಶವ್ ಮತ್ತು ಗಂಗಾವತಿಯ ಮುಸ್ಲಿಂ ಯುವತಿ ತಸ್ಲೀಮಾ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಕುಟುಂಬದಿಂದ ಜೀವಭಯ ಎದುರಿಸುತ್ತಿರುವ ಈ ಅಂತರ್‌ಧರ್ಮೀಯ ಜೋಡಿ, ತಮ್ಮ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ರಕ್ಷಣೆ ಕೋರಿದೆ.
Read Full Story

01:03 PM (IST) Apr 11

Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾಡಿದ ನಟಿ

'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ (ರಿಯಾ) ಅವರು ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆಯೂ ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಪೋಷಕರ ಒತ್ತಡವಿಲ್ಲದ ಬೆಂಬಲ, ಮೊದಲ ದಿನದಿಂದಲೇ  ತಯಾರಿ, ಸಮಯ ನಿರ್ವಹಣೆಯೇ  ಯಶಸ್ಸಿಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

Read Full Story

12:05 PM (IST) Apr 11

ಸಿಎಂ ಸಿದ್ದರಾಮಯ್ಯಗೆ ಅವಾಚ್ಯ ಪದಗಳ ನಿಂದನೆ, ಯುವಕನ ರೀಲ್ಸ್ ಹುಟ್ಟಿಸಿತು ವಿವಾದ, ವೈರಲ್ ಆದ ರೀಲ್ಸ್

ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಅವಾಚ್ಯ ಪದಗಳಿಂದ ನಿಂದಿಸಿ ರೀಲ್ಸ್ ಮಾಡಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಟೀಕೆ ಮತ್ತು ನಿಂದನೆಯ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

11:46 AM (IST) Apr 11

ಡಿಜೆ ಹಳ್ಳಿ ಬೆಂಕಿ ಅವಘಡ - ನಿಂತಲ್ಲೇ 6 ಹಸುಗಳ ಸಜೀವ ದಹನಕ್ಕೆ ಕಾರಣವಾದ ಆರೋಪಿ ಇರ್ಫಾನ್ ಪಾಷ ಸೆರೆ

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದಾಗಿ 6 ಅಮಾಯಕ ಹಸುಗಳು ಸಜೀವ ದಹನವಾಗಿವೆ. ನಾಯಿಗಳನ್ನು ಹೆದರಿಸಲು ಕಸಕ್ಕೆ ಬೆಂಕಿ ಹಚ್ಚಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಈ ಕೃತ್ಯದ ಹಿಂದಿನ ನಿಜವಾದ ಉದ್ದೇಶವನ್ನು ತನಿಖೆ ಮಾಡುತ್ತಿದ್ದಾರೆ.

Read Full Story

11:28 AM (IST) Apr 11

US-Iran peace talks in Pakistan - ಕದನ ನಿಲ್ಲಿಸುವ ದಲ್ಲಾಳಿತನಕ್ಕೆ ಪಾಕ್‌ ಇಳಿದಿದ್ದೇಕೆ!?

ಇರಾನ್-ಅಮೆರಿಕ ಸಂಘರ್ಷವು ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಭಾರತದ 'ಆಪರೇಷನ್ ಸಿಂಧೂರ್' ನಂತರ ಅಮೆರಿಕದತ್ತ ವಾಲಿದ ಪಾಕಿಸ್ತಾನ, ಈಗ ಸೌದಿ ಮತ್ತು ಯುಎಇ ಜೊತೆಗಿನ ರಕ್ಷಣಾ ಒಪ್ಪಂದಗಳಿಂದಾಗಿ ಇರಾನ್ ವಿರುದ್ಧ ಯುದ್ಧ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ. ಪಾಕಿಸ್ತಾನದ ಮುಂದಿನ ನಡೆ ಏನು? ಓದಿ.

Read Full Story

11:05 AM (IST) Apr 11

ಪಿಯು ಬೋರ್ಡ್ ಮತ್ತೊಂದು ಎಡವಟ್ಟು - ಹಿಂದಿ ಆಯ್ತು ಈಗ ಗಣಿತ ವಿಷಯಕ್ಕೆ, 80ಕ್ಕೆ 42 ಇದ್ದಿದ್ದು 33ಕ್ಕೆ ಇಳಿದಿದೆ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಂಭೀರ ಎಡವಟ್ಟು ಮಾಡಿದೆ. ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ನೀಡಿ, ನಂತರ ತಾಂತ್ರಿಕ ದೋಷದ ಕಾರಣ ನೀಡಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದೆ.

Read Full Story

10:45 AM (IST) Apr 11

Dance Karnataka Dance Finale 2026 - ಸೆಲೆಬ್ರಿಟಿಗಳ ಡ್ಯಾನ್ಸ್‌ ಯುದ್ಧದಲ್ಲಿ ಗೆಲ್ಲೋರು ಯಾರು?

DKD Show Contestants: ಡಾನ್ಸ್ ಕರ್ನಾಟಕ ಡಾನ್ಸ್ ಶೋ ಈಗ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ.

 

Read Full Story

10:34 AM (IST) Apr 11

ಮತದಾನ ಮುಗಿದಿದೆ, ರಿಲ್ಯಾಕ್ಸ್ ಮೂಡ್‌ನಲ್ಲಿ ಕದನ ಕಲಿಗಳು, ಏನು ಮಾಡುತ್ತಿದ್ದಾರೀಗ?

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮತದಾನದ ನಂತರ ಅವರು ಕುಟುಂಬ, ದೇವಸ್ಥಾನ ಮತ್ತು ಕಾರ್ಯಕರ್ತರೊಂದಿಗೆ ಸಮಯ ಕಳೆಯುತ್ತಿದ್ದು, ಮೇ 4ರ ಫಲಿತಾಂಶಕ್ಕೂ ಮುನ್ನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

Read Full Story

10:11 AM (IST) Apr 11

ಪ್ರೀತಿ ಹೆಚ್ಚಾಗಿತ್ತು, ಬ್ಯಾಲೆನ್ಸ್ ಕಡಿಮೆ ಇತ್ತು - ನಟ ಸುದರ್ಶನ್‌ ಮನೆಗೆ Bhagyalakshmi ಬಂದು 10 ವರ್ಷ!

Actor Sudarshan Rangaprasad: ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್‌ ರಂಗಪ್ರಸಾದ್‌ ಹಾಗೂ ನಟಿ ಸಂಗೀತಾ ಭಟ್‌ ಜೋಡಿಗೆ ಇಂದು ಖುಷಿಯ ವಿಷಯ. ಇವರಿಬ್ಬರೂ 10 ವರ್ಷ ಪೂರೈಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷ ಫೋಟೋಶೂಟ್‌ ಹಂಚಿಕೊಂಡಿದ್ದಾರೆ.

 

Read Full Story

10:06 AM (IST) Apr 11

ಸಿಎಂ ದೆಹಲಿ ಪ್ರವಾಸದ ಹಿಂದಿನ ಕಾರಣ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ, ಕುರುಬ ಎಸ್‌ಟಿ ಮೀಸಲಾತಿ ಬಗ್ಗೆ ಹೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಚರ್ಚೆಗಾಗಿಯೇ ಹೊರತು ಬೇರೆ ಕಾರಣಕ್ಕಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ. ಕುರುಬ ಸಮುದಾಯದ ಎಸ್‌ಟಿ ಮೀಸಲಾತಿ ಹೇಳಿದ್ದೇನು?

Read Full Story

09:38 AM (IST) Apr 11

ರಾಯಚೂರು - ಇ-ಖಾತಾ ನೀಡಲು ಒಂದು ಲಕ್ಷಕ್ಕೆ ಬೇಡಿಕೆ, ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

ರಾಯಚೂರಿನ ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಇ-ಖಾತಾ ನೀಡಲು ₹1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
Read Full Story

09:20 AM (IST) Apr 11

SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ! ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಬದಲು ಗ್ರೇಡ್ ಪದ್ಧತಿ ಜಾರಿ

ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವ ಕರಡು ಅಧಿಸೂಚನೆ ಹೊರಡಿಸಿದೆ. 2025-26ನೇ ಸಾಲಿನಿಂದ ಜಾರಿಗೆ ಬರಲಿರುವ ಈ ನಿಯಮದಂತೆ, ಒಟ್ಟು ಫಲಿತಾಂಶ 525 ಅಂಕಗಳಿಗೆ ಸೀಮಿತಗೊಳಿಸಲಾಗುವುದು 

Read Full Story

09:03 AM (IST) Apr 11

ದಾವಣಗೆರೇಲಿ ನಮ್ಮವರಿಂದಲೇ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ - ಸಲೀಂ ಅಹ್ಮದ್ ಸ್ಫೋಟಕ ಹೇಳಿಕೆ

ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದ ಕೆಲವು ಮುಖಂಡರೇ ಷಡ್ಯಂತ್ರ ನಡೆಸಿದ್ದಾರೆ ಎಂದು ಸಲೀಂ ಅಹಮದ್ ಗಂಭೀರ ಆರೋಪ ಮಾಡಿದ್ದಾರೆ. ಈ ಪಿತೂರಿಯ ನಡುವೆಯೂ, ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್ ಭಾರಿ ಬಹುಮತದಿಂದ ಗೆಲ್ಲಲಿದೆ ಎಂಬ ವಿಶ್ವಾಸವನ್ನು  ವ್ಯಕ್ತಪಡಿಸಿದ್ದಾರೆ.

Read Full Story

More Trending News