ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದ ಸಿಎಂ ಸಿದ್ದರಾಮಯ್ಯ ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದಲ್ಲಿ ಭಾರಿ ವೈರಲ್ ಆಗಿದ್ದರು. ಪಾಕ್ ಜೊತೆ ಯುದ್ಧಕ್ಕೆ ಭಾರತದಲ್ಲೇ ಬೆಂಬಲವಿಲ್ಲ ಅನ್ನೋ ಅಭಿಪ್ರಾಯಗಳು ಪಾಕಿಸ್ತಾನದಲ್ಲಿ ವ್ಯಕ್ತವಾಗಿತ್ತು. ಈ ವಿವಾದ ಜೋರಾಗುತ್ತಿದ್ದಂತೆ ಇದೀಗ ಮೈಸೂರಿನಲ್ಲಿ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಕೂಡ ಜನರಲ್ ಆಗಿ ಹೇಳಿದ್ದಾರೆ, ಸ್ಪೆಸಿಫಿಕ್ ಆಗಿ ಏನು ಹೇಳಿಲ್ಲ. ಯುದ್ಧದ ಕುರಿತು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಸಿಎಂ ಇಲ್ಲ.ನಾವೆಲ್ಲರೂ ಕೇಂದ್ರ ಸರ್ಕಾರದ ಜೊತೆ ಇರುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

12:01 AM (IST) May 02
ಛತ್ರಪತಿ ಶಿವಾಜಿ ಮಹಾರಾಜರ ರೂಪಕಗಳ ಭವ್ಯ ಮೆರವಣಿಗೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶಿವಾಜಿ ಇತಿಹಾಸದ ಗತವೈಭವ ಬಿಂಬಿಸುವ ಐತಿಹಾಸಿಕ ಪಾರಂಪರಿಕ ಮೆರವಣಿಗೆಗೆ ಬೆಳಗಾವಿ ನರಗುಂದಕರ್ ಬಾವಿ ಚೌಕ್ ಗಲ್ಲಿಯಲ್ಲಿ ಅದ್ಧೂರಿ ಚಾಲನೆ ದೊರಕಿದೆ.
11:39 PM (IST) May 01
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿರುವುದು ಆಘಾತ ಹಾಗೂ ದಿಗ್ಭ್ರಮೆ ತಂದಿದೆ.
ಪೂರ್ತಿ ಓದಿ11:33 PM (IST) May 01
ಏಪ್ರಿಲ್ 2025 ರಲ್ಲಿ GST ಕಲೆಕ್ಷನ್ ಹೊಸ ದಾಖಲೆ ನಿರ್ಮಿಸಿದೆ. ಸರ್ಕಾರದ ಖಜಾನೆಗೆ ₹2.37 ಲಕ್ಷ ಕೋಟಿ ಬಂದಿದ್ದು, ಕಳೆದ ವರ್ಷಕ್ಕಿಂತ 12.6% ಹೆಚ್ಚಾಗಿದೆ. ಆಮದು ಮಾಡಿದ ವಸ್ತುಗಳಿಂದಲೂ GST ಕಲೆಕ್ಷನ್ ಹೆಚ್ಚಳ ಕಂಡಿದೆ.
ಪೂರ್ತಿ ಓದಿ11:14 PM (IST) May 01
ಜಾತಿ ಸಮೀಕ್ಷೆ ಕುರಿತು ಈಗಾಗಲೇ ಕ್ಯಾಬಿನೆಟ್‌ನಲ್ಲಿ ಒಂದೂ ಸುತ್ತು ಚರ್ಚೆ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಸಿಎಂ ಸಿದ್ದರಾಮಯ್ಯ ಚರ್ಚೆ ಮುಂದುವರೆಸುತ್ತಾರೆ.
ಪೂರ್ತಿ ಓದಿ11:08 PM (IST) May 01
ಬಿಗ್ ಬಾಸ್ ಖ್ಯಾತಿಯ ಧನುಶ್ರೀ ಅವರು ಭರತ್‌ಗೆ ಫ್ರಾಂಕ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಡೆಕೋರೇಶನ್, ಭರತ್ ಪ್ರತಿಕ್ರಿಯೆ ಹಾಗೂ ಧನುಶ್ರೀ ವಿವರಣೆಯನ್ನು ಒಳಗೊಂಡಿದೆ.
ಪೂರ್ತಿ ಓದಿ10:38 PM (IST) May 01
ಮುಘಲ್ ಎ ಆಜಮ್ ಚಿತ್ರದ ಪ್ರೇಮ್ ಜೋಗನ್ ಬನ್ನೆ ಹಾಡಿನ ಹಿಂದಿನ ರೋಚಕ ಕಥೆ. ಬಡೇ ಗುಲಾಮ್ ಅಲಿ ಖಾನ್ ಅವರ ಹಾಡಿನ ಸಂಭಾವನೆ, ಷರತ್ತುಗಳು ಮತ್ತು ನೌಷಾದ್ ಅವರ ಪಟ್ಟು ಹಿಡಿದ ಪ್ರಯತ್ನಗಳನ್ನು ಒಳಗೊಂಡಿದೆ.
ಪೂರ್ತಿ ಓದಿ10:37 PM (IST) May 01
FSSAI ದೆಹಲಿ ಹೈಕೋರ್ಟ್‌ಗೆ ಹಣ್ಣಿನ ರಸಗಳನ್ನು "100% ಹಣ್ಣಿನ ರಸ" ಎಂದು ಜಾಹೀರಾತು ಮಾಡುವುದು ದಾರಿತಪ್ಪಿಸುವ ಮಾರ್ಕೆಟಿಂಗ್ ಅಭ್ಯಾಸ ಎಂದು ತಿಳಿಸಿದೆ. 'ಶೇಕಡಾ 100' ನಂತಹ ಸಂಖ್ಯಾತ್ಮಕ ಹಕ್ಕುಗಳ ಬಳಕೆಯು ಗ್ರಾಹಕರನ್ನು ಗೊಂದಲಕ್ಕೀಡುಮಾಡುತ್ತದೆ ಮತ್ತು ನ್ಯಾಯಯುತ ಬಹಿರಂಗಪಡಿಸುವಿಕೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು FSSAI ಹೇಳಿದೆ.
ಪೂರ್ತಿ ಓದಿ10:30 PM (IST) May 01
ವಿದೇಶಿ ಪ್ರವಾಸಿಗನಿಗೆ ಹೇರ್ ಕಟ್ ಮಾಡಲು ₹1800 ಕೇಳಿದ ಘಟನೆ ವೈರಲ್ ಆಗಿದೆ. ಬ್ರಿಟಿಷ್ ಪ್ರವಾಸಿಗ ಜಾರ್ಜ್ ಬಕ್ಲಿ ಭಾರತದಲ್ಲಿ ಹೇರ್ ಕಟಿಂಗ್ ಸಲೂನ್‌ನಲ್ಲಿ ಈ ಅನುಭವಕ್ಕೆ ಒಳಗಾಗಿದ್ದು, ಸ್ಥಳೀಯರಿಗಿಂತ ಹೆಚ್ಚಿನ ಹಣ ಕೇಳಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ09:59 PM (IST) May 01
ಮಂಗಳೂರಿನಲ್ಲಿ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಹಲವು ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಪೂರ್ತಿ ಓದಿ08:57 PM (IST) May 01
ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಮತ್ತು ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಇಲ್ಲಿ ಜೆಡಿಎಸ್ ಶಾಸಕರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಅದು ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪೂರ್ತಿ ಓದಿ08:49 PM (IST) May 01
ಸಿಎಂ ಸಿದ್ದರಾಮಯ್ಯ ಅವರ ಒಳ್ಳೆಯ ಕಾರ್ಯವನ್ನು ಕೆಲವರಿಗೆ ತಡೆದುಕೊಳ್ಳಲಾಗ್ತಿಲ್ಲ, ಆದ ಕಾರಣ ಅವರ ವಿರುದ್ಧ ಟೀಕೆ ಮಾಡ್ತಿದ್ದಾರೆ. ದೇಶಭಕ್ತಿ ಬಗ್ಗೆ ಸಿಎಂ ಅವರು ಮತ್ತೊಬ್ಬರಿಂದ ತಿಳಿದುಕೊಂಡು ಮಾತಾಡುವಂತದ್ದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪೂರ್ತಿ ಓದಿ08:48 PM (IST) May 01
ಭಾರತದಲ್ಲಿ ಮುಂದಿನ ಪೀಳಿಗೆಯ ಕ್ರಿಯೇಟರ್‌ಗಳನ್ನು ಬೆಂಬಲಿಸಲು YouTube ಬದ್ಧವಾಗಿದೆ ಎಂದು ಸಿಇಒ ನೀಲ್ ಮೋಹನ್ ಹೇಳಿದ್ದಾರೆ.
ಪೂರ್ತಿ ಓದಿ08:48 PM (IST) May 01
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 20, 2025 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ08:39 PM (IST) May 01
ಸಿಂಧೂರವನ್ನು ಬೈತಲೆಗೆ ಹಚ್ಚುವಾಗ ಹಲವಾರು ಮಹಿಳೆಯರು ತಪ್ಪಾದ ಕ್ರಮ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಸರಿಯಾದ ಕ್ರಮ ಯಾವುದು? ಇಲ್ಲಿದೆ ನೋಡಿ..
ಪೂರ್ತಿ ಓದಿ08:14 PM (IST) May 01
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೇ 9 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ಸರ್ಕಾರ ನಡೆಸಿದ ಸಮೀಕ್ಷೆಯ ವರದಿಯನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿ07:40 PM (IST) May 01
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆ ಸಾವು ಸಹಜ ಅಲ್ಲ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪೂರ್ತಿ ಓದಿ07:33 PM (IST) May 01
ಗಡಿಯಲ್ಲಿ ಸಂಭಾವ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಖೈಬರ್ ಪಖ್ತುಂಖ್ವಾ ಸರ್ಕಾರವು 29 ಜಿಲ್ಲೆಗಳಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಅಳವಡಿಸುವುದಾಗಿ ಘೋಷಿಸಿದೆ. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಪಾಕಿಸ್ತಾನದ ನೇರ ಕೈವಾಡ ಇರುವುದಾಗಿ ಭಾರತ ಆರೋಪಿಸಿದೆ.
ಪೂರ್ತಿ ಓದಿ07:32 PM (IST) May 01
ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹ ಸಾಮಾನ್ಯ ವಿಷಯಗಳಂತಾಗಿವೆ. ಮಾನವ ಪ್ರಾಕೃತಿಕ ಮೇಲೆ ಮಾಡಿರುವ ದೌರ್ಜನ್ಯವೇ ಕಾರಣ ಎಂದು ವಿಜ್ಞಾನಿಗಳ ತಂಡ ವರದಿಯನ್ನೂ ನೀಡಿದೆ.
ಪೂರ್ತಿ ಓದಿ07:13 PM (IST) May 01
ಕನ್ನಡ ಸಾಹಿತ್ಯ ಪರಿಷತ್ತಿನ ನಿಭಂಧನೆ (ಬೈಲಾ) ತಿದ್ದುಪಡಿ ಕುರಿತು ಅಧ್ಯಕ್ಷ ಡಾ. ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. ತಿದ್ದುಪಡಿ ಅವಶ್ಯಕತೆ, ವಿರೋಧಿಗಳಿಗೆ ಸವಾಲು ಮತ್ತು ಕಾನೂನುಬದ್ಧತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೂರ್ತಿ ಓದಿ06:54 PM (IST) May 01
ಗುಜರಾತ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರೂ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ.
ಪೂರ್ತಿ ಓದಿ06:47 PM (IST) May 01
ಕರ್ನಾಟಕ SSLC-1 ಫಲಿತಾಂಶ 2025 ಮೇ 2 ರಂದು ಬಿಡುಗಡೆಯಾಗಲಿದೆ. ವಿದ್ಯಾರ್ಥಿಗಳು karresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಪೂರ್ತಿ ಓದಿ06:37 PM (IST) May 01
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪ್ರತಿಯೊಂದು ಭಯೋತ್ಪಾದನಾ ಕೃತ್ಯಕ್ಕೂ ಸೂಕ್ತ ಮತ್ತು ನಿಖರವಾದ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದಿದೆ.
ಪೂರ್ತಿ ಓದಿ06:26 PM (IST) May 01
ಕೇಂದ್ರ ಸರ್ಕಾರ ಪ್ರಸಕ್ತ ವರ್ಷ 256 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಂದ ಗೋಧಿ ಹರಿವು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.24.78ರಷ್ಟು ಹೆಚ್ಚಳ ಕಂಡುಬಂದಿದೆ.
ಪೂರ್ತಿ ಓದಿ06:26 PM (IST) May 01
ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ, ಅಲ್ಲದೇ ನಾನು ಯಾರಿಗೂ ಹೆದರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪೂರ್ತಿ ಓದಿ05:48 PM (IST) May 01
ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಸ್ಪಿನ್ನರ್ ವಿಘ್ನೇಶ್ ಪುತೂರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪುತೂರ್ ಬದಲಿಗೆ ರಘು ಶರ್ಮಾ ತಂಡ ಸೇರಿಕೊಂಡಿದ್ದಾರೆ.
ಪೂರ್ತಿ ಓದಿ05:48 PM (IST) May 01
ಪಾಕಿಸ್ತಾನಿ ಸೈನಿಕರು ಹುದ್ದೆಗಳನ್ನು ಖಾಲಿ ಮಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಮಿಲಿಟರಿ ಕ್ರಮಕ್ಕೆ ಕರೆ ನೀಡಿದ್ದಾರೆ. ಭಾರತವು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪೂರ್ತಿ ಓದಿ05:36 PM (IST) May 01
ಬೆಂಗಳೂರಿನಲ್ಲಿ 10ನೇ ತರಗತಿ ಬಾಲಕನನ್ನು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಸ್ನೇಹಿತೆಯ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಪೂರ್ತಿ ಓದಿ05:14 PM (IST) May 01
ಶಿವನ ಕಳೆಯೇ ಅವತರಿಸಿ ಬಂದು, ಭಕ್ತಿಯ ಮಾರ್ಗವನ್ನು ಪ್ರಚಾರಮಾಡಿದವರಲ್ಲಿ ಬಸವಣ್ಣನವರಿಗೆ ಅಗ್ರಸ್ಥಾನ. ಅವರ ಕಾರ್ಯಗಳಲ್ಲಿ ಭಕ್ತಿಯೇ ಪ್ರಧಾನ, ಆದ್ದರಿಂದಲೇ ಅವರು ಭಕ್ತಿ ಭಂಡಾರಿ ಎಂಬ ಬಿರುದನ್ನು ತಾಳಿದರು.
ಪೂರ್ತಿ ಓದಿ05:06 PM (IST) May 01
ಎಪ್ರಿಲ್ 22ರ ಪಹಲ್ಗಾಮ್ ದಾಳಿ ಭಾರತ-ಪಾಕಿಸ್ತಾನಗಳನ್ನು ಮತ್ತೆ ಯುದ್ಧದ ಅಂಚಿಗೆ ತಳ್ಳಿದೆ. ಪರಮಾಣು ಯುದ್ಧ ಸಂಭವಿಸಿದರೆ ಅದರ ಪರಿಣಾಮವನ್ನು ಊಹಿಸಲಸಾಧ್ಯ. ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ.
ಪೂರ್ತಿ ಓದಿ04:42 PM (IST) May 01
ಪಾಕಿಸ್ತಾನ ಭಾರತದಿಂದ ಬಂದ ತನ್ನ ಪ್ರಜೆಗಳನ್ನು ತನ್ನ ದೇಶದೊಳಗೆ ಬಿಟ್ಟುಕೊಳ್ಳದೇ ಆ ಕಡೆಯ ಗೇಟನ್ನು ಬಂದ್ ಮಾಡಿದೆ ಎಂದು ವರದಿಯಾಗಿದ್ದು, ಇದರಿಂದ ಅಟ್ಟಾರಿ ವಾಘಾ ಬಾರ್ಡರ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೂರ್ತಿ ಓದಿ04:38 PM (IST) May 01
ಪಹಲ್ಗಾಮ್ ದಾಳಿಯ ನಂತರ ಭಾರತದಿಂದ ಪ್ರತೀಕಾರದ ಭೀತಿಯಲ್ಲಿರುವ ಪಾಕಿಸ್ತಾನ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮಧ್ಯಸ್ಥಿಕೆ ಕೋರಿದೆ. ಉದ್ವಿಗ್ನತೆ ತಗ್ಗಿಸಲು ಮತ್ತು ಸಂಭಾವ್ಯ ಮಿಲಿಟರಿ ಮುಖಾಮುಖಿಯನ್ನು ತಪ್ಪಿಸಲು ಪಾಕಿಸ್ತಾನ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಿದೆ.
ಪೂರ್ತಿ ಓದಿ04:38 PM (IST) May 01
ಬೆಂಗಳೂರಿನಲ್ಲಿ ಕನ್ನಡ ಹಾಡು ಹಾಡಿ ಎಂದು ಹೇಳಿದಾಗ ಖ್ಯಾತ ಗಾಯಕ ಸೋನು ನಿಗಮ್ ಅವರು ಸಿಟ್ಟಾಗಿದ್ದು ಯಾಕೆ? ಅಷ್ಟೇ ಅಲ್ಲದೆ ಪಹಲ್ಗಾಮ್ ಪ್ರಕರಣವನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು?
ಪೂರ್ತಿ ಓದಿ04:27 PM (IST) May 01
ನೀವು ಲವ್ ಬಾಂಬ್ ಅಥವಾ ಲವ್ ಬಾಂಬಿಂಗ್ ಬಗ್ಗೆ ಕೇಳಿದ್ದೀರಾ? ಇದು ಒಂದು ರೀತಿ ಪ್ರೀತಿ ಪ್ರಣಯ. ಬಹುತೇಕರಿಗೆ ಆರಂಭದಲ್ಲಿ ಗೊತ್ತೆ ಆಗುವುದಿಲ್ಲ. ಪ್ರೀತಿಯಲ್ಲಿ ಬಿದ್ದು ಸವಿಯುಂಡ ಬಳಿಕವೇ ತಾವು ಅತೀ ದೊಡ್ಡ ಸಂಕಷ್ಟದಲ್ಲಿರುವುದು ಅರಿವಾಗುತ್ತದೆ. ಮತ್ತೆ ಕೆಲವರಿಗೆ ಲವ್ ಬಾಂಬ್ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ, ಏನಿದು ಲವ್ ಬಾಂಬ್? ಈ ಪ್ರಿತಿ ಯಾಕೆ ಅಪಾಯಕಾರಿ
ಪೂರ್ತಿ ಓದಿ04:12 PM (IST) May 01
ಜೈಪುರದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ಕಾರು ಚಲಾಯಿಸಿ ಬಾಲಕಿಯ ಪ್ರಾಣ ತೆಗೆದ ಘಟನೆಗೆ ನಟಿ ಜಾನ್ವಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಸುತ್ತಮುತ್ತಲಿನವರ ಪ್ರಾಣಕ್ಕೂ ಅಪಾಯ ತರುವುದನ್ನು ಖಂಡಿಸಿದ್ದಾರೆ.
ಪೂರ್ತಿ ಓದಿ04:03 PM (IST) May 01
ಗೂಗಲ್ ಪೇ ವೈಯಕ್ತಿಕ ಸಾಲ ನೀಡ್ತಿದೆ. ಹತ್ತು ಲಕ್ಷದವರೆಗೆ ಡಿಜಿಟಲ್ ವ್ಯಾಲೆಟ್ ಮೂಲಕ ಸಾಲ ಪಡೆಯಬಹುದು. ಅದಕ್ಕೆ ಏನೆಲ್ಲ ನಿಯಮ ಇದೆ ಎನ್ನುವ ಮಾಹಿತಿ ಇಲ್ಲಿದೆ.
04:02 PM (IST) May 01
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನ್ಯಾಯಾಂಗ ತನಿಖೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸೇನೆಯ ನೈತಿಕತೆ ಕುಗ್ಗುತ್ತದೆ ಎಂದು ಕೋರ್ಟ್ ಹೇಳಿದೆ. ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ವಿಷಯದ ಸೂಕ್ಷ್ಮತೆಯನ್ನು ಪರಿಶೀಲಿಸಬೇಕಿತ್ತು ಎಂದಿದೆ.
ಪೂರ್ತಿ ಓದಿ03:40 PM (IST) May 01
ಸಿಆರ್‌ಪಿಎಫ್ ಯೋಧನನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಗೆ ಗಡೀಪಾರು ಆದೇಶದ ನಡುವೆಯೂ ರಿಲೀಫ್ ಸಿಕ್ಕಿದೆ. ಆದರೆ ಇವರ ಪ್ರೇಮ ಸಂಬಂಧ ನೆಟ್ಟಿಗರಲ್ಲಿ ಹಲವು ಅನುಮಾನ ಮೂಡಿಸಿದೆ.
ಪೂರ್ತಿ ಓದಿ03:34 PM (IST) May 01
ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಯುದ್ಧ ತರಬೇತಿಗಳನ್ನು ತೀವ್ರಗೊಳಿಸಿದೆ. ಈ ತರಬೇತಿಯಲ್ಲಿ ಹಡಗು ವಿರೋಧಿ ಕ್ಷಿಪಣಿ ಪ್ರಯೋಗಗಳು ಮತ್ತು ಇತರ ಯುದ್ಧ ವ್ಯಾಯಾಮಗಳು ಸೇರಿವೆ. ಈ ಕ್ರಮಗಳು ದೇಶದ ಭದ್ರತೆಗೆ ಗಟ್ಟಿಯಾದ ತಯಾರಿ ಮತ್ತು ಸ್ಪಷ್ಟವಾದ ಎಚ್ಚರಿಕೆಯ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪೂರ್ತಿ ಓದಿ03:27 PM (IST) May 01
ಹುಬ್ಬಳ್ಳಿ-ಹಾವೇರಿ ಮಾರ್ಗದಲ್ಲಿ ಬಸ್‌ನಲ್ಲಿ ನಮಾಜ್ ಮಾಡಿದ NWKRTC ಚಾಲಕ-ಕಂ-ನಿರ್ವಾಹಕ ಎ.ಆರ್. ಮುಲ್ಲಾ ಅವರನ್ನು ಸೇವಾ ನಿಯಮ ಉಲ್ಲಂಘನೆಗಾಗಿ ಅಮಾನತು ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರಿಗೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
ಪೂರ್ತಿ ಓದಿ02:37 PM (IST) May 01
ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸುರಕ್ಷತೆಗೆ 2024 ರಲ್ಲಿ ಗೂಗಲ್ ₹67.8 ಕೋಟಿ ಖರ್ಚು ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ ಹೆಚ್ಚು. ಈ ಖರ್ಚು ಮನೆ ಭದ್ರತೆ, ಸಲಹಾ ಶುಲ್ಕ, ಕಣ್ಗಾವಲು, ಖಾಸಗಿ ವಿಮಾನ ಮತ್ತು ಪ್ರಯಾಣ ಭದ್ರತೆಯನ್ನು ಒಳಗೊಂಡಿದೆ.
ಪೂರ್ತಿ ಓದಿ