Published : Jun 18, 2025, 07:17 AM ISTUpdated : Jun 18, 2025, 11:01 PM IST

Karnataka News Live: ಪಾಕಿಸ್ತಾನಕ್ಕೆ 40 ಜೆ-35 ಸ್ಟೆಲ್ತ್ ಯುದ್ಧವಿಮಾನ ನೀಡುವ ಒಪ್ಪಂದ ಮಾಡಿಕೊಂಡ ಚೀನಾ!

ಸಾರಾಂಶ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಆಗುತ್ತಾ? ಪುನಾರಚನೆ ಆಗಲಿದೆಯಾ ಮತ್ತು ಇದೇ ಅವಧಿಯಲ್ಲಿ ದಲಿತ ಸಿಎಂ ಬರ್ತರಾ ಅನ್ನೋ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಹೊಸಪೇಟೆಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಮುಂದಿನ ವಿಧಾಸಸಭೆ ಚುನಾವಣೆ ಬಳಿಕ ಮತ್ತೇ ದಲಿತ ಸಿಎಂ ಕೂಗು ಎತ್ತುವ ಕುರಿತು ಮುನ್ಸೂಚನೆಯನ್ನು ನೀಡಿದ್ದಾರೆ. ಇದೇ ವೇಳೆ ಮೊದಲ ಬಾರಿಗೆ ಶಾಸಕರಾಗಿರೋರಿಗೆ ಸಂಪುಟದಲ್ಲಿ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ಸತೀಶ್ ಜಾರಕಿಹೊಳಿ ನೀಡಿದ್ದಾರೆ.

J-35 Stealth Jets

11:01 PM (IST) Jun 18

ಪಾಕಿಸ್ತಾನಕ್ಕೆ 40 ಜೆ-35 ಸ್ಟೆಲ್ತ್ ಯುದ್ಧವಿಮಾನ ನೀಡುವ ಒಪ್ಪಂದ ಮಾಡಿಕೊಂಡ ಚೀನಾ!

40 ಜೆಎಫ್ -17 ಫೈಟರ್ ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಜರ್‌ಬೈಜಾನ್‌ ಮತ್ತು ಪಾಕಿಸ್ತಾನವು 4.6 ಬಿಲಿಯನ್ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

 

Read Full Story

10:01 PM (IST) Jun 18

ತನ್ನ ಅಭಿಮಾನಿಗಳಿಗಾಗಿ ₹120 ಕೋಟಿ ಬಿಟ್ಟುಕೊಟ್ಟ ಈ ನಟ ಯಾರು?

ಸ್ಟಾರ್ ಹೀರೋಗಳು ಫ್ಯಾನ್ಸ್ ಅಂದ್ರೆ ಪ್ರಾಣ ಅಂತಾರೆ, ಆದ್ರೆ ಅವ್ರಿಗೋಸ್ಕರ ಕೋಟಿ ಬಿಡ್ಬೇಕಾದ್ರೆ.? ಒಬ್ಬ ಸ್ಟಾರ್ ಹೀರೋ ತನ್ನ ಅಭಿಮಾನಿಗಳಿಗೋಸ್ಕರ ₹120 ಕೋಟಿ ಡೀಲ್ ಬಿಟ್ಟಿದ್ದಾರೆ. ಯಾರು ಅಂತ ಗೊತ್ತಾ?

Read Full Story

09:58 PM (IST) Jun 18

ಬಿಸಿಸಿಐಗೆ ಭಾರೀ ಶಾಕ್‌ ನೀಡಿದ ಬಾಂಬೆ ಹೈಕೋರ್ಟ್‌, ಖಜಾನೆಗೆ ಬಿತ್ತು 538 ಕೋಟಿ ರೂಪಾಯಿ ಪರಿಹಾರದ ಭಾರ!

ಐಪಿಎಲ್‌ನಲ್ಲಿ ವಜಾಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ₹538 ಕೋಟಿಗೂ ಹೆಚ್ಚಿನ ಮೊತ್ತದ ಮಧ್ಯಸ್ಥಿಕೆ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಫ್ರಾಂಚೈಸಿ ಒಪ್ಪಂದ ವಜಾ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

 

Read Full Story

08:50 PM (IST) Jun 18

ಬೆಂಗಳೂರಿನ ಕಚೇರಿ ಖಾಲಿ ಮಾಡಿದ DailyHunt, ಮಾಸಿಕ 60 ಲಕ್ಷ ಉಳಿತಾಯ!

ಹಿಂದೆ, ಡೀಲ್‌ಶೇರ್, ಬೈಜೂಸ್, ಡಂಜೊ ಮತ್ತು ಇತರ ಕಂಪನಿಗಳು ಕೆಲವು ಕೋಟಿಗಳಷ್ಟು ವೆಚ್ಚವನ್ನು ಕಡಿಮೆ ಮಾಡಲು, ತಮ್ಮ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಮತ್ತು ತಮ್ಮ ನಗದು ರನ್‌ವೇಯನ್ನು ಹೆಚ್ಚಿಸಲು ತಮ್ಮ ಕಚೇರಿ ಸ್ಥಳವನ್ನು ಬಿಟ್ಟುಕೊಟ್ಟಿವೆ.

 

Read Full Story

08:26 PM (IST) Jun 18

ಬೆಂಗಳೂರು ದೇವಸ್ಥಾನದಲ್ಲಿ ಸಾಮಾನ್ಯರಂತೆ ಕುಳಿತು ಮಗನ ಮೃದಂಗ ವಾದನ ವೀಕ್ಷಿಸಿದ ಕೋಟ್ಯಧಿಪತಿ ನಿತಿನ್‌ ಕಾಮತ್‌!

ಕೋಟ್ಯಧಿಪತಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಅವರು ಬೆಂಗಳೂರಿನ ದೇವಸ್ಥಾನದಲ್ಲಿ ತಮ್ಮ ಮೊಮ್ಮಗ ಕಿಯಾನ್ ಅವರೊಂದಿಗೆ ಮೃದಂಗದಲ್ಲಿ ವೀಣೆಯಲ್ಲಿ ಪ್ರದರ್ಶನ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

 

Read Full Story

07:48 PM (IST) Jun 18

5 ಹೊಸ ಬೋಗಿ ಜೋಡಣೆ ಬಳಿಕ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ದಿನನಿತ್ಯ ವಿಳಂಬ, ಪ್ರಯಾಣಿಕರ ಅಸಮಾಧಾನ!

ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ವಿಳಂಬದಿಂದ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಈ ವಿಳಂಬವು ಕಚೇರಿಗೆ ಹೋಗುವವರ ಮೇಲೆ ಪರಿಣಾಮ ಬೀರುತ್ತದೆ.

 

Read Full Story

07:37 PM (IST) Jun 18

ಅಂಕಲ್ ದಿಂಬಿನಿಂದ ಅಪ್ಪನ ಉಸಿರುಕಟ್ಟಿಸಿದಾಗ ಅಮ್ಮ ನೋಡ್ತಾ ನಿಂತಿದ್ದರು - ಸಾಕ್ಷಿ ಹೇಳಿದ 9 ವರ್ಷದ ಮಗು

ಅಲ್ವಾರ್‌ನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಅಪ್ರಾಪ್ತ ಮಗನ ಮುಂದೆಯೇ ಗಂಡನನ್ನು ಕೊಲೆ ಮಾಡಿದ್ದಾಳೆ. 

Read Full Story

07:16 PM (IST) Jun 18

ವಯಸ್ಸಾದಂತೆ ಕಾಣ್ಬಾರ್ದು ಅಂದ್ರೆ ಹೀಗ್ ಮಾಡಿ; 10 ವರ್ಷ ಕಡಿಮೆ ಕಾಣೋದು ಗ್ಯಾರಂಟಿ!

ನಮ್ಮ ಚರ್ಮ ಆರೋಗ್ಯವಾಗಿರಬೇಕಂದ್ರೆ ಹೊರಗಿನಿಂದ ಕ್ರೀಮ್ ಹಚ್ಚಿದ್ರೆ ಸಾಲದು. ಒಳಗಿನಿಂದ ಕೇರ್ ತಗೊಳ್ಳೋದು ಮುಖ್ಯ. ದಿನಾ ನಾವು ಎದುರಿಸುವ ಮಾಲಿನ್ಯ, ಒತ್ತಡ, ನಿದ್ದೆ ಕೊರತೆ, ತಪ್ಪು ಆಹಾರ ಪದ್ಧತಿ ಇವೆಲ್ಲ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತೆ.

Read Full Story

07:07 PM (IST) Jun 18

ಜುಲೈ 28ರವರೆಗೆ ಎಚ್ಚರ ಎಚ್ಚರ! ಸಂಭವಿಸಲಿದೆ ಅನಾಹುತಗಳ ಸರಮಾಲೆ - ಪರಿಹಾರ ಇಲ್ಲಿದೆ...

ಮಂಗಳ ಮತ್ತು ಕೇತು ಸಿಂಹ ರಾಶಿಯಲ್ಲಿ ಒಟ್ಟಿಗೆ ಇರುವ ಹಿನ್ನೆಲೆಯಲ್ಲಿ ಜುಲೂ 28ರವರೆಗೆ ಅನಾಹುತಗಳ ಸರಮಾಲೆಯೇ ನಡೆಯಲಿದೆ ಎಂದಿರುವ ಜ್ಯೋತಿಷಿಗಳು ಇದಕ್ಕೆ ಪರಿಹಾರವನ್ನೂ ಹೇಳಿದ್ದಾರೆ. ಏನದು?

 

Read Full Story

06:45 PM (IST) Jun 18

ಶಸ್ತ್ರಾಸ್ತ್ರಗಳ ಕೊರತೆಯ ಭೀತಿಯಲ್ಲಿ ಇಸ್ರೇಲ್‌, 10-12 ದಿನಕ್ಕೆ ಆಗುವಷ್ಟು ಮಾತ್ರವೇ ಕ್ಷಿಪಣಿಗಳ ದಾಸ್ತಾನು!

ಇಸ್ರೇಲಿ ಇಂಟರ್‌ಸೆಪ್ಟರ್‌ಗಳು ತೀವ್ರ ಒತ್ತಡದಲ್ಲಿವೆ, ಆರೋ ಕ್ಷಿಪಣಿಗಳಿಗೆ ತಲಾ $3 ಮಿಲಿಯನ್ ವೆಚ್ಚವಾಗುತ್ತದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸುಮಾರು $285 ಮಿಲಿಯನ್ ವೆಚ್ಚವಾಗುತ್ತಿದೆ ಎಂದು ವರದಿಯಾಗಿದೆ, ಇಸ್ರೇಲ್ ಎಷ್ಟು ಕಾಲ ತಡೆದುಕೊಳ್ಳಬಲ್ಲದು ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತದೆ.

 

Read Full Story

06:32 PM (IST) Jun 18

ಚಿತ್ರಮಂದಿರದ ಮುಂದೆ ಕಾರು ಸರಿಯಾಗಿ ನಿಲ್ಲಿಸಿ ಎಂದಿದ್ದೇ ತಪ್ಪಾಯ್ತು? ಪಾರ್ಕಿಂಗ್ ಸಿಬ್ಬಂದಿಗೆ ಹೊಡೆದ ಚಾಲಕ!

ಕಾರವಾರದಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ಪಾರ್ಕಿಂಗ್ ಸಿಬ್ಬಂದಿ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story

06:21 PM (IST) Jun 18

ಕಡಿಮೆ ನಿರ್ವಹಣೆ ವೆಚ್ಚ, ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಹೈಬ್ರಿಡ್ ಕಾರು

ಹೈಬ್ರಿಡ್ ಕಾರು ಉತ್ತಮ ಮೈಲೇಜ್ ನೀಡಲಿದೆ. ಇದರಿಂದ ನಿರ್ವಹಣೆ ಸುಲಭ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಹಲವು ಹೈಬ್ರಿಡ್ ಕಾರುಗಳು ಲಭ್ಯವಿದೆ.ಹೀಗೆ ಲಭ್ಯವಿರುವ ಉತ್ತಮ ಕಾರುಗಳ ಪಟ್ಟಿ ಇಲ್ಲಿದೆ.  

Read Full Story

06:20 PM (IST) Jun 18

ಮೋದಿ-ಮೆಲೋನಿ ಭೇಟಿ - 'ನೀವೇ ಬೆಸ್ಟ್‌..ನಿಮ್ಮಂತೆ ಆಗಲು ಬಯಸಿದ್ದೇನೆ' ಎಂದ ಇಟಲಿ ಪ್ರಧಾನಿ!

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆತ್ಮೀಯ ಭೇಟಿ. ಮೆಲೋನಿ, ಮೋದಿಯವರನ್ನು 'ಬೆಸ್ಟ್‌' ಎಂದು ಶ್ಲಾಘಿಸಿದ್ದಾರೆ. ಇಬ್ಬರೂ ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದಾರೆ.
Read Full Story

06:09 PM (IST) Jun 18

ಅಜ್ಜಿಯದ್ದು ಸಹಜ ಸಾವೆಂದು ಅಂತ್ಯಕ್ರಿಯೆ ಮಾಡುವಾಗ, ಕೊಲೆಯ ಸುಳಿವು ಕೊಟ್ಟ ಗಾಯ!

ಚನ್ನರಾಯಪಟ್ಟಣದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 68 ವರ್ಷದ ವೃದ್ಧೆ ಕಮಲಮ್ಮ ಅವರನ್ನು ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಸಹಜ ಸಾವು ಎಂದು ಭಾವಿಸಿದ್ದ ಸಂಬಂಧಿಕರು, ಕುತ್ತಿಗೆಯ ಗಾಯದ ಗುರುತು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

06:03 PM (IST) Jun 18

Mysuru Lokayukta raid - 3 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಚೆಸ್ಕಾಂ ಎಇಇ!

ಮೈಸೂರಿನಲ್ಲಿ ಚೆಸ್ಕಾಂನ ಎಇಇ ದೀಪಕ್ 3 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಧಿಕೃತ ವಿದ್ಯುತ್ ಸಂಪರ್ಕ ದಂಡ ಕಡಿಮೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Read Full Story

05:42 PM (IST) Jun 18

ಸರ್ಕಾರಿ ಕಚೇರಿಯ ಬಾತ್‌ರೂಮಿನಲ್ಲಿ 8 ಅಡಿ ಉದ್ದದ ಹಾವು; ಬೆಚ್ಚಿಬಿದ್ದ ಸಿಬ್ಬಂದಿ

ಧಾರವಾಡದ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿಯ ಬಾತ್‌ರೂಮಿನಲ್ಲಿ ೮ ಅಡಿ ಉದ್ದದ ಹಾವು ಪತ್ತೆಯಾಗಿದೆ. ಉರಗ ತಜ್ಞರು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಘಟನೆ ಕಚೇರಿಗಳ ಸ್ವಚ್ಛತೆ ಕುರಿತು ಚರ್ಚೆ ಹುಟ್ಟುಹಾಕಿದೆ.
Read Full Story

05:33 PM (IST) Jun 18

ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ತಂದೆಗೆ ಆಘಾತ - ಕಾಣೆಯಾದ ಮಗಳು ಲವರ್ ಜೊತೆ ಜೀವಂತ

ತನ್ನ ಕಾಣೆಯಾದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ಕೂಡ ನಡೆಸಿದ್ದರು. ಆದರೆ ಹೀಗೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ತಂದೆಯ ಕಣ್ಣಿಗೆ ಕಂಡಿದೆ.

Read Full Story

05:30 PM (IST) Jun 18

ದಿನದ ಕೆಲಸದ ಅವಧಿ 10 ಗಂಟೆಗೆ ವಿಸ್ತರಣೆ, ಕರ್ನಾಟಕ ಐಟಿ ಉದ್ಯೋಗಿಗಳ ಒಕ್ಕೂಟ ಭಾರೀ ವಿರೋಧ!

ಕರ್ನಾಟಕ ಸರ್ಕಾರವು ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದು, ಕೆಲಸದ ಸಮಯವನ್ನು 9 ರಿಂದ 10 ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದೆ. ಓವರ್‌ಟೈಮ್‌ ಸೇರಿದರೆ ದಿನಕ್ಕೆ ಗರಿಷ್ಠ 12 ಗಂಟೆಗಳಾಗಲಿದೆ.

 

Read Full Story

05:30 PM (IST) Jun 18

ಪ್ರೀತಿ ಹೆಸರಲ್ಲಿ ಮಹಿಳೆಗೆ ಬ್ಲಾಕ್‌ಮೇಲ್ ಪ್ರಕರಣ; ಆರೋಪಿ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರೇ ಶಾಕ್!

ಮದುವೆಯಾಗುವ ಭರವಸೆ ನೀಡಿ ವಿಚ್ಛೇದಿತ ಮಹಿಳೆಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸೈಬರ್ ಸೆಂಟರ್ ನಡೆಸುತ್ತಿದ್ದ ಆರೋಪಿ, ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ವಂಚಿಸಿದ್ದಾನೆ.
Read Full Story

05:27 PM (IST) Jun 18

ಊರು ಬಿಟ್ಟರೂ ಮೂಲ‌ ಮರೆಯದ ರಕ್ಷಿತಾ... ಕಟೀಲು, ಕೊಲ್ಲೂರಿಗೆ ಭೇಟಿ ಕೊಟ್ಟ ನಟಿ

ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ ರಕ್ಷಿತಾ ಜೋರಾದ ಮಳೆಯ ನಡುವೆ ಕರಾವಳಿಗೆ ಭೇಟಿ ನೀಡಿ, ಇಲ್ಲಿನ ವಿವಿಧ ದೇಗುಲಗಳ ದರ್ಶನ ಪಡೆದಿದ್ದಾರೆ.

Read Full Story

05:26 PM (IST) Jun 18

ಭಾರತದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಟೀಸರ್‌ಗಳು; ಟಾಪ್ 10 ಪೈಕಿ ಕನ್ನಡಕ್ಕೂ ಸ್ಥಾನ!

ಜೂನ್ 2025ರ ವರೆಗೆ ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್ 10 ಭಾರತೀಯ ಚಿತ್ರಗಳ ಟೀಸರ್‌ಗಳ ಪಟ್ಟಿ ಇಲ್ಲಿದೆ. ಟ್ರೇಲರ್‌ಗಳ ಜೊತೆಗೆ ಟೀಸರ್‌ಗಳಿಗೂ ಭಾರಿ ಕ್ರೇಜ್ ಇದೆ.
Read Full Story

05:21 PM (IST) Jun 18

ಇಬ್ಬರು ಕಾಂಗ್ರೆಸ್ ಶಾಸಕರಿಗೆ ಶಾಕ್ ಕೊಟ್ಟ ಕೋರ್ಟ್, 11 ವರ್ಷ ಹಳೇ ಕೇಸ್‌ನಲ್ಲಿ 1 ವರ್ಷ ಜೈಲು

ಇಬ್ಬರು ಕಾಂಗ್ರೆಸ್ ಶಾಸಕರಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಗೊಂಡಿದೆ. 11 ವರ್ಷ ಹಳೇ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ಸುದೀರ್ಘ ವಿಚಾರಣೆ ಬಳಿಕ ಇಬ್ಬರು ಕಾಂಗ್ರೆಸ್ ಶಾಸಕರು 9 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

Read Full Story

05:12 PM (IST) Jun 18

ʼ1120 ರೂ. ಇದೆ, ಮಾಂಗಲ್ಯ ಸರ ಕೊಡಿʼ-ವೃದ್ಧ ದಂಪತಿಯ ಬಯಕೆಗೆ, ಅಂಗಡಿ ಮಾಲೀಕನ ಔದಾರ್ಯತೆ ನೋಡಿದ್ರೆ ಮಾತೇ ಬರಲ್ಲ!

ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ವೃದ್ಧರೊಬ್ಬರು ( 93 ವರ್ಷ ) ಪಂಡರಾಪುರದ ಪಾಂಡುರಂಗನ ದರ್ಶನ ಮಾಡಲು ಬಯಸಿದ್ದರು. ಇದಕ್ಕೂ ಮುನ್ನ ಅವರು ತನ್ನ ಪತ್ನಿಗೆ ಮಾಂಗಲ್ಯ ಸರ ಕೊಡಲು ಪ್ಲ್ಯಾನ್‌ ಮಾಡಿದ್ದರು. ಅವರಿಗೆ ಶಾಕಿಂಗ್‌ ಸರ್ಪ್ರೈಸ್‌ ಸಿಕ್ಕಿದೆ. 

Read Full Story

05:06 PM (IST) Jun 18

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರು ಕೊಹ್ಲಿಯೂ ಅಲ್ಲ, ಸಚಿನ್ ಅಲ್ಲ! ಮತ್ತ್ಯಾರು?

ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್‌ಗೆ ಸಾಧ್ಯವಾಗದ ದಾಖಲೆಯನ್ನು ಒಬ್ಬ ಭಾರತೀಯ ಕ್ರಿಕೆಟಿಗ ಸಾಧಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಮೂರು ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಆ ಆಟಗಾರ ಯಾರು ಎಂದು ಈಗ ತಿಳಿದುಕೊಳ್ಳೋಣ.

Read Full Story

04:47 PM (IST) Jun 18

ಅರಣ್ಯಪಾಲಕನ ಹೃದಯ ವಿದಾಯ - ಕಾಡಿನ ಮಡಿಲಲ್ಲಿ ಅಂತ್ಯಕಂಡ ನವೀನ್!

ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯಪಾಲಕ ನವೀನ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯವರಾದ ನವೀನ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
Read Full Story

04:36 PM (IST) Jun 18

ರೆಡ್ಡಿಟ್‌ಗೆ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಜಾಗತಿಕ ರಾಯಭಾರಿ!

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ರೆಡ್ಡಿಟ್ ತನ್ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ತನ್ನ ಸಂಪರ್ಕವನ್ನು ಗಾಢವಾಗಿಸಲು ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಈ ನೇಮಕಾತಿ ಮಾಡಲಾಗಿದೆ.

Read Full Story

04:31 PM (IST) Jun 18

ಬ್ಯುಸಿನೆಸ್‌ ಜೆಟ್ ನಿರ್ಮಿಸುವ ದೇಶಗಳ ಕ್ಲಬ್‌ಗೆ ಸೇರಿದ ಭಾರತ, 2028ರಲ್ಲಿ ಮೇಡ್‌ ಇನ್‌ ಇಂಡಿಯಾ ಫಾಲ್ಕನ್‌ ಜೆಟ್‌!

ಡಸಾಲ್ಟ್ ಏವಿಯೇಷನ್ ​​ಫ್ರಾನ್ಸ್‌ನ ಹೊರಗೆ ಫಾಲ್ಕನ್ 2000 ಜೆಟ್‌ಗಳನ್ನು ಮೊದಲ ಬಾರಿಗೆ ತಯಾರಿಸಿದಂತಾಗಿದೆ. ಭಾರತವು ಈಗ ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಕೆನಡಾ ಮತ್ತು ಬ್ರೆಜಿಲ್ ಜೊತೆಗೆ ಬ್ಯುಸಿನೆಸ್‌ ಜೆಟ್ ತಯಾರಿಕಾ ರಾಷ್ಟ್ರಗಳ ಕ್ಲಬ್‌ಗೆ ಸೇರುತ್ತಿದೆ.

 

Read Full Story

04:07 PM (IST) Jun 18

ಜಿಮ್’ನಲ್ಲಿ ದೇಹ ದಂಡಿಸಿ ಬೈಸೆಪ್ಸ್ ಪ್ರದರ್ಶಿಸಿದ ಸ್ಯಾಂಡಲ್’ವುಡ್ ಸುಂದರಿ

ಸ್ಯಾಂಡಲ್ ವುಡ್ ನ ಕಿರಿಕ್ ಬ್ಯೂಟಿ ಅಂದ್ರೆ ಯಾರು ಅಂತ ಹೇಳಬೇಕಾಗಿಲ್ಲ. ಅದು ಸಂಯುಕ್ತ ಹೆಗ್ಡೆ. ಇದೀಗ ಆಕೆ ತನ್ನ ಕಟ್ಟುಮಸ್ತಾದ ದೇಹಸಿರಿ ಪ್ರದರ್ಶಿಸಿ, ನಾನು ಯಾರ್ಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.

 

Read Full Story

04:07 PM (IST) Jun 18

ಮನೆಯಲ್ಲಿ ಮಲಗಿದ್ದ ಕುಟುಂಬದವರಿಗೆಲ್ಲಾ ಕಚ್ಚಿದ ಹಾವು; ಮಲಗಿದ್ದಲ್ಲೇ ಪ್ರಾಣ ಬಿಟ್ಟ ಮಕ್ಕಳು!

ರಾತ್ರಿ ಊಟ ಮಾಡಿ, ಸಾಲಾಗಿ ಮಲಗಿದ್ದ ಕುಟುಂಬದ ಎಲ್ಲ ಸದಸ್ಯರಿಗೆ ವಿಷಪೂರಿತ ಹಾವು ಕಚ್ಚಿದೆ. ಇದರಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ., ಚಿಕಿತ್ಸೆ ಮುಂದುವರೆದಿದೆ. 

Read Full Story

04:00 PM (IST) Jun 18

ಮೂರನೇ ಮದುವೆಯಾದ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮೊದಲ ಪತ್ನಿ! ಮೊದಲು ಮದುವೆಯಾಗುವಾಗ ಈಕೆಗೆ ಕೇವಲ 16 ವರ್ಷ!

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಮೊದಲ ಪತ್ನಿ ನೌರೀನ್ ಇತ್ತೀಚೆಗೆ ಮೂರನೇ ಮದುವೆಯಾಗಿದ್ದಾರೆ. ಈ ಲೇಖನದಲ್ಲಿ ಅವರ ಮೊದಲ ಮದುವೆ, ವಿಚ್ಛೇದನ ಹಾಗೂ ಮರು ಮದುವೆಗಳ ಕುರಿತು ತಿಳಿದುಕೊಳ್ಳೋಣ.
Read Full Story

03:58 PM (IST) Jun 18

ದಿನದ ಕೆಲಸದ ಸಮಯ 9 ರಿಂದ 10 ಗಂಟೆಗೆ ಏರಿಸಲು ಮುಂದಾದ ರಾಜ್ಯ ಸರ್ಕಾರ - ವರದಿ

ಕರ್ನಾಟಕ ಸರ್ಕಾರವು ದಿನಕ್ಕೆ 10 ಗಂಟೆಗಳ ಕೆಲಸದ ಅವಧಿ ಮತ್ತು 144 ಗಂಟೆಗಳ ಓವರ್‌ಟೈಮ್‌ಗೆ ಪ್ರಸ್ತಾವನೆ ಸಲ್ಲಿಸಿದೆ. ಕಾರ್ಮಿಕ ಸಂಘಟನೆಗಳು ಇದನ್ನು ವಿರೋಧಿಸುತ್ತಿವೆ.
Read Full Story

03:49 PM (IST) Jun 18

ವಾಹನ ಸವಾರರಿಗೆ ಗುಡ್ ನ್ಯೂಸ್, ಆಗಸ್ಟ್ 15ರಿಂದ ಫಾಸ್ಟ್ಯಾಗ್ ಹೊಸ ನಿಯಮ

ಆಗಸ್ಟ್ 15 ರಿಂದ ಹೊಸ ಫಾಸ್ಟ್ಯಾಗ್ ನಿಯಮ ಜಾರಿಯಾಗುತ್ತಿದೆ. ವಿಶೇಷ ಅಂದರೆ ಟೋಲ್‌ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವವರಿಗೆ ಗುಡ್ ನ್ಯೂಸ್. ವಾರ್ಷಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಹತ್ತು ಹಲವು ಪ್ರಯೋಜನ ನೀಡಲಾಗಿದೆ.

 

Read Full Story

03:40 PM (IST) Jun 18

ಲಾಂಗ್‌ ರೂಟ್‌ಗೆ ಬಿಎಂಟಿಸಿಯಿಂದ ಶೀಘ್ರದಲ್ಲೇ ಎಕ್ಸ್‌ಪ್ರೆಸ್‌ ಬಸ್‌ ಸರ್ವೀಸ್‌!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದೀರ್ಘ ಮಾರ್ಗಗಳಲ್ಲಿ ಪ್ರಯಾಣದ ಸಮಯ ಕಡಿಮೆ ಮಾಡಲು ಕಡಿಮೆ ನಿಲ್ದಾಣಗಳ 'ಎಕ್ಸ್‌ಪ್ರೆಸ್ ಬಸ್' ಸೇವೆ ಆರಂಭಿಸಲಿದೆ. ಹೆಚ್ಚಿನ ದರದೊಂದಿಗೆ, ಈ ಬಸ್‌ಗಳು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುತ್ತವೆ.
Read Full Story

03:22 PM (IST) Jun 18

ಅರೇಬಿಯನ್‌ ಹುಡುಗಿ ಜೊತೆ ಮಜಾ ಮಾಡು ಅಂತ ನನ್‌ ಹೆಂಡ್ತಿ ಕಳಿಸಿಕೊಟ್ಳು - ನಟಿ ಅಷ್ಮಿತಾ ಪತಿ ಸಂದರ್ಶನ

ಸದ್ಯ ನಟಿ ಅಷ್ಮಿತಾ, ಶ್ರೀ ವಿಷ್ಣು ಮನೆಯ ಸಂಸಾರದ ಗುಟ್ಟು ಈಗ ಬೀದಿಗೆ ಬಂದಿದೆ. ವಿಷ್ಣು ಅವರು Galatta tamil ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ಕೆಲ ವಕೀಲರು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

 

Read Full Story

03:10 PM (IST) Jun 18

ಪೆಟ್ರೋಲ್ ಬಂಕ್ ಶೌಚಾಲಯ ಸಾರ್ವಜನಿಕವಲ್ಲ, ಸರ್ಕಾರಕ್ಕೆ ಛಾಟಿ ಬೀಸಿದ ಹೈಕೋರ್ಟ್

ಪೆಟ್ರೋಲ್ ಬಂಕ್‌ಗಳಲ್ಲಿನ ಶೌಚಾಲಯ ಸಾರ್ವಜನಿಕ ಶೌಚಾಲಯವಲ್ಲ. ಇದು ಹೈಕೋರ್ಟ್ ಆದೇಶ. ಗ್ರಾಹಕರ ತುರ್ತು ಅಗತ್ಯದ ಶೌಚಾಲಯವನ್ನು ಸಾರ್ವಜನಿಕ ಶೌಚಾಲಯವನ್ನಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.

 

Read Full Story

02:46 PM (IST) Jun 18

ಕಲಿಯುಗದ ಕೊನೆಯ ಭಯಾನಕ ರಾತ್ರಿ ಹೇಗಿರುತ್ತೆ?

ಕಲಿಯುಗದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ, ನೈತಿಕತೆ ಕುಸಿತ, ಅಪರಾಧಗಳ ಹೆಚ್ಚಳ, ಜನರಲ್ಲಿ ಭಯ, ಅಸುರಕ್ಷತೆ. ಕೊನೆಯ ರಾತ್ರಿಯಲ್ಲಿ ಜನರು ದುರ್ಬಲರಾಗಿ, ಆಹಾರದ ಕೊರತೆ, ಅರಾಜಕತೆ. ಕಲ್ಕಿ ಅವತಾರದಲ್ಲಿ ವಿಷ್ಣುವಿನ ಆಗಮನ.
Read Full Story

02:26 PM (IST) Jun 18

60 ಸಾವಿರದ ಗುಸ್ಸಿ ಗಾಗಲ್ಸ್, 1 ಲಕ್ಷದ ಜಾಕೆಟ್ - ಬಾಗೇಶ್ವರ ಬಾಬಾ ಐಷಾರಾಮಿ ಲೈಫ್‌ಸ್ಟೈಲ್‌ಗೆ ನೆಟ್ಟಿಗರ ಆಕ್ರೋಶ

ಫಿಜಿ ಪ್ರವಾಸದಲ್ಲಿ ದುಬಾರಿ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಬಾಗೇಶ್ವರ ಬಾಬಾ ಟ್ರೋಲ್‌ಗೆ ಒಳಗಾಗಿದ್ದಾರೆ.

Read Full Story

02:24 PM (IST) Jun 18

ಕೇವಲ ₹3000ಕ್ಕೆ ವಾರ್ಷಿಕ ಟೋಲ್ ಪಾಸ್ - ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಗುಡ್ ನ್ಯೂಸ್!

ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಯೋಜನೆ ಜಾರಿಗೆ ತರುತ್ತಿದೆ. ₹3000 ಪಾವತಿಸಿ ಒಂದು ವರ್ಷ ಪ್ರಯಾಣಗಳಿಗೆ ಟೋಲ್ ಪಾವತಿಯಿಂದ ಮುಕ್ತಿ ಪಡೆಯಬಹುದು. ಪಾಸ್ ಪಡೆಯುವ ವಿವರ ಇಲ್ಲಿದೆ..

Read Full Story

01:54 PM (IST) Jun 18

ಜನತೆಗೆ ವ್ಯಾಟ್ಸಾಪ್ ಡಿಲೀಟ್ ಮಾಡಲು ಇರಾನ್ ಸೂಚನೆ, ಯುದ್ಧಕ್ಕೂ ಆ್ಯಪ್‌ಗೂ ಸಂಬಂಧವೇನು?

ಎಲ್ಲರೂ ವ್ಯಾಟ್ಸಾಪ್ ಖಾತೆ ಡಿಲೀಟ್ ಮಾಡಲು ಜನತೆಗೆ ಇರಾನ್ ಸೂಚನೆ ನೀಡಿದೆ. ಇರಾನ್- ಇಸ್ರೇಲ್ ನಡುವಿನ ಯುದ್ಧದ ಬೆನ್ನಲ್ಲೇ ಜನತೆಗೆ ವ್ಯಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ನಿರ್ದೇಶನ ಕೊಟ್ಟಿದ್ದೇಕೆ?

Read Full Story

01:41 PM (IST) Jun 18

ವ್ಯಾಪಾರವೋ? ವ್ಯವಹಾರವೋ? - ದಾವಣಗೆರೆ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಇದೆಂತ ಶಿಕ್ಷೆ?

ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಮಾಡಿದ ವ್ಯವಹಾರಕ್ಕೆ 120 ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ.

Read Full Story

More Trending News