Published : Jun 08, 2025, 07:27 AM ISTUpdated : Jun 08, 2025, 11:29 PM IST

Karnataka News Live: ಗೂಗಲ್ ಮುಂದಿನ CEO ಯಾರು? ಸುಂದರ್ ಪಿಚೈ ಉತ್ತರ

ಸಾರಾಂಶ

ಬೆಂಗಳೂರು (ಜೂ.8) : ಆರ್‌ಸಿಬಿ ವಿಜಯೋತ್ಸವ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದ ಎಲ್ಲಾ 11 ಮಂದಿ ಕುಟುಂಬದವರಿಗೆ ಸರ್ಕಾರ ಪರಿಹಾರ ಧನ 25 ಲಕ್ಷ ರೂ.ಗೆ ಹೆಚ್ಚಿಸಿದೆ. ಇದೀಗ ಮೃತ ಕುಟುಂಬಗಳಿಗೆ ಒಟ್ಟು 40 ಲಕ್ಷ ರು. ಪರಿಹಾರ ಸಿಗಲಿದೆ.

ಕಾಲ್ತುಳಿತ ದುರ್ಘಟನೆ ನಡೆದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದ್ದರು. ಇದೀಗ ಈ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಆದೇಶಿಸಿದ್ದಾರೆ.

ಸರ್ಕಾರದ ಜೊತೆಗೆ ಮೃತರ ಕುಟುಂಬಗಳಿಗೆ ಈಗಾಗಲೇ ಆರ್‌ಸಿಬಿ ಪ್ರಾಂಚೈಸಿ ತಲಾ 10 ಲಕ್ಷ ರು. ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನವರು ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಆರ್‌ಸಿಬಿ ಫ್ರಾಂಚೈಸಿಯಿಂದ 10 ಲಕ್ಷ ರು. ಪರಿಹಾರ ಘೋಷಣೆ ಮಾಡಲಾಗಿದೆ. ಇದೀಗ ಸರ್ಕಾರ 25 ಲಕ್ಷ ಕೊಟ್ಟರೆ ಮೃತ ಕುಟುಂಬಗಳಿಗೆ ಒಟ್ಟು 40 ಲಕ್ಷ ರು. ಪರಿಹಾರ ಸಿಕ್ಕಂತಾಗಲಿದೆ.

11:29 PM (IST) Jun 08

ಗೂಗಲ್ ಮುಂದಿನ CEO ಯಾರು? ಸುಂದರ್ ಪಿಚೈ ಉತ್ತರ

ಗೂಗೂಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈ ಇದೀಗ ಕಂಪನಿಯ ಮಂದಿನ ಸಿಇಒ ಯಾರು ಅನ್ನೋ ಪ್ರಶ್ನಗೆ ಉತ್ತರಿಸಿದ್ದಾರೆ. 

Read Full Story

11:09 PM (IST) Jun 08

ಬಿಳಿ ಗೌನ್‌ನಲ್ಲಿ ಮಿಂಚಿದ ಮೋನಾಲಿಸಾ, ಫೋಟೋಗೆ ಭಾರಿ ಮೆಚ್ಚುಗೆ

ಭೋಜ್‌ಪುರಿ ಸ್ಟಾರ್ ಮೋನಾಲಿಸಾ ಬಿಳಿ ಗೌನ್‌ನಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹೊಸ ಶೋ 'ಜಾದೂ ತೇರಿ ನಜರ್' ಗಾಗಿ ಸುದ್ದಿಯಲ್ಲಿದ್ದಾರೆ. ಈ ಬಾರಿಯ ಡ್ರೆಸ್ ಅವರನ್ನು ಸಿಂಪಲ್ ಮತ್ತು ಸ್ವೀಟ್ ಲುಕ್‌ನಲ್ಲಿ ಕಾಣುವಂತೆ ಮಾಡಿದೆ.
Read Full Story

10:55 PM (IST) Jun 08

ಪಾಪ ಪುಣ್ಯದ ಮಾತೇ ಇಲ್ಲ, ಲೈಂಗಿಕ ಅಪರಾಧಿಗಳಿಗೆ ಪುರುಷತ್ವ ಹರಣ, ಯುಕೆ ಸರ್ಕಾರದ ಹೊಸ ಪ್ಲಾನ್

ಕರುಣೆ, ಮೂಲಭೂತ ಹಕ್ಕು ಸೇರಿದಂತೆ ಬೊಗಳೇ ಮಾತುಗಳಿಗೆ ಅವಕಾಶವಿಲ್ಲ. ಲೈಂಗಿಕ ಅಪರಾಧಿಗಳ ಪುರುಷತ್ವ ಹರಣ ಇಂಜೆಕ್ಷನ್ ನೀಡಲು ಯುಕೆ ಸರ್ಕಾರ ಹೊಸ ಪ್ಲಾನ್ ಮಾಡಿದೆ.

Read Full Story

10:46 PM (IST) Jun 08

ಕಾಂಗ್ರೆಸ್‌ನಿಂದ ಮತಬ್ಯಾಂಕ್ ರಾಜಕಾರಣ - ಮಾಜಿ ಸಚಿವ ಸಿ.ಟಿ.ರವಿ

ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್‌ ಜಿಹಾದ್‌ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು.

Read Full Story

10:34 PM (IST) Jun 08

ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಶೇ.50 ಉದ್ಯೋಗ ಮೀಸಲಿಡಿ - ಸಚಿವ ಶಿವಾನಂದ ಪಾಟೀಲ್

ಎನ್‌ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

Read Full Story

10:19 PM (IST) Jun 08

ಜಿ7 ಶೃಂಗಸಭೆ ತೆರಳಲಿರುವ ಮೋದಿ ಮೇಲೆ ಖಲಿಸ್ತಾನಿ ಉಗ್ರರ ದಾಳಿ ಪ್ಲಾನ್ ಬಿಚ್ಚಿಟ್ಟ ಕೆನಡಾ ಪತ್ರಕರ್ತ

ಜಿ7 ಶೃಂಗಸಭೆಗೆ ಕೆನಡಾ ಪ್ರಧಾನಿ, ಮೋದಿಗೆ ಆಹ್ವಾನ ನೀಡಿರುವುದು ಖಲಿಸ್ತಾನಿ ಉಗ್ರರ ಕಣ್ಣು ಕೆಂಪಾಗಿಸಿದೆ. ತೀವ್ರ ಆಕ್ರೋಶ ಹೊರಹಾಕಿರುವ ಖಲಿಸ್ತಾನಿ ಉಗ್ರರು ಇದೀಗ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ರೂಪಿಸಿರುವುದಾಗಿ ಕೆನಡಾ ಪತ್ರಕರ್ತ ಬಹಿರಂಗಪಡಿಸಿದ್ದಾರೆ.

Read Full Story

09:19 PM (IST) Jun 08

ನಷ್ಟದಲ್ಲಿದ್ದ ಏರ್ ಇಂಡಿಯಾಗೆ ಮರು ಜೀವ ಕೊಟ್ಟ ಟಾಟಾ, FY2025ರಲ್ಲಿ ಶೇ.11ರಷ್ಟು ಆದಾಯ ಹೆಚ್ಚಳ

ಸರ್ಕಾರಿ ಒಡೆತನದಲ್ಲಿದ್ದಾಗ ಏರ್ ಇಂಡಿಯಾ ಪ್ರತಿ ವರ್ಷ ನಷ್ಟದಲ್ಲೇ ಸಾಗುತ್ತಿತ್ತು. ಅತೀವ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮರಳಿ ಪಡೆದಿತ್ತು. ಬಳಿಕ ಮಹತ್ತರ ಬದಲಾವಣೆಯೊಂದಿಗೆ ಸೇವೆ ಆರಂಭಿಸಿತ್ತು. ಇದರ ಪರಿಣಾಮ ಈ ವರ್ಷ ಏರ್ ಇಂಡಿಯಾ ಆದಾಯದಲ್ಲಿ ಶೇಕಡಾ 11ರಷ್ಟು ಏರಿಕೆಯಾಗಿದೆ.

Read Full Story

09:10 PM (IST) Jun 08

ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ - ಶಾಸಕ ಲಕ್ಷ್ಮಣ ಸವದಿ

ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಈ ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

Read Full Story

08:52 PM (IST) Jun 08

ಜೈನ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ ಬಿಜೆಪಿ ಸರ್ಕಾರ - ಸಂಸದ ಜಗದೀಶ ಶೆಟ್ಟರ್

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜೈನ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆ ಹಿಡಿದು, ಜೈನ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

Read Full Story

08:41 PM (IST) Jun 08

ಯೋಜನೆಗಳನ್ನು ನೀಡುವ ಸರ್ಕಾರ ರೈತರ ಬಗ್ಗೆಯೂ ಯೋಚಿಸಬೇಕು - ಬಸವರಾಜ ಹೊರಟ್ಟಿ

ಜನರಿಗೆ ಅನುಕೂಲ ಆಗುವಂತಹ ಯೋಜನೆ ನೀಡುವ ಸರ್ಕಾರ ರೈತರ ಬಗ್ಗೆಯೂ ಯೋಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಬಸವರಾಜ ಹೊರಟ್ಟಿ ತಿಳಿಸಿದರು.

Read Full Story

08:25 PM (IST) Jun 08

ಅಹಾರ ಅರಸಿ ಗುಂಡಿಗೆ ಬಿದ್ದ ಹುಲಿ, ಪಕ್ಕದಲ್ಲೇ ನಾಯಿ ಇದ್ದರೂ ತಿನ್ನದೇ ರಕ್ಷಣೆಗೆ ಕೂಗಿದ ಮೃಗ

ಹುಲಿ ಆಹಾರ ಹುಡುಕಿ ಬಂದಾಗ ನಾಯಿ ಕಣ್ಣಿಗೆ ಬಿದ್ದಿದೆ. ಇನ್ನೇನು ನಾಯಿಯನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಎರಡೂ ಪ್ರಾಣಿಗಳು ಗುಂಡಿಗೆ ಬಿದ್ದಿದೆ. ಗುಂಡಿಗೆ ಬಿದ್ದ ಬೆನ್ನಲ್ಲೇ ಪಕ್ಕದಲ್ಲೇ ನಾಯಿ ಇದ್ದರೂ ಹುಲಿ ತಿಂದಿಲ್ಲ. ಬದಲು ರಕ್ಷಣೆಗಾಗಿ ನಾಯಿ ಹಾಗೂ ಹುಲಿ ಕೂಗಿಕೊಂಡ ಘಟನೆ ನಡೆದಿದೆ.

Read Full Story

07:29 PM (IST) Jun 08

ಗೌತಮ್ ಅದಾನಿ ಸ್ಯಾಲರಿ ಎಷ್ಟು? ತನ್ನ ಕಂಪನಿಯ ಉದ್ಯೋಗಿಗಿಂತ ಮಾಲೀಕನ ವೇತನ ಕಡಿಮೆ

ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತದ 2ನೇ ಶ್ರೀಮಂತ ವ್ಯಕ್ತಿ. ಆದರೆ ಗೌತಮ್ ಅದಾನಿ ಸ್ಯಾಲರಿ ಅಚ್ಚರಿಗೆ ಕಾರಣವಾಗಿದೆ. ಅದಾನಿ ಗ್ರೂಪ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಇಒ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳ ವೇತನಕ್ಕಿಂತ ಗೌತಮ್ ಅದಾನಿ ವೇತನ ಕಡಿಮೆ. ಗೌತಮ್ ಅದಾನಿ ಸ್ಯಾಲರಿ ಎಷ್ಟು?

Read Full Story

07:28 PM (IST) Jun 08

ಮಣಿಪುರದಲ್ಲಿ ಮತ್ತೆ ಹಿಂಸಾಚಾರ - ಕರ್ಫ್ಯೂ, ಇಂಟರ್‌ನೆಟ್‌ ಬಂದ್‌, ಪಿಎಂ ವಿರುದ್ಧ ಪ್ರಿಯಾಂಕ ಕಿಡಿ

ಮಣಿಪುರದಲ್ಲಿ ಅರಾಂಬಾಯಿ ತೆಂಗೋಲ್ ಸಂಘಟನೆಯ ಪ್ರಮುಖ ನಾಯಕನ ಬಂಧನದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕರ್ಫ್ಯೂ ಜಾರಿ ಮತ್ತು ಇಂಟರ್ನೆಟ್ ಸ್ಥಗಿತಗೊಂಡಿದ್ದು, ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗಿವೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

Read Full Story

06:41 PM (IST) Jun 08

ಬಿಗ್ ಬಾಸ್ ಖ್ಯಾತಿ ಸನಾ ಆರೋಗ್ಯದಲ್ಲಿ ದಿಢೀರ್ ಏರುಪೇರು, ಆಸ್ಪತ್ರೆ ದಾಖಲು

ಬಿಗ್‌ಬಾಸ್ ಖ್ಯಾತಿ ಸನಾ ಮಕ್ಬುಲ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರೆ. ಸನಾ ಆತ್ಮೀಯ ಸ್ನೇಹಿತೆ ಸನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ.

Read Full Story

06:05 PM (IST) Jun 08

ಕಾವೇರಿ ಆರತಿಗೆ 100 ಕೋಟಿ ಖರ್ಚು ನಿರರ್ಥಕ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕಾವೇರಿ ಆರತಿಗೆ ರಾಜ್ಯಸರ್ಕಾರ 100 ಕೋಟಿ ರು. ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Read Full Story

05:57 PM (IST) Jun 08

Chamarajanagar - ಬಂಡೀಪುರದಲ್ಲಿ ಸಿದ್ದವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್!

ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂಧರ್ಯಕ್ಕೆ ಮನ ಸೋಲದವರೇ ಇಲ್ಲ.

Read Full Story

05:48 PM (IST) Jun 08

ಮಳೆಯಿಂದ ಹಾನಿ - ಚಿಕ್ಕಮಗಳೂರಿಗೆ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

ಕಳೆದ ಪೂರ್ವ ಮುಂಗಾರಿನಲ್ಲಿ ಬಿದ್ದ ಭಾರೀ ಮಳೆಗೆ ಜಿಲ್ಲೆಯಲ್ಲಿ ಹಾನಿಯಾಗಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ ಮಾಲ್ ಸೇರಿದಂತೆ ಗಿರಿ ಪ್ರದೇಶಕ್ಕೆ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸಿದರು.

Read Full Story

05:41 PM (IST) Jun 08

ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತರಬೇಕೆಂಬ ನನ್ನ ಆಶಯಕ್ಕೆ ರಾಜ್ಯಸರ್ಕಾರ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

Read Full Story

05:26 PM (IST) Jun 08

ಭಾರತ-ಇಂಗ್ಲೆಂಡ್ ಟೆಸ್ಟ್ - ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ ಪ್ರಕಟ!

ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಭಾರತ ಕ್ರಿಕೆಟ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಜೂನ್ 20 ರಂದು ಆರಂಭವಾಗಲಿದ್ದು, ತಂಡದಲ್ಲಿ ಸಾಯಿ ಸುದರ್ಶನ್ ಸ್ಥಾನ ಪಡೆದಿದ್ದಾರೆ.
Read Full Story

05:16 PM (IST) Jun 08

ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರ

ಮಂಗಳೂರಿಲ್ಲಿ ಇತ್ತೀಚೆಗೆ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ಐಎ ತನಿಖೆಗೆ ಒಪ್ಪಿಸಿದೆ. ಈ ಮೂಲಕ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಹೋರಾಟಕ್ಕೆ ಫಲ ಸಿಕ್ಕಿದೆ.

Read Full Story

05:08 PM (IST) Jun 08

WTC Final - ಎಷ್ಟು ಗಂಟೆಯಿಂದ ಆರಂಭ? ಯಾವ ಚಾನೆಲ್‌ನಲ್ಲಿ ನೋಡಬಹುದು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಜೂನ್ 11 ರಿಂದ 15 ರವರೆಗೆ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಗೆಲುವಿಗಾಗಿ ಕಠಿಣ ಪೈಪೋಟಿ ನಡೆಸಲಿವೆ.
Read Full Story

05:05 PM (IST) Jun 08

ಬೆಂಗಳೂರು ಕೆಐಎ ಟರ್ಮಿನಲ್‌ 2ನಲ್ಲಿ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿ ಆರಂಭ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, MAP ಸಹಯೋಗದೊಂದಿಗೆ ಕಲೆ ಮತ್ತು ಸಂಸ್ಕೃತಿಯ ತಾಣವಾಗಿ ರೂಪಾಂತರಗೊಳ್ಳುತ್ತಿದೆ. 60 ಕ್ಕೂ ಹೆಚ್ಚು ಕಲಾವಿದರಿಂದ 210 ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂವಾದಾತ್ಮಕ ಅನುಭವವನ್ನು ನೀಡಲಿದೆ.
Read Full Story

05:04 PM (IST) Jun 08

ಹನಿಮೂನ್​ಗೆ ಹೋದ ದಂಪತಿಯ ನಿಗೂಢ ಅಂತ್ಯ - ಕಣಿವೆಯಲ್ಲಿ ಪತಿಯ ಶವ- ಪತ್ನಿ ಕಿಡ್​ನ್ಯಾಪ್​?

ಹನಿಮೂನ್​ಗೆಂದು ಮೇಘಾಲಯಕ್ಕೆ ಹೋದ ದಂಪತಿಯ ದುರಂತ ಅಂತ್ಯವಾಗಿದೆ. ಪತಿಯ ಶವ ಕಣಿವೆಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಕಾಣೆಯಾಗಿದ್ದು, ಬಾಂಗ್ಲಾದೇಶಕ್ಕೆ ಅಪಹರಣಮಾಡಿರುವ ಶಂಕೆ ವ್ಯಕ್ತವಾಗಿದೆ. ಏನಿದು ಪ್ರಕರಣ?

Read Full Story

04:46 PM (IST) Jun 08

ಅನುಷ್ಕಾ ಶೆಟ್ಟಿ ಮಾದಕ ಬ್ಯಾನರ್‌ನಿಂದ 40 ಅಪಘಾತ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

ನಟಿ ಅನುಷ್ಕಾ ಶೆಟ್ಟಿ ಫೋಟೋದಿಂದ ಹೈದರಾಬಾದ್‌ನಲ್ಲಿ 40 ಅಪಘಾತಗಳಾಗಿವೆ. ಅನುಷ್ಕಾ ಶೆಟ್ಟಿ ಬ್ಯಾನರ್ ವಾಹನ ಸವಾರರ ಗಮನ ಕೆಡಿಸಿಬಿಟ್ಟ ರೋಚಕ ಘಟನೆಯನ್ನು ನಿರ್ದೇಶಕ ಬಿಚ್ಚಿಟ್ಟಿದ್ದಾರೆ. 

Read Full Story

04:23 PM (IST) Jun 08

ಉಡುಪಿಯಲ್ಲಿ ಕೊರಗಜ್ಜನ ಪವಾಡ - ಸತ್ಯವಾಯ್ತು ದೈವದ ಕಾರ್ಣಿಕ ನುಡಿ, ಕಳ್ಳ ಸಿಕ್ಕಿಬಿದ್ದ!

ಉಡುಪಿ ಜಿಲ್ಲೆಯ ಮುದ್ರಾಡಿಯ ಆದಿಶಕ್ತಿ ದೇಗುಲದಲ್ಲಿ ಕಳ್ಳತನವಾಗಿತ್ತು. ಕೊರಗಜ್ಜನ ದೈವವಾಣಿಯಂತೆ ಕಳ್ಳ ಮತ್ತೆ ಬಂದು ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
Read Full Story

04:19 PM (IST) Jun 08

ಧೋನಿ, ಕೊಹ್ಲಿಗೂ ಮಾಡಲಾಗದ್ದನ್ನು ಶುಭ್‌ಮನ್ ಗಿಲ್ ಪಡೆ ಮಾಡುತ್ತಾ? ಟೀಂ ಇಂಡಿಯಾಗೆ ಇಂಗ್ಲೆಂಡ್‌ನಲ್ಲಿ ಅಗ್ನಿ ಪರೀಕ್ಷೆ

ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಆಗಮಿಸಿದೆ. ಕೊಹ್ಲಿ ಮತ್ತು ಧೋನಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲರಾಗಿದ್ದಾರೆ. 2007ರಲ್ಲಿ ದ್ರಾವಿಡ್ ನೇತೃತ್ವದಲ್ಲಿ ಭಾರತ ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.
Read Full Story

04:03 PM (IST) Jun 08

ಆಪರೇಶನ್ ಸಿಂದೂರ್ ಗೌರವ, 336 ದಿನ, ಕಾಲ್,ಡೇಟಾ ಸೇರಿ ಭರ್ಜರಿ ಆಫರ್ ಘೋಷಿಸಿದ BSNL

ಆಪರೇಶನ್ ಸಿಂದೂರ್, ಭಾರತೀಯ ಸೇನೆಗೆ ಗೌರವ ನೀಡಲು ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದೆ. ಅತೀ ಕಡಿಮೆ ಬೆಲೆಗೆ 336 ದಿನ ವ್ಯಾಲಿಟಿಡಿ ಪ್ರತಿ ರೀಚಾರ್ಜ್ ಹಣದಲ್ಲಿ ಗ್ರಾಹಕರಿಗೆ ಶೇ.2.5 ರಷ್ಟು ಡಿಸ್ಕೌಂಟ್, ಇನ್ನು ಶೇ.2.5 ರಷ್ಟು ಮೊತ್ತ ಸೇನೆಗೆ ನೀಡಲಿದೆ. ಏನಿದು ಬಿಎಸ್ಎನ್ಎಲ್ ಶೌರ್ಯ ಸಮರ್ಪಣ ಆಫರ್?

Read Full Story

03:41 PM (IST) Jun 08

ಬೆಂಗಳೂರು ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್; ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ

ಬೆಂಗಳೂರಿನ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾ*ಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ.

Read Full Story

03:06 PM (IST) Jun 08

ಫಾಸ್ಟ್ಯಾಗ್ ಸ್ಕ್ಯಾನಿಂಗ್ 10 ಸೆಕೆಂಡ್ ಮೀರಿದರೆ ಪಾವತಿಸುವಂತಿಲ್ಲ, ಇಲ್ಲಿದೆ FASTag ನಿಯಮ

ಫಾಸ್ಟ್ಯಾಗ್ ಕಡ್ಡಾಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಫಾಸ್ಟ್ಯಾಗ್ ಕೆಲ ನಿಯಮಗಳು ಬಹುತೇಕರಿಗೆ ಗೊತ್ತಿಲ್ಲ. ಟೋಲ್ ಪ್ಲಾಜಾ ಬಳಿಕ ಸ್ಕ್ಯಾನ್ ಸಮಯ 10 ಸೆಕೆಂಡ್ ಮೀರುವಂತಿಲ್ಲ, ಇನ್ನು ಕ್ಯೂ ಕಿಲೋಮೀಟರ್ ಗಟ್ಟಲೇ ಇದ್ದರೆ ಪಾವತಿ ಮಾಡಬೇಕಿಲ್ಲ ಸೇರಿದಂತೆ ಹಲವು ಗೊತ್ತಿಲ್ಲದ ನಿಯಮಗಳು ಇಲ್ಲಿವೆ.

Read Full Story

03:03 PM (IST) Jun 08

ಬೆಂಗಳೂರಿನಿಂದ ದೆಹಲಿಗೆ ಅಂಗಾಗ ರವಾನೆ, ಐದು ಜೀವಗಳಿಗೆ ಆಸರೆಯಾದ ವಾಯುಪಡೆ

ಮೆದುಳು ನಿಷ್ಕ್ರಿಯಗೊಂಡ ದಾನಿಯ ಅಂಗಗಳನ್ನು ಭಾರತದ ಹಲವು ನಗರಗಳಿಗೆ ಸಾಗಿಸಿ 5ಮಂದಿ ರೋಗಿಗಳಿಗೆ ಹೊಸ ಬದುಕನ್ನು ನೀಡಲಾಗಿದೆ. ಭಾರತೀಯ ವಾಯುಪಡೆಯು ಬೆಂಗಳೂರಿನಿಂದ ದೆಹಲಿಗೆ ಒಂದು ಮೂತ್ರಪಿಂಡ ಮತ್ತು ಕಾರ್ನಿಯಾವನ್ನು ತುರ್ತು ವಿಮಾನದಲ್ಲಿ ಸಾಗಿಸಿ ಜೀವರಕ್ಷಕ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

Read Full Story

02:57 PM (IST) Jun 08

ರಿಂಕು vs ಪ್ರಿಯಾ - ಎಂಗೇಜ್‌ಮೆಂಟ್ ಮಾಡಿಕೊಂಡ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ನಡೆದಿದೆ. ರಿಂಕು ಸಿಂಗ್ ಪ್ರಿಯಾರಿಗಿಂತ 160 ಪಟ್ಟು ಹೆಚ್ಚು ಶ್ರೀಮಂತರು! ಇಬ್ಬರ ಆಸ್ತಿ ಎಷ್ಟಿದೆ?

Read Full Story

02:41 PM (IST) Jun 08

ಬಿಜೆಪಿಗೆ ರಾಜೀನಾಮೆ ಕೊಟ್ಟ ಯುವ ನಾಯಕ ಮನೀಶ್ ಕಶ್ಯಪ್; ಕಾರಣ ಹೀಗಿದೆ...!

ಬಿಜೆಪಿ ನಾಯಕ ಮನೀಶ್ ಕಶ್ಯಪ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಅಸಮರ್ಪಕ ನಡವಳಿಕೆ ಮತ್ತು ಯುವಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವುದೇ ರಾಜೀನಾಮೆಗೆ ಕಾರಣ ಎಂದು ತಿಳಿಸಿದ್ದಾರೆ. ಬಿಹಾರದ ಜನರಿಗಾಗಿ ಹೋರಾಡುವುದಾಗಿ ಹೇಳಿದ್ದಾರೆ.

Read Full Story

02:20 PM (IST) Jun 08

IPL 2025 - ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಅನ್‌ಕ್ಯಾಪ್ಡ್‌ ಬ್ಯಾಟರ್ಸ್‌! ಇವರಲ್ಲಿ ಯಾರಾಗ್ತಾರೆ ಭಾರತದ ಫ್ಯೂಚರ್ ಸ್ಟಾರ್?

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

Read Full Story

02:03 PM (IST) Jun 08

ಸಮೋಸಾ ಮಾರಲು ಗೂಗಲ್​ ಕಂಪೆನಿಯನ್ನೇ ತೊರೆದ ಟೆಕಿ! ಈಗ ಹತ್ತಾರು ಕೋಟಿಗಳಲ್ಲಿ ವ್ಯವಹಾರ...

ವಿದೇಶದಲ್ಲಿ ಉದ್ಯೋಗ ಅದು ಕೂಡ ಟೆಕ್​ ದೈತ್ಯ ಗೂಗಲ್​ ಕಂಪೆನಿ! ಆದರೂ ಸಮೋಸಾ ಮಾರುವುದಕ್ಕೆ ಭಾರತಕ್ಕೆ ಮರಳಿದ ಟೆಕಿಯ ಯಶೋಗಾಥೆ ಇಲ್ಲಿದೆ...

Read Full Story

01:34 PM (IST) Jun 08

ಪತಿಯ ಕನಸಿಗೆ ಕಾಸು ಸುರಿದ ಪತ್ನಿ - ಕನ್ನಡ ಚಿತ್ರರಂಗಕ್ಕೆ ಕೊಡುಗೆ ಕೊಡಲು ಹೊರಟ 'ಕರಿಕಾಡ'..!

ಗಿಲ್ಲಿ ವೆಂಕಟೇಶ್ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಹುಲಿಬೇಟೆ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್ ಕೂಡ ಮಾಡಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್..

Read Full Story

01:11 PM (IST) Jun 08

'ಇದನ್ನ ಬೇವರ್ಸಿ ಸರ್ಕಾರ ಅಂತೀರೋ, ದರಿದ್ರ ಸರ್ಕಾರ ಅಂತೀರೋ?..' ಸಿಎಂ ಡಿಸಿಎಂಗೆ ಹಿಗ್ಗಾಮುಗ್ಗಾ ಜಾಡಿಸಿದ ಆರ್‌ ಅಶೋಕ್!

ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆರ್. ಅಶೋಕ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೊಲೀಸ್ ಭದ್ರತೆ ಕೊರತೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

Read Full Story

01:09 PM (IST) Jun 08

ಉಕ್ರೇನ್-ರಷ್ಯಾ ಯುದ್ಧದ ಅವಶೇಷಗಳನ್ನು ಬಳಸಿ ಆಪ್ಟಿಕಲ್ ಫೈಬರ್‌ನಿಂದ ಗೂಡು ಕಟ್ಟಿದ ಹಕ್ಕಿ!

ಉಕ್ರೇನ್‌ನಲ್ಲಿ ಒಂದು ಹಕ್ಕಿ ಆಪ್ಟಿಕಲ್ ಫೈಬರ್‌ನಿಂದ ಗೂಡು ಕಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುದ್ಧದ ಅವಶೇಷಗಳಿಂದ ಹಕ್ಕಿ ಗೂಡು ಕಟ್ಟಿರುವುದು ಆಶ್ಚರ್ಯ ಮತ್ತು ಭಯ ಹುಟ್ಟಿಸಿದೆ.
Read Full Story

01:02 PM (IST) Jun 08

ಅಲ್ಲಾಗೆ ತನ್ನ ಪ್ರಾಣವನ್ನೇ ಬಲಿ ಕೊಟ್ಟ ವ್ಯಕ್ತಿ; ಬಕ್ರೀದ್ ದಿನವೇ ಪತ್ರ ಬರೆದು ಸಾವಿಗೆ ಶರಣು!

ಬಕ್ರೀದ್ ಹಬ್ಬದಂದು 60 ವರ್ಷದ ವ್ಯಕ್ತಿಯೊಬ್ಬರು ಆತ್ಮಹ*ತ್ಯೆ ಮಾಡಿಕೊಂಡಿದ್ದು, 'ನಾನೇ ಬಲಿಪಶು' ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಲಕ್ನೋದಲ್ಲಿ ನಡೆದ ಘಟನೆಯಲ್ಲಿ, ಇಶ್ ಮುಹಮ್ಮದ್ ಅನ್ಸಾರಿ ಎಂಬವರು ಗುಡಿಸಲಿನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

Read Full Story

12:56 PM (IST) Jun 08

ಪ್ರಿಯಕರ ಬಿಟ್ಟ ಹೂಸಿನಿಂದ 7 ವರ್ಷ ನರಳಾಡಿದ ಪ್ರೇಯಸಿ- ವೈದ್ಯಲೋಕಕ್ಕೇ ಸವಾಲಾದ ಘಟನೆ!

ಪ್ರಿಯಕರನ ಜೊತೆ ಮಲಗಿದ್ದ ವೇಳೆ ಆತ ಬಿಟ್ಟ ಹೂಸಿನಿಂದ ಸೋಂಕು ಉಂಟಾಗಿ ಏಳು ವರ್ಷ ನರಳಾಡಿದ ಪ್ರೇಯಸಿಯ ಕರುಣಾಜನಕ ಕಥೆ ಇದು!

Read Full Story

12:51 PM (IST) Jun 08

ಚಿನ್ನಸ್ವಾಮಿ ಕಾಲ್ತುಳಿತದ ವೇಳೆ ಡಿಸಿಪಿ ಸೈದುಲ್ಲಾ ಅಡಾವತ್ ಇಲ್ಲದಿದ್ದರೆ ಸಾವಿನ ಸಂಖ್ಯೆ 30 ದಾಟುತ್ತಿತ್ತು!

ಐಪಿಎಲ್ ಟ್ರೋಫಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಡಿಸಿಪಿ ಸೈದುಲ್ಲಾ ಅವರ ಸಮಯಪ್ರಜ್ಞೆ ಹಲವು ಜೀವಗಳನ್ನು ಉಳಿಸಿತು. ಅವರ ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
Read Full Story

More Trending News