- Home
- Automobile
- Deals on Wheels
- ಫಾಸ್ಟ್ಯಾಗ್ ಸ್ಕ್ಯಾನಿಂಗ್ 10 ಸೆಕೆಂಡ್ ಮೀರಿದರೆ ಪಾವತಿಸುವಂತಿಲ್ಲ, ಇಲ್ಲಿದೆ FASTag ನಿಯಮ
ಫಾಸ್ಟ್ಯಾಗ್ ಸ್ಕ್ಯಾನಿಂಗ್ 10 ಸೆಕೆಂಡ್ ಮೀರಿದರೆ ಪಾವತಿಸುವಂತಿಲ್ಲ, ಇಲ್ಲಿದೆ FASTag ನಿಯಮ
ಫಾಸ್ಟ್ಯಾಗ್ ಕಡ್ಡಾಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಫಾಸ್ಟ್ಯಾಗ್ ಕೆಲ ನಿಯಮಗಳು ಬಹುತೇಕರಿಗೆ ಗೊತ್ತಿಲ್ಲ. ಟೋಲ್ ಪ್ಲಾಜಾ ಬಳಿಕ ಸ್ಕ್ಯಾನ್ ಸಮಯ 10 ಸೆಕೆಂಡ್ ಮೀರುವಂತಿಲ್ಲ, ಇನ್ನು ಕ್ಯೂ ಕಿಲೋಮೀಟರ್ ಗಟ್ಟಲೇ ಇದ್ದರೆ ಪಾವತಿ ಮಾಡಬೇಕಿಲ್ಲ ಸೇರಿದಂತೆ ಹಲವು ಗೊತ್ತಿಲ್ಲದ ನಿಯಮಗಳು ಇಲ್ಲಿವೆ.

ಗೊತ್ತಿಲ್ಲದ ಫಾಸ್ಟ್ಯಾಗ್ ನಿಯಮ
ಭಾರತದಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ. ನಗದು ಹಣ ಪಾವತಿ ಮಾಡಿ ಸಾಗುವ ವಿಧಾನ ಈಗಿಲ್ಲ. ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಿರಬೇಕು. ಟೋಲ್ ಗೇಟ್ ಬಳಿ ಫಾಸ್ಟ್ಯಾಗ್ ಖಾತೆ ಮೂಲಕವೇ ಹಣ ಪಾವತಿಯಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ದಂಡದ ರೂಪದಲ್ಲಿ ದುಪ್ಪಟ್ಟು ಹಣ ಪಾವತಿಸಬೇಕು. ಇದು ಸಾಮಾನ್ಯ ನಿಯಮಗಳು. ಬಹುತೇಕರಿಗೆ ಈ ನಿಯಮಗಳು ಗೊತ್ತಿದೆ. ಆದರೆ ಫಾಸ್ಟ್ಯಾಗ್ ಹಾಗೂ ಟೋಲ್ ಪ್ಲಾಜಾಗಳು ಕೆಲ ಕಡ್ಡಾಯ ನಿಯಮ ಪಾಲಿಸಬೇಕು. ಈ ನಿಯಮಗಳು ಬಹುತೇಕರಿಗೆ ಗೊತ್ತಿಲ್ಲ.
10 ಸೆಕೆಂಡ್ ನಿಯಮ
ಟೋಲ್ ಪ್ಲಾಜಾ ಬಳಿ ಕಾರು ಅಥವಾ ವಾಹನ ಬಂದ ಬಳಿ ಸ್ಕ್ಯಾನಿಂಗ್ ಸಮಯ ಗರಿಷ್ಠ 10 ಸೆಕೆಂಡ್ ಮಾತ್ರ. ಗರಿಷ್ಠ 10 ಸೆಕೆಂಡ್‌ನಲ್ಲಿ ನಿಮ್ಮ ವಾಹನ ಫಾಸ್ಟ್ಯಾಗ್ ಸ್ಕಾನ್ ಆಗಿ ಗೇಟ್ ತೆರೆಯಬೇಕು. ಖಾತೆಯಲ್ಲಿ ಬ್ಯಾಲೆನ್ಸ್ ಇದ್ದು, ಫಾಸ್ಟ್ಯಾಗ್ ಸಕ್ರೀಯವಾಗಿದ್ದರೂ ಸ್ಕ್ಯಾನಿಂಗ್ ಸಮಯ 10 ಸೆಕೆಂಡ್ ಮೀರಿದರೆ ಯಾವುದೇ ಪಾವತಿ ಮಾಡುವಂತಿಲ್ಲ. ನಿಯಮದ ಪ್ರಕಾರ 10 ಸೆಕೆಂಡ್‌ಗಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ವಾಹವನ್ನು ಉಚಿತವಾಗಿ ಸಾಗಲು ಅವಕಾಶಮಾಡಿಕೊಡಬೇಕು. ಈ ಮೂಲಕ ಇತರ ವಾಹನಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಅನ್ನೋದು ನಿಯಮ. ಮುಂದಿನ ಬಾರಿ ನಿಮ್ಮ ಫಾಸ್ಟ್ಯಾಗ್ ಸ್ಕ್ಯಾನ್ ಆಗಲು 10 ಸೆಕೆಂಡ್‌ಗಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಯಾವುದೇ ಹಣ ಪಾವತಿ ಮಾಡದೇ ಸಾಗದಬಹುದು.
100 ಮೀಟರ್ ನಿಯಮ
ವೀಕೆಂಡ್, ರಜಾ ದಿನಗಳಲ್ಲಿ ಟೋಲ್ ಗೇಟ್ ತುಂಬಿ ತುಳುಕುತ್ತದೆ. ಈ ವೇಳೆ ಆಟೋಮ್ಯಾಟಿಕ್ ವಿಧಾನ, ಫಾಸ್ಟ್ಯಾಗ್ ಖಾತೆಯಿಂದ ಟೋಲ್ ಹಣ ಕಡಿತವಾದರೂ ಪ್ರತಿ ವಾಹನ ಸಾಗಲು ಕೆಲ ಸಮಯ ತೆಗದುಕೊಳ್ಳುತ್ತದೆ. ಇದರಿಂದ ಟೋಲ್ ಗೇಟ್ ಬಳಿ ವಾಹನದ ಸರದಿ ಸಾಲು ದೊಡ್ಡದಾಗುತ್ತದೆ. ಆದರೆ ನಿಯಮದ ಪ್ರಕಾರ 100 ಮೀಟರ್‌ಗಿಂತ ಹೆಚ್ಚಿನ ಉದ್ದದ ಕ್ಯೂ ಇದ್ದರೆ ವಾಹನ ಸವಾರರು ಹಣ ಪಾವತಿ ಮಾಡಬೇಕಿಲ್ಲ. ನೇರವಾಗಿ ಸಾಗಬಹುದು. ಕಾರಣ ತಕ್ಷಣಕ್ಕೆ ಸರದಿ ಸಾಲು, ವಾಹನ ದಟ್ಟಣೆ ಕಡಿಮೆ ಮಾಡಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಅನ್ನೋದು ನಿಯಮ. 100 ಮೀಟರ್‌ಗಿಂತ ಹೆಚ್ಚಿನ ಉದ್ದದ ಕ್ಯೂ ಇದ್ದರೆ ಟೋಲ್ ಪಾವತಿ ಮಾಡದೇ ಸಾಗಲು ನಿಯಮದಲ್ಲಿ ಅವಕಾಶವಿದೆ.
100 ಮೀಟರ್ ಹಳದಿ ಲೇನ್
ಫಾಸ್ಟ್ಯಾಗ್ ಟೋಲ್ ಪ್ಲಾಜಾದಿಂದ 100 ಮೀಟರ್ ದೂರದ ವರೆಗೆ ಹಳದಿ ಲೇನ್ ಹಾಕಿರಬೇಕು. ಈ ಹಳದಿ ಲೇನ್‌ಗಿಂತಲೂ ಹೆಚ್ಚು ವಾನಗಳ ಕ್ಯೂ ಇದ್ದರೆ ಹಣ ಪಾವತಿ ಮಾಡದೇ ಸಾಗಲು ನಿಯಮದಲ್ಲಿ ಅವಕಾಶವಿದೆ. ಮುಂದಿನ ಬಾರಿ ಟೋಲ್ ಪ್ಲಾಜಾ ಬಳಿ ತೆರಳಿದಾಗ ಯೆಲ್ಲೋ ಲೇನ್,ವಾಹನಗಳ ಕ್ಯೂ ಈ ಲೇನ್ ಮೀರಿದೆಯಾ ಗಮನಿಸಿ ನಿರ್ಧಾರ ತೆಗೆದುಕೊಳ್ಳಿ.
ಫಾಸ್ಟ್ಯಾಗ್ ಅವಧಿ 5 ವರ್ಷ
ನಿಮ್ಮ ವಾಹನದ ಫಾಸ್ಟ್ಯಾಗ್ ಅವಧಿ 5 ವರ್ಷ. ಬಳಿಕ ಈ ಫಾಸ್ಟ್ಯಾಗ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಪ್ರಮುಖವಾಗಿ ಕೆವೈಸಿ ಮಾಡಿಸಿಕೊಳ್ಳಬೇಕು. ಇನ್ನು ವಾಹನ ಮ್ಯಾಪಿಂಗ್, ವಾಹನದ ಫೋಟೋ, ಮಾಲೀಕ, ಫೋನ್ ನಂಬರ್ ಸೇರಿದಂತೆ ಇತರ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಪ್ರತಿ 5 ವರ್ಷಕ್ಕೆ ಫಾಸ್ಟ್ಯಾಗ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಇಲ್ಲದಿದ್ದರೂ ಫಾಸ್ಟ್ಯಾಗ್ ಡಿ ಆ್ಯಕ್ಟೀವೇಟ್ ಆಗಲಿದೆ. ಹೀಗಾದಲ್ಲಿ ಟೋಲ್ ಪ್ಲಾಜಾದಲ್ಲಿ ನಿಮ್ಮ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ.