Published : Jun 05, 2025, 07:24 AM ISTUpdated : Jun 05, 2025, 11:06 PM IST

Karnataka News Live: ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಕಮೀಷನರ್‌!

ಸಾರಾಂಶ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಹೃದಯಾಘಾತವಾದರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನಿಸುವ ವೇಳೆ ಸಾವಿಗೀಡಾಗಿದ್ದಾರೆ. ಉಳಿದಂತೆ ಇನ್ನೂ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ರಾಜ್ಯದ 45 ವರ್ಷದಲ್ಲೇ ಇದೊಂದು ಭೀಕರ ಕಾಲ್ತುಳಿತವಾಗಿದೆ.

Seemant Kumar Singh

11:06 PM (IST) Jun 05

ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಕಮೀಷನರ್‌!

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತದ ನಂತರ, ಬೆಂಗಳೂರಿನ ಪೊಲೀಸ್‌ ಕಮೀಷನರ್‌ ಬಿ.ದಯಾನಂದ್‌ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ. ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
Read Full Story

10:50 PM (IST) Jun 05

ನಿಮ್ಮ ಐಆರ್‌ಸಿಟಿಸಿ ಅಕೌಂಟ್‌ ಕ್ಲೋಸ್‌ ಆಗಬಹುದು, ವೆರಿಫೈ ಮಾಡೋದನ್ನ ಮರೀಬೇಡಿ!

ಭಾರತೀಯ ರೈಲ್ವೆ ತನ್ನ ಆನ್‌ಲೈನ್ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆಧಾರ್ ಪರಿಶೀಲನೆ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಮೂಲಕ ದುರುಪಯೋಗವನ್ನು ತಡೆಯುವ ಗುರಿ ಹೊಂದಿದೆ.
Read Full Story

10:18 PM (IST) Jun 05

ಬೆಂಗಳೂರು ನಗರ ಉಸ್ತುವಾರಿ, ಗೃಹ ಸಚಿವ, ಡಿಸಿಎಂ ತಲೆದಂಡ ಯಾವಾಗ? ಜನರ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಆರ್‌ಸಿಬಿ ವಿಜಯೋತ್ಸವ ದುರಂತದಲ್ಲಿ 11 ಜನರ ಸಾವಿಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ. ಹೈಕೋರ್ಟ್‌ ತನಿಖೆಗೆ ಆದೇಶಿಸಿದ ಬಳಿಕ ಸರ್ಕಾರವು ತನಿಖೆಗೆ ಆದೇಶಿಸಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 

Read Full Story

09:58 PM (IST) Jun 05

ಚಿರತೆಗಳ ಜೊತೆ ಹೊಂದಾಣಿಕೆ ಅನಿವಾರ್ಯ ಪರಿಸ್ಥಿತಿ - ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ

ಮನುಷ್ಯರು ಚಿರತೆ ಜೊತೆ ಹೊಂದಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಬೀದಿ ನಾಯಿಗಳಿಗಿಂತ ಚಿರತೆಗಳೇ ಹೆಚ್ಚಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

Read Full Story

09:50 PM (IST) Jun 05

ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ - ಸಚಿವ ಕೆ.ಜೆ.ಜಾರ್ಜ್

ಇಂಧನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಲೈನ್‌ ಮೆನ್ ಗಳು ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ವಿದ್ಯುತ್ ಸಮಸ್ಯೆಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.

Read Full Story

09:21 PM (IST) Jun 05

ಕಲ್ಯಾಣಮಂಟಪದಲ್ಲಿ ವಿದ್ಯುತ್ ಶಾಕ್ - 4 ವರ್ಷದ ಮಗು ಬಲಿ, ತಾಯಿಗೂ ಶಾಕ್

ಬೆಂಗಳೂರಿನ ವಿವಾಹ ಸಮಾರಂಭವೊಂದರಲ್ಲಿ 4 ವರ್ಷದ ಬಾಲಕನೊಬ್ಬ ಎಲೆಕ್ಟ್ರಿಕ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ಏರ್ ಕೂಲರ್‌ಗೆ ಸ್ಪರ್ಶಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಕಲ್ಯಾಣ ಮಂಟಪದ ಮಾಲೀಕ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

09:16 PM (IST) Jun 05

Breaking - ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆ, ಬೆಂಗಳೂರು ಪೊಲೀಸ್‌ ಕಮೀಷನರ್‌ ತಲೆದಂಡ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗುವುದು. ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
Read Full Story

09:01 PM (IST) Jun 05

ತಿಂಡಿಪೋತ ಕಾಡಾನೆ; ಕಾಡಿನಿಂದ ಬಂತು, ಅಂಗಡಿಗೆ ನುಗ್ಗಿತು, ತಿಂಡಿ ಎತ್ತಿಕೊಂಡು ಹೋಯ್ತು!

ಥೈಲ್ಯಾಂಡ್‌ನಲ್ಲಿ ಒಂದು ಕಾಡಾನೆ ಅಂಗಡಿಗೆ ನುಗ್ಗಿ ಕುರುಕಲು ತಿಂಡಿಗಳನ್ನು ಎತ್ತಿಕೊಂಡು ಹೋದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆನೆ ಯಾರನ್ನೂ ಏನೂ ಮಾಡದೆ, ಅಕ್ಕಿ ತಿಂಡಿ ಪ್ಯಾಕೆಟ್‌ಗಳನ್ನು ಟಾರ್ಗೆಟ್ ಮಾಡಿ ತಿಂದು, ಕೆಲವು ಪ್ಯಾಕೆಟ್‌ಗಳನ್ನು ತನ್ನ ಸೊಂಡಿಲಲ್ಲಿಟ್ಟುಕೊಂಡು ಹೋಯಿತು.

Read Full Story

08:47 PM (IST) Jun 05

ನಾಳೆ ಲೋಕಾರ್ಪಣೆಯಾಗಲಿದೆ ಚೆನಾಬ್‌ ರೈಲ್ವೆ ಬ್ರಿಜ್‌, ದಾಖಲೆ ಸೃಷ್ಟಿಸಿದ ಸೇತುವೆಯ ವಿಹಂಗಮ ಚಿತ್ರಗಳು!

ಪ್ರಧಾನಿ ಮೋದಿ ಉದ್ಘಾಟಿಸುವ ಮುನ್ನ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಚೆನಾಬ್ ಮತ್ತು ಅಂಜಿ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸೇತುವೆಗಳು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
Read Full Story

08:45 PM (IST) Jun 05

ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರ ಸ್ಥಾಪನೆ - ಇಂಧನ ಸಚಿವ ಕೆ.ಜೆ.ಜಾರ್ಜ್

ವಿದ್ಯುತ್ ಪ್ರಸರಣಾ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕಾಲಮಿತಿಯಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

Read Full Story

08:43 PM (IST) Jun 05

ಸರ್ಜಾಪುರ–ಹೆಬ್ಬಾಳ ಭಾರತದ ಅತ್ಯಂತ ದುಬಾರಿ ಮೆಟ್ರೋ ಮಾರ್ಗಕ್ಕೆ, ಕೇಂದ್ರದಿಂದ ಪರಿಶೀಲನೆ ಕೊಕ್ಕೆ!

ಸರ್ಜಾಪುರದಿಂದ ಹೆಬ್ಬಾಳವರೆಗಿನ ಮೆಟ್ರೋ 'ರೆಡ್ ಲೈನ್' ಯೋಜನೆಯ ₹28,405 ಕೋಟಿ ವೆಚ್ಚದ ಕುರಿತು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಪ್ರತಿ ಕಿ.ಮೀ.ಗೆ ₹776 ಕೋಟಿ ವೆಚ್ಚವಾಗುವ ಈ ಯೋಜನೆ ತಜ್ಞರ ಸಮಿತಿಯಿಂದ ಮರುಮೌಲ್ಯಮಾಪನಕ್ಕೆ ಒಳಪಡಲಿದೆ.
Read Full Story

08:33 PM (IST) Jun 05

ಹೇಮಾವತಿ ನೀರು ತರಲು ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ - ಶಾಸಕ ಎಚ್.ಸಿ.ಬಾಲಕೃಷ್ಣ

ನಮ್ಮ ನೀರು ನಮ್ಮ ಹಕ್ಕು ವಿಚಾರವಾಗಿ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ರಸ್ತೆ ತಡೆ ನಡೆಸುತ್ತಿದ್ದು, ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

Read Full Story

08:24 PM (IST) Jun 05

ಕಾಲ್ತುಳಿತ ಪ್ರಕರಣ - ಆಫೀಸ್‌ನ ಟೇಬಲ್ ಮೇಲೆ ಲ್ಯಾಪ್‌ಟಾಪ್‌, ಬ್ಯಾಗ್‌ ಹಾಗೆಯೇ ಇದೆ.. ಆದ್ರೆ ಆಕೆಯೇ ಇಲ್ಲ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಬುಧವಾರ) ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ತಮಿಳುನಾಡು ಮೂಲದ ದೇವಿ ಎಂಬ ಟೆಕ್ಕಿ ಸಾವನಪ್ಪಿದರು.

Read Full Story

07:58 PM (IST) Jun 05

ಭಾರತ-ಚೀನಾ ಬಾಹ್ಯಾಕಾಶ ಪೈಪೋಟಿ - ಉಪಗ್ರಹಗಳ ಮೂಲಕ ನಡೆದಿತ್ತು ಯುದ್ಧ!

ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮುಖಾಮುಖಿಯಲ್ಲಿ ಬಾಹ್ಯಾಕಾಶ ಆಧಾರಿತ ವಿಚಕ್ಷಣದ ಪಾತ್ರವನ್ನು ಇಲ್ಲಿದೆ. ಚೀನಾ ತನ್ನ ಉಪಗ್ರಹ ಸಮೂಹದ ಮೂಲಕ ಪಾಕಿಸ್ತಾನಕ್ಕೆ ನೀಡಿದ ಬೆಂಬಲ ಇಲ್ಲಿದೆ.

Read Full Story

07:42 PM (IST) Jun 05

ರಣಬೀರ್ ಕಪೂರ್ 'ಧೂಮ್ 4' ಸಿನಿಮಾಗೆ ಕನ್ನಡತಿ ಸೇರಿ ಈ 7 ನಾಯಕಿಯರೇ ಬೆಸ್ಟ್!

ರಣಬೀರ್ ಕಪೂರ್ 'ಧೂಮ್ 4' ಚಿತ್ರಕ್ಕೆ ನಾಯಕಿಯರ ಹೆಸರುಗಳು ಚರ್ಚೆಯಲ್ಲಿವೆ. ದೀಪಿಕಾ ಪಡುಕೋಣೆಯಿಂದ ಹಿಡಿದು ಶ್ರದ್ಧಾ ಕಪೂರ್ ವರೆಗೆ, ಯಾರು ರಣಬೀರ್ ಜೊತೆ ನಟಿಸಬಹುದು?

Read Full Story

07:31 PM (IST) Jun 05

ಅಮಿತಾಬ್ ಜೊತೆ ಸಮಯ ಕಳೆಯೋದಕ್ಕೆ ಒಪ್ಪಿಕೊಂಡ ಸಿನಿಮಾನೆ ಕೈ ಬಿಟ್ಟಿದ್ರಾ ರೇಖಾ?

ನಟ ಅಮಿತಾಬ್ ಬಚ್ಚನ್ ಜೊತೆ ಸಂಜೆ ಕಳೆಯೋದಕ್ಕಾಗಿ ಕರಣಮಾ ಸಿನಿಮಾದಿಂದಲೇ ನಟಿ ರೇಖಾ ಹೊರ ಬಂದಿದ್ದರಂತೆ. ಅಷ್ಟೊಂದು ಲವ್ ಮಾಡ್ತಿದ್ರು ರೇಖಾ.

Read Full Story

07:15 PM (IST) Jun 05

ಆರ್‌ಸಿಬಿ ವಿಜಯೋತ್ಸವ ಚಿನ್ನಸ್ವಾಮಿ ಕಾಲ್ತುಳಿತ; 19 ಮಂದಿ ವಿರುದ್ಧ ದೂರು ದಾಖಲು!

ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ನಡೆದ ಭೀಕರ ಅವ್ಯವಸ್ಥೆ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಹೈಕೋರ್ಟ್ ವಕೀಲ ಆರ್.ಎಲ್.ಎನ್. ಮೂರ್ತಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಸಿಎ ಪದಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವು.

Read Full Story

07:11 PM (IST) Jun 05

ಆನೆಗಳನ್ನು ಕೊಂದು ಮಾಂಸವನ್ನು ಜನರಿಗೆ ನೀಡಲು ಮುಂದಾದ ಜಿಂಬಾಬ್ವೆ ಸರ್ಕಾರ!

ಜಿಂಬಾಬ್ವೆ ತನ್ನ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಡಜನ್‌ಗಟ್ಟಲೆ ಆನೆಗಳನ್ನು ಕೊಲ್ಲುವ ಯೋಜನೆಯನ್ನು ಹೊಂದಿದೆ. ಈ ಮಾಂಸವನ್ನು ಸ್ಥಳೀಯ ಸಮುದಾಯಗಳಿಗೆ ಆಹಾರವಾಗಿ ವಿತರಿಸಲಾಗುವುದು, ಆದರೆ ದಂತವನ್ನು ಸರ್ಕಾರವು ಇಟ್ಟುಕೊಳ್ಳುತ್ತದೆ.
Read Full Story

07:07 PM (IST) Jun 05

ಅದಾನಿ ಗ್ರೂಪ್‌ನಿಂದ ಒಂದೇ ವರ್ಷದಲ್ಲಿ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ತೆರಿಗೆ ಪಾವತಿ!

ಅದಾನಿ ಗ್ರೂಪ್ 2024-25ರಲ್ಲಿ ₹74,945 ಕೋಟಿ ತೆರಿಗೆ ಪಾವತಿಸಿದ್ದು, ಹಿಂದಿನ ವರ್ಷಕ್ಕಿಂತ 29% ಹೆಚ್ಚಳವಾಗಿದೆ. ಈ ಮೊತ್ತವು ಮುಂಬೈ ಮೆಟ್ರೋ ನಿರ್ಮಾಣ ವೆಚ್ಚಕ್ಕೆ ಸಮನಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅದಾನಿ ಗ್ರೂಪ್‌ನ ಪಾತ್ರವನ್ನು ಎತ್ತಿ ತೋರಿಸುತ್ತದೆ. 

Read Full Story

06:57 PM (IST) Jun 05

ಆರ್‌ಸಿಬಿ ಅಭಿಮಾನಿಯ ರಿವೇಂಜ್ - ಸಿಹಿಯ ಜೊತೆಗೆ ಬರ್ನಲ್‌ ಹಂಚಿದ ಯುವತಿ - ವೀಡಿಯೋ ಸಖತ್ ವೈರಲ್

ಆರ್‌ಸಿಬಿ ಗೆಲುವಿನ ಖುಷಿಯಲ್ಲಿ ಅಭಿಮಾನಿಯೊಬ್ಬರು ತಮ್ಮ ಕಚೇರಿಯಲ್ಲಿ ಸಿಹಿ ಜೊತೆಗೆ ಬರ್ನಲ್ ಮುಲಾಮನ್ನು ಹಂಚಿದ್ದಾರೆ. ಟ್ರೋಲ್ ಮಾಡಿದ್ದವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. 

Read Full Story

06:44 PM (IST) Jun 05

ಟಾಟಾ ಜೊತೆ ಡಸಾಲ್ಟ್‌ ಏವಿಯೇಷನ್‌ ಒಪ್ಪಂದ, ಹೈದರಾಬಾದ್‌ನಲ್ಲಿ ನಿರ್ಮಾಣವಾಗಲಿದೆ ರಫೇಲ್‌ ಫ್ಯೂಸ್‌ಲೇಜ್!

ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹೈದರಾಬಾದ್‌ನಲ್ಲಿ ರಫೇಲ್ ಯುದ್ಧ ವಿಮಾನದ ಫ್ಯೂಸ್‌ಲೇಜ್ ತಯಾರಿಸಲು ಡಸಾಲ್ಟ್ ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 

Read Full Story

06:43 PM (IST) Jun 05

'ಮೆಟ್ರೋ ಇನ್ ದಿನೋ' ತಾರಾಗಣದ ನಟನಟಿಯರ ಒಟ್ಟೂ ಆಸ್ತಿ ವಿವರ..!

ಮೆಟ್ರೋ ಇನ್ ದಿನೋ ಚಿತ್ರದ ತಾರೆಯರಾದ ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್, ನೀನಾ ಗುಪ್ತಾ ಇವರೆಲ್ಲರ ಆಸ್ತಿ ಕೋಟಿಗಟ್ಟಲೆ ಇದೆ! ಯಾರ ಹತ್ತಿರ ಎಷ್ಟಿದೆ?
Read Full Story

06:18 PM (IST) Jun 05

ಈಗಿನ ತಾಯಂದಿರಿಗೆ ಏನಾಗಿದೆ ಇವರು ನಿಜವಾಗಿಯೂ ಅಮ್ಮಂದಿರೇ? ಅಪ್ರಾಪ್ತ ಮಗಳಿಗೇ ತಲೆಹಿಡುಕ ಕೆಲಸ ಮಾಡಿದ ತಾಯಿ

ಉತ್ತರಾಖಂಡದ ಹರಿದ್ವಾರದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ತಾಯಿಯೇ ಈ ಕೃತ್ಯಕ್ಕೆ ಸಹಕರಿಸಿದ ಆರೋಪ ಕೇಳಿಬಂದಿದೆ.

Read Full Story

06:17 PM (IST) Jun 05

ಚಿಕ್ಕಬಳ್ಳಾಪುರ ಮಸೀದಿಯಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ; 55 ವರ್ಷದ ವ್ಯಕ್ತಿ ಬಂಧನ!

ಚಿಕ್ಕಬಳ್ಳಾಪುರ ಜಿಲ್ಲೆಯ ಮಸೀದಿಯಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. 55 ವರ್ಷದ ವ್ಯಾಪಾರಿಯನ್ನು ಬಂಧಿಸಲಾಗಿದೆ. ಆರೋಪಿಯು ಬಾಲಕಿಗೆ ಚಾಕ್ಲೆಟ್ ಕೊಡುವ ನೆಪದಲ್ಲಿ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
Read Full Story

06:09 PM (IST) Jun 05

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಪಿಎ ನಿಧಿ ತಿವಾರಿ ಯಾರು? ತಿಂಗಳ ವೇತನ ಎಷ್ಟು?

ದೇಶದ ಪ್ರಧಾನ ಮಂತ್ರಿಗಳ ಪರ್ಸನಲ್ ಸೆಕ್ರೆಟರಿ. ಅದೂ ನರೇಂದ್ರ ಮೋದಿಯವರಂಥ ವ್ಯಕ್ತಿಯ! ಈ ಹುದ್ದೆ ಸಾಮಾನ್ಯವಲ್ಲ. ಮೋದಿಯವರ ಪರ್ಸನಲ್ ಸೆಕ್ರೆಟರಿ ಒಬ್ಬ ಮಹಿಳೆ ಅಂತ ಗೊತ್ತಾ? ನಿಧಿ ತಿವಾರಿ ಅಂತಾರೆ! ಈ ಹೆಸರು ಕೇಳಿದ್ದೀರಾ? ಈ ಮಹಿಳೆಯ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ.

Read Full Story

06:03 PM (IST) Jun 05

ಐಪಿಎಲ್ 2025ರಲ್ಲಿ ಅತಿ ಹೆಚ್ಚು 50+ ಹೊಡೆದ ಟಾಪ್ 5 ಬ್ಯಾಟರ್‌ಗಳಿವರು!

ಐಪಿಎಲ್ 2025ರಲ್ಲಿ ಅನೇಕ ಬ್ಯಾಟ್ಸ್‌ಮನ್‌ಗಳು ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಅಬ್ಬರಿಸಿದರು. ಕೆಲವು ಯುವ ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅತಿ ಹೆಚ್ಚು 50+ ಸ್ಕೋರ್ ಮಾಡಿದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
Read Full Story

05:58 PM (IST) Jun 05

1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ರವೀಂದ್ರ ನಗರದ ಸೊಸೆ ಅಕ್ಷತಾ ಸಾವನ್ನಪ್ಪಿದ್ದಾರೆ. ಗಂಡನ ಎದುರೇ ಹೆಂಡತಿ ಅಕ್ಷತಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ.

Read Full Story

05:51 PM (IST) Jun 05

1538 ಕೋಟಿಯ ಚಾಲಕ ರಹಿತ ಮೆಟ್ರೋ ರೈಲು ಪ್ರಾಜೆಕ್ಟ್‌ಗೆ ಸಹಿ

ಚೆನ್ನೈ ಮೆಟ್ರೋದ ಎರಡನೇ ಹಂತದ ಯೋಜನೆಯಲ್ಲಿ ಚಾಲಕ ರಹಿತ 32 ಮೆಟ್ರೋ ರೈಲುಗಳನ್ನು ತಯಾರಿಸಲು Alstom Transport India ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರೀಕ್ಷಾರ್ಥ ಓಟಗಳ ನಂತರ, 2028 ರಲ್ಲಿ ಸಂಪೂರ್ಣವಾಗಿ ಇವು ಕಾರ್ಯಾರಂಭ ಮಾಡಲಿವೆ. 

Read Full Story

05:28 PM (IST) Jun 05

ಆಂಧ್ರಪ್ರದೇಶ ಸರ್ಕಾರದಿಂದ 5 ಕೋಟಿ ಗಿಡ ನೆಡುವ ಘೋಷಣೆ

ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ 5 ಕೋಟಿ ಗಿಡ ನೆಡುವ ಮಹತ್ವಾಕಾಂಕ್ಷಿ ವನಮಹೋತ್ಸವಕ್ಕೆ ಚಾಲನೆ ನೀಡಿದ್ರು. ಪರಿಸರ ದಿನದಂದು ನಡೆದ ಈ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಪರಿಸರ ಉಳಿಸಿ ಅಂತ ಜನರಿಗೆ ಕರೆ ಕೊಟ್ರು.
Read Full Story

05:27 PM (IST) Jun 05

ಅಭಿಮಾನ ಅತಿರೇಕವಾದಾಗ... RCB ಕಾಲ್ತುಳಿದ ಬೆನ್ನಲ್ಲೇ ನಟ ದರ್ಶನ್​ ಹಳೆಯ ವಿಡಿಯೋ ವೈರಲ್​

ಆರ್​ಸಿಬಿಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತದ ಸಾವಿನ ಬೆನ್ನಲ್ಲೇ ನಟ ದರ್ಶನ ಹಳೆಯ ವಿಡಿಯೊ ವೈರಲ್​ ಆಗಿದೆ. ಅಭಿಮಾನ ಅತಿರೇಕವಾದರೆ ಏನಾಗುತ್ತದೆ ಎನ್ನುವ ಬಗ್ಗೆ ನಟ ಹೇಳಿದ್ದೇನು ಕೇಳಿ...

Read Full Story

05:26 PM (IST) Jun 05

ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಭದ್ರಾನದಿ ಸೇತುವೆ - 8 ವರ್ಷಗಳಿಂದ ಆಮೆಗತಿ ಕಾಮಗಾರಿ

ಭದ್ರಾ ನದಿಯ ಸೇತುವೆ ಶಿಥಿಲವಾಗಿದೇ ಡೆಂಜರ್ ಅಂತಾ ವರದಿ ನೀಡಿ ದಶಕವೇ ಅಯ್ತು, 125 ವರ್ಷದ ಹಳೆಯ ಸೇತುವೆಯನ್ನು ಕಟ್ಟಿದ್ದು ಬ್ರಿಟಿಷರು.

Read Full Story

05:16 PM (IST) Jun 05

ಕಾಲೇಜು ಹಿಂಭಾಗ ವಿದ್ಯಾರ್ಥಿಗಳ ರೊಮ್ಯಾನ್ಸ್ ವಿಡಿಯೋ ವೈರಲ್; ಯಾರ ಮಕ್ಕಳಪ್ಪಾ ಇವರು?

ಕಾಲೇಜು ಹಿಂಭಾಗದಲ್ಲಿ ಯುವಕ-ಯುವತಿಯರ ರೊಮ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಯುವಜನತೆಯಲ್ಲಿ ಸಾಮಾಜಿಕ ಜವಾಬ್ದಾರಿ ಕೊರತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

05:13 PM (IST) Jun 05

ನಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಲು ಅಡ್ಡಿಯಾಗುತ್ತಿರುವುದು ಏನು? - ರವಿಶಂಕರ್ ಗುರೂಜಿ

ಎಲ್ಲಾ ರೂಪದ ಜೀವಿಗಳನ್ನು ಗೌರವಿಸದ ಅಭಿವೃದ್ಧಿಯು ನಿಜವಾದ ಅಭಿವೃದ್ಧಿಯಲ್ಲ. ಪ್ರಕೃತಿಯ ಮೇಲಿನ ಕಾಳಜಿ ಮತ್ತು ಸಹಾನುಭೂತಿ ಅಭಿವೃದ್ಧಿಯ ದೃಷ್ಟಿಕೋನದ ಭಾಗವಾಗಬೇಕು.

Read Full Story

05:10 PM (IST) Jun 05

2021-2025 ವರೆಗೆ ಐಪಿಎಲ್‌ನಲ್ಲಿ ಅತಿಹೆಚ್ಚು ಯಾರ್ಕರ್ ಎಸೆದ ಟಾಪ್ 5 ಬೌಲರ್‌ಗಳಿವರು!

ಐಪಿಎಲ್ 2025 ರಲ್ಲಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳು ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಳೆದ 5 ಸೀಸನ್‌ಗಳಲ್ಲಿ ಅತಿ ಹೆಚ್ಚು ಯಾರ್ಕರ್‌ಗಳನ್ನು ಎಸೆದ 5 ಬೌಲರ್‌ಗಳ ಬಗ್ಗೆ ತಿಳಿದುಕೊಳ್ಳೋಣ.

Read Full Story

05:02 PM (IST) Jun 05

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಜೋಡಿಯಾದ 65 ವರ್ಷದ ಪಿನಾಕಿ ಮಿಶ್ರಾ!

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಖಾಸಗಿ ವಿವಾಹ ಸಮಾರಂಭವು ಮೇ 3 ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
Read Full Story

04:57 PM (IST) Jun 05

RCB victory stampede - 11 ಜನ ಸತ್ತರೂ ದಾಖಲಾಗಿಲ್ಲ FIR- ಜಾಲತಾಣದಲ್ಲಿ ಭಾರಿ ಆಕ್ರೋಶ

ಐಪಿಎಲ್ ಟೂರ್ನಿಯ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟರೂ ಇದುವರೆಗೆ ಎಫ್​ಐಆರ್​ ದಾಖಲಾಗಿಲ್ಲ. ಬದಲಿಗೆ ಅಸ್ವಾಭಾವಿಕ ಸಾವು ಎನ್ನುವ UDR ಸಲ್ಲಿಕೆ ಮಾಡಲಾಗಿದೆ. ಏನಿದರ ಮರ್ಮ?

Read Full Story

04:43 PM (IST) Jun 05

ಭಾರತ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ!

ಇಂಗ್ಲೆಂಡ್ ತಂಡವು ಭಾರತ ಎದುರಿನ ಟೆಸ್ಟ್ ಸರಣಿಗೆ 14 ಆಟಗಾರರ ತಂಡವನ್ನು ಪ್ರಕಟಿಸಿದೆ. ಜೇಮಿ ಓವರ್‌ಟನ್‌ ಅಚ್ಚರಿಯ ಆಯ್ಕೆಯಾಗಿದ್ದು, ಜೆಕೋಬ್ ಬೆಥೆಲ್ ಅವರ ಸೇರ್ಪಡೆಯೂ ಗಮನ ಸೆಳೆದಿದೆ.
Read Full Story

04:29 PM (IST) Jun 05

RCB victory ಕಾಲ್ತುಳಿತ ಪ್ರಕರಣ - ಹೈಕೋರ್ಟ್​ನಿಂದ ದೂರು ದಾಖಲು- ಸರ್ಕಾರಕ್ಕೆ ಹಲವು ಪ್ರಶ್ನೆ

ಸರ್ಕಾರ ಆಯೋಜಿಸಿದ್ದ ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಪ್ರಾಣ ಹೋದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​ ಸ್ವಯಂ ಪ್ರೇರಿತ ದೂರು ದಾಖಲಿಸಿದೆ.  

Read Full Story

04:26 PM (IST) Jun 05

ಆರ್‌ಸಿಬಿ ಇವೆಂಟ್‌ ಭಾನುವಾರ ಮಾಡಿ ಎಂದಿದ್ದ ಬೆಂಗಳೂರು ಪೊಲೀಸ್‌, ಪಟ್ಟು ಹಿಡಿದು ಕೂತಿದ್ದ ರಾಜ್ಯ ಸರ್ಕಾರ!

ಭದ್ರತಾ ಕಾರಣಗಳಿಗಾಗಿ ಆರ್‌ಸಿಬಿ ವಿಜಯೋತ್ಸವವನ್ನು ಭಾನುವಾರ ನಡೆಸಬೇಕೆಂದು ಪೊಲೀಸರು ಸೂಚಿಸಿದ್ದರೂ, ಸರ್ಕಾರ ಸೋಮವಾರವೇ ನಡೆಸಲು ಪಟ್ಟು ಹಿಡಿದಿತ್ತು. ಈ ಆತುರದ ನಿರ್ಧಾರದ ಹಿಂದಿನ ಕಾರಣವೇನು ಎಂದು ವಿಪಕ್ಷಗಳು ಪ್ರಶ್ನಿಸಿವೆ. ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 56 ಮಂದಿ ಗಾಯಗೊಂಡಿದ್ದಾರೆ.
Read Full Story

04:16 PM (IST) Jun 05

ಚಿನ್ನಸ್ವಾಮಿ ಕಾಲ್ತುಳಿತ ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ; ಆರ್‌ಸಿಬಿ ₹10 ಲಕ್ಷ ಘೋಷಣೆ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಕುಟುಂಬಗಳಿಗೆ ಆರ್‌ಸಿಬಿ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಸರ್ಕಾರ ಮತ್ತು ಕೆಎಸ್‌ಸಿಎ ಘೋಷಿಸಿದ ಪರಿಹಾರದ ಜೊತೆಗೆ ಒಟ್ಟು 25 ಲಕ್ಷ ರೂ. ಸಿಗಲಿದೆ.

Read Full Story

More Trending News