LIVE NOW
Published : Oct 30, 2026, 07:36 AM ISTUpdated : Oct 30, 2026, 11:17 PM IST

Karnataka News Live: ಹಾಲಿನ ಕಥೆ ಒಂದೆಡೆಯಾದರೆ, ಒಂದು ನಂದಿನಿ ಮೊಸರಿನಲ್ಲೂ ಗ್ರಾಹಕನಿಗೆ ಗುನ್ನಾ, ಲೀಟರ್‌ಗೆ 14 ರೂಪಾಯಿ ಬರೆ!

ಸಾರಾಂಶ

ಸರ್ಕಾರದ ಬೊಕ್ಕಸದಿಂದ ವಾರ್ಷಿಕ 1 ಲಕ್ಷ ಕೋಟಿ ರು. ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಗ್ಯಾರಂಟಿ ಸೇರಿದಂತೆ ಎಲ್ಲಾ ಯೋಜನೆ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮೌಲ್ಯಮಾಪನ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬರೋಬ್ಬರಿ 14 ಕೋಟಿ ರು. ವೆಚ್ಚದಲ್ಲಿ ‘ಕೆ-ಮಾನಿಟರ್‌’ ಯೋಜನೆಯಡಿ ಎಲ್ಲಾ ಯೋಜನೆಗಳ ಮೌಲ್ಯಮಾಪನ ನಡೆಸಲಿದ್ದು, ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆಯೇ? ತಲುಪುತ್ತಿದ್ದರೆ ಫಲಾನುಭವಿಗೆ ಅನುಕೂಲ ಆಗುತ್ತಿದೆಯೇ? ಎಂಬ ಬಗ್ಗೆ ಅಧ್ಯಯನ ನಡೆಯಲಿದೆ.

ಬಳಿಕ ಅಧ್ಯಯನ ವರದಿ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮ ಹಾಗೂ ಯೋಜನೆಗಳಲ್ಲಿ ಪರಿಷ್ಕರಣೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

11:17 PM (IST) Oct 30

ಹಾಲಿನ ಕಥೆ ಒಂದೆಡೆಯಾದರೆ, ಒಂದು ನಂದಿನಿ ಮೊಸರಿನಲ್ಲೂ ಗ್ರಾಹಕನಿಗೆ ಗುನ್ನಾ, ಲೀಟರ್‌ಗೆ 14 ರೂಪಾಯಿ ಬರೆ!

ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಕೆಎಂಎಫ್ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ನವೆಂಬರ್ 1, 2026 ರಿಂದ ನೂತನ ದರಗಳು ಜಾರಿಗೆ ಬರಲಿದ್ದು, ಹಾಲಿನ ದರ ಲೀಟರ್‌ಗೆ ₹8 ಹಾಗೂ ಮೊಸರಿನ ದರ ₹14 ಏರಿಕೆಯಾಗಿದೆ.

Read Full Story

10:17 PM (IST) Oct 30

ಮೆಟ್ರೋದಿಂದ ಕರೆಂಟ್‌ವರೆಗೆ, ಹಾಲಿನಿಂದ ನೀರಿನವರೆಗೆ - ಇದು ರಾಜ್ಯ ಸರ್ಕಾರದ ಬೆಲೆ ಏರಿಕೆ ABCD

ಕರ್ನಾಟಕದಲ್ಲಿ ನಿತ್ಯೋಪಯೋಗಿ ವಸ್ತುಗಳು, ಸಾರಿಗೆ, ಇಂಧನ, ವಿದ್ಯುತ್, ನೀರು ಹಾಗೂ ಆಸ್ತಿ ತೆರಿಗೆ ಸೇರಿದಂತೆ A to Z ಸೇವೆಗಳ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಸರ್ಕಾರ ಜಾರಿಗೆ ತಂದಿರುವ ಸರಣಿ ಬೆಲೆ ಏರಿಕೆಗಳು ಸಾರ್ವಜನಿಕರ ಮಾಸಿಕ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರಿವೆ.

Read Full Story

09:54 PM (IST) Oct 30

160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ - ಸಾವಿತ್ರಿ, ಜಮುನಾಗೂ ಪೈಪೋಟಿ ನೀಡಿದ್ದ ಕನ್ನಡದ ಈ ನಟಿ ಯಾರು?

ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಎನ್‌ಟಿಆರ್, ಎಂಜಿಆರ್ ಜೊತೆಗಿನ ಸಿನಿಮಾಗಳು, ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಗಳ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

Read Full Story

09:47 PM (IST) Oct 30

Breaking - ಮಾಜಿ ಸಿಎಂ ಸಿದ್ದರಾಮಯ್ಯಗೆ ಖೆಡ್ಡಾ ತೋಡಿದ್ದ ಸ್ಟಿಂಗ್ ಲೇಡಿ ಕೃಪಾ ಆಳ್ವಾ ಕಾಂಗ್ರೆಸ್‌ನಿಂದ ಉಚ್ಛಾಟನೆ!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಆರೋಪ ಎದುರಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

Read Full Story

08:17 PM (IST) Oct 30

ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?

ಈ ಇಬ್ಬರು ಕಲಾವಿದರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮವು ಕೇವಲ ಪ್ರಶಸ್ತಿ ಸಮಾರಂಭವಾಗಿರದೆ, ಕನ್ನಡ ಚಿತ್ರರಂಗದ ಸುವರ್ಣಯುಗವನ್ನು ನೆನಪಿಸುವ ವಿಶೇಷ ಸಂದರ್ಭವಾಗಲಿದೆ. ಅದರಲ್ಲೂ ರಜನಿಕಾಂತ್ ಅವರೇ ಬರಬಹುದು ಎಂಬ ಸಂಗತಿ ಎಲ್ಲರಿಗೂ ರೋಮಾಂಚನ ಉಂಟುಮಾಡಿದೆ.

Read Full Story

08:07 PM (IST) Oct 30

ಈ ಊರಿನ ಜನ್ರು ಪುಣ್ಯಾ ಮಾಡ್ರಿ; ಪುರಿ,ಇಡ್ಲಿ ಏನೇ ತೊಗೊಂಡ್ರು 12 ರೂ ಅಷ್ಟೇ ನೋಡ್ರಿ

ಶ್ರೀ ರಾಮೇಶ್ವರ ಹೋಟೆಲ್‌ನಲ್ಲಿ ಕೇವಲ 12 ರೂಪಾಯಿಗೆ ಇಡ್ಲಿ, ಪುರಿ, ಉಪ್ಪಿಟ್ಟು ಮತ್ತು ಮಿರ್ಚಿ ಬಜ್ಜಿ ನೀಡಲಾಗುತ್ತಿದೆ. ದುಬಾರಿ ಜಗತ್ತಿನಲ್ಲೂ ಮಾಲೀಕ ಶಿವಬಸಪ್ಪ ತಮ್ಮ ಮಗನೊಂದಿಗೆ ಸೇರಿ ಕೆಲಸಗಾರರಿಲ್ಲದೆ ಹೋಟೆಲ್ ನಡೆಸುತ್ತಾ ಗ್ರಾಹಕರ ತೃಪ್ತಿಯೇ ಮುಖ್ಯ ಎಂದು ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ.

Read Full Story

07:33 PM (IST) Oct 30

ನಕಲಿ ಖಾತೆಗಳ ಕಾಟಕ್ಕೆ ಬೇಸತ್ತು ಹೈರಾಣು - ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಅಭಿಮಾನಿಗಳಿಗೆ ಕೊಟ್ಟ ಖಡಕ್ ಎಚ್ಚರಿಕೆ ಏನು?

ಒಂದೆಡೆ ನಿರ್ದೇಶಕರಾಗಿ ಗೆಲುವು ಕಾಣದೇ, ನಟರಾಗಲು ಹೊರಟಿರುವ ದಳಪತಿ ವಿಜಯ್ ಮಗ ಜೇಸನ್ ಸಂಜಯ್, ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಖಾತೆಗಳ ವಿರುದ್ಧ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಮತ್ತು ಸಾಮಾಜಿಕ ಜಾಲತಾಣದ ವಿಚಾರಗಳೆರಡರಲ್ಲೂ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿದ್ದಾರೆ.

Read Full Story

07:06 PM (IST) Oct 30

ನಾಳೆ ಕೊಪ್ಪಳ ಬಂದ್‌ಗೆ ಕರೆ ಕೊಟ್ಟ ಕ್ರಿಯಾ ಸಮಿತಿ, ಬೆಳಗ್ಗೆ 6 ಗಂಟೆಯಿಂದ ಸ್ತಬ್ಧ

ನಾಳೆ ಕೊಪ್ಪಳ ಬಂದ್‌ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಕೊಪ್ಫಳ ಬಂದ್ ಆಗಲಿದೆ. ಸಂಘಟನೆಗಳು, ಸ್ಥಳೀಯರು, ಮಠಾಧೀಶರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read Full Story

07:05 PM (IST) Oct 30

ರೈತನ ಹೆಗಲ ಮೇಲೆ ಬಂದೂಕಿಟ್ಟು ಗ್ರಾಹಕನ ಎದೆಗೆ ಗುಂಡು ಹೊಡೆದ ಸರ್ಕಾರ - ಹಾಲು, ಬಸ್‌, ವಿದ್ಯುತ್‌ ಎಲ್ಲದರ ಬೆಲೆ ಏರಿಕೆ, ಬಡವ ಬದುಕೋದು ಹೇಗೆ ಸ್ವಾಮಿ?

ಉಚಿತ ಗ್ಯಾರಂಟಿ ಯೋಜನೆಗಳು, ಬರಗಾಲ ಹಾಗೂ ವೆಚ್ಚಗಳ ಏರಿಕೆಯಿಂದಾಗಿ ಕರ್ನಾಟಕ ಸರ್ಕಾರದ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗಿದ್ದು, ಕಂದಾಯ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

Read Full Story

06:46 PM (IST) Oct 30

ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳೋದು ಕಷ್ಟ! ಆದಾಗ್ಯೂ, ನಮ್ಮನ್ನು ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್‌ ಧರಿಸಬೇಕು?

ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸೂಕ್ತ ಮಾಸ್ಕ್ ಬಳಕೆ, ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಮತ್ತು ಮನೆಯ ಒಳಗಿನ ಗಾಳಿಯ ಗುಣಮಟ್ಟದ ಬಗ್ಗೆಯೂ ಗಮನಹರಿಸುವುದು ಮುಖ್ಯ. ಮಾಸ್ಕ್ ಸಂಪೂರ್ಣ ರಕ್ಷಣೆಗೆ ಪರ್ಯಾಯವೇ? ನೋಡಿ..

Read Full Story

06:38 PM (IST) Oct 30

ಕರ್ನಾಟಕದಲ್ಲಿ ದೀಪಾವಳಿ ಪಟಾಕಿ ಸಿಡಿಸಲು ಸರ್ಕಾರದಿಂದ ಎರಡೇ ಗಂಟೆ ಅವಕಾಶ, ಹಸಿರು ಪಟಾಕಿಗೆ ಮಾತ್ರವೇ ಅನುಮತಿ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸಲು ಕರ್ನಾಟಕ ಸರ್ಕಾರವು ಹಸಿರು ಪಟಾಕಿ ಬಳಕೆ ಹಾಗೂ ಪಟಾಕಿ ಸಿಡಿಸಲು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ.

Read Full Story

06:28 PM (IST) Oct 30

ಮೆಟ್ರೋದಲ್ಲಿ ಕಿರುಕುಳವೆಂದ ಯುವತಿ ಇನ್‌ಸ್ಟಾಗ್ರಾಂ ಅಕೌಂಟ್ ಭರ್ಜರಿ ಹಿಟ್; ₹399ಗೆ Subscription ಖಾತೆ ತೆರೆದ ಸೌಪಿಕ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸೌಪಿಕಾ ಎಂಬ ಯುವತಿ ವಿಡಿಯೋ ಹಂಚಿಕೊಂಡಿದ್ದರು. ಈ ಘಟನೆಯ ನಂತರ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

Read Full Story

06:15 PM (IST) Oct 30

ಬೆಂಗಳೂರಿನ ಜಂಜಾಟ ಸಾಕು ಅಂತ ಗೋವಾಗೆ ಶಿಫ್ಟ್‌ ಆದ ಜೋಡಿ - ₹75,500 ವೆಚ್ಚದಲ್ಲಿ ನೆಮ್ಮದಿಯ ಸ್ಲೋ ಲೈಫ್ ಕಂಡುಕೊಂಡ ದಂಪತಿ!

ಬೆಂಗಳೂರಿನ ಇಕ್ಕಟ್ಟಿನ ಬದುಕಿನಿಂದ ಹೊರಬಂದು ಗೋವಾದಲ್ಲಿ ನೆಲೆಸಿರುವ ಐಟಿ ದಂಪತಿ ರಾಧಿಕಾ ಮತ್ತು ಏಕಾಂಶ್, ತಮ್ಮ ಶಿಫ್ಟಿಂಗ್ ಅನುಭವ ಮತ್ತು ತಗುಲಿದ ಖರ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟು ₹75,500 ವೆಚ್ಚವಾಗಿದ್ದು, ಈ ನಿರ್ಧಾರ ಸಂಪೂರ್ಣ ಯೋಗ್ಯ ಎಂದು ತಿಳಿಸಿದ್ದಾರೆ.

Read Full Story

05:59 PM (IST) Oct 30

40 ಕೋಟಿ ರೂ ಸರ್ಕಾರಿ ಆಸ್ತಿ ಕಬಳಿಕೆ; 10 ಲಕ್ಷ ಚಾಲೆಂಜ್ ಡಿಪಾಸಿಟ್ ಮಾಡಿದ ವ್ಯಕ್ತಿ

ನೆಲಮಂಗಲದಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸಿಎ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 10 ಲಕ್ಷ ರೂ. ಚಾಲೆಂಜ್ ಡಿಪಾಸಿಟ್‌ನೊಂದಿಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

Read Full Story

05:31 PM (IST) Oct 30

₹2500 ಕೋಟಿ ವೆಚ್ಚದಲ್ಲಿ ಹೊಸಕೋಟೆಗೆ ಕಾವೇರಿ ನೀರು; ಇತ್ತ ಮೆಟ್ರೋ ಸಂಪರ್ಕಕ್ಕೆ ಡಿಪಿಆರ್

ಹೊಸಕೋಟೆ ನಗರಕ್ಕೆ ಕಾವೇರಿ 6ನೇ ಹಂತದ ಯೋಜನೆಯಡಿ ₹2500 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ. ಜೊತೆಗೆ ಕೆ.ಆರ್. ಪುರಂನಿಂದ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ನಗರದಲ್ಲಿ ₹93 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
Read Full Story

05:13 PM (IST) Oct 30

Belagavi - ರೈತರ ಹೆದ್ದಾರಿ ಬಂದ್‌ಗೆ ಶಾಕ್; 8 ಕಠಿಣ ಷರತ್ತು ವಿಧಿಸಿದ DC ರೋಷನ್

ಕಬ್ಬು ಬೆಳೆಗಾರರ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆಗೆ ಬೆಳಗಾವಿ ಜಿಲ್ಲಾಡಳಿತವು ಬಿಎನ್ಎಸ್ ಕಾಯ್ದೆ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಆಘಾತ ನೀಡಿದೆ. ಹೆದ್ದಾರಿಗಳು, ಟೋಲ್ ಪ್ಲಾಜಾಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಂಟು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ.

Read Full Story

05:04 PM (IST) Oct 30

71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ಕಾಗೋಡು ತಿಮ್ಮಪ್ಪ, ನಟ ಅಶೋಕ್ ಸೇರಿ 71 ಸಾಧಕರಿಗೆ ಒಲಿದ ಗೌರವ!

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 71 ಮಂದಿ ಗಣ್ಯರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಕಾಗೋಡು ತಿಮ್ಮಪ್ಪ, ನಟ ಅಶೋಕ್, ಬಿ.ವಿ. ಆಚಾರ್ಯ ಸೇರಿದಂತೆ ಹಲವು ದಿಗ್ಗಜರು ಈ ಗೌರವಕ್ಕೆ ಭಾಜನರಾಗಿದ್ದಾರೆ.

Read Full Story

04:48 PM (IST) Oct 30

ಅಮೃತಧಾರೆ ಭೂಮಿಕಾಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್ - ಪತಿಯನ್ನು ಕಂಡು ಕಣ್ಣೀರಿಟ್ಟ ನಟಿ

ಅಮೃತಧಾರೆ ಧಾರಾವಾಹಿಯ ಭೂಮಿಕಾ ಖ್ಯಾತಿಯ ಛಾಯಾ ಸಿಂಗ್ ಅವರಿಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್ ಸಿಕ್ಕಿದೆ. ಪತಿ ಕೃಷ್ಣ ಅವರ ವಿಶೇಷ ಎಂಟ್ರಿ ಹಾಗೂ ಜೀ ಕನ್ನಡ ನೀಡಿದ ನಾಯಿ ಮರಿ ಉಡುಗೊರೆ ನಟಿಯನ್ನು ಭಾವುಕರನ್ನಾಗಿಸಿದೆ.

Read Full Story

04:47 PM (IST) Oct 30

ಬೆಂಗಳೂರಿನ ಇರಡು ಪ್ರಮುಖ ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗೆ ಬಿ-ಸ್ಮೈಲ್ ಮರು ಟೆಂಡರ್, ಅಂದಾಜು ವೆಚ್ಚ ಭಾರಿ ಕಡಿತ!

B-SMILE ಸಂಸ್ಥೆಯು ಬೆಂಗಳೂರಿನ ಪ್ರಮುಖ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ನಿರ್ಮಾಣ ವೆಚ್ಚವನ್ನು ಪರಿಷ್ಕರಿಸಿ ಹೊಸ ಟೆಂಡರ್ ಆಹ್ವಾನಿಸಿದೆ. ಮಿನರ್ವ ವೃತ್ತದಿಂದ ಹಡ್ಸನ್ ವೃತ್ತ ಹಾಗೂ ಶೂಲೇ ವೃತ್ತದಿಂದ ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯವರೆಗಿನ ಯೋಜನೆಗಳ ವೆಚ್ಚ ಕಡಿತದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ರದ್ದುಗೊಂಡಿದ್ದ 9 ಯೋಜನೆಗಳ ಪೈಕಿ ಪ್ರಮುಖ ಕಾಮಗಾರಿಗಳಿಗೆ ಮರು ಬಿಡ್ ಕರೆಯಲಾಗಿದೆ.

Read Full Story

04:38 PM (IST) Oct 30

Bengaluru - 50 ಕೋಟಿ ಮೌಲ್ಯದ 2 ನಿವೇಶನ ವಶಕ್ಕೆ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ನಡೆಸಿ ಸುಮಾರು ₹50 ಕೋಟಿ ಮೌಲ್ಯದ ಸಿಎ ನಿವೇಶನಗಳನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ ಗ್ರೇಟರ್‌ ಬೆಂಗಳೂರು ಪ್ರದೇಶಕ್ಕಾಗಿ ₹16.60 ಕೋಟಿ ವೆಚ್ಚದಲ್ಲಿ ಜಿಐಎಸ್‌ ಆಧಾರಿತ ಹೊಸ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

Read Full Story

04:18 PM (IST) Oct 30

ಉತ್ತರಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಅಧಿಕಾರಿ ಅರುಣ್ ಸೋಲಂಕಿ ಸೇರಿ ಕರ್ನಾಟಕದ ಐವರು ಸಾವು

ಉತ್ತರಖಂಡ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ ಸೇರಿ ಐವರು ಮೃತಪಟ್ಟಿದ್ದಾರೆ. ಇನ್ನು ಕ್ಯಾಪ್ಟನ್ ಹಿಮಾಂಶು ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.

Read Full Story

04:14 PM (IST) Oct 30

ಸರ್, ನಮ್ಮೂರಿಗೆ 5 ವರ್ಷ ಹೊಸ ಆಟೋಗೆ ಪರ್ಮಿಟ್‌ ಕೊಡಬೇಡಿ - ಚಾಲಕರ ಸಂಘದ ಪ್ರತಿಭಟನೆ

ಜನಸಂಖ್ಯೆಗಿಂತ ಆಟೋಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಹಾಗೂ ಚಾಲಕರಿಗೆ ದುಡಿಮೆಯಿಲ್ಲದೆ ಸಂಕಷ್ಟ ಎದುರಾಗಿದೆ. 2ಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವವರ ಮೇಲೆ ಕ್ರಮ ಕೈಗೊಂಡು, ಮುಂದಿನ 5 ವರ್ಷ ಹೊಸ ಆಟೋ ಪರ್ಮಿಟ್ ಸ್ಥಗಿತಗೊಳಿಸುವಂತೆ ಆಟೋ ಚಾಲಕರ ಸಂಘ ಪ್ರತಿಭಟನೆ ನಡೆಸಿ ಆಗ್ರಹಿಸಿದೆ.

Read Full Story

04:14 PM (IST) Oct 30

ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಗೆಲುವು, ಭಂಟನಿಗೆ ಬಿಗ್ ಶಾಕ್, ಧನ್ವೀರ್‌ ಗೆ ಪ್ರತಿಬಂಧಕಾಜ್ಞೆ ಹೊರಡಿಸಿದ ಕೋರ್ಟ್

ರೇಣುಕಾಸ್ವಾಮಿ ಪ್ರಕರಣ ಸೇರಿದಂತೆ ತಮ್ಮ ಕುಟುಂಬದ ಖಾಸಗಿ ಮತ್ತು ಕಾನೂನು ವಿಚಾರಗಳ ಕುರಿತು ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ನಟ ಧನ್ವೀರ್ ಗೆ ಪ್ರತಿಬಂಧಕ ಆದೇಶ. ಧನ್ವೀರ್ ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದರ್ಶನ್ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ಧನ್ವೀರ್ ಯಾವುದೇ ಹೇಳಿಕೆ ನೀಡಬಾರದು ಎಂದು ಆದೇಶಿಸಿದೆ.

Read Full Story

03:57 PM (IST) Oct 30

ಕುಸುಮಾವತಿ-ಪದ್ಮಾವತಿ? ಇಬ್ಬರಲ್ಲಿ ಸೌಜನ್ಯಾಳ ಅಸಲಿ ತಾಯಿ ಯಾರು? SIT ಹೇಳಿದ್ದೇನು?

ಧರ್ಮಸ್ಥಳದ ಕುಸುಮಾವತಿ ಅವರು ಇಂದಿರಾವತಿ ಎಂಬ ಹೆಸರಿನಲ್ಲಿ ಸುಳ್ಳು ದಾಖಲೆ ನೀಡಿ ಸರ್ಕಾರಿ ಜಮೀನು ಪಡೆದಿದ್ದಾರೆ ಮತ್ತು ಅವರ ಗುರುತಿನಲ್ಲಿ ವ್ಯತ್ಯಾಸವಿದೆ ಎಂದು ಕಿಶೋರ್ ಎಂಬುವವರು ಎಸ್‌ಐಟಿಗೆ ದೂರು ನೀಡಿದ್ದಾರೆ.

Read Full Story

02:13 PM (IST) Oct 30

ನವೆಂಬರ್ 1 ರಿಂದ ಹೊಸ ನಿಯಮ, CNAP ಅಂದರೆ ಏನು? ಮೊಬೈಲ್ ಬಳಕೆದಾರರಿಗೆ ಗುಡ್‌ನ್ಯೂಸ್

ಮೊಬೈಲ್ ಬಳಕೆದಾರರಿಗೆ ನವೆಂಬರ್ 1 ರಿಂದ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಕಾಲರ್ ನೇಮ್ ಪ್ರೆಸೆಂಟೇಶನ್ (CNAP) ಎಂಬ ಹೊಸ ನಿಯಮ ಜಾರಿಗೆ ತರುತ್ತಿದೆ. ಇದರ ಮೂಲಕ ಅಪರಿಚಿತ ಕರೆಗಳು ಬಂದಾಗ ಸಿಮ್ ಹೊಂದಿರುವವರ ಅಧಿಕೃತ ಹೆಸರು ಮೊಬೈಲ್ ಪರದೆಯ ಮೇಲೆ ಕಾಣಿಸಲಿದೆ. ಸೈಬರ್ ವಂಚನೆ ಮತ್ತು ಅಪರಿಚಿತ ಕರೆಗಳ ಹಾವಳಿ ತಡೆಯುವುದು ಈ ಹೊಸ ಸೇವೆಯ ಮುಖ್ಯ ಉದ್ದೇಶವಾಗಿದೆ.

Read Full Story

12:17 PM (IST) Oct 30

ಹಾಸನಾಂಬೆ ಲಡ್ಡು ಪ್ರಾಸದ ₹100 ಬೆಲೆ - ಅಧಿಕಾರಿಗಳಿಗೆ ಬೈದು ₹60ಕ್ಕೆ ಇಳಿಸಿದ ಸಚಿವ ಶಿವಲಿಂಗೇಗೌಡ!

ಹಾಸನಾಂಬೆ ದೇವಾಲಯದ ಲಾಡು ಪ್ರಸಾದದ ದರವನ್ನು 100 ರೂಪಾಯಿಗೆ ಹೆಚ್ಚಿಸಿದ್ದ ಜಿಲ್ಲಾಡಳಿತದ ನಿರ್ಧಾರಕ್ಕೆ ಸಚಿವ ಕೆ.ಎಮ್. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಡು ಮಾರಾಟ ಮಾಡಿ ದೇವಾಲಯದ ಆದಾಯ ಹೆಚ್ಚಿಸುವ ಅಗತ್ಯವಿಲ್ಲ ಎಂದಿರುವ ಸಚಿವರು, ತಕ್ಷಣವೇ ದರವನ್ನು 60 ರೂಪಾಯಿಗೆ ಇಳಿಸುವಂತೆ ಸೂಚಿಸಿದ್ದಾರೆ.

Read Full Story

12:05 PM (IST) Oct 30

Shivamogga - ಗೌತಮಪುರ, ತ್ಯಾಗರ್ತಿ, ಬೆಳ್ಳಂದೂರು ಸುತ್ತಮುತ್ತ ಕಾಡಾನೆ ಓಡಾಟ - ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಆನಂದಪುರ ಸಮೀಪದ ಗೌತಮಪುರ ಹಾಗೂ ತ್ಯಾಗರ್ತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಸ್ಥಳೀಯ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಆನೆಗಳು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರು ಮತ್ತು ಕೃಷಿಕರು ಸಂಜೆ ವೇಳೆ ಜಾಗರೂಕರಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸೂಚಿಸಿದೆ.

Read Full Story

11:51 AM (IST) Oct 30

ಬೆಂಗಳೂರು ರಸ್ತೆಯಲ್ಲಿ ಸುರಂಗ ರೀತಿಯ ಗುಂಡಿಗಳು; ಇವು ಕೆಂಪೇಗೌಡರು ಮಾಡಿದ್ದಲ್ಲ, ಜಿಬಿಎ ಮಾಡಿದ ಎಡವಟ್ಟು!

ಬೆಂಗಳೂರಿನ ಮಲ್ಲತ್ತಹಳ್ಳಿ ವ್ಯಾಪ್ತಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡು ರಸ್ತೆಯಲ್ಲೇ ದಿಢೀರ್ ಭೂಮಿ ಕುಸಿದು ಬೃಹತ್ ಸುರಂಗದಂತಹ ಗುಂಡಿ ನಿರ್ಮಾಣವಾಗಿದೆ. ಕಾಂಕ್ರೀಟ್ ರಸ್ತೆಯ ಅಡಿಯಲ್ಲಿದ್ದ ಮಣ್ಣು ಕೊಚ್ಚಿ ಹೋಗಿದ್ದು, ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.

Read Full Story

11:50 AM (IST) Oct 30

Matangi Devi ಹುಲಿಗೆಮ್ಮ ದೇವಿ ದೇವಸ್ಥಾನದ ವಿವಾದ, ಅಸ್ಪೃಶ್ಯತೆ ಆರೋಪ ತಳ್ಳಿ ಹಾಕಿದ ಪ್ರಾಧಿಕಾರ

ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಜಾರಿಯಲ್ಲಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಇಲ್ಲಿ ಶತಮಾನಗಳಿಂದ ಜಾತ್ಯತೀತ ಪದ್ಧತಿ ಆಚರಣೆಯಲ್ಲಿದೆ ಎಂದು ಪ್ರಾಧಿಕಾರದ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರು ದೇವಸ್ಥಾನದ ವಿವಿಧ ಧಾರ್ಮಿಕ ಉತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

Read Full Story

11:23 AM (IST) Oct 30

ಬೆಂಗಳೂರು ಕೆಂಪೇಗೌಡ ಬಡಾವಣೆಯಲ್ಲಿ ಮತ್ತೆ ಪ್ರತ್ಯಕ್ಷವಾಯ್ತು ಚಿರತೆ! ರಸ್ತೆ ದಾಟುತ್ತಿದ್ದ ವಿಡಿಯೋ ಸೆರೆ!

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಲೇಔಟ್ ಸುತ್ತಮುತ್ತ ತಡರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಟ್ರಕ್ ಚಾಲಕರೊಬ್ಬರು ಚಿರತೆ ರಸ್ತೆ ದಾಟುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

Read Full Story

11:15 AM (IST) Oct 30

₹14 ಕೋಟಿ ವೆಚ್ಚದಲ್ಲಿ ಪಂಚ ಗ್ಯಾರಂಟಿಗಳ ಅಧ್ಯಯನ - ಸಚಿವ ಸಂಪುಟದಲ್ಲಿ ನಿರ್ಧಾರ, ಭವಿಷ್ಯದಲ್ಲಿ ಪರಿಷ್ಕರಣೆ ಸಾಧ್ಯತೆ

ಪಂಚ ಗ್ಯಾರಂಟಿಗಳ ಮೌಲ್ಯಮಾಪನ ಮಾಡಲು 14 ಕೋಟಿ ರೂ. ವೆಚ್ಚದಲ್ಲಿ 'ಕೆ-ಮಾನಿಟರ್' ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸುಮಾರು 1 ಲಕ್ಷ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ಯೋಜನೆಯ ಉಪಯೋಗ ಹಾಗೂ ಅಗತ್ಯ ಬದಲಾವಣೆಗಳ ಬಗ್ಗೆ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅಗತ್ಯ ಸುಧಾರಣೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

Read Full Story

10:59 AM (IST) Oct 30

ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ಕುರುಬ ಸಮಾಜದಿಂದ ಮಹತ್ವದ ಮೀಟಿಂಗ್! ಕಾಂಗ್ರೆಸ್‌ ತೊರೆದು ಬಿಜೆಪಿಯತ್ತಾ?

ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಎಂ. ನಾಗರಾಜ, ಕುರುಬ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಕುರುಬ ಸಮಾಜವನ್ನು ಕಡೆಗಣಿಸಿದೆ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದರು.

Read Full Story

10:47 AM (IST) Oct 30

ಬೆಂಗಳೂರು-ಕರಾವಳಿ ವಂದೇ ಭಾರತ್ ರೈಲು ಬಗ್ಗೆ ಬಿಗ್ ಅಪ್‌ಡೇಟ್! ನವೆಂಬರ್ ನಲ್ಲಿ ಸಂಚಾರ ಆರಂಭದ ಸೂಚನೆ

ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಮಡಗಾಂವ್‌ಗೆ ಸಂಚರಿಸಲಿರುವ ವಂದೇ ಭಾರತ್ ರೈಲಿಗೆ ನವೆಂಬರ್ ಮೂರನೇ ವಾರದಲ್ಲಿ ಚಾಲನೆ ಸಿಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾದ ಅವರು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಂತೆ ಮತ್ತು ಚಿಕ್ಕಮಗಳೂರು-ಬೆಂಗಳೂರು ಇಂಟರ್‌ಸಿಟಿ ರೈಲಿಗೆ ಆಗ್ರಹಿಸಿದ್ದಾರೆ.

Read Full Story

10:41 AM (IST) Oct 30

ನಮ್ಮ ಮೆಟ್ರೋ ಇಂದಿರಾನಗರ ನಿಲ್ದಾಣದಲ್ಲಿ ಹಳಿಗೆ ಇಳಿದ ವ್ಯಕ್ತಿ; ನೇರಳೆ, ಹಸಿರು ಮಾರ್ಗದ ಸಂಚಾರದಲ್ಲಿ ವ್ಯತ್ಯಯ!

ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ದಿಢೀರ್ ಹಳಿಗೆ ಧುಮುಕಿದ ಕಾರಣ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ತುರ್ತು ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ಸಿಬ್ಬಂದಿ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಿಸಿದರು.

Read Full Story

09:59 AM (IST) Oct 30

ಬೆಂಗಳೂರು ಕಂಪನಿ ₹5000 ಕೋಟಿ ಕ್ರಿಪ್ಟೋ ಅಕ್ರಮ! ನೋಂದಣಿಯಾಗದೆ ವಹಿವಾಟು, ಇ.ಡಿ. ಅಧಿಕಾರಿಗಳ ದಾಳಿಯಿಂದ ಬೆಳಕಿಗೆ

ಬೆಂಗಳೂರಿನ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌ ಕಂಪನಿ ಅಕ್ರಮವಾಗಿ 5000 ಕೋಟಿ ರು. ಕ್ರಿಪ್ಟೋಕರೆನ್ಸಿ ವಹಿವಾಟು ಮಾಡಿದ್ದನ್ನು ಇಡಿ ಪತ್ತೆ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ 2 ಮತ್ತು ಮಧ್ಯಪ್ರದೇಶದ ಭೋಪಾಲ್‌ನ 1 ಕಡೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು, ಮಡ್‌ರೆಕ್ಸ್‌ , ಸೇಬರ್‌.ಮನಿ ಎಂಬ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುತ್ತಿದ್ದ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌, 2018ರಿಂದ ಇದನ್ನು ನಡೆಸುತ್ತಿತ್ತು.

Read Full Story

09:19 AM (IST) Oct 30

ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿದೆ ಎಂಬ ಹೇಳಿಕೆ ನೀಡಿಲ್ಲ, ತಪ್ಪಾಗಿ ಅರ್ಥೈಸಲಾಗಿದೆ; ಸತೀಶ್ ಜಾರಕಿಹೊಳಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯ ನಿಜವಾದ ಆಶಯವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿರುವ ಸಚಿವರು, ರಾಹುಲ್ ಗಾಂಧಿ ಅವರ ಹೋರಾಟದೊಂದಿಗೆ ನಿಲ್ಲುವುದಾಗಿ ಪುನರುಚ್ಚರಿಸಿದ್ದಾರೆ.

Read Full Story

08:54 AM (IST) Oct 30

ಸಚಿವ ಯತೀಂದ್ರ ಸಿದ್ದರಾಮಯ್ಯ ಜಂಬದ ಕೋಳಿಯಂತೆ ಮಾತನಾಡಬಾರದು - ಹೆಚ್. ವಿಶ್ವನಾಥ್

ಮೈಸೂರು ರಾಜಮನೆತನದ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅನುಭವದ ಕೊರತೆಯಿದೆ ಎಂದು ಹೆಚ್. ವಿಶ್ವನಾಥ್ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಕಟವಾದರೆ ರಾಜಕೀಯದಲ್ಲಿ ಸಂಚಲನ ಮೂಡಿಸಬಹುದಾದ ತಮ್ಮ 'ಬಾಂಬೆ ಡೇಸ್' ಪುಸ್ತಕವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Read Full Story

08:51 AM (IST) Oct 30

ಮೈಸೂರು ದಸರಾ - ಮಹಾಂತ ಜೋಳಿಗೆ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ! ಎರಡನೇ ಸ್ಥಾನ ಯಾವ ಜಿಲ್ಲೆಗೆ?

ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ಇಳಕಲ್ಲಿನ ವಿಜಯ ಮಹಾಂತ ಶ್ರೀಗಳ 'ಮಹಾಂತ ಜೋಳಿಗೆ' ಸ್ತಬ್ಧಚಿತ್ರಕ್ಕೆ ಬೆಳಗಾವಿ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಸಾರ್ವಜನಿಕರಲ್ಲಿರುವ ದುಶ್ಚಟಗಳನ್ನು ಭಿಕ್ಷೆಯಾಗಿ ಬೇಡಿದ್ದ ಶ್ರೀಗಳ ವಿನೂತನ ಕಾರ್ಯ ಬಿಂಬಿಸಿತ್ತು.

Read Full Story

08:44 AM (IST) Oct 30

ಸಿದ್ದರಾಮಯ್ಯ ಸ್ಟಿಂಗ್ ಕೇಸ್ - ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೆಹಲಿ ಮನೇಲಿ ಪೊಲೀಸರ ಮಹಜರ್!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಗೃಹ ಕಚೇರಿಯಲ್ಲಿ ಮಹಜರ್ ನಡೆಸಿದ್ದಾರೆ. ಬಂಧಿತ ಆರೋಪಿ ರಿತೇಶ್ ಪಾಂಡೆ ನೀಡಿದ ಹೇಳಿಕೆ ಆಧಾರದ ಮೇಲೆ ಈ ಪರಿಶೀಲನೆ ನಡೆದಿದೆ.

Read Full Story

08:34 AM (IST) Oct 30

ಬೆಳಗಾವಿಯ ಹಿರಿಯ ನಾಯಕ, ಮಾಜಿ ಸಚಿವ ಶಿವಾನಂದ ಕೌಜಲಗಿ ಇನ್ನಿಲ್ಲ! ಶಾಸಕ ಮಹಾಂತೇಶ ಕೌಜಲಗಿ ಭಾವುಕ

ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಮಾಜಿ ಸಂಸದ ಶಿವಾನಂದ ಕೌಜಲಗಿ (87) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೈಲಹೊಂಗಲದಿಂದ ಮೂರು ಬಾರಿ ಶಾಸಕರಾಗಿದ್ದ ಅವರು, ಲೋಕೋಪಯೋಗಿ ಸಚಿವರಾಗಿ ಮತ್ತು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Read Full Story

More Trending News