ರಾಜ್ಯದ ಜನತೆ ಕ್ರಿಸ್ ಮಸ್ ಹಿನ್ನೆಲೆಯಲ್ಲಿ ರಜೆಗೆ ಬೆಂಗಳೂರಿನಿಂದ ಗೋಕರ್ಣಗೆ ಹೊರಟಿದ್ದ ಬಸ್ ಚಿತ್ರದುರ್ಗದ ಗೊರ್ಲತ್ತು ಬಳಿ ಭೀಕರ ಅಪಘಾತವಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 9 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದ 23 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

12:51 PM (IST) Dec 25
ಅಟಲ್ ಜಿ ಕೇವಲ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಒಬ್ಬ ಸಂವೇದನಾಶೀಲ ಕವಿ ಮತ್ತು ಅಪ್ರತಿಮ ವಾಗ್ಮಿಯಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು.
12:37 PM (IST) Dec 25
ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಸುದೀಪ್ ಅಮಾನತುಗೊಂಡ ಪೊಲೀಸ್ ಅಧಿಕಾರಿಯ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
12:27 PM (IST) Dec 25
ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದ ನಂತರ, ಹಾಸನದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ನವ್ಯ ಮತ್ತು ಮಾನಸ ಕಣ್ಮರೆಯಾಗಿದ್ದಾರೆ. ಏಪ್ರಿಲ್‌ನಲ್ಲಿ ಮದುವೆ ನಿಗದಿಯಾಗಿದ್ದ ನವ್ಯ ಸೇರಿದಂತೆ ಮಕ್ಕಳಿಗೆ ಪೋಷಕರು ಆಸ್ಪತ್ರೆಗಳಲ್ಲಿ ಕಣ್ಣೀರಿನೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.
12:24 PM (IST) Dec 25
ರಾಹುಲ್ ಗಾಂಧಿಯವರ ನೇತೃತ್ವದ ವಿಪಕ್ಷ ಲೋಕಸಭೆಯಲ್ಲಿ ಏನು ಮಾಡುತ್ತಿದೆ ಎಂಬುದನ್ನು ಗಮನಿಸಿದರೆ, ಇವರಿಗೆಲ್ಲ ವಾಜಪೇಯಿಯವರಿಂದಲೇ ಪಾಠ ಹೇಳಿಸಿಕೊಳ್ಳುವ ಅಗತ್ಯವಿದೆ ಎಂದು ಅನ್ನಿಸದೇ ಇರುವುದಿಲ್ಲ.
12:17 PM (IST) Dec 25
ಡಿ.25 ವಾಜಪೇಯಿ ಅವರ ಜನ್ಮದಿನ. ದೇಶದ ಅಭಿವೃದ್ಧಿ ರಥಕ್ಕೆ ರಾಜಪಥ ನಿರ್ಮಿಸಿ, ಭವ್ಯ ಭಾರತದ ಬೆಳವಣಿಗೆಗೆ ಭರವಸೆಯ ಬೆಳಕಾಗಿ ನಿಂತವರು ಅಟಲ್‌ಜೀ. ದೇಶ ಕಂಡ ಪ್ರಧಾನಿಗಳ ಪಟ್ಟಿಯಲ್ಲಿ ಅಟಲ್‌ಜೀ ಅವರಿಗೆ ವಿಶೇಷ ಸ್ಥಾನಮಾನ.
11:55 AM (IST) Dec 25
ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಗ್ನಿ ದುರಂತದಲ್ಲಿ, ಚಾಲಕ ಸಚಿನ್ ತನ್ನ ಪ್ರಾಣದ ಹಂಗು ತೊರೆದು 45 ಶಾಲಾ ಮಕ್ಕಳನ್ನು ರಕ್ಷಿಸಿದ್ದಾರೆ. ತಲೆಗೆ ಗಾಯವಾದರೂ ಲೆಕ್ಕಿಸದೆ, ಹೊತ್ತಿ ಉರಿಯುತ್ತಿದ್ದ ಇನ್ನೊಂದು ಬಸ್‌ನಲ್ಲಿದ್ದ ಹಲವು ಪ್ರಯಾಣಿಕರನ್ನು ಸಹ ಅವರು ಸಾವಿನ ದವಡೆಯಿಂದ ಪಾರುಮಾಡಿದ್ದಾರೆ.
11:52 AM (IST) Dec 25
ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಸಾವಿನಿಂದ ಪಾರಾದ ಗಾಯಾಳು ಕಿರಣ್ ಪಾಲ್ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ನಿದ್ದೆಯಲ್ಲಿದ್ದಾಗ ಅಪಘಾತ ಸಂಭವಿಸಿದ್ದು, ಹೊಗೆ ಮತ್ತು ಬೆಂಕಿಯ ನಡುವೆ ಒಡೆದ ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾಗಿ ಅವರು ವಿವರಿಸಿದ್ದಾರೆ.
11:50 AM (IST) Dec 25
ಸೆಕ್ಷನ್ 4ರಲ್ಲಿ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್ಪಿ ರ್‍ಯಾಂಕ್ ಮೇಲ್ಪಟ್ಟ ಅಧಿಕಾರಿಗೆ ನಂಬಲು ಕಾರಣವಿದ್ದರೆ ಎಂದು ಬರೆಯುತ್ತಾರೆ. ಆದರೆ, ಇದು ಸಾಬೀತು ಆಗಬೇಕಿಲ್ಲ. ಕೇವಲ ಆ ಅಧಿಕಾರಿಗೆ ನಂಬಲು ಕಾರಣವಿದ್ದರೆ ಸಾಕು.
11:48 AM (IST) Dec 25
ಜೈಪುರ: ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹರಾಜು ಕೂಡಾ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಿರುವಾಗಲೇ ಅರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದೆ. ಆರ್‌ಸಿಬಿ ಸ್ಟಾರ್ ಆಟಗಾರ ಬಂಧನ ಭೀತಿಗೆ ಒಳಗಾಗಿದ್ದಾರೆ.
11:43 AM (IST) Dec 25
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ವ್ಯಕ್ತಿಗತ ನಿಂದನೆ, ಚಾರಿತ್ರ್ಯಹರಣ, ತೇಜೋವಧೆ, ಪ್ರಚೋದನೆ, ಕೊಲೆಗಳಿಗೆ ಪ್ರಚೋದನೆ, ಹಿಂಸೆಗಳಿಗೆ ಪ್ರಚೋದನೆ, ಶಾಂತಿಗೆ ದಕ್ಕೆ ಪ್ರಕರಣಗಳನ್ನು ನಿರಂತರವಾಗಿ ಕಾಣುತ್ತಿದ್ದೇವೆ.
11:40 AM (IST) Dec 25
11:27 AM (IST) Dec 25
ಚಿತ್ರದುರ್ಗದ ಬಳಿ ಭೀಕರ ಬಸ್ ಅಗ್ನಿ ದುರಂತ. ಸಿಎಂ ಸಿದ್ದರಾಮಯ್ಯ ₹5 ಲಕ್ಷ ಪರಿಹಾರ ಘೋಷಿಸಿದ್ದು, ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಸಂಪೂರ್ಣ ವಿವರ ತಿಳಿಯಲು ಕ್ಲಿಕ್ ಮಾಡಿ.
11:18 AM (IST) Dec 25
ಮಾನವ ಕುಲಕ್ಕೆ ಮನುಷ್ಯತ್ವದ ಪಾಠ ಹೇಳಿ ಕತ್ತಲಿಂದ ಬೆಳಕಿನತ್ತ ಅವರನ್ನು ಕರೆದೊಯ್ದು ಜಗತ್ತನ್ನೇ ಜ್ಯೋತಿಸ್ವರೂಪ ಮಾಡಿ ಆ ಬೆಳಕಿನಲ್ಲಿ ಇಡೀ ಮಾನವಕುಲವನ್ನು ಉದ್ಧರಿಸಲು ಅವತರಿಸಿದ ಮಹಾಪುರುಷರು ಜಗತ್ತಿನಲ್ಲಿ ಅನೇಕರುಂಟು.
11:10 AM (IST) Dec 25
ಮಾರ್ಕ್ ಸಿನಿಮಾದ ಬಜೆಟ್ ದೊಡ್ಡದು. ಮ್ಯಾಕ್ಸ್‌ಗಿಂತ ಮೂರು ಪಟ್ಟು ದೊಡ್ಡದು. ನನ್ನ ಸಂಭಾವನೆಯ ಸ್ವಲ್ಪ ಭಾಗವನ್ನಷ್ಟೇ ತಗೊಂಡು ಉಳಿದದ್ದನ್ನು ಈ ಸಿನಿಮಾಗೆ ಇನ್‌ವೆಸ್ಟ್ ಮಾಡಿದ್ದೇನೆ ಎಂದರು ಕಿಚ್ಚ ಸುದೀಪ್.
10:48 AM (IST) Dec 25
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಹಲವು ಮಂದಿ ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಬ್ಯಾಚುಲರ್ ಪಾರ್ಟಿಗೆ ಹೊರಟಿದ್ದ ತಾಯಿ, ಮಗು ಕೂಡ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.
10:46 AM (IST) Dec 25
ಅಜಾತ ಶತ್ರು ಎಂದೇ ಹೆಸರುವಾಸಿಯಾಗಿದ್ದ, ರಾಜ್ಯ ಕಂಡ ‘ಬಡವರ’ ಮುಖ್ಯಮಂತ್ರಿ ದಿವಂಗತ ಡಾ। ಎನ್.ಧರಂಸಿಂಗ್ ಅವರು ಇಂದು ನಮ್ಮೆಲ್ಲರೊಂದಿಗೆ ಬದುಕಿದ್ದರೆ ಇಂದು ತಮ್ಮ 89ನೇ ಹುಟ್ಟುಹಬ್ಬ ಆಚರಿಸುತ್ತಿದ್ದರು.
10:28 AM (IST) Dec 25
‘ನನಗೆ ಇನ್ನೂ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಟಾಂಗ್ ನೀಡಿದ್ದಾರೆ.
10:13 AM (IST) Dec 25
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀ ಬರ್ಡ್ ಖಾಸಗಿ ಬಸ್ ಚಿತ್ರದುರ್ಗದ ಬಳಿ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 9 ಜನರು ಮೃತಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಘೋಷಿಸಿದ್ದಾರೆ.
09:45 AM (IST) Dec 25
ಎಲ್ಲರೂ ಸಮಾನರಾಗಿ ಬಾಳುವೆ ನಡೆಸಬೇಕು. ಡಾ.ಅಂಬೇಡ್ಕರ್ ಅವರು ನೀಡಿರುವ ಮತದಾನ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕರೆ ನೀಡಿದರು.
09:31 AM (IST) Dec 25
ಸಚಿವ ಸಂಪುಟ ಪುನಾರಚನೆಯನ್ನು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಅನುಮತಿ ತಗೊಂಡು ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
09:20 AM (IST) Dec 25
09:13 AM (IST) Dec 25
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ 500 ಬೀದಿ ನಾಯಿಗಳಿಗೆ ಒಂದು ವರ್ಷ ಪ್ರತಿನಿತ್ಯ ಎರಡು ಬಾರಿ ಚಿಕನ್ ರೈಸ್ ಆಹಾರ ನೀಡುವುದು ಸೇರಿದಂತೆ ಆಶ್ರಯ ಕಲ್ಪಿಸಲು 1.83 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.
08:59 AM (IST) Dec 25
ಇಲ್ಲಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಎಲಿವೆಟೆಡ್ ರೈಲ್ವೆ ಟರ್ಮಿನಲ್ ನಿರ್ಮಿಸಲು ರೈಲ್ವೆ ಮಂಡಳಿಗೆ ನೈಋತ್ಯ ರೈಲ್ವೆ ವಲಯವು ಪ್ರಸ್ತಾವನೆ ಸಲ್ಲಿಸಿದೆ. 20 ಎಕರೆ ಜಾಗದಲ್ಲಿ ಅಂದಾಜು ₹6,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ರೂಪುರೇಷೆ
08:57 AM (IST) Dec 25
ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 9 ಮಂದಿ ಸಜೀವ ದಹನವಾಗಿದ್ದು, ಸುಟ್ಟು ಕರಕಲಾದ ಮೃತದೇಹ ಪತ್ತೆಗೆ ಪೊಲೀಸರು ಪರದಾಡುತ್ತಿದ್ದಾರೆ.
07:43 AM (IST) Dec 25
ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ಕೊಡಲಾಗುವ ಎಚ್-1ಬಿ ವೀಸಾ ಅರ್ಜಿಗಳಲ್ಲಿ 85,000 ಅರ್ಜಿಗಳನ್ನು ಆರಿಸಲು ಬಳಸಲಾಗುತ್ತಿದ್ದ ‘ರ್‍ಯಾಂಡಮ್ ಲಾಟರಿ ವ್ಯವಸ್ಥೆ’ಗೆ ಪೂರ್ಣವಿರಾಮ ಇಟ್ಟಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಘೋಷಿಸಿದೆ.
07:43 AM (IST) Dec 25
ಚಿತ್ರದುರ್ಗದಲ್ಲಿ ಬೆಂಗಳೂರು-ಗೋಕರ್ಣ ಸೀ ಬರ್ಡ್ ಬಸ್ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದಿದೆ. ಈ ಭೀಕರ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯ ಸಂಪೂರ್ಣ ವಿವರ ತಿಳಿಯಿರಿ.
07:32 AM (IST) Dec 25
ಘಟನೆಯ ವಿವರ: ಗುರುವಾರ ಮುಂಜಾನೆ ಈ ಭೀಕರ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಕೆಎ 01-ಎಇ 5217 ನಂಬರಿನ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದು ವೇಗವಾಗಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್‌ಗೂ ಆವರಿಸಿದೆ.
ಸಜೀವ ದಹನ: ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಡೀಸೆಲ್ ಟ್ಯಾಂಕ್ ಬಳಿಯೇ ಲಾರಿ ಗುದ್ದಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದ್ದು, ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಉಳಿದ 23 ಪ್ರಯಾಣಿಕರು ಕಿಟಕಿ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.