ಬೆಂಗಳೂರು (ಮಾ.6):ಪರಿಶಿಷ್ಟ ಜಾತಿಗೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ದಲಿತ ಸಚಿವರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು, ಮುಂದೆ ಇದೇ ವಿಷಯ ಬಗ್ಗೆ ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಒಳ ಮೀಸಲಾತಿ ಜಾರಿ ಕುರಿತು ದಲಿತ ಗುಂಪುಗಳಲ್ಲಿ ಉಂಟಾಗಿರುವ ತಿಕ್ಕಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಪುಟ ಸಭೆಯಲ್ಲಿ ದಲಿತ ಸಮುದಾಯದ ಎಡಗೈ, ಬಲಗೈ, ಸ್ಪಶ್ಯ ವರ್ಗಗಳ ಸಚಿವರಿಂದ ಈ ವಿಚಾರವಾಗಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ರೋಸ್ಟರ್ ಬಿಂದು ಮರುನಿಗದಿ ಮಾಡದೆ ಒಳಮೀಸಲು ಜಾರಿ ಮಾಡಿದರೆ ಬಲಗೈಗೆ ಅನ್ಯಾಯ ಎಂದು ಆಕ್ಷೇಪ ಎತ್ತಲಾಗಿದೆ.
10:48 PM (IST) Mar 06
ಕೆಸಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು 3ನೇ ಹಂತದ ಸಂಸ್ಕರಣೆ ಯೋಜನೆ ಜಾರಿ ಮಾಡದೇ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
10:28 PM (IST) Mar 06
ಮಾ.11ರಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಮುಷ್ಕರದಿಂದ ಜನರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
09:50 PM (IST) Mar 06
09:36 PM (IST) Mar 06
Anchor Niranjan Deshapande: ನಿರೂಪಕ ನಿರಂಜನ್ ದೇಶಪಾಂಡೆ ಅವರು ಈಗಾಗಲೇ ಬೆಟ್ಟ ಗುಡ್ಡ ರೆಸಾರ್ಟ್ ನಡೆಸುತ್ತಿದ್ದಾರೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ನಿರೂಪಣೆ ಜೊತೆಗೆ ಉದ್ಯಮಿಯಾಗಲು ರೆಡಿ ಆಗಿದ್ದಾರೆ.
09:15 PM (IST) Mar 06
09:13 PM (IST) Mar 06
ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹದಿಹರೆಯದ ಹುಡುಗರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ತಿಪ್ಪೇರುದ್ರಸ್ವಾಮಿಯ ಜಾತ್ರೆಗೆ ಭೇಟಿ ನೀಡಿ ವಾಪಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.
09:02 PM (IST) Mar 06
ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? ಈಕೆ ಘಟನೆ ಹೇಳಿದ ಬೆನ್ನಲ್ಲೇ ಮಹಿಳೆ ಆಯ್ಕೆ ಮಾಡಿಕೊಂಡ ಮಾರ್ಗ ಸರಿ ಎಂದು ಹಲವರು ಹೇಳಿದ್ದಾರೆ. ಏನಿದು ಘಟನೆ
09:01 PM (IST) Mar 06
ಸೂರ್ಯ ನಟನೆಯ ಸಿನಿಮಾದಲ್ಲಿ 'ಪ್ರೇಮಲು' ಸಿನಿಮಾ ಮೂಲಕ ಸೌತ್ ಇಂಡಿಯಾದಲ್ಲೇ ಫೇಮಸ್ ಆದ ನಟಿ ಮಮಿತಾ ನಾಯಕಿ ಎಂದಾಗ ರಾಧಿಕಾಗೆ ಅನುಮಾನವಿತ್ತು. ಆದರೆ, ಆಕೆಯ ನಟನೆ ನೋಡಿ ಶಾಕ್ ಆಗಿದ್ದಾಗಿ ಹಿರಿಯ ನಟಿ ಹೇಳಿಕೊಂಡಿದ್ದಾರೆ.
08:32 PM (IST) Mar 06
ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ನಾವು ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
08:30 PM (IST) Mar 06
ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ.
08:24 PM (IST) Mar 06
08:21 PM (IST) Mar 06
ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
08:18 PM (IST) Mar 06
ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಪ್ರಾಣ ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರಿಗೆ ಫೋನ್ ಕರೆ ಹಾಗೂ ಮೆಸೇಜ್ ಮೂಲಕ ಬೆದರಿಸಿದ್ದಾರೆ ಎಂದು ದೂರು ನೀಡಿದ್ದು, ಕೆ.ಆರ್. ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
08:01 PM (IST) Mar 06
ಬೆಂಗಳೂರಿನ 'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ, ಆರ್.ವಿ. ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯಿಂದಾಗಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ. ಈ ಕಾರಣದಿಂದ ಪ್ರಯಾಣಿಕರು ಕೆಲವು ನಿಮಿಷಗಳು ಹೆಚ್ಚುವರಿ ಕಾಯಬೇಕಾಗಬಹುದು.
07:42 PM (IST) Mar 06
07:41 PM (IST) Mar 06
ಸಾಮಾಜಿಕ ನ್ಯಾಯ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಅಥವಾ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪಾಗುತ್ತದೆ. ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
07:32 PM (IST) Mar 06
ಹದಿನಾರು ಬಜೆಟ್‌ಗಳನ್ನು ಮಂಡಿಸಿ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ ಭೂಪರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
07:17 PM (IST) Mar 06
Dandeli news: ದಾಂಡೇಲಿಯಲ್ಲಿ 4 ವರ್ಷದ ಮಗು ನಾಪತ್ತೆಯಾಗಿದೆ ಎಂದು ಪೋಷಕರು ಮತ್ತು ಪೊಲೀಸರು ಸುಮಾರು 5 ಗಂಟೆಗಳ ಕಾಲ ಹುಡುಕಾಡಿದ್ದಾರೆ. ಇಡೀ ಊರೇ ಆತಂಕದಲ್ಲಿದ್ದಾಗ, ಬಾಲಕ ತನ್ನದೇ ಮನೆಯ ಮೆಟ್ಟಿಲಿನ ಹಿಂಭಾಗದಲ್ಲಿ ನಿದ್ದೆ ಮಾಡುತ್ತಿರುವುದು ಕಂಡುಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
07:07 PM (IST) Mar 06
ಮುಖ್ಯಮಂತ್ರಿಗಳ ಡಿನ್ನರ್ ಸಭೆ ವಿಚಾರವಾಗಿ ಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ. ಉಪಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
06:51 PM (IST) Mar 06
06:41 PM (IST) Mar 06
Actress Kasthuri Shankar: ಕರ್ಮ ಎನ್ನೋದನ್ನು ಯಾರನ್ನೂ ಬಿಡೋದಿಲ್ಲ, ಎರಡು ದಿನ ಲೇಟ್ ಆಗಬಹುದು ಎಂದು ಕರ್ಮ ಹೇಗೆ ವರ್ಕ್ ಆಗುತ್ತದೆ ಎಂದು ಕಸ್ತೂರಿ ಶಂಕರ್ ಅವರು ತೆಲುಗು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
06:00 PM (IST) Mar 06
04:53 PM (IST) Mar 06
04:34 PM (IST) Mar 06
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ, ಮುಂದಿನ ಬಜೆಟ್ ಅನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮಂಡಿಸಲಿದ್ದಾರೆ ಎಂದು ಅವರ ಆಪ್ತ ಸಚಿನ್ ಮೀಗಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್, ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರ ಹಂಚಿಕೆ ಒಪ್ಪಂದದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
04:25 PM (IST) Mar 06
04:16 PM (IST) Mar 06
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗವಹಿಸಿದ್ದ ತುಕಾಲಿ ಸ್ಟಾರ್ ಸಂತು ಅವರೀಗ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ್ದ ಬಳಿಕ ಅವರಿಗೆ ವರ್ತೂರು ಸಂತೋಷ್ ಅವರು ಬಂಗಾರದ ಸರ, ಜೋಡೆತ್ತು ಪೆಂಡೆಂಟ್ ಕೊಡಿಸಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
04:02 PM (IST) Mar 06
ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಕುರಿತು ರೂಪಿಸುತ್ತಿರುವ ಡಿಜಿಟಲ್ ನೀತಿಯನ್ನು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸ್ವಾಗತಿಸಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯು ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಈ ಕ್ರಮ ಸಮಯೋಚಿತವಾಗಿದೆ ಎಂದು ಅವರು ಹೇಳಿದ್ದಾರೆ.
04:01 PM (IST) Mar 06
03:55 PM (IST) Mar 06
03:28 PM (IST) Mar 06
ಬೆಂಗಳೂರು ಟ್ರಾಫಿಕ್ ನಿಯಮದಲ್ಲಿ ಭಾರಿ ಬದಲಾವಣೆ, ಅಮೆರಿಕ ರೀತಿ ಬಲಬದಿ ಚಾಲನೆ ಪ್ಲಾನ್, ಬೆಂಗಳೂರು ರಸ್ತೆಯಲ್ಲಿ ಇನ್ನು ಸವಾರಿ ಮಾಡುವಾಗ ರಸ್ತೆಯ ಬಲಬದಿಯಲ್ಲಿ ಸಾಗಬೇಕೋ, ಎಡಬದಿಯಲ್ಲಿರಬೇಕು ಅನ್ನೋ ಕುರಿತು ತಿಳಿದುಕೊಳ್ಳಿ.
03:15 PM (IST) Mar 06
ಚಿಕ್ಕಮಗಳೂರಿನ ವಿದ್ಯಾ ಕಾಫಿ ಕ್ಯೂರಿಂಗ್ ಘಟಕವು ಬೇಜವಾಬ್ದಾರಿಯಿಂದ ಜಮೀನಿಗೆ ಸುರಿದ ಕೆಮಿಕಲ್ ಮಿಶ್ರಿತ ಬಿಸಿ ಬೂದಿಯ ಮೇಲೆ ಕಾಲಿಟ್ಟ ದೇವರಾಜ್ ಮತ್ತು ಈರೇಗೌಡ ಎಂಬ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲುಗಳು ಸಂಪೂರ್ಣ ಸುಟ್ಟುಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
01:52 PM (IST) Mar 06
01:40 PM (IST) Mar 06
Amruthadhaare Serial Episode: ಸ್ಟಾಕ್ ಮಾರ್ಕೆಟ್‌ನಲ್ಲಿ ದೊಡ್ಡ ಯಶಸ್ಸು ಪಡೆದು, ಇಂದು 28000 ಸಾವಿರ ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ನಿಖಿಲ್ ಕಾಮತ್, ನಿತಿನ್ ಕಾಮತ್ ಅವರು ಮೂಲತಃ ಶಿವಮೊಗ್ಗದವರು. ಈಗ ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಕೂಡ ಇದೇ ದಾರಿ ಹಿಡಿದಿದ್ದಾನೆ.
01:00 PM (IST) Mar 06
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯನವರ ಬಜೆಟನ್ನು ಅಭಿವೃದ್ಧಿ ಶೂನ್ಯ ಮತ್ತು ಪ್ರಗತಿ ರಹಿತ ಎಂದು ಟೀಕಿಸಿದ್ದಾರೆ. ಈ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದ್ದು, ನೀರಾವರಿ ಯೋಜನೆಗಳನ್ನು ಕಡೆಗಣಿಸಿದೆ ಒಳಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ ಎಂದು ಆರೋಪಿಸಿದರು.
11:38 AM (IST) Mar 06
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ.
10:37 AM (IST) Mar 06
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌ನತ್ತ ಹಾವೇರಿ ಜಿಲ್ಲೆಯು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಹಿಂದಿನ ಬಜೆಟ್ ನಿರಾಸೆ ಅನುಭವಿಸಿದ್ದ ಜಿಲ್ಲೆಯು, ಈ ಬಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತ್ಯೇಕ ಡಿಸಿಸಿ ಬ್ಯಾಂಕ್, ಕೈಗಾರಿಕೆಗಳ ನೀರಾವರಿ ಯೋಜನೆ ಪ್ರಮುಖ ಬೇಡಿಕೆಗಳ ಈಡೇರುತ್ತಾ?
10:20 AM (IST) Mar 06
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕರಿಗೆ ಔತಣಕೂಟ ಆಯೋಜಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಜೆಟ್ ಕಾರ್ಯಾಗಾರದ ನೆಪದಲ್ಲಿ ಡಿನ್ನರ್ ಪಾರ್ಟಿ ನೀಡಲು ಮುಂದಾಗಿದ್ದಾರೆ. ಡಿಕೆಶಿ ಪಾರ್ಟಿಗೂ ಮುನ್ನವೇ ನಡೆಯಲಿರುವ ಈ ಔತಣಕೂಟವು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ..
10:17 AM (IST) Mar 06
ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚುತ್ತಿರುವ ದುಬಾರಿ ಶೋಕಿಗಳಾದ ವಿದೇಶಿ ಸಂಗೀತ ಸಂಯೋಜನೆ, ಪ್ರೀಮಿಯರ್ ಶೋ ಬಿಲ್ಡಪ್, ಪ್ಯಾನ್-ಇಂಡಿಯಾ ಆಸೆಗಳು ನಿರ್ಮಾಪಕರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಕಥೆ ಹಾಗೂ ಚಿತ್ರಕಥೆಗೆ ಆದ್ಯತೆ ನೀಡದೆ ಮಾಡುವ ಇಂತಹ ಪ್ರಚಾರ ತಂತ್ರಗಳು ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
10:01 AM (IST) Mar 06
ಶಾಸಕರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಳ್ಳಿಹಾಕಿದ್ದಾರೆ. ಸರ್ಕಾರ ಯಾರ ಫೋನ್‌ಗಳನ್ನೂ ಟ್ಯಾಪ್ ಮಾಡುತ್ತಿಲ್ಲ, ದಾಖಲೆ ಇದ್ದರೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ
08:53 AM (IST) Mar 06
ಮಾರ್ಚ್ 6 ರಂದು ಆಚರಿಸಲಾಗುವ ವಿಶ್ವ ದಂತ ವೈದ್ಯರ ದಿನದ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ದಂತ ಚಿಕಿತ್ಸೆಯ ಬಗೆಗಿನ ಭಯವನ್ನು ಹೋಗಲಾಡಿಸಿ, ಆಧುನಿಕ ನೋವುರಹಿತ ಚಿಕಿತ್ಸೆಗಳು ಮತ್ತು ಸೌಂದರ್ಯವರ್ಧಕ ದಂತ ವೈದ್ಯಕೀಯದ ಬಗ್ಗೆ ತಿಳಿಸುತ್ತದೆ. .