ಬೆಂಗಳೂರು (ಮಾ.16):ಇರಾನ್ ಯುದ್ಧದಿಂದ ಉಂಟಾಗಿದ್ದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ಕೊಂಚ ತಹಬದಿಗೆ ಬರುವ ಲಕ್ಷಣಗಳು ಗೋಚರಿಸಿವೆ, ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕಳೆದ ಮೂರು ದಿನದಲ್ಲಿ ತೈಲ ಕಂಪನಿಗಳ ಅನಿಲ ಸಿಲಿಂಡರ್ ಸರಬರಾಜಿನಲ್ಲಿ ಶೇ.20 ರಷ್ಟು ಸುಧಾರಣೆಯಾಗಿದೆ’ ಎಂದು ರಾಜ್ಯದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಭಾನುವಾರ ಹೇಳಿದೆ. ಇದರಲ್ಲಿ ಹೆಚ್ಚು ಬಾಧಿತವಾಗಿದ್ದ ವಾಣಿಜ್ಯ ಎಲ್‌ಪಿಜಿ ಪೂರೈಕೆಯೂ ಸೇರಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
=
10:54 PM (IST) Mar 16
ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ ನೀಡಿದ್ದಾರೆ. ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿರುವ ಆಡಿಯೋ ಕೋಲಾಹಲ ಸೃಷ್ಟಿಸಿದೆ.
10:47 PM (IST) Mar 16
10:06 PM (IST) Mar 16
09:49 PM (IST) Mar 16
09:25 PM (IST) Mar 16
ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮಂಜುನಾಥ್ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಲೆವೆಡೆ ಆಲಿಕಲ್ಲು ಮಳೆಯಾಗಿದೆ.
09:24 PM (IST) Mar 16
ಕೇವಲ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧದಲ್ಲಿರುವುದನ್ನು ದ್ವಿವಿವಾಹ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಎರಡನೇ ಮದುವೆ ನಡೆದ ಬಗ್ಗೆ ಸ್ಪಷ್ಟ ಸಾಕ್ಷ್ಯವಿಲ್ಲದ ಕಾರಣ, 73 ವರ್ಷದ ಪತಿಯ ವಿರುದ್ಧ ಪತ್ನಿ ದಾಖಲಿಸಿದ್ದ ದ್ವಿವಿವಾಹ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
09:10 PM (IST) Mar 16
09:00 PM (IST) Mar 16
ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕದ ಅತ್ಯುತ್ತಮ ಸಹಕಾರ ಬ್ಯಾಂಕ್ ಆಗಿ ಹೆಸರು ಗಳಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದರು.
08:58 PM (IST) Mar 16
08:41 PM (IST) Mar 16
ಸಮಾಜದಲ್ಲಿನ ಪ್ರತಿಯೊಬ್ಬರಿಗೂ ರೂಪಿಸಲಾದ ಕಾರ್ಯಕ್ರಮವನ್ನು ಭವಿಷ್ಯದಲ್ಲಿನ ಯಾವುದೇ ಸರ್ಕಾರ ತೆಗೆದುಹಾಕಲು ಸಾದ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
07:44 PM (IST) Mar 16
ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.
07:31 PM (IST) Mar 16
ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯಾದರೆ ಹಳ್ಳಿಗಳಲ್ಲಿ ಮೂಲ ಸಮಸ್ಯೆಗಳಿಗೆ ಬಹುತೇಕ ಪರಿಹಾರ ಸಿಕ್ಕಂತಾಗುತ್ತದೆ. ಹೀಗಾಗಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
07:22 PM (IST) Mar 16
ಆಶಯವನ್ನು ಪೂರೈಸಬೇಕು. ಪ್ರಜೆಗಳಿಗಾಗಿ ನಾವು ಎಂಬ ಭಾವನೆ ಅಧಿಕಾರಿ, ರಾಜಕಾರಣಿಗಳಲ್ಲಿ ಮೂಡಿದಾಗ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
07:19 PM (IST) Mar 16
07:09 PM (IST) Mar 16
ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ. ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
06:58 PM (IST) Mar 16
ವಿಜಯಪುರ ಪಟ್ಟಣಗಳಿಗೆ ಮಾತ್ರವಲ್ಲದೆ, ಪ್ರತಿ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
06:54 PM (IST) Mar 16
Sandur contract employee death: ಬಳ್ಳಾರಿಯ ಸಂಡೂರಿನಲ್ಲಿ ಕೃಷಿ ಇಲಾಖೆಯ ಗುತ್ತಿಗೆ ನೌಕರರೊಬ್ಬರು ಮೇಲಾಧಿಕಾರಿಯ ಮಾನಸಿಕ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಅಧಿಕಾರಿ ಹೆಸರನ್ನು ಉಲ್ಲೇಖಿಸಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
06:24 PM (IST) Mar 16
Girl fell into well: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದೆ. ಆ ಬಳಿಕ ಆ ಮಗುವನ್ನು ಮೇಲಕ್ಕೆತ್ತಿ ಬಚಾವ್ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.
05:46 PM (IST) Mar 16
ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ತಾಂತ್ರಿಕ ಉದ್ಯೋಗ ಮಾರುಕಟ್ಟೆಯು ತೀವ್ರ ಸ್ಪರ್ಧೆಯಿಂದ ಕೂಡಿದೆ. ಇತ್ತೀಚೆಗೆ MERN ಸ್ಟಾಕ್ ಮತ್ತು React ಡೆವಲಪರ್ ಹುದ್ದೆಗಳಿಗಾಗಿ ಕೇವಲ 15 ದಿನಗಳಲ್ಲಿ 34,742 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದು ನಗರದಲ್ಲಿ ಉದ್ಯೋಗ ಪಡೆಯುವ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ .
05:26 PM (IST) Mar 16
04:57 PM (IST) Mar 16
04:35 PM (IST) Mar 16
‘ಬಿಲ್ಲಾ ರಂಗಾ ಬಾಷಾ’ ತೆಲುಗು ನಿರ್ಮಾಪಕರು ಮಾಡಬೇಕಿತ್ತಾದರೂ ಅವರು ಕೊಂಚ ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಕಿಚ್ಚ ಸುದೀಪ್ ತೆಲುಗು ನಿರ್ದೇಶಕನ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ಎನ್ನಲಾಗಿದೆ.
04:27 PM (IST) Mar 16
ಇತ್ತೀಚೆಗೆ ಅನೇಕರಲ್ಲಿ ಹೃದಯದ ಬ್ಲಾಕ್ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಬ್ಲಾಕ್ ಹೆಚ್ಚಾದಾಗ ಹಾರ್ಟ್ ಅಟ್ಯಾಕ್, ನಂತರ ಹಾರ್ಟ್ ಫೇಲ್ಯೂರ್‌ಗೂ ಕಾರಣವಾಗುತ್ತೆ. ಹೃದಯದ ಕಾರ್ಯವ್ಯವಸ್ಥೆಯಲ್ಲಿ ದೋಷ ಉಂಟಾದಾಗ ಹಾರ್ಟ್ ಬ್ಲಾಕ್ ಸಂಭವಿಸುತ್ತದೆ.
04:18 PM (IST) Mar 16
ದರ್ಶನ್ ಡಿ ಎಸ್ 60 ಕೆ.ಜಿ ಒಳಗಿನ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಫುಲ್ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ, ಬೆಂಚ್ ಪ್ರೆಸ್ ವಿಭಾಗದಲ್ಲಿ ಚಿನ್ನ, ಸ್ಕ್ವಾಟ್ಸ್ ವಿಭಾಗದಲ್ಲಿ ಚಿನ್ನ ಪಡೆದುಕೊಂಡಿದ್ದಾರೆ.
04:02 PM (IST) Mar 16
03:42 PM (IST) Mar 16
ಓಪನ್ ಕಿಚನ್ ಚಿಕ್ಕದಾಗಿ ಅಥವಾ ಗಲೀಜಾಗಿ ಕಾಣುವುದನ್ನು ತಪ್ಪಿಸಲು ಟ್ರೆಂಡಿ ಡಿಸೈನ್ ಐಡಿಯಾಗಳನ್ನು ಅಳವಡಿಸಿಕೊಳ್ಳಿ. ಮಿನಿಮಲಿಸ್ಟ್ ಲೇಔಟ್, ಕಿಚನ್ ಐಲ್ಯಾಂಡ್, ಗ್ಲಾಸ್ ಪಾರ್ಟಿಷನ್, ಸ್ಮಾರ್ಟ್ ಸ್ಟೋರೇಜ್ ಮತ್ತು ಸರಿಯಾದ ಲೈಟಿಂಗ್‌ನಿಂದ ನಿಮ್ಮ ಅಡುಗೆಮನೆ ಮಾಡರ್ನ್, ಕ್ಲಾಸಿ, ಸ್ಟೈಲಿಶ್ ಆಗಿ ಕಾಣುತ್ತದೆ.
03:32 PM (IST) Mar 16
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ, ಗ್ಯಾಸ್ ಅಭಾವದ ನಡುವೆಯೇ ಭಾರತ್ ಗ್ಯಾಸ್ ಏಜೆನ್ಸಿಯ ಮುಂದೆ ಇಟ್ಟಿದ್ದ ಗೃಹ ಬಳಕೆಯ ಸಿಲಿಂಡರ್ ಕಳ್ಳತನವಾಗಿದೆ. ಮಲ್ಲಿಕಾರ್ಜುನ್ ಎಂಬುವವರು ಸಿಲಿಂಡರ್ ಪಡೆದು ಚೀಟಿ ತರಲು ಕಚೇರಿಗೆ ಹೋದಾಗ ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
03:31 PM (IST) Mar 16
02:20 PM (IST) Mar 16
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೋಕಿಲಾ ಮತ್ತು ಕಾವೇರಿ ಎಂಬ ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿವೆ. ಈ ಮೂಲಕ ಉದ್ಯಾನವನದಲ್ಲಿ ಜೀಬ್ರಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
02:10 PM (IST) Mar 16
01:44 PM (IST) Mar 16
ತೋಟದಲ್ಲಿ ಕೆಲಸ ಮಾಡುತ್ತಿದ್ದ 61 ವರ್ಷದ ಕೃಷಿಕರೊಬ್ಬರ ಮೇಲೆ ಜೇನುಹುಳುಗಳು ದಾಳಿ ಮಾಡಿದ ಪರಿಣಾಮ ಅವರು ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದಿದೆ.
12:46 PM (IST) Mar 16
12:37 PM (IST) Mar 16
ಬಳ್ಳಾರಿಯಲ್ಲಿ ಚೀಟಿ ವ್ಯವಹಾರದ ಹೆಸರಿನಲ್ಲಿ 700ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿ, ನಾಲ್ಕು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ವೆಂಕಟೇಶ್‌ನನ್ನು ಬ್ರೂಸ್‌ಪೇಟೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಚಿತ್ರದುರ್ಗದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
12:22 PM (IST) Mar 16
Actress Nimika Ratnakar: ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ನಿಮಿಕಾ ರತ್ನಾಕರ್‌ಗೆ ಸ್ನೇಹಿತರಿದ್ದಾರೆ. ಇತ್ತೀಚೆಗೆ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದಾರೆ.
11:42 AM (IST) Mar 16
ಚಿಕ್ಕಮಗಳೂರು ತಾಲೂಕಿನಲ್ಲಿ 11 ತಿಂಗಳಿಂದ ಸಂಬಳ ನೀಡದ ಕಾರಣ ನೀರುಗಂಟಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ, ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ.
11:31 AM (IST) Mar 16
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ, 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ 'ಭೀಮಾ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಲಾಯಿತು. ಇದೇ ವೇಳೆ ಗೋಪಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
11:15 AM (IST) Mar 16
10:26 AM (IST) Mar 16
ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪ ಆಹಾರ ಮತ್ತು ನೀರಿಗಾಗಿ ಜಮೀನಿಗೆ ನುಗ್ಗಲು ಯತ್ನಿಸಿದ ಕರಡಿಯೊಂದು ವಿದ್ಯುತ್ ಸ್ಪರ್ಶದಿಂದ ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆಯಿಂದಾಗಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10:20 AM (IST) Mar 16
Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದೆ. ಇದು ಅಪ್ಪಟ ಕನ್ನಡದ ಕಥೆ. ಈಗ ಈ ಸೀರಿಯಲ್ ಖ್ಯಾತಿ ಬೇರೆ ರಾಜ್ಯಗಳಿಗೂ ಹರಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:58 AM (IST) Mar 16