ಬೆಂಗಳೂರು : ಟನ್ ಕಬ್ಬಿಗೆ 3500 ರು. ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಗ್ಗಂಟಿಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ‘ಕಬ್ಬು ಎಫ್ಆರ್‌ಪಿ (ನ್ಯಾಯ ಮತ್ತು ಮೌಲ್ಯವರ್ಧಿತ ಬೆಲೆ) ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

10:33 PM (IST) Nov 07
ತೆಲುಗು ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿರುವ ನಟಿ ವಿಷ್ಣುಪ್ರಿಯ, ಅದೊಂದು ನರಕದ ಅನುಭವ ಎಂದಿದ್ದಾರೆ. ನಿದ್ದೆ, ಊಟ, ಕಾಫಿ ಇಲ್ಲದೆ ಹಿಂಸೆ ಅನುಭವಿಸಿದ್ದಾಗಿ ಹೇಳಿದ್ದು, ಹೊಸ ಮನೆ ಖರೀದಿಸುವ ಆಸೆ ಈಡೇರದೇ, 'ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು' ಎಂದಿದ್ದಾರೆ.
10:18 PM (IST) Nov 07
10:15 PM (IST) Nov 07
ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ ಆ*ಹತ್ಯೆಗೆ ಮಾಡಿಕೊಂಡ ಯುವತಿ.
09:50 PM (IST) Nov 07
ಸಿಎಸ್‌ಆರ್ ಅನುದಾನದಿಂದ ಶಿಕ್ಷಕರ ವೇತನ ನೀಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
09:48 PM (IST) Nov 07
09:42 PM (IST) Nov 07
ರಾಮ್ ಚರಣ್ ಅವರ ಪೆದ್ದಿ ಸಿನಿಮಾದಿಂದ 'ಚಿಕಿರಿ' ಹಾಡು ರಿಲೀಸ್ ಆಗಿದೆ. ಪ್ರೋಮೋದಲ್ಲಿ ರಾಮ್ ಚರಣ್ ತಮ್ಮ ಡ್ಯಾನ್ಸ್‌ನಿಂದ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ್ದರು. ಇದೀಗ ಪೂರ್ತಿ ಹಾಡು ಬಂದಿದೆ. ಹಾಡು ಹೇಗಿದೆ ಅಂತ ಈ ಸುದ್ದಿಯಲ್ಲಿ ನೋಡೋಣ.
09:12 PM (IST) Nov 07
ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಅವರು ಬಹಿರಂಗ ಪಡಿಸಿದ್ದು, ಮತಗಳ್ಳತನ ಆಗಿರುವುದು ನಿಜ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.
09:06 PM (IST) Nov 07
ಬಿಜೆಪಿಯವರಿಗೆ ಮತಗಳವು ಹೊಸದಲ್ಲ. 2014ರಿಂದಲೇ ಮತಗಳವು ಪ್ರಾರಂಭವಾಗಿದೆ, ನಂತರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯವರು ಮತಗಳವು ಕುತಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
08:13 PM (IST) Nov 07
ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಕೇಳುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ ವಸಂತ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
07:51 PM (IST) Nov 07
ಕನ್ನಡದ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ನಟಿ ನಂದಿತಾ ಶ್ವೇತಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಬಾಲ್ಯದ ಆಸೆ ಮತ್ತು ಕೈತಪ್ಪಿ ಹೋದ ಹಿಟ್ ಸಿನಿಮಾಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
07:42 PM (IST) Nov 07
‘ಪದ್ಮಾಪತಿ’ ಧಾರಾವಾಹಿಯಲ್ಲಿ ತುಳಸಿ ಎನ್ನುವ ಮುಗ್ಧೆ, ಸಂಪ್ರದಾಯಸ್ಥೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪ್ತಿ ಮನ್ನೆ ಅವರು ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ತವರೂರಿನಲ್ಲಿ ಮದುವೆಯಾಗಿದ್ದಾರೆ.
07:12 PM (IST) Nov 07
ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
06:58 PM (IST) Nov 07
ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನಪ್ಪಿದ ಘಟನೆ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.
06:47 PM (IST) Nov 07
ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೈಬಿಟ್ಟಿದ್ದಾರೆ. ಸಿಂಹಾದ್ರಿ, ಕಿಕ್‌ನಂತಹ ಚಿತ್ರಗಳು ಆ ಪಟ್ಟಿಯಲ್ಲಿವೆ. ಆದರೆ ಈ ಒಂದು ಚಿತ್ರವನ್ನು ತಿರಸ್ಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.
06:17 PM (IST) Nov 07
ಕಬ್ಬಿಗೆ 3500 ರೂಪಾಯಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್ 1 ಟನ್ ಕಬ್ಬಿಗೆ 3300 ನಿಗದಿ ಮಾಡಲಾಗಿದೆ.
06:04 PM (IST) Nov 07
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು.
05:44 PM (IST) Nov 07
ಮೇರುನಟ ದಿ. ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ ಈ ಬಾರಿಯ ಚಾಲಕರ ದಿನಾಚರಣೆಗೆ 'ಆಟೋ ರಾಯಭಾರಿ'ಯಾಗಿ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.
05:18 PM (IST) Nov 07
ರವಿ ಗೌಡ ನಟನೆ, ನಿರ್ದೇಶನ, ನಿರ್ಮಾಣದ ರೊಮ್ಯಾಂಟಿಕ್ ಥ್ರಿಲ್ಲರ್ ಐ ಆ್ಯಮ್ ಗಾಡ್. ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ ಐ ಆ್ಯಮ್ ಗಾಡ್ ಎಂಬ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.
05:00 PM (IST) Nov 07
‘45’ ಚಿತ್ರ ಡಿ.25ಕ್ಕೆ ತೆರೆ ಕಾಣಲಿದೆ. ಚಿತ್ರದ ಮೇಕಿಂಗ್, ಬಜೆಟ್, ತೆಗೆದುಕೊಳ್ಳುತ್ತಿರುವ ಸಮಯ ನೋಡಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿದ್ದಾರೆ.
04:47 PM (IST) Nov 07
Vegetarians Alert: ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಕೀಟಗಳು ಇರೋದು ಸಾಮಾನ್ಯ.. ಎಷ್ಟೊಂದು ಕೀಟಗಳು ನಮ್ಮ ಹೊಟ್ಟೆಯನ್ನು ಸೇರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲ ಅಂದ್ರೆ ಇದನ್ನು ನೀವು ಓದಲೇಬೇಕು. ಇದು ನಿಮಗೆ ಶಾಕಿಂಗ್ ಅನಿಸಬಹುದು. ಆದರೆ ಇದು ಸತ್ಯವಾದ ವಿಷಯ.
04:42 PM (IST) Nov 07
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಆಟಕ್ಕೆ ತಕ್ಕಂತೆ ಮಾತನಾಡುತ್ತಾರೆ, ಪಾಯಿಂಟ್ಸ್ ಹೇಳಿ ಮಾತಾಡ್ತಾರೆ. ಈಗ ಇವರ ಭೂಮಿ ತೂಕದ ತಾಳ್ಮೆ, ಪ್ರೌಢಿಮೆಯು ಕನ್ನಡಿಗರ ಮನಸ್ಸನ್ನು ಗೆದ್ದಿದೆ.
03:50 PM (IST) Nov 07
Young businessman death: ಪುತ್ತೂರಿನ ನೆಲ್ಯಾಡಿ ಮೂಲದ ಯುವ ಹೊಟೇಲ್ ಉದ್ಯಮಿ ಅಭಿಷೇಕ್ ಆಳ್ವ ಅವರು ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆಯಿಂದ ಶಾಂಭವಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.
03:20 PM (IST) Nov 07
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರದ ಕಳಪೆ ಯಾರು? ಗಿಲ್ಲಿ ನಟ ಯಾರು? ಎಂಬ ಪ್ರಶ್ನೆ ಇತ್ತು. ಇದೇ ವೇಳೆ ಧ್ರುವಂತ್ ಅವರು ಕಾವ್ಯ ಶೈವ, ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, ದೊಡ್ಡ ಜಗಳ ಆಗಿದೆ.
02:42 PM (IST) Nov 07
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅರಣ್ಯದಂಚಿನಲ್ಲಿ ಹುಲಿ ದಾಳಿಯಿಂದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ, ಸಚಿವ ಈಶ್ವರ ಖಂಡ್ರೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಹಾಗೂ ಚಾರಣವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
02:20 PM (IST) Nov 07
ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿಷ್ಟು ಸಮಯ ಮಾತನಾಡಿದ್ದಾರೆ, ಕೈಯಾರೆ ಊಟ ಬಡಿಸಿದ್ದಾರೆ. ಈ ಸಂವಾದದ ಪ್ರಶ್ನೆಗಳು, ಮೋದಿ ಅವರ ಉತ್ತರಗಳ ಬಗ್ಗೆ ಅವಿನಾಶ್ ನೀರಹಳ್ಳಿ ಅವರು ಬರೆದ ಬರಹವೊಂದು ವೈರಲ್ ಆಗ್ತಿದೆ.
01:45 PM (IST) Nov 07
01:44 PM (IST) Nov 07
Celebrity Divorce: ಸೂಪರ್ ಹಿಟ್ ಧಾರಾವಾಹಿಯಲ್ಲಿ ಅತ್ತಿಗೆ-ಮೈದುನ ಪಾತ್ರದಲ್ಲಿ ನಟಿಸಿದ ಕಲಾವಿದರು ರಿಯಲ್ ಲೈಫ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು, ಅಂದು ಹಾಕಿದ ಶಾಪದ ಫಲವೋ ಏನೋ ಈ ಜೋಡಿ ಡಿವೋರ್ಸ್ ಪಡೆಯುತ್ತಿದೆ. ಹಾಗಾದರೆ ಯಾರದು?
01:12 PM (IST) Nov 07
12:17 PM (IST) Nov 07
ಬಿಗ್‌ಬಾಸ್ ಮನೆಯಲ್ಲಿ ತನ್ನ ತುಳು-ಹಿಂದಿ ಮಿಶ್ರಿತ ಕನ್ನಡದಿಂದ ಗಮನ ಸೆಳೆಯುತ್ತಿರುವ ರಕ್ಷಿತಾ ಶೆಟ್ಟಿ, ಇದೀಗ ಅಡುಗೆ ಮನೆಯಲ್ಲಿ ಈರುಳ್ಳಿಗಾಗಿ ಹಾಡು ಹಾಡಿದ್ದಾರೆ. 'ನೀರುಳ್ಳಿ, ನೀರುಳ್ಳಿ' ಎಂದು ಹಾಡುವ ಮೂಲಕ ಅವರು ಮನೆಯವರನ್ನು ರಂಜಿಸಿದ್ದಾರೆ.
11:34 AM (IST) Nov 07
Actress Katrina Kaif Son Photo: ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರಿಗೆ ಬೆಳ್ಳಂ ಬೆಳಗ್ಗೆ ಗುಡ್‌ನ್ಯೂಸ್ ಸಿಕ್ಕಿದೆ. ಇವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅನೇಕರು ಈ ಸ್ಟಾರ್ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.
10:41 AM (IST) Nov 07
Shri Gandhada Gudi serial Today Episode: ‘ಶ್ರೀಗಂಧದ ಗುಡಿ’ ಧಾರಾವಾಹಿಯಲ್ಲಿ ಅಣ್ಣನಿಗೆ ಮದುವೆ ಮಾಡಬೇಕು ಎಂದು ಹರಿಶ್ಚಂದ್ರ ಒದ್ದಾಡುತ್ತಿದ್ದಾನೆ. ಹೀಗಿರುವಾಗ ಇನ್‌ಸ್ಪೆಕ್ಟರ್ ಕಾಳೆಯಿಂದ ಸೀರಿಯಲ್‌ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ಹಾಗಾದರೆ ಏನಾಗುವುದು?
10:13 AM (IST) Nov 07
Bigg Boss Kannada 12 ವೀಕೆಂಡ್ ಎಪಿಸೋಡ್‌ನಲ್ಲಿ ಕೆಲವು ವಿಷಯಗಳ ಬಗ್ಗೆ ಕ್ಲಾರಿಟಿ ಸಿಗುವುದು. ಕೆಲ ಗೊಂದಲಗಳು, ಸಮಸ್ಯೆಗಳನ್ನು ಕಿಚ್ಚ ಸುದೀಪ್ ಅವರು ಅಡ್ರೆಸ್ ಮಾಡಿ ಮಾತನಾಡುತ್ತಾರೆ. ಆ ವೇಳೆ ಅಶ್ವಿನಿ ಗೌಡ ಮ್ಯಾನಿಪ್ಯುಲೇಶನ್ ಮಾಡೋದರ ಬಗ್ಗೆ ಸ್ಪಂದನಾ ಸೋಮಣ್ಣ, ಧನುಷ್ ಗೌಡ ಚರ್ಚೆ ಮಾಡಿದ್ದಾರೆ.
09:58 AM (IST) Nov 07
ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.
09:33 AM (IST) Nov 07
ಗಿಲ್ಲಿ ನಟ ತಮ್ಮ ಅಣಕು ಮಾತುಗಳಿಂದ ನೋವುಂಟು ಮಾಡುತ್ತಿದ್ದಾರೆಂದು ಅಶ್ವಿನಿ ಗೌಡ, ರಿಷಾ ಮತ್ತು ಧ್ರುವಂತ್ ಆರೋಪಿಸಿದ್ದಾರೆ. ಆದರೆ, ತಮ್ಮ ನೇರ ನುಡಿಗೆ ಸ್ಪಷ್ಟನೆ ನೀಡಿರುವ ಗಿಲ್ಲಿ ನಟ, ಅವರ ಆರೋಪಗಳಿಗೆ ತಿರುಗೇಟು ನೀಡಿದ್ದು, ವೀಕೆಂಡ್ ಸಂಚಿಕೆ ಕುತೂಹಲ ಹೆಚ್ಚಿದೆ.
09:04 AM (IST) Nov 07
ಭಾರತದಲ್ಲಿ ಸಾಂಪ್ರದಾಯಿಕ ಆಭರಣಗಳು ಮತ್ತೆ ಜನಪ್ರಿಯವಾಗುತ್ತಿದ್ದು, ಮಹಿಳೆಯರು ಅದರ ಕರಕುಶಲತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮೆಚ್ಚುತ್ತಿದ್ದಾರೆ. 5,000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಆಭರಣಗಳು, ಮೊಘಲ್ ಮತ್ತು ಬ್ರಿಟಿಷ್ ಯುಗಗಳ ಪ್ರಭಾವವನ್ನು ಒಳಗೊಂಡಿವೆ.
08:27 AM (IST) Nov 07
Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ದಿನವನ್ನು ಇನ್ನಷ್ಟು ವಿಶೇಷ ಮಾಡೋಣ ಎಂದು ಮಲ್ಲಿ, ಲಕ್ಷ್ಮೀಕಾಂತ್, ಆನಂದ್ ಸೇರಿಕೊಂಡು ಪ್ಲ್ಯಾನ್ ಮಾಡಿದ್ದರು. ಅದೀಗ ಫಲ ಕೊಡುವಂತೆ ಕಾಣುತ್ತಿದೆ.
08:21 AM (IST) Nov 07
08:02 AM (IST) Nov 07
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯಂತೆಯೇ ಗಡಿನಾಡು ಬೆಳಗಾವಿಯಲ್ಲಿ ಅಪ್ಪಟ್ಟ ಮರಾಠಿ ಕುಟುಂಬದ ಯುವಕನೊಬ್ಬ ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ವೀರಕನ್ನಡಿಗನಾಗಿ ಹೊರಹೊಮ್ಮಿದ್ದಾನೆ.
08:01 AM (IST) Nov 07
Karna Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಗೆ ತಾನು ಪ್ರಗ್ನೆಂಟ್ ಎನ್ನೋದು ಗೊತ್ತಾಗಿದೆ. ತೇಜಸ್ ಕೂಡ ಈಗ ಕಾಣಿಸುತ್ತಿಲ್ಲ, ಈಗ ಹೊಟ್ಟೆಯಲ್ಲಿರುವ ಮಗುಗೆ ತಂದೆ ಪ್ರೀತಿ ಕೂಡ ಸಿಗೋದಿಲ್ಲ ಎಂದು ಅವಳು ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ಇದನ್ನು ಕರ್ಣ ತಡೆಯುತ್ತಾನಾ?
07:47 AM (IST) Nov 07
ಕೆಲ ತಿಂಗಳಿಂದ ನಗರದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿ ಭೀತಿ ಸೃಷ್ಟಿಸಿದ್ದ ಮಹಿಳಾ ‘ಆತಂಕವಾದಿ’ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾಳೆ. ತಮಿಳುನಾಡು ಮೂಲದ ಸಾಫ್ಟ್‌ವೇರ್ ಕಂಪನಿಯ ಮಹಿಳಾ ಉದ್ಯೋಗಿ ರೆನೆ ಜೋಶಿಲ್ದಾ ಬಂಧಿತ ಆರೋಪಿ.