ಬೆಂಗಳೂರು (ಜುಲೈ 7): ಕಾಂಗ್ರೆಸ್ಸಿನತ್ತ ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯಲು ರಾಷ್ಟ್ರೀಯ ಸಲತಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದರ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಇದು ಎಂದು ಬಿಜೆಪಿ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ, ಒಬಿಸಿ ಸಲಹಾ ಮಂಡಳಿಗೆ ನಾನು ಮುಖ್ಯಸ್ಥ ಅಲ್ಲ, ನಾನೊಬ್ಬ ಸದಸ್ಯ. ಅದರ ನೇತೃತ್ವವನ್ನು ಬೇರೊಬ್ಬರು ಹೊತ್ತಿದ್ದಾರೆ. ನಾನು ಆತಿಥ್ಯ ಮಾತ್ರ ವಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
08:46 PM (IST) Jul 07
Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಬಳಗ ಅವರನ್ನು ಜೀವಂತ ದೇವರಂತೆ ಪೂಜಿಸುತ್ತಿದೆ. ಆಷಾಢ ಏಕಾದಶಿ ದಿನದಂದು ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರು ಪುನೀತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
08:04 PM (IST) Jul 07
ದೇವಸ್ಥಾನದ ಆವರಣದಿಂದ 2 ರೂಪಾಯಿ ಸಿಕ್ಕಿತ್ತು. ಇದು ಯಾರ ಹಣ ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ತಾನೆ ಇಟ್ಟುಕೊಂಡ ಭಕ್ತ, ಇದೀಗ 55 ವರ್ಷಗಳ ಬಳಿಕ 10,000 ರೂಪಾಯಿ ಹಣ ಹುಂಡಿಗೆ ಹಾಕಿ 5 ದಶಕಗಳ ಹಿಂದಿನ ಘಟನೆ ಹಾಗೂ ಇದೀಗ ಹುಂಡಿಗೆ ಹಾಕಿದ ಹಣದದ ಕಾರಣ ಬಹಿರಂಗಪಡಿಸಿದ್ದಾನೆ.
07:58 PM (IST) Jul 07
07:41 PM (IST) Jul 07
ಹಗಲಿರುಳೂ ಓದಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಕಣ್ಣೆತ್ತಿ ನೋಡದ ಅದೇ ಜನ ಇಂದು ಅರೆಬರೆ ಡ್ರೆಸ್ನ ರೀಲ್ಸ್ಗೆ ಫಿದಾ ಆಗಿ ಫಾಲೋವರ್ಸ್ ಆಗಿದ್ದಾರೆ. ಯುವತಿಯ ಇಂಟರೆಸ್ಟಿಂಗ್ ಕಥೆ ಕೇಳಿ!
07:38 PM (IST) Jul 07
ಕಾರಿನ ನಂಬರ್ ಪ್ಲೇಟ್ ಮೇಲೆ ರಿಜಿಸ್ಟ್ರೇಶನ್ ನಂಬರ್ ಬಿಟ್ಟು ಇನ್ನೇನು ಬರೆಯುವಂತಿಲ್ಲ. ಆದರೆ ಕೆಲವರು ಈ ನಿಯಮ ಉಲ್ಲಂಘಿಸುತ್ತಾರೆ.ಬೆಂಗಳೂರಿನಲ್ಲಿ ಹ್ಯುಂಡೈ ಕ್ರೆಟಾ ಮಾಲೀಕ ನಂಬರ್ ಬದಲು ಮಿಸ್ಟರ್ ಬಾಸ್ ಎಂದು ಹಾಕಿದ್ದಾನೆ. ಬೆಂಗಳೂರು ಪೊಲೀಸರು ಮಾಲೀಕನಿಗೆ ಸರ್ಪ್ರೈಸ್ ನೀಡಿದ್ದಾರೆ.
07:35 PM (IST) Jul 07
ರವೀಂದ್ರ ಜಡೇಜಾ ಅವರ ಥ್ರೋಬ್ಯಾಕ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರ ಮತ್ತೊಂದು ಮುಖವನ್ನು ಬಹಿರಂಗಪಡಿಸಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನನ್ನೂ ಅನುಕರಿಸುವ ಕೊಹ್ಲಿ, ಮೈದಾನದಲ್ಲೂ ವಾತಾವರಣ ಹೇಗೆ ಇಡುತ್ತಿದ್ದರು ಎಂದು ಜಡೇಜಾ ಹೇಳಿದ್ದಾರೆ.
07:19 PM (IST) Jul 07
07:05 PM (IST) Jul 07
ಭಾರತದಲ್ಲಿ ಕಟ್ಟುವ ತೆರಿಗೆ ಹಾಗೂ ಸಿಗುವ ಸೌಲಭ್ಯದ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಇದೀಗ ವೈರಲ್ ಪೋಸ್ಟ್ ಭಾರತದ ನಾರ್ಡಿಕ್ ಕಂಟ್ರಿ ನಡುವಿನ ಚರ್ಚೆ ಹುಟ್ಟು ಹಾಕಿದೆ. ಏನಿದು ಹೊಸ ಚರ್ಚೆ
07:02 PM (IST) Jul 07
ಅವಿವಾಹಿತೆಯಾಗಿರೋ ನಟಿ ಭಾವನಾ ಪ್ರೆಗ್ನೆನ್ಸಿ ವಿಷ್ಯ ಕೇಳಿ ಸಿಎಂ ಸಿದ್ದರಾಮಯ್ಯ ಶಾಕ್ ಆದರಂತೆ. ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ..
06:40 PM (IST) Jul 07
ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಎದೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಸಿಂಧನೂರಿಗೆ ಹೋಗುವಂತೆ ನರ್ಸ್ ತಿಳಿಸಿದ್ದಾರೆ. ಸಿಂಧನೂರಿಗೆ ಹೋಗುವ ದಾರಿ ಮಧ್ಯೆ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
06:31 PM (IST) Jul 07
ಬೆಂಗಳೂರಿನಲ್ಲಿ ಈಚೆಗೆ ನಡೆದ ಸ್ಲೀಪಿಂಗ್ ಚಾಲೆಂಜ್ನಲ್ಲಿ ಭಾಗವಹಿಸಿ ಪುಣೆಯ ಯುವತಿ 9.1 ಲಕ್ಷ ರೂಪಾಯಿ ಗೆದ್ದಿದ್ದಾರೆ. ಏನಿದು ಚಾಲೆಂಜ್? ನೀವೂ ಗಳುಹಿಸಬಹುದು ಈ ಮೊತ್ತ!
06:17 PM (IST) Jul 07
ಬಿಡುಗಡೆಯಾದ ಮೊದಲ ದಿನದಲ್ಲೇ 10,000 ಕ್ಕೂ ಹೆಚ್ಚು ಬುಕಿಂಗ್‌ಗಳೊಂದಿಗೆ, ಟಾಟಾ ಹ್ಯಾರಿಯರ್ EV ದಾಖಲೆ ಬರೆದಿದೆ. ಈ ವಿಭಾಗದಲ್ಲಿ ಇದು ಎರಡನೇ ಅತ್ಯುತ್ತಮ ಬುಕಿಂಗ್. ಟಾಟಾ ಹ್ಯಾರಿಯರ್ ಈ ಮಟ್ಟಿಗೆ ಬುಕಿಂಗ್ ಪಡೆದುಕೊಳ್ಳಲು ಇದರ ಬೆಲೆ, ಮೈಲೇಜ್ ಹಾಗೂ ಮತ್ತೊಂದು ಕಾರಣವಿದೆ.
05:59 PM (IST) Jul 07
05:51 PM (IST) Jul 07
ಭಾರತದ ಅತಿ ಸುರಕ್ಷಿತ ಮತ್ತು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಟಾಟಾ ಪಂಚ್ 2025 ಕಾರು ಕೇವಲ ಮಾಸಿಕ ಕಂತು 7200 ರೂಪಾಯಿಗೆ ಲಭ್ಯವಿದೆ. ಕಾರಿನ ಇಎಂಐ ಆಯ್ಕೆ, ಡೌನ್‌ಪೇಮೆಂಟ್ ಕುರಿತ ಡಿಟೇಲ್ಸ್ ಇಲ್ಲಿದೆ.
05:41 PM (IST) Jul 07
05:38 PM (IST) Jul 07
ಮಧುಮೇಹ ಎನ್ನುವುದು ಮಾಮೂಲಾಗಿರುವ ಈ ಕಾಲಘಟ್ಟದಲ್ಲಿ ಊಟದ ಬಳಿಕ ಎರಡೇ ಎರಡು ನಿಮಿಷ ಸಮಯ ಮೀಸಲಿಟ್ಟು ಹೀಗೆ ಮಾಡಿದರೆ, ಶುಗರ್ ಲೆವೆಲ್ ಕಂಟ್ರೋಲ್ಗೆ ತರಬಹುದು ಎಂದಿದೆ ಅಧ್ಯಯನ, ಏನಿದು?
05:28 PM (IST) Jul 07
ಕುಡಿದ ನಶೆಯಲ್ಲಿ ಎಂಎನ್ಎಸ್ ನಾಯಕನ ಪುತ್ರ ಪುಂಡಾಟಿಕೆ ನಡೆಸಿದ್ದಾನೆ. ಮಹಿಳೆ ಕಾರಿಗೆ ಡಿಕ್ಕಿಯಾಗಿ ಬಳಿಕ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈತನ ವಿಡಿಯೋವನ್ನು ಮಹಿಳೆ ಸೆರೆ ಹಿಡಿದಿದ್ದು. ಇದೀಗ ಪ್ರಕರಣ ದಾಖಲಾಗಿದೆ.
04:48 PM (IST) Jul 07
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಉಂಟಾದ ದುರಂತದಲ್ಲಿ 11 ತಿಂಗಳ ಮಗು ಪವಾಡಸದೃಶವಾಗಿ ಬದುಕುಳಿದಿದೆ. ಮಗುವಿನ ಕುಟುಂಬದವರೆಲ್ಲರೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
04:44 PM (IST) Jul 07
04:27 PM (IST) Jul 07
ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋ, ಫೋಟೋ, ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಾರಿ ಆನಂದ್ ಮಹೀಂದ್ರ ಒಂದು ಗ್ರಾಮದ ವಿಡಿಯೋ ಹಂಚಿಕೊಂಡು, ಇಲ್ಲಿಗೆ ಭೇಟಿ ನೀಡಬೇಕು ಎಂದಿದ್ದಾರೆ. ಆನಂದ್ ಮಹೀಂದ್ರ ಹೇಳಿದ ಈ ಗ್ರಾಮ ನಿಜಕ್ಕೂ ಭೂಲೋಕದ ಸ್ವರ್ಗ.
04:10 PM (IST) Jul 07
ಅತ್ಯಂತ ಸಲೀಸಾಗಿ ತಿನ್ನಬಹುದಾದ ಹಣ್ಣುಗಳನ್ನು ಒಂದು ಬಾಳೆಹಣ್ಣು. ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಹೇಗೆ ತಿನ್ನಬೇಕು ಎನ್ನುವುದನ್ನು ಕಲಿಸಿದ್ದಾರೆ ನೋಡಿ ಈ ಯುಟ್ಯೂಬರ್. ವಿಡಿಯೋ ವೈರಲ್ ಆಗಿದೆ.
03:37 PM (IST) Jul 07
03:34 PM (IST) Jul 07
03:31 PM (IST) Jul 07
ಕೇರಳದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಜಿ.ಎಸ್. ರೋಶ್ನಿ ಎಂಬುವವರು ಈ ಸಾಹಸ ಮೆರೆದಿದ್ದಾರೆ.
03:16 PM (IST) Jul 07
03:09 PM (IST) Jul 07
ಡಬ್ಲ್ಯುಡಬ್ಲ್ಯುಇ ತಾರೆ ಅಂಡರ್‌ಟೇಕರ್ ಅವರನ್ನು ಅನುಕರಿಸುವ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಡರ್‌ಟೇಕರ್ ಸ್ವತಃ ಈ ವಿಡಿಯೋವನ್ನು ಮೆಚ್ಚಿಕೊಂಡು ಬಾಲಕನಿಗೆ ಶುಭ ಹಾರೈಸಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
03:06 PM (IST) Jul 07
ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು, ಮತ್ತೆ ತಾಯಿ ಆನೆ ಜೊತೆ ಸೇರಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ ಕೆಲ ದಿನಗಳಿಂದ ದೂರವಾಗಿದ್ದ ಮರಿ ಆನೆಯನ್ನು ಸ್ವೀಕರಿಸಲು ತಾಯಿ ಆನೆ ನಿರಾಕರಿಸಿದೆ. ಆದರೆ ಅರಣ್ಯಾಧಿಕಾರಿ ಪ್ರಯತ್ನಕ್ಕೆ ಕೊನೆಗ ಫಲ ಸಿಕ್ಕಿದ್ದು ಹೇಗೆ?
02:40 PM (IST) Jul 07
ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
02:37 PM (IST) Jul 07
02:35 PM (IST) Jul 07
02:33 PM (IST) Jul 07
ಜುಲೈ 7 ವಿಶ್ವ ಚಾಕೋಲೆಟ್ ದಿನವಾಗಿದ್ದು, ಕಿರುತೆರೆ ಕಲಾವಿದೆಯರು ವೀಕ್ಷಕರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಹೇಗೆ ಇದನ್ನು ತಯಾರಿಸಬಹುದು ಎನ್ನುವ ಎರಡು ಸುಲಭದ ವಿಧಾನವನ್ನು ಇಲ್ಲಿ ನೀಡಲಾಗಿದೆ.
02:23 PM (IST) Jul 07
ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದಕ್ಕಿಂತ ಮಿಗಿಲಾಗಿ ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದು ಈ ಕ್ಷೇತ್ರದ ಜನತೆಗೆ ನನ್ನ ಸೇವೆ ಸದಾ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
02:18 PM (IST) Jul 07
02:08 PM (IST) Jul 07
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ದೇವಸ್ಥಾನಗಳಿಗಿಂತ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಉದ್ಘಾಟಿಸಿದ ಅವರು, ದೇವಸ್ಥಾನಗಳಿಗೆ ಹಣ ನೀಡುವ ಬದಲು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.
01:46 PM (IST) Jul 07
ಭಾರತೀಯ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೊಗಳನ್ನು ನಾವು ಕಾಣ್ತೇವೆ. ಮಹಾತ್ಮರ ಸಾಲಿನಲ್ಲಿ ಬರೀ ಗಾಂಧಿ ಮಾತ್ರ ಇಲ್ಲ ಎನ್ನುವವರಿಗೆ ಆರ್ ಬಿಐ ಸ್ವಷ್ಟನೆ ನೀಡಿದೆ. ಯಾಕೆ ಗಾಂಧಿ ಮಾತ್ರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದೆ.
01:44 PM (IST) Jul 07
ಬೆಂಗಳೂರಲ್ಲಿ ಮೊದಲು ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದ್ದರೆ, ಇದೀಗ ಯೂನಿಯನ್ ಓಲಾ ಉಬರ್ ಸೇರಿದಂತೆ ಟ್ಯಾಕ್ಸಿ ಎಗ್ರೇಟರ್‌ಗಳನ್ನೇ ಬ್ಯಾನ್ ಮಾಡಲು ಮುಂದಾಗಿದೆ ಎಂದು ಪ್ರಯಾಣಿಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.ಅಷ್ಟಕ್ಕೂ ಈ ಪ್ರಯಾಣಿಕ ಆಕ್ರೋಶ ಯಾಕೆ?
01:23 PM (IST) Jul 07
ಬೆಂಗಳೂರಿನಲ್ಲಿ ಮಾಜಿ ಪ್ರೇಮಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಯುವತಿಯೇ ಸೂತ್ರಧಾರಿಯಾಗಿ 6 ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದರ್ಶನ್-ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸುವ ಈ ಘಟನೆ ನಡೆದಿದೆ.
01:10 PM (IST) Jul 07
ತುಳಸಿ ಗಿಡ ಪಾಟ್ನಲ್ಲಿ ಚೆನ್ನಾಗಿ ಬೆಳೆಯುತ್ತಿಲ್ಲ ಎನ್ನುವ ಚಿಂತೆ ಬಿಡಿ, ಈ ರೀತಿ ಅಕ್ಕಿ ತೊಳೆದ ನೀರನ್ನು ಪ್ರತಿದಿನ ಉಪಯೋಗಿಸಿ ನೋಡಿ. ಅಕ್ಕಿ ನೀರಿನ ಮ್ಯಾಜಿಕ್ ಏನು?
12:53 PM (IST) Jul 07
ಮಾರುತಿ ಸುಜುಕಿ ಕಂಪನಿಯ ಐದೂವರೆ ಲಕ್ಷ ರೂಪಾಯಿ ಮೌಲ್ಯದ ವ್ಯಾಗನ್ ಆರ್ ಕಾರು ಇದೀಗ ಎಲ್ಲರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ, ಬೆಲೆಯೂ ಕಡಿಮೆ, ಉತ್ತಮ ಸ್ಥಳಾವಕಾಶ , ಅಡ್ವಾನ್ಸ್ ಫೀಚರ್ಸ್ ಸೇರಿದಂತೆ ಎಲ್ಲಾ ಸೌಲಭ್ಯ ಇದರಲ್ಲಿದೆ. ಇದೀಗ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.
12:50 PM (IST) Jul 07