Published : Jun 04, 2025, 07:05 AM ISTUpdated : Jun 04, 2025, 11:29 PM IST

Karnataka News Live: ಶಿಕ್ಷಣ, ಅನ್ನ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆ - ಸಿಎಂ ಸಿದ್ದರಾಮಯ್ಯ

ಸಾರಾಂಶ

ಬೆಂಗಳೂರು: 18ನೇ ಆವೃತ್ತಿ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕಪ್‌ ಗೆದ್ದು ಬರಲಿ ಎಂದು ರಾಜ್ಯಾದ್ಯಂತ ಆರ್‌ಸಿಬಿ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊತ್ತಿದ್ದ ಹರಕೆ ಫಲಿಸಿದೆ. ಅಭಿಮಾನಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡ ಆರ್‌ಸಿಬಿ ಪಂದ್ಯ ಗೆಲ್ಲಲಿ ಎಂದು ಶುಭ ಹಾರೈಸಿದ್ದರು. ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆದ್ದು ಬಾ ಆರ್‌ಸಿಬಿ ಎಂದು ಶುಭ ಹಾರೈಸಿದ್ದರು.

Karnataka Chief Minister Siddaramaiah (File Photo/ANI)

11:29 PM (IST) Jun 04

ಶಿಕ್ಷಣ, ಅನ್ನ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆ - ಸಿಎಂ ಸಿದ್ದರಾಮಯ್ಯ

ಶಿಕ್ಷಣ, ಅನ್ನ, ಆರೋಗ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Read Full Story

11:17 PM (IST) Jun 04

18 ವರ್ಷದ ನಿರೀಕ್ಷೆ, 18 ಗಂಟೆಯಲ್ಲಿ ದುಃಖ - 11 ಜೀವಗಳ ಬಲಿಗೆ ಹೊಣೆ ಯಾರು?

ಅಭಿಮಾನಿಗಳು ಎಷ್ಟು ಸಂಖ್ಯೆಯಲ್ಲಿ ಸೇರಬಹುದು ಅನ್ನೋ ಅಂದಾಜು ಮಾಡಲೂ ಆಗದಂತಾ ದರಿದ್ರ ಸ್ಥಿತಿಗೆ ಬಂದುಬಿಟ್ಟಿದೆಯಾ ಪೊಲೀಸ್ ಇಲಾಖೆ..? ಒಂದು ರೂಟ್ ಮ್ಯಾಪ್ ಇಲ್ಲ, ಎಂಟ್ರಿ-ಎಕ್ಸಿಟ್ ಸ್ಪಷ್ಟತೆಯಿಲ್ಲ, ತುರ್ತು ಸ್ಥಿತಿ ಎದುರಿಸಲು ಆ್ಯಂಬ್ಯುಲೆನ್ಸ್ ವ್ಯವಸ್ಥೆಯಿಲ್ಲ.

Read Full Story

10:37 PM (IST) Jun 04

ಟಾಟಾ ಹ್ಯಾರಿಯರ್ ಇವಿ ಅನಾವರಣ, ಹೊಸ ಕಾರ್‌ನ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ..

 

21.49 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್.ev, 14.53-ಇಂಚಿನ ನಿಯೋ QLED ಇನ್ಫೋಟೈನ್‌ಮೆಂಟ್ ಸಿಸ್ಟಮ್, 540-ಡಿಗ್ರಿ ಸರೌಂಡ್ ವ್ಯೂ ಮತ್ತು ಇ-ವ್ಯಾಲೆಟ್ ಪ್ಯಾಕೇಜ್‌ನಂತಹ ವಿಭಾಗ-ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

Read Full Story

10:08 PM (IST) Jun 04

ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ಗೆ ಇನ್ನು ಆಧಾರ್‌ ವೆರಿಫಿಕೇಶನ್‌ ಕಡ್ಡಾಯ - ಭಾರತೀಯ ರೈಲ್ವೇಸ್‌

ಭಾರತೀಯ ರೈಲ್ವೆ ಈ ತಿಂಗಳ ಕೊನೆಯಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್‌ಗಳಿಗೆ ಕಡ್ಡಾಯ ಇ-ಆಧಾರ್ ದೃಢೀಕರಣವನ್ನು ಪ್ರಾರಂಭಿಸಲಿದೆ. ಇದರಿಂದಾಗಿ ಐಆರ್‌ಸಿಟಿಸಿ ಅಕೌಂಟ್‌ ದುರುಪಯೋಗ ಮತ್ತು ವಂಚನೆಯನ್ನು ಕಡಿಮೆ ಮಾಡಲು ಮತ್ತು ನಿಜವಾದ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್‌ ಬುಕ್‌ ಮಾಡುವುದು ಸುಲಭವಾಗಲಿದೆ.
Read Full Story

10:02 PM (IST) Jun 04

ನನಗೆ 10 ಮಕ್ಕಳು ಬೇಕು ಎಂದ ನಟಿ ಸನಾ ಖಾನ್ - ನೆಟ್ಟಿಗರಿಂದ ತರಾಟೆ

ಇತ್ತೀಚೆಗೆ ಕೆಲವು ನಟಿಯರು ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಸಾಲಿಗೆ ಸೇರಿದವರು ಸನಾ ಖಾನ್. 10 ಮಕ್ಕಳನ್ನು ಹೊಂದಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story

09:44 PM (IST) Jun 04

ಪ್ರಚಾರದಿಂದ ಮಾತ್ರ ದೇಶ ಸುಧಾರಣೆ ಕಾಣುವುದಿಲ್ಲ - ಸಚಿವ ಸಂತೋಷ್‌ ಲಾಡ್‌

ನೂತನ ತಾಲೂಕಿನ ಆಡಳಿತ ಭವನ ಪ್ರಜಾಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ, ನಾಡ ಕಚೇರಿ ಕಟ್ಟಡ ಉದ್ಘಾಟನೆ ಸೇರಿದಂತೆ ಸುಮಾರು ₹15 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಚಾಲನೆ ನೀಡಿದರು.

Read Full Story

09:27 PM (IST) Jun 04

ಜೂ.11ರಂದು ಕುಸುಮ್- ಸಿ ಯೋಜನೆಗೆ ಚಾಲನೆ - ಇಂಧನ ಸಚಿವ ಕೆ.ಜೆ.ಜಾರ್ಜ್

ಇದೇ ತಿಂಗಳ 11ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದಲ್ಲಿ ಕುಸುಮ್- ಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

Read Full Story

09:21 PM (IST) Jun 04

ವಿಜಯ್ ಮಲ್ಯ ಆರ್‌ಸಿಬಿ ಗೆಲುವಿನ ಸಂಭ್ರಮ, ಚಿನ್ನಸ್ವಾಮಿ ದುರಂತದ ಶೋಕದಲ್ಲಿ ಭಾಗಿ

ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಗೆದ್ದಾಗ ವಿಜಯ್‌ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆಯೂ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಆರ್‌ಸಿಬಿ ತಂಡ ಮತ್ತು ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Read Full Story

09:16 PM (IST) Jun 04

ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದು ಗಳಿಸಿದ್ದು ₹20 ಕೋಟಿ, ಸರ್ಕಾರ ಎಣ್ಣೆ ಮಾರಿ ಗಳಿಸಿದ್ದು ₹158 ಕೋಟಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025 ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ. ಒಂದೇ ದಿನ ₹158.54 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು.
Read Full Story

08:58 PM (IST) Jun 04

ಕೇವಲ ₹12 ಸಾವಿರ ಬಾಡಿಗೆಗೆ 500 ಗಿಡಗಳುಳ್ಳ ಮನೆ; ಇದು ನಮ್ಮ ಒರಿಜಿನಲ್ ಬೆಂಗಳೂರು!

ಬೆಂಗಳೂರಿನಲ್ಲಿ ₹12,000 ಬಾಡಿಗೆಯ ಒಂದು ಬೆಡ್‌ರೂಮ್ ಮನೆಯಲ್ಲಿ ಯುವಕನೊಬ್ಬ 500 ಗಿಡಗಳನ್ನು ಬೆಳೆಸಿದ್ದಾನೆ. ಈ ಹಸಿರು ಪೆಂಟ್‌ಹೌಸ್ ನಗರದ ಗದ್ದಲದ ನಡುವೆ ಶಾಂತ ವಾತಾವರಣವನ್ನು ಸೃಷ್ಟಿಸಿದೆ.
Read Full Story

08:56 PM (IST) Jun 04

ಕಾಲ್ತುಳಿತ ನಿಭಾಯಿಸೋಕು ಪೊಲೀಸ್‌ ಇಲಾಖೆಯಲ್ಲಿ ಬಲವಿಲ್ಲ, ಖಾಲಿ ಇದೆ 15 ಸಾವಿರ ಜಾಬ್ಸ್‌!

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬೆನ್ನಲ್ಲೇ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದು ಬೆಳಕಿಗೆ ಬಂದಿದೆ. 1,11,330 ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ, ಪೊಲೀಸ್ ಪಡೆಯು ಶೇ. 16.69 ರಷ್ಟು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.
Read Full Story

08:20 PM (IST) Jun 04

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ; ಸಿಎಂ ಸಿದ್ದರಾಮಯ್ಯ!

ಐಪಿಎಲ್ 2025ರಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸುವುದಾಗಿ ತಿಳಿಸಿದ್ದಾರೆ.
Read Full Story

07:56 PM (IST) Jun 04

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಮೋದಿ ಸಂತಾಪ, ಇದು ಹೃದಯವಿದ್ರಾವಕ ಎಂದ ಪ್ರಧಾನಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ, ಸರ್ಕಾರದ ವಿರುದ್ಧ ಜನಾಕ್ರೋಶ.
Read Full Story

07:56 PM (IST) Jun 04

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಮಾಹಿತಿ ಬಹಿರಂಗ; ಸಾವಿನ ಕಾರಣ ಬಿಚ್ಚಿಟ್ಟ ವೈದ್ಯರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025ರ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಮೃತರ ಹೆಸರು ಮತ್ತು ವಿವರಗಳು ಬಹಿರಂಗಗೊಂಡಿವೆ.
Read Full Story

07:46 PM (IST) Jun 04

ಕ್ರಷರ್‌ ಬಂದ್‌ಗೆ ಜನಾಭಿಪ್ರಾಯ ಮುಖ್ಯ - ಶಾಸಕ ಪ್ರದೀಪ್ ಈಶ್ವರ್

ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ 152 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನತೆಯ ಸಮಸ್ಯೆಗಳ ಅರಿತಿದ್ದು, ಸಾಧ್ಯವಾದಷ್ಟೂ ಮಟ್ಟಿಗೆ ಪರಿಹರಿಸಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

Read Full Story

07:38 PM (IST) Jun 04

ಅಪಾಯದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸ್ಥಳಾಂತರಕ್ಕೆ ಸೂಚಿಸಿದ ಮಡಿಕೇರಿ ನಗರಸಭೆ!

ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಮೂರು ನಾಲ್ಕು ವರ್ಷಗಳ ಕಾಲ ಭೂಕುಸಿತವಾಗಿದ್ದು ಗೊತ್ತೇ ಇದೆ. ಈ ವರ್ಷವೂ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂಬ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

Read Full Story

07:27 PM (IST) Jun 04

'ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ' ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಐಪಿಎಲ್‌ ಚೇರ್ಮನ್‌ ಮಾತು!

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಬಗ್ಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಹೊರಗೆ ನಡೆದ ದುರ್ಘಟನೆಯ ಅರಿವಿರಲಿಲ್ಲ ಎಂದು ಅವರು ಹೇಳಿದ್ದಾರೆ.

Read Full Story

07:27 PM (IST) Jun 04

ಸ್ಮಾರ್ಟ್ ಮೀಟರ್ ಹಗರಣ - ಬಿಜೆಪಿ, ಜೆಡಿಎಸ್ ನಾಯಕರ ಆರೋಪ ನಿರಾಧಾರ - ಎಂ.ಲಕ್ಷ್ಮಣ್

ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15568 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಆರೋಪ ನಿರಾಧಾರ. ಈ ಯೋಜನೆಯ ಒಟ್ಟು ಅನುದಾನವೇ 1568 ಕೋಟಿ ರೂ., 15568 ಕೋಟಿ ರೂ. ಎಲ್ಲಿಂದ ಬಂತು?

Read Full Story

07:13 PM (IST) Jun 04

ಚಾಮರಾಜನಗರದ ಹಸಿರು ಹೀರೋ - ಸಿ.ಎಂ.ವೆಂಕಟೇಶ್‌ಗೆ ರಾಜ್ಯ ಪರಿಸರ ಪ್ರಶಸ್ತಿ ಗೌರವ!

ನಾಳೆ (ಜೂನ್ 6) ವಿಶ್ವ ಪರಿಸರ ದಿನ. ಸಾವಿರಾರು ಗಿಡಗಳನ್ನು ಗಿಡಗಳನ್ನು ನೆಟ್ಟು ರಕ್ಷಿಸಿ ಪೋಷಿಸುತ್ತಿರುವ ಚಾಮರಾಜನಗರದ ಸಿ.ಎಂ. ವೆಂಕಟೇಶ್ 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read Full Story

07:02 PM (IST) Jun 04

ಸೂರ್ಯನಿಂದ ಸಾಯಿವರೆಗೆ - ಟಾಟಾ ಕರ್ವ್ ಕಾರು ಯಾರಿಗೆ? ಇಲ್ಲಿದೆ ಐಪಿಎಲ್ ಅವಾರ್ಡ್ ಕಂಪ್ಲೀಟ್ ಲಿಸ್ಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿದ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದಿದೆ. ಸೂರ್ಯಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿಜೇತರಾಗಿದ್ದಾರೆ.

Read Full Story

06:58 PM (IST) Jun 04

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ 11 ಸಾವು - ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ವ ತಯಾರಿ ಇಲ್ಲದ ಕಾರಣ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ ಘಟನೆಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
Read Full Story

06:28 PM (IST) Jun 04

RCB ಅಭಿಮಾನಿಗಳ ಅಬ್ಬರಕ್ಕೆ ಚಿನ್ನಸ್ವಾಮಿ ಸ್ಟೇಡಿಯ ಬಳಿ ನಜ್ಜುಗುಜ್ಜಾದ ಕಾರು

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಅಭಿಮಾನಿಗಳ ಅತಿರೇಕದ ಸಂಭ್ರಮಾಚರಣೆಯಲ್ಲಿ ಕಾರಿನ ಮೇಲೆ ಹತ್ತಿ ನಜ್ಜುಗುಜ್ಜು ಮಾಡಿದ ಘಟನೆ ನಡೆದಿದೆ.

Read Full Story

06:23 PM (IST) Jun 04

Photos - ಚಿನ್ನಸ್ವಾಮಿ ಕಾಲ್ತುಳಿತ, ಕೊಹ್ಲಿ ಗೆಲುವಿನ ಕಣ್ಣೀರು ಕಂಡು ಮರುಕಪಟ್ಟವರೇ ಸಮಾಧಿಯಾದರು!

ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದ ಸಂಭ್ರಮದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
Read Full Story

06:17 PM (IST) Jun 04

ರಜನಿಕಾಂತ್ vs ಕಮಲ್ ಹಾಸನ್ - ಸಿನಿಮಾ ಹಿಟ್ ಲಿಸ್ಟ್ ಇಲ್ಲಿದೆ; ಫೈಟ್‌ನಲ್ಲಿ ಗೆದ್ದಿರೋದು ಯಾರು?

ರಜನಿಕಾಂತ್ ಮತ್ತು ಕಮಲ್ ಹಾಸನ್ 1980 ಮತ್ತು 90 ರ ದಶಕಗಳಲ್ಲಿ ತಮ್ಮ ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡುತ್ತಿದ್ದರು. ಯಾರು ಹೆಚ್ಚು ಗೆಲುವು ಸಾಧಿಸಿದ್ದಾರೆ ಎಂದು ನೋಡೋಣ.

Read Full Story

06:07 PM (IST) Jun 04

ಐಪಿಎಲ್ ಕಪ್ ಗೆದ್ದ ಬೆನ್ನಲ್ಲೆ ಭಾವನಾತ್ಮಕ ಫೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡ ನಂತರ, ವಿರಾಟ್ ಕೊಹ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕೊಹ್ಲಿ ತಮ್ಮ ತಂಡದ ಗೆಲುವಿನ ಬಗ್ಗೆ ಮತ್ತು ಅಭಿಮಾನಿಗಳ ಬೆಂಬಲದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Read Full Story

05:53 PM (IST) Jun 04

ಚಿನ್ನಸ್ವಾಮಿ ಕಾಲ್ತುಳಿತ - ಕಬ್ಬನ್‌ ಪಾರ್ಕ್‌, ವಿಧಾನಸೌಧ ಸ್ಟೇಷನ್‌ನಲ್ಲಿ ಮೆಟ್ರೋ ನಿಲ್ಲಲ್ಲ!

ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 7 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಕಾರಣ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.
Read Full Story

05:33 PM (IST) Jun 04

ಆರ್‌ಸಿಬಿ ವಿಜಯೋತ್ಸವದಲ್ಲಿ ದುರಂತ - ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 7 ಮಂದಿ ಬಲಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿ ನಾಲ್ವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

05:30 PM (IST) Jun 04

2027 ಮಾರ್ಚ್‌ 1 ರಿಂದ ರಾಷ್ಟ್ರಾದ್ಯಂತ ಜನಗಣತಿ, ಜಾತಿಗಣತಿ?

2027ರ ಮಾರ್ಚ್ 1 ರಿಂದ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿ ಪ್ರಾರಂಭವಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಉತ್ತರಾಖಂಡದಲ್ಲಿ ಅಕ್ಟೋಬರ್ 2026ರಲ್ಲಿ ಪ್ರಾರಂಭವಾಗಬಹುದು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ಈ ಜನಗಣತಿಯು 2011ರಿಂದ ನಡೆದಿಲ್ಲ.

Read Full Story

04:11 PM (IST) Jun 04

ಆರ್‌ಸಿಬಿ ಕಪ್ ಗೆದ್ದಿದ್ದಕ್ಕೆ ಸಿಕ್ಕಿದ್ದು 20 ಕೋಟಿ, ಆರ್‌ಸಿಬಿ ಫ್ರಾಂಚೈಸಿ ಜೇಬು ಸೇರಿದ್ದು ಬರೋಬ್ಬರಿ 2164 ಕೋಟಿ!

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಫ್ರಾಂಚೈಸಿಯು 2200 ಕೋಟಿ ರುಪಾಯಿ ಲಾಭ ಗಳಿಸಿದೆ. ಇದು ಹೇಗೆ ನೋಡೋಣ ಬನ್ನಿ

Read Full Story

04:07 PM (IST) Jun 04

ಇಡೀ ಜಗತ್ತು ಶಿವನನ್ನು ನಂಬಿದರೆ, ಕಷ್ಟಗಳೇ ಇರೋದಿಲ್ಲ ಎಂದ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ತಂದೆ!

ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಐದು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಹಿಂದೂ ಧರ್ಮದಿಂದ ಆಕರ್ಷಿತರಾಗಿರುವುದಾಗಿ ಹೇಳಿಕೊಂಡಿರುವ ಅವರು, ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
Read Full Story

03:54 PM (IST) Jun 04

ಹಳದಿ-ಕೆಂಪು ಕನ್ನಡದ ಬಾವುಟ ಹಿಡಿದು ಆರ್‌ಸಿಬಿ ಗೆಲುವು ಸಂಭ್ರಮಿಸಿದ ವಿರಾಟ್ ಕೊಹ್ಲಿ!

ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಿ ವಿಜಯೋತ್ಸವ ಆಚರಿಸಿದೆ. ವಿರಾಟ್ ಕೊಹ್ಲಿ ಕನ್ನಡದ ಬಾವುಟ ಹಿಡಿದು ಅಭಿಮಾನಿಗಳಿಗೆ ನಮನ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಂಡವನ್ನು ಬರಮಾಡಿಕೊಂಡರು.
Read Full Story

03:14 PM (IST) Jun 04

ತೂಕ ಇಳಿಕೆಯಲ್ಲಿ ನೀರು ಎಷ್ಟು ಮಹತ್ವದ್ದು ನೋಡಿ

ತೂಕ ಇಳಿಸಿಕೊಳ್ಳುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ.  ಹೀಗಾಗಿ ಉತ್ತಮ ಫಲಿತಾಂಶ ಮತ್ತು ಆರೋಗ್ಯಕ್ಕಾಗಿ ತೂಕ ಇಳಿಸುವ ಪ್ರಯಾಣದಲ್ಲಿ ನೀರಿನ ಸೇವನೆಗೆ ಆದ್ಯತೆ ನೀಡಿ.

Read Full Story

03:05 PM (IST) Jun 04

ಅನುಷ್ಕಾ ಶರ್ಮಾ IPL 2025 ರಲ್ಲಿ ದುಬಾರಿ ರೋಲೆಕ್ಸ್ ವಾಚ್! ಇದನ್ನು ಮಾರಿ 2BHK ಫ್ಲಾಟ್ ಖರೀದಿಸಬಹುದು!

IPL 2025 ಫೈನಲ್‌ನಲ್ಲಿ RCB ಗೆಲುವಿನ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ ಅವರ ದುಬಾರಿ ಬೆಲೆಯ Rolex ಗಡಿಯಾರ ಎಲ್ಲರ ಗಮನ ಸೆಳೆಯಿತು. ಈ ಒಂದು ವಾಚ್ ಮಾರಿದರೆ ಬೆಂಗಳೂರಿನಲ್ಲಿ 2ಬಿಹೆಚ್‌ಕೆ ಫ್ಲಾಟ್ ಖರೀದಿ ಮಾಡಬಹುದು.

Read Full Story

03:05 PM (IST) Jun 04

ಈ ವರ್ಷ ಆರ್‌ಸಿಬಿ ಕಪ್ ಗೆಲ್ಲಲು ಪ್ರಮುಖ ಕಾರಣಗಳೇನು?

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಗೆಲುವಿಗೆ ಕಾರಣವೇನು ನೋಡೋಣ ಬನ್ನಿ

Read Full Story

02:35 PM (IST) Jun 04

ಈ ಒಂದೇ ಕಟ್ಟಡದಲ್ಲಿ ₹12,500 ಕೋಟಿ ಮೌಲ್ಯದ ಚಿನ್ನ ಸಂಗ್ರಹ - ನಿಮ್ಮ ಬಂಗಾರ ಬ್ಯಾಂಕ್‌ಗಳಿಗಿಂತ ಭದ್ರ!

ಸಿಂಗಾಪುರದಲ್ಲಿರುವ 'ದ ರಿಸರ್ವ್' ಎಂಬ ಖಾಸಗಿ ಭದ್ರತಾ ಭಂಡಾರವು ಶ್ರೀಮಂತರಿಗೆ ಹೊಸ ಚಿನ್ನದ ಸಂಗ್ರಹಣಾ ಕೇಂದ್ರವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಅಪನಂಬಿಕೆ ಮತ್ತು ನೈಜ ಚಿನ್ನದ ಮೇಲಿನ ನಂಬಿಕೆ ಈ ಬದಲಾವಣೆಗೆ ಕಾರಣವಾಗಿದೆ.
Read Full Story

02:07 PM (IST) Jun 04

ರಾಹುಲ್ ಗಾಂಧಿಗೆ 'ಹೆಚ್ಚು ಈರುಳ್ಳಿ ತಿನ್ನುವ ಹೊಸ ಮುಲ್ಲಾ' ಎಂದ ಬಿಜೆಪಿ!

ಆಪರೇಷನ್ ಸಿಂದೂರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ರಾಹುಲ್ ಗಾಂಧಿಯವರನ್ನು 'ಹೊಸ ಮುಲ್ಲಾ' ಎಂದು ಕರೆದಿದ್ದಾರೆ ಮತ್ತು ಸೇನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Read Full Story

01:29 PM (IST) Jun 04

ಉಡುಪಿಯಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ - ಇಬ್ಬರು ಬಂಧನ

ಉಡುಪಿ ಜಿಲ್ಲೆಯಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲು ತಂಡವನ್ನು ರಚಿಸಿದೆ.
Read Full Story

01:23 PM (IST) Jun 04

ಆರ್‌ಸಿಬಿ ಗೆದ್ದಿದ್ರಿಂದ ಈ ಪುಟಾಣಿ ಶಾಲೆಗೆ ಹೋಗೋ ಹಾಗಾಯ್ತು ನೋಡಿ!

ಬಾಲಕಿಯೊಬ್ಬಳು ಈಗ ಆರ್‌ಸಿಬಿ ಗೆಲುವಿನಿಂದಾಗಿ ಶಾಲೆಗೆ ಹೋಗಲೇಬೇಕಾಗಿದೆ. ಏನಿದು ಯಾಕೆ ಅಂತೀರಾ ಈ ಸ್ಟೋರಿ ನೋಡಿ.

Read Full Story

01:20 PM (IST) Jun 04

ಆರ್‌ಸಿಬಿ ವಿಜಯೋತ್ಸವಕ್ಕೆ ಉಚಿತ ಪ್ರವೇಶವಿಲ್ಲ; ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಟಿಕೆಟೋ, ಪಾಸೋ..?

ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಇಂದು ಸಂಜೆ 5 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ನಡೆಯಲಿದೆ. ಆದರೆ, ಕ್ರೀಡಾಂಗಣಕ್ಕೆ ಉಚಿತ ಪ್ರವೇಶದ ಬದಲು ಟಿಕೆಟ್ ಅಥವಾ ಪಾಸ್ ವಿತರಣೆ ಮಾಡಲು ಕೆಎಸ್‌ಸಿಎ ನಿರ್ಧರಿಸಿದೆ.

Read Full Story

01:11 PM (IST) Jun 04

ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆಯೇ ಭರ್ಜರಿ ಸೆಲಿಬ್ರೇಟ್ ಮಾಡಿದ ಅಲ್ಲು ಅರ್ಜುನ್ ಪುತ್ರ!

ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದ ನಂತರ ಅಲ್ಲು ಅರ್ಜುನ್ ಪುತ್ರ ಅಯಾನ್ ಭಾವುಕರಾದರು. ಯುವ ವಿರಾಟ್ ಕೊಹ್ಲಿ ಅಭಿಮಾನಿಯ ಆಚರಣೆಯ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

Read Full Story

More Trending News