ರಾಜ್ಯ ಸರ್ಕಾರ ತನ್ನ ಆಡಳಿತ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ಪ್ರಮುಖವಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಸರ್ಕಾರ ವರ್ಗಾವಣೆ ಗೊಳಿಸಿದೆ. ನಗರಾಭಿವೃದ್ಧಿ ಇಲಾಖೆಯ ಹಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಗೊಳಿಸಲಾಗಿದೆ. ಇತ್ತ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

12:00 AM (IST) Apr 30
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಮೇ 14, 2025 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಹಾಲಿ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ.
ಪೂರ್ತಿ ಓದಿ11:41 PM (IST) Apr 29
ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಧೋರಣೆ ಸುದ್ದಿ ಮಾಡಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಅವರ ಆಕ್ರಮಣಕಾರಿ ಪ್ರತಿಕ್ರಿಯೆಗಳು ವೈರಲ್ ಆಗಿವೆ.
ಪೂರ್ತಿ ಓದಿ11:06 PM (IST) Apr 29
ಪ್ರಮೋದ್ ಮುತಾಲಿಕ್ ಅವರು ಸಿದ್ದರಾಮಯ್ಯ, ಭಯೋತ್ಪಾದನೆ ಮತ್ತು ಹಿಂದೂಗಳ ಸ್ಥಿತಿಗತಿಗಳ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ. ಪೆಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಭಯೋತ್ಪಾದನೆಗೆ ಧರ್ಮ, ದೇಶ ಇಲ್ಲ ಎನ್ನುವ ರಾಜಕಾರಣಿಗಳನ್ನು ಟೀಕಿಸಿದ್ದಾರೆ.
ಪೂರ್ತಿ ಓದಿ11:02 PM (IST) Apr 29
ಮೈಸೂರು ಮೂಲದ ಉದ್ಯಮಿ ಹರ್ಷವರ್ಧನ್, ಅಮೆರಿಕದಲ್ಲಿ ಪತ್ನಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷದ ಕಿರಿಯ ಮಗ ಬದುಕುಳಿದಿದ್ದಾನೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೂರ್ತಿ ಓದಿ10:31 PM (IST) Apr 29
ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಗುಂಪೊಂದು ಹತ್ಯೆಗೈದಿದೆ. ಈ ಘಟನೆ ಏಪ್ರಿಲ್ 27 ರಂದು ಕುಡುಪು ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಹಲವಾರು ಶಂಕಿತರನ್ನು ಬಂಧಿಸಲಾಗಿದೆ.
ಪೂರ್ತಿ ಓದಿ10:17 PM (IST) Apr 29
ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಬರ್, ಓಲಾ ಮತ್ತು ರ‍್ಯಾಪಿಡೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಜೂನ್ 15 ರವರೆಗೆ ಸೇವೆಗಳನ್ನು ಮುಂದುವರಿಸಲು ನ್ಯಾಯಾಲಯ ಅವಕಾಶ ನೀಡಿದೆ.
ಪೂರ್ತಿ ಓದಿ10:10 PM (IST) Apr 29
ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದ A-16 ಆರೋಪಿ ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಉತ್ತರಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜತೆ ಆತ್ಮೀಯನಾಗಿದ್ದ ಈತ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಪೂರ್ತಿ ಓದಿ09:57 PM (IST) Apr 29
ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಿದ ಟರ್ಕಿ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿ ಬೈಕಾಟ್ ಅಭಿಯಾನ ಆರಂಭಿಸಿದ್ದಾರೆ. ಇದರಿಂದಾಗಿ ಟರ್ಕಿ ಪಾಕ್ಗೆ ನೆರವು ನೀಡಿಲ್ಲ ಎಂದು ಸಮಜಾಯಿಷಿ ನೀಡಿದೆ. ಭಾರತದಿಂದ ನೆರವು ಪಡೆದಿದ್ದ ಟರ್ಕಿ ಈಗ ಪಾಕ್ ಪರ ನಿಂತಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಪೂರ್ತಿ ಓದಿ09:37 PM (IST) Apr 29
ಅವರು ಎಎಕ್ಸ್-4 ಕಾರ್ಯಾಚರಣೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಲಿದ್ದು, ನಾಸಾದ ಅನುಭವಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವದ ಅಂತರರಾಷ್ಟ್ರೀಯ ತಂಡವನ್ನು ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.
09:21 PM (IST) Apr 29
ಆರು ನಕ್ಷತ್ರಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಅವರನ್ನು ಮದುವೆಯಾಗುವ ಪುರುಷರಿಗೆ ಸಮೃದ್ಧಿ, ಐಶ್ವರ್ಯ ಕಟ್ಟಿಟ್ಟದ್ದೇ. ಯಾವುದೀ ನಕ್ಷತ್ರಗಳು?
ಪೂರ್ತಿ ಓದಿ09:17 PM (IST) Apr 29
2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಲು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರು ಈ ಅವಕಾಶವನ್ನು ಬಳಸಿಕೊಂಡು ಶೇ.5ರಷ್ಟು ರಿಯಾಯಿತಿ ಪಡೆಯಬಹುದು.
ಪೂರ್ತಿ ಓದಿ09:01 PM (IST) Apr 29
ಕಾಶ್ಮೀರದಲ್ಲಿ ವಾಸಿಸುತ್ತಿರುವ 60 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗುತ್ತಿದೆ. ಇವರಲ್ಲಿ ಶೌರ್ಯ ಚಕ್ರ ವಿಜೇತ ಹುತಾತ್ಮ ಯೋಧನ ತಾಯಿ ಮತ್ತು ಸಿಆರ್‌ಪಿಎಫ್ ಜವಾನನ ಪತ್ನಿ ಸೇರಿದ್ದಾರೆ.
ಪೂರ್ತಿ ಓದಿ08:39 PM (IST) Apr 29
ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಾಗುವುದು.
ಪೂರ್ತಿ ಓದಿ08:19 PM (IST) Apr 29
ರ‍್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್‌ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.
ಪೂರ್ತಿ ಓದಿ08:17 PM (IST) Apr 29
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡುತ್ತಾ, ಸಚಿವ ಸತೀಶ್ ಜಾರಕಿಹೊಳಿ ಸೇನೆಯನ್ನು ಲೇವಡಿ ಮಾಡುವ ಹೇಳಿಕೆ ನೀಡಿದ್ದಾರೆ. ಯುದ್ಧವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಸಬಹುದು ಎಂದು ಹೇಳಿದ್ದಾರೆ.
ಪೂರ್ತಿ ಓದಿ08:09 PM (IST) Apr 29
ಚಾಮರಾಜನಗರದಲ್ಲಿ ಲೇಡಿ ಪಿಎಸ್ಐ ವರ್ಷಾ ಅವರ ಕಿರುಕುಳದಿಂದಾಗಿ ಯುವಕ ದುಷ್ಯಂತ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಯಂತ್ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವರ್ಷಾ ಪದೇ ಪದೇ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದುಷ್ಯಂತ್ ಪೋಷಕರು ಆರೋಪಿಸಿದ್ದಾರೆ. ದುಷ್ಯಂತ್ ಈಗ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ತಿ ಓದಿ07:42 PM (IST) Apr 29
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 9 ವರ್ಷದ ಲ್ಯಾಬ್ರಡಾಲ್ ರಿಟ್ರಿವರ್ ತಳಿಯ ಶ್ವಾನ ಪೃಥ್ವಿ ಹೃದಯಾಘಾತದಿಂದ ಮೃತಪಟ್ಟಿದೆ. ಹಲವಾರು ವಿಐಪಿಗಳ ಭದ್ರತಾ ಕೆಲಸ ನಿರ್ವಹಿಸಿದ್ದ ಪೃಥ್ವಿಗೆ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿದೆ.
ಪೂರ್ತಿ ಓದಿ07:40 PM (IST) Apr 29
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿದೆ. ದೇವರಿಲ್ಲದ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಉಗ್ರರ ದಾಳಿಯಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ಪೂರ್ತಿ ಓದಿ07:38 PM (IST) Apr 29
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಪೂರ್ತಿ ಓದಿ06:40 PM (IST) Apr 29
ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು, ಆವರಣಗಳು ಮತ್ತು ರೈಲುಗಳ ಒಳಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಆರ್‌ಸಿಎಲ್ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುಂದರ ಮತ್ತು ಸ್ವಚ್ಛವಾಗಿರುವ ನಮ್ಮ ಮೆಟ್ರೋವನ್ನು ಗಬ್ಬೆಬ್ಬಿಸಲು ಮುಂದಾಗಿದೆ.
ಪೂರ್ತಿ ಓದಿ06:27 PM (IST) Apr 29
ಪ್ರಧಾನಿ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ರಕ್ಷಣಾ ಸಭೆ ನಡೆಸಿದರು.
ಪೂರ್ತಿ ಓದಿ06:06 PM (IST) Apr 29
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಹಾರಾಷ್ಟ್ರದ ಪ್ರವಾಸಿಗರ ಕುಟುಂಬಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ₹50 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲೂ ಸಹಾಯ ಮಾಡಲಿದೆ.
ಪೂರ್ತಿ ಓದಿ05:30 PM (IST) Apr 29
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಹೊಸ ವ್ಯವಸ್ಥೆ. ರಾಂಪುರ ಬದಲಿಗೆ ಕಣ್ವ ಜಂಕ್ಷನ್ ಬಳಿ ಪ್ರವೇಶ ಮತ್ತು ನಿರ್ಗಮನ ಒದಗಿಸಲು ಚಿಂತನೆ.
ಪೂರ್ತಿ ಓದಿ04:59 PM (IST) Apr 29
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗೃಹ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಪ್ರತೀಕಾರದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಮಾಜಿ ಎಸ್‌ಎಸ್‌ಜಿ ಕಮಾಂಡರ್ ಹಾಶಿಂ ಮೂಸಾ ಎಂದು ಗುರುತಿಸಲಾಗಿದೆ.
ಪೂರ್ತಿ ಓದಿ04:56 PM (IST) Apr 29
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 368 ಮರಗಳನ್ನು ಕಡಿಯುವ ಪಗ್ರಸ್ತಾಪವನ್ನು ಬಿಬಿಎಂಪಿ ಸಾರ್ವಜನಿಕರ ಮುಂದಿಟ್ಟಿದೆ. ಆದರೆ, ಪರಿಸರಕ್ಕಾಗಿ ನಾವು ಸಂಘಟನೆಯು ಮರಗಳನ್ನು ಉಳಿಸುವಂತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದೆ.
ಪೂರ್ತಿ ಓದಿ04:37 PM (IST) Apr 29
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಭಯಾನಕ ಘಟನೆಗಳನ್ನು ಬಹಿರಂಗಪಡಿಸಿವೆ. ಭಯೋತ್ಪಾದಕರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಿದ್ದರಿಂದ ಪ್ರವಾಸಿಗರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿರಲಿಲ್ಲ.
ಪೂರ್ತಿ ಓದಿ04:37 PM (IST) Apr 29
: ಈ ಬಾರಿ ಅಕ್ಷಯ ತೃತೀಯಾ ಏಪ್ರಿಲ್ 30, ಬುಧವಾರದಂದು ಆಚರಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸುವುದು ಬಹಳ ಶುಭ ಎಂದು ನಂಬಲಾಗಿದೆ.
ಪೂರ್ತಿ ಓದಿ
04:31 PM (IST) Apr 29
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ 15 ಕಾಶ್ಮೀರಿಗಳನ್ನು ಎನ್‌ಐಕೆ ವಶಕ್ಕೆ ಪಡೆದು ವಿಚಾರಣೆ ನಡೆಸಿದು ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಪೂರ್ತಿ ಓದಿ04:02 PM (IST) Apr 29
ದೆಹಲಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಸೇವಾ ಶುಲ್ಕ ವಿಧಿಸಿದ 5 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ. ಕಡ್ಡಾಯ ಸೇವಾ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಪೂರ್ತಿ ಓದಿ03:58 PM (IST) Apr 29
ಸಂಜೆಯಾಗಿದೆ, ಕೆಲಸ ಮುಗಿಯುತ್ತಾ ಬಂದಿದೆ. ಕ್ಲೈಂಟ್ ಜೊತೆ ಮಾತನಾಡುತ್ತಾ ಇನ್ನೇನು ಕರೆ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಉದ್ಯೋಗಿ ಒಕೆ, ಒಕೆ ಲವ್ ಯು ಎಂದಿದ್ದಾನೆ. ಅಚಾನಕ್ಕಾಗಿ ಈ ಮಾತುಗಳು ಬಂದಿದೆ. ಆದರೆ ಮರುದಿನ ಅದೇ ಕ್ಲೈಂಟ್‌ನಿಂದ ಬಂದ ಇಮೇಲ್ ನೋಡಿ ಉದ್ಯೋಗಿ ಅಚ್ಚರಿಗೊಂಡಿದ್ದಾನೆ.
ಪೂರ್ತಿ ಓದಿ03:33 PM (IST) Apr 29
ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮತ್ತು ನಟಿ ಧನ್ಯಾ ರಾಮ್‌ಕುಮಾರ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಧನ್ಯಾ, ದೇವದತ್ ಅವರ ಜೆರ್ಸಿ ಧರಿಸಿ ಫೋಟೋ ತೆಗೆಸಿಕೊಂಡಿದ್ದು ಈ ವದಂತಿಗಳಿಗೆ ಕಾರಣವಾಗಿದೆ. ಆದರೆ, ಇದು ಕೇವಲ ಗಾಸಿಪ್ ಎಂಬ ಮಾತುಗಳು ಕೇಳಿಬಂದಿವೆ.
ಪೂರ್ತಿ ಓದಿ03:23 PM (IST) Apr 29
200 ರೂಪಾಯಿಗೆ 100mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಸಿಗತ್ತೆ ಎನ್ನೋದು ಸದ್ಯ ಕರ್ನಾಟಕದಲ್ಲಿ ಕನಸು ಎನ್ನಬಹುದು. ಆದರೆ ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆಯಂತೆ.
02:56 PM (IST) Apr 29
ಪೆಹಲ್ಗಾಮ್ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸುಳ್ಳು ಸುದ್ದಿ, ನಕಲಿ ಮಾಹಿತಿ ಹರಡುತ್ತಿದ್ದ ಪಾಕಿಸ್ತಾನ ರಕ್ಷಣಾ ಸಚಿವನ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಬ್ಲಾಕ್ ಮಾಡಿದೆ.
ಪೂರ್ತಿ ಓದಿ02:49 PM (IST) Apr 29
ಗಾಂಜಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ರಾಪರ್ ವೇದನ್, ಈಗ ಹುಲಿಯ ಹಲ್ಲು ಪೆಂಡೆಂಟ್ ಧರಿಸಿದ್ದಕ್ಕಾಗಿ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಈ ಹಲ್ಲನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಲಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಪೂರ್ತಿ ಓದಿ02:18 PM (IST) Apr 29
ನ್ಯೂ ಜನರೇಶನ್, ಹೊಸ ಹೊಸ ರಿಲೇಶನ್‌ಶಿಪ್ ಟ್ರೆಂಡ್, ಆರೋಗ್ಯ ಸವಾಲುಗಳು ನಡುವೆ ಅಪ್ಪನಾಗಲು ಸೂಕ್ತ ವಯಸ್ಸು ಇದೆಯಾ? ಮದುವೆ ಬಳಿಕ ಯಾವಾಗ ತಂದೆಯಾಗಬಹುದು? ಯಾವೆಲ್ಲಾ ಅಂಶ ಪರಿಗಣಿಸಬೇಕಾಗುತ್ತೆ?
02:17 PM (IST) Apr 29
ಯೋಗಿ ಆದಿತ್ಯನಾಥ್ ಯುಪಿ 7ನೇ ಸ್ಥಾನದಿಂದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೇಗೆ ಬೆಳೆಯಿತು ಎಂದು ವಿವರಿಸಿದ್ದಾರೆ. ಸುರಕ್ಷತೆ, ಮೂಲಸೌಕರ್ಯ ಮತ್ತು ಹೂಡಿಕೆಗೆ ಒತ್ತು ನೀಡಲಾಗಿದೆ.
ಪೂರ್ತಿ ಓದಿ02:15 PM (IST) Apr 29
ಚಂದ್ರನು ಶುಕ್ರನ ರಾಶಿಚಕ್ರಕ್ಕೆ ಪ್ರವೇಶಿಸಲಿದ್ದು, ಇದು 3 ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು.
01:46 PM (IST) Apr 29
ಬಿಜೆಪಿಯ 'ಕಾಂಗ್ರೆಸ್ ಕೆ ಹಾಥ್ - ಪಾಕಿಸ್ತಾನ್ ಕೆ ಸಾಥ್' ಎಂಬ ಟೀಕೆಯನ್ನು ಬಿಕೆ ಹರಿಪ್ರಸಾದ್ ಖಂಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಬಿಜೆಪಿ ಸೋಷಿಯಲ್ ಮೀಡಿಯಾ ರಾಜಕಾರಣ ಮತ್ತು ಸ್ಲೋಗನ್‌ಗಳ ಮೂಲಕ ವಾತಾವರಣ ಹಾಳುಗೆಡವುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಉಗ್ರ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ01:38 PM (IST) Apr 29
ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪೂರ್ತಿ ಓದಿ01:13 PM (IST) Apr 29
ಪಹಲ್ಗಾಂನಲ್ಲಿ ಭಯೋತ್ಪಾದಕರು ತನ್ನ ಪತಿಯನ್ನು ಕೊಂದಾಗ, "ನಮ್ಮನ್ನು ಸಾಯಿಸಿ" ಎಂದು ತಾನು ಮತ್ತು ತನ್ನ ಮಗ ಕೂಗಿದ್ದಾಗಿ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ಈ ಹೇಳಿಕೆಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ವಿವರಿಸಲು ಮನಸ್ಸಿಲ್ಲ ಎಂದು ಮನವಿ ಮಾಡಿದ್ದಾರೆ.
ಪೂರ್ತಿ ಓದಿ