LIVE NOW
Published : Feb 19, 2026, 06:45 AM ISTUpdated : Feb 19, 2026, 11:11 PM IST

Karnataka News Live: Tumkur - ಪ್ರೀತಿಯಿಂದ ಸಾಕಿದ ಮಗ, ಒಡಹುಟ್ಟಿದ ತಂಗಿಯೇ ಹಂತಕರು; ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಸಾವಿನ ರಹಸ್ಯ ಬಯಲು!

ಸಾರಾಂಶ

ಚಿಕ್ಕಮಗಳೂರು: ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಸವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಹಿಂದೂ ಮತ್ತು ಎಸ್‌ಡಿಪಿಐ ಸಂಘಟನೆ, ಮುಖಂಡರ ವಿರುದ್ಧ ಪ್ರತ್ಯೇಕ ಎರಡು ಸೊಮೋಟೋ ಕೇಸ್‌ ದಾಖಲಾಗಿದೆ.

ಬಂಧಿತ ಆರೋಪಿಗಳಾದ ಯಾಸಿನ್‌, ಮೊಹಮದ್ ಮತೀನ್, ಅಯಾನ್, ಮುನ್ನಾವರ್ ಪಾಷಾ, ಆಕ್ಷದ್, ‌ಹಸೇನ್ ಬಂಧಿಸಲಾಗಿದೆ. ಮಂಗಳವಾರ ತಡರಾತ್ರಿಯೇ 6 ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ ಪೊಲೀಸರು, ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಹಾಸನದ ರಿಮ್ಯಾಂಡ್ ಹೋಮ್‌ಗೆ ಸ್ಥಳಾಂತರಿಸಿದರು. ಉಳಿದ ಇಬ್ಬರನ್ನು ಚಿಕ್ಕಮಗಳೂರು ಜೈಲಿಗೆ ಕಳುಹಿಸಲಾಗಿದೆ.

11:11 PM (IST) Feb 19

Tumkur - ಪ್ರೀತಿಯಿಂದ ಸಾಕಿದ ಮಗ, ಒಡಹುಟ್ಟಿದ ತಂಗಿಯೇ ಹಂತಕರು; ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಸಾವಿನ ರಹಸ್ಯ ಬಯಲು!

ಚಿಕ್ಕನಾಯಕನಹಳ್ಳಿಯ ಎಫ್‌ಡಿಎ ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಕೊಲೆ ಎಂದು ಸಾಬೀತಾಗಿದೆ. ಆಸ್ತಿಗಾಗಿ ಆಕೆಯ ಸ್ವಂತ ಸಹೋದರಿ ಮತ್ತು ದತ್ತು ಪುತ್ರನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. 

Read Full Story

10:40 PM (IST) Feb 19

ಡೀಲ್‌ ಮಾಡಿಕೊಳ್ಳಿ ಇಲ್ಲವೇ ಅನುಭವಿಸಿ, ಇರಾನ್‌ಗೆ ಅಮೆರಿಕ ಕೊನೇ ವಾರ್ನಿಂಗ್‌; ಶನಿವಾರದಿಂದ ಯುದ್ಧ ಶುರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಅರ್ಥಪೂರ್ಣ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಅಥವಾ ಕೆಟ್ಟ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕ ಇರಾನ್ ಗಡಿಯ ಸುತ್ತಮುತ್ತ ಭಾರಿ ಸೇನಾ ಜಮಾವಣೆ ಮಾಡಿದೆ.

Read Full Story

09:38 PM (IST) Feb 19

Udupi - ಫೇಸ್‌ಬುಕ್ ಫ್ರೆಂಡ್ ಕಳುಹಿಸಿದ 'ಡಾಲರ್‌' ನಂಬಿ ₹7.10 ಲಕ್ಷ ಕಳೆದುಕೊಂಡ ಕುಂದಾಪುರ ಮಹಿಳೆ; ನೀವೂ ಹುಷಾರ್!

ಉಡುಪಿಯ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿಯ ಮಾತು ನಂಬಿ, ಬೆಲೆಬಾಳುವ ಉಡುಗೊರೆಯ ಆಮಿಷಕ್ಕೆ ಒಳಗಾಗಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ಪಾರ್ಸೆಲ್ ಬಿಡುಗಡೆ ನೆಪದಲ್ಲಿ ಅವರಿಂದ ಹಂತ ಹಂತವಾಗಿ ₹7.10 ಲಕ್ಷ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ.
Read Full Story

09:16 PM (IST) Feb 19

ಜೈಲಲ್ಲಿ ಅಣ್ಣ ದರ್ಶನ್ ಕಣ್ಣೀರು, ಹೊರಗಡೆ ಕಿತ್ತಾಡಿದ ತಮ್ಮಂದಿರು; ದಾಸನ ಬಂಟರ ಮಧ್ಯೆ ಮಾತಿನ ಸಮರ!

ನಟ ದರ್ಶನ್ ಜೈಲಿನಲ್ಲಿದ್ದರೆ, ಹೊರಗಡೆ ಅವರ ಆಪ್ತ ಬಳಗದ ಯುವ ನಟರಾದ ಧನ್ವೀರ್ ಮತ್ತು ಝೈದ್ ಖಾನ್ ನಡುವೆ ಮನಸ್ತಾಪ ಶುರುವಾಗಿದೆ. ದರ್ಶನ್‌ಗೆ ಕಷ್ಟಕಾಲದಲ್ಲಿ ಝೈದ್ ಖಾನ್ ಸಹಾಯ ಮಾಡಿಲ್ಲ ಮತ್ತು ಸಿನಿಮಾ ಪ್ರಚಾರಕ್ಕೆ ಮಾತ್ರ ಅವರ ಹೆಸರು ಬಳಸಿಕೊಂಡಿದ್ದಾರೆ ಎಂದು ಧನ್ವೀರ್ ಮಾತಿನಲ್ಲೇ ತಿವಿದಿದ್ದಾರೆ.

Read Full Story

09:08 PM (IST) Feb 19

ನಂದಿನಿ ಉತ್ಪನ್ನ 'ವಿಷ' ಎಂದ ವೈದ್ಯೆಗೆ ಶಾಕ್ - ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್!

ಬೆಂಗಳೂರಿನ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ಅವರು ನಂದಿನಿ ಉತ್ಪನ್ನಗಳು ವಿಷಕಾರಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ರೀಲ್ಸ್ ಪೋಸ್ಟ್ ಮಾಡಿದ್ದರು. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಕೆಎಂಎಫ್, ತಮ್ಮ ಉತ್ಪನ್ನಗಳು ಸುರಕ್ಷಿತವೆಂದು ಹೇಳಿದೆ.

Read Full Story

09:05 PM (IST) Feb 19

ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ - ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು

ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ಸೋಗಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಲೇಡಿ ಡಾನ್ ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಾಗಿ ಮಾದಕವಸ್ತು ಜಾಲವನ್ನು ನಿರ್ವಹಿಸುತ್ತಿದ್ದಳು.

Read Full Story

09:01 PM (IST) Feb 19

ಗುಡ್ಡದ ದುರುಗಮ್ಮ ದೇವರ ಮೇಲಿನ ಹಕ್ಕಿಗಾಗಿ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ಹೊಡೆದಾಟ; 10 ಮಂದಿಗೆ ಗಾಯ!

ಹಾವೇರಿ ಜಿಲ್ಲೆಯಲ್ಲಿ 'ಗುಡ್ಡದ ದುರಗಮ್ಮ' ದೇವಸ್ಥಾನದ ಹಕ್ಕಿಗಾಗಿ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಹೊಸ ದೇವಸ್ಥಾನ ನಿರ್ಮಾಣದ ವಿಚಾರವಾಗಿ ನಡೆದ ಕಲ್ಲು ತೂರಾಟದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.

Read Full Story

08:36 PM (IST) Feb 19

ಪಿಡಿಓಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ? ಇನ್ನು ಮುಂದೆ ಇವರು 'ಗ್ರೂಪ್-ಬಿ' ಅಧಿಕಾರಿಗಳು!

Karnataka PDOs to be Upgraded to Group-B Officers: Big Relief for RDPR Staff ದಶಕಗಳ ಬೇಡಿಕೆಯಂತೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಯನ್ನು 'ಗ್ರೂಪ್-ಬಿ'ಗೆ ಉನ್ನತೀಕರಿಸಲು ಸರ್ಕಾರ ಮುಂದಾಗಿದೆ. ಈ ಬದಲಾವಣೆಯು ಪಿಡಿಓಗಳ ಅಧಿಕಾರವನ್ನು ಹೆಚ್ಚಿಸಲಿದೆ.

Read Full Story

08:20 PM (IST) Feb 19

ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ - ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ!

ಚಿಕ್ಕಮಗಳೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮುಸ್ಲಿಂ ಸ್ನೇಹಿತೆಯನ್ನು ಮನೆಗೆ ಬಿಡಲು ಹೋದ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

Read Full Story

08:18 PM (IST) Feb 19

400 ಸಿನಿಮಾದಲ್ಲಿ ನಟಿಸಿದ್ರೂ ದುಡ್ಡು ಮಾಡ್ಲಿಲ್ಲ; KD Venkatesh ಇಷ್ಟು ಸೊರಗಿರೋದ್ಯಾಕೆ? ಆರೋಗ್ಯ ಏನಾಯ್ತು?

ಕೆಡಿ ವೆಂಕಟೇಶ್‌ ಅವರು 400 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಅವರ ಅನಾರೋಗ್ಯದ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. Beyond Limits ಯುಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ.

 

Read Full Story

08:04 PM (IST) Feb 19

ಚಪ್ಪಲಿ ಹೊಲೆಯುವನ ಮಗಳು ಈಗ ಸಿವಿಲ್ ಜಡ್ಜ್! ಬಡತನ ಸೀಳಿ ಸಾಧನೆಯ ಶಿಖರಕ್ಕೇರಿದ ದಾಂಡೇಲಿಯ ಪದ್ಮಾವತಿ!

ದಾಂಡೇಲಿಯ ಅತ್ಯಂತ ಬಡ ಚರ್ಮಕಾರ ಕುಟುಂಬದಲ್ಲಿ ಜನಿಸಿದ ಪದ್ಮಾವತಿ ನಾಗಣ್ಣ ಮಾದಿಗ, ಎಲ್ಲಾ ಅಡೆತಡೆಗಳನ್ನು ಮೀರಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಾಂಡೇಲಿ ತಾಲ್ಲೂಕಿನ ಮೊಟ್ಟಮೊದಲ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾದಿಗ ಸಮಾಜದ ಪ್ರಥಮ ನ್ಯಾಯಾಧೀಶೆ ಎನಿಸಿದ್ದಾರೆ.

Read Full Story

07:52 PM (IST) Feb 19

ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ ಸಂಸಾರ ಸ್ವರ್ಗಕ್ಕೆ ಮೂರೇ ಗೇಣು!

ಇತ್ತೀಚೆಗಿನ ದಿನಗಳಲ್ಲಿ 'ನೇಮ್ ಆಸ್ಟ್ರಾಲಜಿ' ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಅಂದಾಜಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ, ಹೆಣ್ಣುಮಕ್ಕಳ ಜೀವನ ಚೆನ್ನಾಗಿರುತ್ತಂತೆ.

Read Full Story

07:51 PM (IST) Feb 19

ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ಇಲ್ಲಿದೆ ಈಗಿನ ಹೆಲ್ತ್ ಅಪ್ಡೇಟ್; ಫೋನಲ್ಲಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ!

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶಸ್ವಿ ಸ್ಟಂಟ್ ಅಳವಡಿಕೆ ನಂತರ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ.

Read Full Story

07:39 PM (IST) Feb 19

ಟಿವಿಗೆ ಬಂತು ಶಿವರಾಜ್‌ಕುಮಾರ್‌, ಉಪೇಂದ್ರ ನಟನೆಯ 45 ಸಿನಿಮಾ; ಗರುಡ ಪುರಾಣದ ಟಚ್‌ ಕೊಟ್ಟ ಅರ್ಜುನ್ ಜನ್ಯ

45 Movie Release Date: ನಟ ಡಾ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ನಟನೆಯ ‘45 ‘ ಚಿತ್ರವು ಟಿವಿಯಲ್ಲಿ ಪ್ರಸಾರ ಆಗಲಿದೆ. 45 ಸಿನಿಮಾವು ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು, ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್, ಭಾವನಾತ್ಮಕ ಅಂಶಗಳು ಕೂಡ ಇದ್ದು, ಮನಮುಟ್ಟುವಂತಿದೆ.

 

Read Full Story

07:36 PM (IST) Feb 19

'ಘಂ' ಎನ್ನೋ ಟೇಸ್ಟಿ ಟೇಸ್ಟಿ ಕಾಫಿ ಮಾಡೋ ಸಿಂಪಲ್​ ಟ್ರಿಕ್ಸ್​ ಹೇಳಿದ Karna Serial- ನಿತ್ಯಾ ಕೈಯಿಂದ ರೆಡಿ!

ರಮೇಶ್​ನ ಕುತಂತ್ರದಿಂದ 'ಕರ್ಣ' ಧಾರಾವಾಹಿಯ ನಾಯಕ ಕರ್ಣ ಜೈಲು ಸೇರಿದ್ದಾನೆ. ಆದರೆ ಅದಕ್ಕೂ ಮುನ್ನ, ನಿತ್ಯಾ ತನ್ನ ಕೈಯಾರೆ ಮಾಡಿದ ಮೊದಲ ಕಾಫಿಯನ್ನು ಕರ್ಣ ಮನಸಾರೆ ಹೊಗಳಿದ್ದ. ಆ ರುಚಿಕರ ಕಾಫಿಯ ಹಿಂದಿದ್ದ, ಕೆಲಸದವಳು ಹೇಳಿಕೊಟ್ಟ ಸರಳ ತಂತ್ರವನ್ನು ಇಲ್ಲಿ ಬಹಿರಂಗಪಡಿಸಲಾಗಿದೆ.
Read Full Story

07:33 PM (IST) Feb 19

ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!

Bee Attack Disrupts ITF Women's Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.

Read Full Story

07:27 PM (IST) Feb 19

ಯಲಹಂಕದಲ್ಲಿ ದೇಶ ಅತಿದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್, ದೇವನಹಳ್ಳಿ ನಿಗದಿಯಾಗಿದ್ದನ್ನು ಕೈಬಿಟ್ಟಿದ್ದೇಕೆ ಕೇಂದ್ರ?

ದೇವನಹಳ್ಳಿ ಬಿಟ್ಟು  ಯಲಹಂಕದಲ್ಲಿ ದೇಶದ ಅತೀ ದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್ ನಿರ್ಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ₹5754 ಕೋಟಿ ವೆಚ್ಚದ ಈ ಯೋಜನೆಯು 16 ಪ್ಲಾಟ್‌ಫಾರ್ಮ್‌ಗಳೊಂದಿಗೆ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

Read Full Story

07:24 PM (IST) Feb 19

ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ಚಂದನ್ ಮಾಜಿ ಪತ್ನಿ ನಿವೇದಿತಾ ಗೌಡ! ದಾಂಪತ್ಯ ಜೀವನ ಮುರಿದು ಬೀಳಲು ಇದೇ ಕಾರಣ!

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ, ನಟಿ ನಿವೇದಿತಾ ಗೌಡ ಸುಖ ಸಂಸಾರದ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ, ದಾಂಪತ್ಯ ಜೀವನ ಸುಖವಾಗಿರಲು ದಿನಕ್ಕೆ ಕೇವಲ 30 ನಿಮಿಷಗಳ ಗುಣಮಟ್ಟದ ಸಮಯ ಮೀಸಲಿಟ್ಟರೆ ಸಾಕು.
Read Full Story

07:17 PM (IST) Feb 19

Seyon Movie - 'ಅಮರಾನ್‌' ಬಳಿಕ ಕಮಲ್‌ ಹಾಸನ್‌ ಜೊತೆ ಶಿವಕಾರ್ತಿಕೇಯನ್‌ ಸಿನಿಮಾ! ವೀಕ್ಷಕರಿಗೆ ಹಬ್ಬ

Seyon Movie: 'ಅಮರನ್' ಚಿತ್ರದ ಯಶಸ್ಸಿನ ನಂತರ, ಕಮಲ್ ಹಾಸನ್ RKFI ಬ್ಯಾನರ್, ನಟ ಶಿವಕಾರ್ತಿಕೇಯನ್ 'ಸೆಯೋನ್' ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದ್ದಾರೆ. ಶಿವಕುಮಾರ್ ಮುರುಗೇಸನ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

 

Read Full Story

07:10 PM (IST) Feb 19

ವಿಜಯ್​ ರಾಘವೇಂದ್ರ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree - ಅಭಿಮಾನಿಗಳು ಫುಲ್​ ಖುಷ್​

ಆ್ಯಂಕರ್ ಅನುಶ್ರೀ ಹಂಚಿಕೊಂಡ ವಿಡಿಯೋದಲ್ಲಿ, ನಟ ವಿಜಯ ರಾಘವೇಂದ್ರಗೆ ತಮ್ಮ ಸಿನಿಮಾ ಡೈಲಾಗ್ ಹೇಳಲು ಕೇಳುತ್ತಾರೆ, ಆದರೆ ಅವರಿಗೆ ಡೈಲಾಗ್ ನೆನಪಾಗುವುದಿಲ್ಲ. ಈ ತಮಾಷೆಯ ಸಂಭಾಷಣೆಯು ಅಂತಿಮವಾಗಿ ವಿಜಯ ರಾಘವೇಂದ್ರ ಅವರ ಬಗ್ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಅನುಶ್ರೀ. ಏನದು? 

Read Full Story

07:08 PM (IST) Feb 19

ಭಾರತಕ್ಕೆ ಹೆಮ್ಮೆ ತಂದ ಡಾ. ರಾಮ್ ಪ್ರಸಾತ್ ಮನೋಹರ್ - ಜಾಗತಿಕ ಸ್ಮಾರ್ಟ್ ವಾಟರ್ ಸಲಹಾ ಸಮಿತಿಗೆ BWSSB ಅಧ್ಯಕ್ಷರ ಆಯ್ಕೆ

ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು 'ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್' (SWAN) ನ ಪ್ರತಿಷ್ಠಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಈ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಪ್ರತಿನಿಧಿ ಇವರಾಗಿದ್ದಾರೆ.

Read Full Story

06:52 PM (IST) Feb 19

ಕಾರುಣ್ಯಾ ಜೊತೆ ಎಂಗೇಜ್‌ ಆದ 'ಗಿಚ್ಚಿ ಗಿಲಿಗಿಲಿ ಶೋ' ಚಿಲ್ಲರ್‌ ಮಂಜು; ಸುಂದರ ಫೋಟೋಗಳಿವು

Gicchi Gili Gili Show chillar Manja: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು ಹಾಗೂ ಮಾನಸಾ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಆಗಿ, ಮದುವೆಗೆ ರೆಡಿ ಆಗಿದ್ದಾರೆ. ಈಗ ಇನ್ನೊಂದು ಜೋಡಿ ಮದುವೆ ಆಗಲಿದೆ. ಹೌದು, ನಿಶ್ಚಿತಾರ್ಥ ಕೂಡ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

06:36 PM (IST) Feb 19

'ನೆಟ್ಟಗೆ ಬಟ್ಟೆ ಹಾಕೋದಕ್ಕೆ ಬರೊಲ್ಲ ಎಂದು ಟ್ರೋಲ್ ಮಾಡಿದವರಿಗೆ ಮುಟ್ಟಿ ನೊಡಿಕೊಳ್ಳುವ ತಿರುಗೇಟು ಕೊಟ್ಟ ನಟಿ ಅದಿತಿ!

ಯಶಸ್ಸು ಮಾತ್ರವಲ್ಲದೆ, ಅದಿತಿ ಕೆಲವು ವಿವಾದಗಳನ್ನೂ ಎದುರಿಸಿದ್ದಾರೆ. ಅವರ ಫ್ಯಾಷನ್ ಆಯ್ಕೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೆಲವು ಫೋಟೋಶೂಟ್ ಮತ್ತು ಬಟ್ಟೆಗಳ ವಿಚಾರದಲ್ಲಿ ನೆಟ್ಟಿಗರ ಟೀಕೆಗೂ ಇವರು ಗುರಿಯಾಗಿದ್ದರು. ಈಗೇನ್ ಮಾಡ್ತಿದಾರೆ?

Read Full Story

05:11 PM (IST) Feb 19

ವಿದೇಶದಲ್ಲಿ ಮತ್ತೊಬ್ಬ ಕನ್ನಡಿಗನ ನಿಗೂಢ ಸಾವು, ಐರ್ಲೆಂಡ್‌ನಲ್ಲಿ ಕರಾವಳಿ ಯುವಕನ ಮೃತದೇಹ ಪತ್ತೆ!

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಸಾಂಜೋ ಸುನಿಲ್ ಎಂಬ ಯುವಕ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣವನ್ನು ಸಂಶಯಾಸ್ಪದವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

05:01 PM (IST) Feb 19

L&T ಜೊತೆಗಿನ ಹಳೆ ಒಪ್ಪಂದಕ್ಕಿಂತ ಭಾರೀ ಏರಿಕೆ ಕಂಡ ಟೆಂಡರ್ ಮೊತ್ತ; ಸಬರ್ಬನ್ ರೈಲು ಪೂರ್ಣಗೊಳ್ಳೋದು ಯಾವಾಗ?

ಬೆಂಗಳೂರು ಉಪನಗರ ರೈಲು ಯೋಜನೆಯ  ಮಲ್ಲಿಗೆ ಮಾರ್ಗದ ಸಿವಿಲ್ ಕಾಮಗಾರಿಗಳಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆದಿದೆ. ಎಲ್ & ಟಿ ಒಪ್ಪಂದದಿಂದ ಹೊರಬಂದ ನಂತರ, ಪಿಜೆಬಿ ಎಂಜಿನಿಯರ್ಸ್‌ ಮತ್ತು ಎನ್‌ಸಿಸಿ ಸಂಸ್ಥೆಗಳು ವಿವಿಧ ಪ್ಯಾಕೇಜ್‌ಗಳಿಗೆ ಅತ್ಯಂತ ಕಡಿಮೆ ಮೊತ್ತದ ಬಿಡ್ಡರ್‌ಗಳಾಗಿ ಹೊರಹೊಮ್ಮಿವೆ.

Read Full Story

04:56 PM (IST) Feb 19

ಬರ್ತಡೇ ಬಳಿಕ ದೊಡ್ಡ ಡಿಮ್ಯಾಂಡ್​ ಇಟ್ಟ ಕಾಟೇರ.! ದರ್ಶನ್​ ಇಟ್ಟಿರೋ ಬೇಡಿಕೆಗೆ ಸಿಗುತ್ತ ಪ್ರತಿಫಲ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ದೈನಂದಿನ ವಿಚಾರಣೆ ನಡೆಸಲು ಕೋರಿದ್ದಾರೆ.  

Read Full Story

04:18 PM (IST) Feb 19

ಸಾರಿಗೆ ನೌಕರರ ಸಂಧಾನ ವಿಫಲ - ಸರ್ಕಾರದ 26 ತಿಂಗಳ ಹಿಂಬಾಕಿಗೆ ಒಪ್ಪದ ನೌಕರರು, ಬಿಜೆಪಿ ಮೇಲೆ ಗೂಬೆ ಕೂರಿಸಿದ ಸಚಿವರು!

ರಾಜ್ಯ ಸಾರಿಗೆ ನೌಕರರು 38 ತಿಂಗಳ ಪೂರ್ಣ ಹಿಂಬಾಕಿ ಹಣಕ್ಕಾಗಿ ಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಿಂದಿನ ಸರ್ಕಾರದ ಮೇಲೆ ಆರೋಪ ಹೊರಿಸಿದ್ದು, ಸಂಧಾನ ವಿಫಲವಾಗಿರುವುದರಿಂದ ಸಾರಿಗೆ ಬಂದ್‌ನ ಆತಂಕ ಎದುರಾಗಿದೆ.
Read Full Story

04:12 PM (IST) Feb 19

"ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಬಬಲಾದಿ ಮಠದ ಬೆಂಕಿ ಭವಿಷ್ಯ, ಮುತ್ಯಾನಿಂದ ಕಷ್ಟಕಾಲದ ಎಚ್ಚರಿಕೆ!

ವಿಜಯಪುರದ ಬಬಲಾದಿ ಮಠದ ಈ ವರ್ಷದ ಬೆಂಕಿ ಭವಿಷ್ಯ ಪ್ರಕಟವಾಗಿದ್ದು, "ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ" ಎಂಬ ಎಚ್ಚರಿಕೆ ನೀಡಿದೆ. ಈ ಪರಾಭವನಾಮ ಸಂವತ್ಸರದ ಭವಿಷ್ಯವು ರಾಜಕೀಯ ತಿರುವು, ಪ್ರಕೃತಿ ವಿಕೋಪಗಳ ಜೊತೆಗೆ ರೈತರಿಗೆ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ.
Read Full Story

03:54 PM (IST) Feb 19

ಮೊನ್ನೆಯಷ್ಟೇ ನಿಶ್ಚಿತಾರ್ಥವಾಗಿತ್ತು, ಮದುವೆಗೂ ಮುನ್ನವೇ ಮಸಣ ಸೇರಿದ ಮದುಮಗ! ಆನ್ ಸ್ಪಾಟ್ ಇಬ್ಬರ ದುರ್ಮರಣ!

ಹಾಸನದಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ನಿಶ್ಚಿತಾರ್ಥವಾಗಿದ್ದ ಯುವಕ ರಾಕೇಶ್ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗದಿಂದ ಸಂಭವಿಸಿದ ಈ ಮುಖಾಮುಖಿ ಡಿಕ್ಕಿಯಿಂದಾಗಿ, ಆಗಸ್ಟ್‌ನಲ್ಲಿ ಮದುವೆಯಾಗಬೇಕಿದ್ದ ರಾಕೇಶ್ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.
Read Full Story

03:28 PM (IST) Feb 19

ನಟೇಶ್ ಬಡ್ತಿಗಾಗಿ ಮುಖ್ಯ ಕಾರ್ಯದರ್ಶಿ ಕೋಟಿ ಲಂಚ ಆರೋಪ, 12 ಪ್ರಶ್ನೆಗಳಾಗಿ ಎಳೆಎಳೆಯಾಗಿ ಉತ್ತರ ಕೊಟ್ಟ ಶಾಲಿನಿ ರಜನೀಶ್

ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರಿಗೆ ಮುಂಬಡ್ತಿ ನೀಡಲು ಹಣ ಪಡೆದಿದ್ದಾರೆ ಎಂಬ ಆರೋಪವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಳ್ಳಿಹಾಕಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಮಾಡಿದ ಆರೋಪಗಳು ಆಧಾರರಹಿತವಾಗಿದ್ದು, ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ.

Read Full Story

02:51 PM (IST) Feb 19

ಬೆಂಗಳೂರು - ಖಾಕಿ ವೇಷದಲ್ಲಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ರಾಬರಿ ಮಾಡಿ ಜೈಲಿಗೆ ತೆರಳಿರುವ ಕಳ್ಳ!

ಪೊಲೀಸ್ ಸಮವಸ್ತ್ರದಲ್ಲಿ ಬಂದ ದುಷ್ಕರ್ಮಿಗಳು, ಮನೆಯಲ್ಲಿದ್ದವರನ್ನು ಕಟ್ಟಿಹಾಕಿ 20 ಲಕ್ಷ ನಗದು ಮತ್ತು ಅರ್ಧ ಕೆಜಿ ಚಿನ್ನ ದೋಚಿದ್ದಾರೆ. ತನಿಖೆ ವೇಳೆ, ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೊಬ್ಬ ಈ ಕೃತ್ಯ ಎಸಗಿ, ದರೋಡೆಯ ಮರುದಿನವೇ ಮತ್ತೆ ಜೈಲಿಗೆ ವಾಪಸ್ ಆಗಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

Read Full Story

02:48 PM (IST) Feb 19

ರಶ್ಮಿಕಾಗೆ ಮದ್ವೆ - ಇನ್ನೂ ಭಾರತೀಯ ಸಿನಿಮಾ ಆಳೋದು ರುಕ್ಮಿಣಿ ವಸಂತ್!

ರಕ್ಷಿತ್ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿ, ಮನೆ ಮಾತಾಗಿದ್ದು ರುಕ್ಮಿಣಿ ವಸಂತ್‌ಗೆ ಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೆಸರು ತಂದು ಕೊಟ್ಟಿದ್ದು, ಕಾಂತಾರಾ ಚಾಪ್ಟರ್ 1. ಇದೀಗ ಈ ನಟಿಯನ್ನು ಮೃಣಾಲ್ ಠಾಕೂರ್‌ಗೆ ಹೋಲಿಸುತ್ತಿದ್ದಾರೆ.

 

Read Full Story

02:43 PM (IST) Feb 19

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ; ಹಸಿರು ಮಾರ್ಗದ ಜಯನಗರ-ಆರ್.ವಿ. ರಸ್ತೆ ಮಧ್ಯೆ ರೈಲಿನ ವೇಗ ನಿಯಂತ್ರಿಸಲಾಗಿದೆ!

ಬೆಂಗಳೂರಿನ 'ನಮ್ಮ ಮೆಟ್ರೋ' ಹಸಿರು ಮಾರ್ಗದ ಜಯನಗರ ಮತ್ತು ಆರ್.ವಿ.ರಸ್ತೆ ನಿಲ್ದಾಣಗಳ ನಡುವೆ ಸಿವಿಲ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ, ಸುರಕ್ಷತೆಗಾಗಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ. 

Read Full Story

02:24 PM (IST) Feb 19

Vijay-Rashmika Wedding - ರಶ್ಮಿಕಾ ಜೊತೆ ಮದುವೆ ನಂತರ ವಿಜಯ್ ದೇವರಕೊಂಡ ಹಣೆಬರಹ ಬದಲಾಗಲಿದೆಯೇ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಸಕಲ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಜ್ಯೋತಿಷಿ ಹೇಳಿರೋ ಮಾತು 

Read Full Story

02:18 PM (IST) Feb 19

Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​

ಬಿಗ್​ಬಾಸ್​ ಗೆದ್ದ ನಂತರ ಸಖತ್ ಬ್ಯುಸಿಯಾಗಿರುವ ಗಿಲ್ಲಿ ನಟನಿಗೆ ಎಲ್ಲೆಡೆ ಮದುವೆಯದ್ದೇ ಪ್ರಶ್ನೆ ಎದುರಾಗುತ್ತಿದೆ. ಮದುವೆ ಬಗ್ಗೆ ಮಾತನಾಡಿರುವ ಅವರು, ಮದುವೆಯ ದಿನ ನೀಡುವ ಉಡುಗೊರೆ ಬಗ್ಗೆಯೂ ಹೇಳಿದ್ದಾರೆ. ಬೊಕೆ ಬೇಡ, ಮುಯ್ಯಿ ಕೊಡಿ ಸಾಕು ಎಂದಿದ್ದಾರೆ. 

Read Full Story

02:03 PM (IST) Feb 19

ಸ್ಟಾರ್ ನಿರ್ದೇಶಕನ ಜೊತೆ ಲವ್, 3 ವರ್ಷಕ್ಕೆ ಡಿವೋರ್ಸ್! ಯಾರು ಈ ಸುದೀಪ್ ಸಿನಿಮಾ ನಟಿ?

ತಮಿಳು, ತೆಲುಗಿನಲ್ಲಿ ಟಾಪ್ ನಟಿಯಾಗಿದ್ದ ಈಕೆ, ನಿರ್ದೇಶಕರೊಬ್ಬರನ್ನು ಪ್ರೀತಿಸಿ ಮದುವೆಯಾದರು. ಆದರೆ 3 ವರ್ಷದಲ್ಲೇ ವಿಚ್ಛೇದನ ಪಡೆದು, 2023ರಲ್ಲಿ ಮರುಮದುವೆಯಾಗಿ ಇದೀಗ ಮಗುವಿನೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ಆ ನಟಿ ಯಾರು ಗೊತ್ತಾ?
Read Full Story

01:32 PM (IST) Feb 19

ಕಿರಿಯ ವಯಸ್ಸಿಗೆ ನ್ಯಾಯಾಧೀಶ ಪಟ್ಟ - ಶಿರಸಿ ಸುಮಂತ್‌ 2ನೇ ರ‍್ಯಾಂಕ್‌, ಧಾರವಾಡ ಸುಧಾ 24ನೇ ವಯಸ್ಸಿಗೆ ಜಡ್ಜ್!

2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯದ ಯುವ ಕಾನೂನು ಪದವೀಧರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶಿರಸಿಯ ಸುಮಂತ್ ನಾಯ್ಕ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದರೆ, ಧಾರವಾಡದ ಮೂವರು ಸೇರಿದಂತೆ ಹಲವು ಯುವಕ-ಯುವತಿಯರು ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

Read Full Story

12:52 PM (IST) Feb 19

ಹೀರೋಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡದ ಏಕೈಕ ನಟಿ ಮಾಲಾಶ್ರೀ; ಇದು ಸಾಧ್ಯವಾಗಿದ್ದು ಹೀಗೆ..!

ಇಂದು ಪ್ಯಾನ್ ಇಂಡಿಯಾ ಸ್ಟಾರ್‌ಗಳ ಕಾಲವಿರಬಹುದು. ಆದರೆ, ಸೋಶಿಯಲ್ ಮೀಡಿಯಾ ಇಲ್ಲದ, ಇಂಟರ್ನೆಟ್ ಇಲ್ಲದ ಆ ಕಾಲದಲ್ಲಿ ಕೇವಲ ತಮ್ಮ ಅಭಿನಯ ಮತ್ತು ವರ್ಚಸ್ಸಿನಿಂದ ಇಡೀ ರಾಜ್ಯದ ಜನರನ್ನು ಮಂತ್ರಮುಗ್ಧರನ್ನಾಗಿಸಿದ ಕೀರ್ತಿ ಮಾಲಾಶ್ರೀ ಅವರಿಗೆ ಸಲ್ಲುತ್ತದೆ. ಇಂಥ ಸಾಧನೆ ಇತಿಹಾಸದಲ್ಲೇ ಇಲ್ಲ..!

Read Full Story

12:45 PM (IST) Feb 19

ನಟೇಶ್ ಭಡ್ತಿಗಾಗಿ ಶಾಲಿನಿ ರಜನೀಶ್ ಗೆ 1.60 ಕೋಟಿ ಲಂಚ, ಹಣ ಸಾಗಿಸಿದ ಕಾರು ಸಮೇತ ಸ್ಫೋಟಕ ದಾಖಲೆ ಬಿಡುಗಡೆ!

ಅಧಿಕಾರಿಯೊಬ್ಬರಿಗೆ ಭಡ್ತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್  ₹1.60 ಕೋಟಿ ಲಂಚ ಪಡೆದಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ₹9 ಕೋಟಿ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಹಣ ಸಾಗಿಸಿದ ಕಾರಿನ ಫೋಟೋ ಸಹಿತ ದೂರು ಸಲ್ಲಿಸಿದ್ದಾರೆ.

Read Full Story

12:26 PM (IST) Feb 19

ಜಿ. ಪರಮೇಶ್ವರ್ ಅಥವಾ ಡಿಕೆಶಿ, ಯಾರಾಗ್ತಾರೆ ಮುಂದಿನ ಸಿಎಂ - ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯವೇನು?

ಕರ್ನಾಟಕದ ರಾಜಕಾರಣ ಹಾಗೂ ಜಗತ್ತಿನ ಬಗ್ಗೆ ಆಗಾಗ ಭವಿಷ್ಯ ನುಡಿಯುವ ಕೋಡಿಹಳ್ಳಿ ಶ್ರೀಗಳು ಇದೀಗ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಮ್ಮ ಭವಿಷ್ಯ ನುಡಿದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಆಪತ್ತಿಲ್ಲ ಎಂದಿದ್ದಾರೆ.

Read Full Story

More Trending News