ಮೈಸೂರು: ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದರಿಂದ ಜೆಡಿಎಸ್ ಪ್ರಚಾರ ಸಾಮಗ್ರಿಯಲ್ಲಿ ನನ್ನ ಫೋಟೋವನ್ನು ಹಾಕುತ್ತಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಡಿಎಂಜಿ ಹಳ್ಳಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಸಿದ್ದರಾಮಯ್ಯ ಒಬ್ಬರು ಯಾಕೆ? ಯಾರ್ಯಾರ ಮೇಲೆ ಆರೋಪಗಳಿದೆ ಅವರೆಲ್ಲಾ ರಾಜೀನಾಮೆ ಕೊಡಲಿ ಎಂದು ಹೇಳಿದ್ದೆ. ಇದು ತಪ್ಪಾ?. ಇಷ್ಟಕ್ಕೆ ಜೆಡಿಎಸ್‌ನವರು ನನ್ನ ಫೋಟೋವನ್ನು ಹಾಕುತ್ತಿಲ್ಲ ಎಂದರು. ಇಷ್ಟಾದರೂ ಕ್ಷೇತ್ರದ ಜನತೆ 2028ರಲ್ಲಿ ನೀವು ನಾಮಪತ್ರ ಹಾಕಿ, ನಾವು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನನಗೆ ಇಷ್ಟೇ ಪ್ರೀತಿ ಸಾಕು ಎಂದರು.
10:58 PM (IST) Jul 28
10:31 PM (IST) Jul 28
10:00 PM (IST) Jul 28
ಬೆಂಗಳೂರಿನ ಪ್ರಸಿದ್ಧ ಕುಮಾರ ಕೃಪಾ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್‌ನಲ್ಲಿ ಕೊಠಡಿ ಕಾಯ್ದಿರಿಸುವ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ.
08:33 PM (IST) Jul 28
08:13 PM (IST) Jul 28
07:13 PM (IST) Jul 28
ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಆದಾಯ ತೆರಿಗೆ ರಿಟರ್ನ್ ಗಡುವು, ತತ್ಕಾಲ್ ರೈಲು ಟಿಕೆಟ್ ಬುಕಿಂಗ್, ಮತ್ತು ಆಧಾರ್ ಆಧಾರಿತ CKYC 2.0 ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬರಲಿವೆ.
06:33 PM (IST) Jul 28
05:59 PM (IST) Jul 28
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಆ ಹುಡುನ ಯಶಸ್ಸಿನ ಹಿಂದೆ ತಂದೆಯ ನನಸಾಗದ ಕನಸು ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಸ್ಪೂರ್ತಿದಾಯಕ ಕಥೆಯಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
05:33 PM (IST) Jul 28
ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್ ಅವರ ಕ್ಲೋಸ್ ಸರ್ಕಲ್‌ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೆಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ಬದಲಾಗಿಲ್ಲ!
04:57 PM (IST) Jul 28
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
04:54 PM (IST) Jul 28
ಬೆಂಗಳೂರಿನ 'ನಮ್ಮ ಮೆಟ್ರೋ' 3ನೇ ಹಂತದ ಯೋಜನೆಗಾಗಿ 1,087 ಕಟ್ಟಡಗಳನ್ನು ನೆಲಸಮಗೊಳಿಸಲು BMRCL ಸಿದ್ಧತೆ ನಡೆಸಿದೆ. 44.65 ಕಿ.ಮೀ ಉದ್ದದ ಈ ಯೋಜನೆಯು ಜೆ.ಪಿ. ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ.
04:52 PM (IST) Jul 28
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು, ಮಧ್ಯಮ ವರ್ಗದ ಪೋಷಕರ ಎದುರು ‘ನಾನು ನಟಿ ಆಗ್ತೀನಿ’ ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಮುಂದೆ..?
04:14 PM (IST) Jul 28
ಕಂಪನಿಯ ಪ್ರಕಾರ ಈ ಸ್ಕೂಟರ್ ಲೀಟರ್‌ಗೆ ಸರಿಸುಮಾರು 53.8 ಕಿ.ಮೀ ಮೈಲೇಜ್ ನೀಡಲಿದ್ದು, 113.3 ಸಿಸಿ ಎಂಜಿನ್, ಆಧುನಿಕ ಎಲ್‌ಇಡಿ ಡಿಆರ್‌ಎಲ್‌ಗಳು, ಡಿಜಿಟಲ್ ಹಾಗೂ ಬ್ಲೂಟೂತ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲೇ ಪೆಟ್ರೋಲ್ ತುಂಬಿಸುವ ಸೌಲಭ್ಯ ಹೊಂದಿದೆ.
04:00 PM (IST) Jul 28
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಲೇಔಟ್‌ನ ನಿವೇಶನಗಳ ದರವನ್ನು ಪ್ರತಿ ಚದರಡಿಗೆ ₹6,000ಕ್ಕೆ ಹೆಚ್ಚಿಸಿದೆ. ಈ ದರ ಏರಿಕೆಯಿಂದ 30x40 ಅಡಿ ನಿವೇಶನದ ಬೆಲೆ ₹72 ಲಕ್ಷಕ್ಕೆ ತಲುಪಿದ್ದು, ಇದು ಮಧ್ಯಮ ವರ್ಗದ ಮನೆ ಆಕಾಂಕ್ಷಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.
03:40 PM (IST) Jul 28
ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು.
02:44 PM (IST) Jul 28
01:40 PM (IST) Jul 28
01:09 PM (IST) Jul 28
ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಶುರುವಾಗುತ್ತಿದ್ದಂತೆ, ಅತ್ತ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ (Flipkart) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ಫ್ರೀಡಂ ಸೇಲ್ 2026 (Freedom Sale 2026) ದಿನಾಂಕ ಪ್ರಕಟವಾಗಿದ್ದು, ಆಗಸ್ಟ್ 8 ರಿಂದ ಈ ಭರ್ಜರಿ ಮಾರಾಟ ಮೇಳ ಆರಂಭವಾಗಲಿದೆ.
12:23 PM (IST) Jul 28
‘ಜೈಲಿನಲ್ಲಿ ಇದ್ರೂ, ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ. ರಾಜಕೀಯಕ್ಕೆ ಹೋಗ್ತಾರೆ ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ’.. ಏನಿದು ಸ್ಟೋರಿ ನೋಡಿ..
12:19 PM (IST) Jul 28
ವಿಶ್ವ ಪಾರಂಪರಿಕ ತಾಣ ಹಂಪಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
11:24 AM (IST) Jul 28
'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್‌ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದ್ದು, ಸಿಟಿ ರವಿ ಇದೇ ರೀತಿ ಮಾತು ಮುಂದುವರಿಸಿದರೆ ಚಿಕ್ಕಮಗಳೂರಿಗೆ ಕಾಲಿಡಲು ಬಿಡೋಲ್ಲ ಎಂದು ಎಚ್ಚರಿಕೆ ನೀಡಿದರು.
10:20 AM (IST) Jul 28
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವುದು ಹಿರಿಯ ನಾಯಕರಿಗೆ ಬೆದರಿಕೆ ಹಾಕುವ ನಾಟಕ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸಿ.ಟಿ. ರವಿ ಅವರ ಮೇಲೆ ಎಫ್‌ಐಆರ್ ಮಾಡುವ ಪೊಲೀಸರು, ಹಿಂದೂ ಧರ್ಮವನ್ನು ನಿಂದಿಸುವವರ ಮೇಲೆ ಏನು ಕ್ರಮ ಜರುಗಿಸಿದ್ದಾರೆ?
09:22 AM (IST) Jul 28
08:58 AM (IST) Jul 28
08:44 AM (IST) Jul 28
08:41 AM (IST) Jul 28
ಕೆಲಸ ಮುಗಿಸಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ರಾಮಮೂರ್ತಿನಗರದಲ್ಲಿ ಸ್ಕೂಟಿಯಲ್ಲಿ ಬಂದ ಕಾಮುಕನೊಬ್ಬ 'ನಿನ್ನ ರೇಟ್ ಎಷ್ಟು?' ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ವಿಡಿಯೋ ಮಾಡಲು ಮುಂದಾದಾಗ ಪರಾರಿ. ಈ ಘಟನೆ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.
08:20 AM (IST) Jul 28
08:02 AM (IST) Jul 28
ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಾವುದೇ ನಿಯಮಗಳನ್ನು ಪಾಲಿಸದೆ ಅಮಾಯಕರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ.
07:29 AM (IST) Jul 28
07:21 AM (IST) Jul 28
ಡಾಂಬರೀಕರಣ ಕಾಮಗಾರಿಯ ಕಾರಣ, ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ಎಂಟು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳಿಗಾಗಿ ಪೊಲೀಸರು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ.