ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಭಾನುವಾರ ಸಂಜೆ 4 ಗಂಟೆಗೆ ನಗರದ ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಸಿಜೆಪಿ ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, ಧರ್ಮೆಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಭಾನುವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
04:25 PM (IST) Jun 14
Enemy Of Your Past Life Is Your Husband or Wife: ಕಳೆದ ಜನ್ಮದ ಶತ್ರುವೇ ಈ ಜನ್ಮದ ಸಂಗಾತಿ! ಈ ಮಾತು ಕೇಳಿ ಕಂಗಾಲಾಗಬೇಡಿ. ಇದು ಮದುವೆಯೋ ಅಥವಾ ಕರ್ಮದ ಜಾಲವೋ? ಹೌದು, ಈ ಡೌಟ್ ಬರೋದು ಸಹಜ. Dr Manmit ಎನ್ನುವ ಆಧ್ಯಾತ್ಮಿಕ ಗುರು ಈ ಬಗ್ಗೆ ಮಾತನಾಡಿದ್ದಾರೆ.
03:20 PM (IST) Jun 14
ಬಾಲ್ಯದಲ್ಲಿ ಬಡತನವನ್ನು ಕಂಡು, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ನಟಿ ಸಮಂತಾ ರುತ್ ಪ್ರಭು ಅವರ ಜೀವನದ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಈ ಸ್ಟೋರಿ ನೋಡಿ..
01:46 PM (IST) Jun 14
ನಮಗಿಬ್ಬರಿಗೂ ಮುಗಿದ ಹೋದ ಆ ಅಧ್ಯಾಯದ ಬಗ್ಗೆ ಮಾತನ್ನಾಡಲು ಈಗ ಏನೂ ಇಲ್ಲ, ಮಾತನ್ನಾಡುವ ಅಗತ್ಯವಾಗಲೀ ಮನಸ್ಸಾಗಲೀ ಇಲ್ಲ. ಆದರೂ ಈಗ ಕೇಳಿರೋದಕ್ಕೆ ಹೇಳಬೇಕಲ್ಲ ಎಂದು ಹೇಳುವುದಾದರೆ ಅದನ್ನು ಹೀಗೆ ಹೇಳಬಹುದು... ಕೊನೆಗೂ ಸತ್ಯ ಬಾಯ್ಬಿಟ್ಟ ಚಂದನ್ ಶೆಟ್ಟಿ..
12:46 PM (IST) Jun 14
ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಈ ಘಟನೆಯು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗ.
12:44 PM (IST) Jun 14
11:28 AM (IST) Jun 14
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶಾಸಕರ ಶಿಫಾರಸು ಪತ್ರಗಳ ಹಸ್ತಕ್ಷೇಪವಿಲ್ಲದೆ, ಪಾರದರ್ಶಕ ವರ್ಗಾವಣೆಗಾಗಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಗೃಹ ಇಲಾಖೆ ಚಿಂತನೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಹೊಸ ನೀತಿ ಜಾರಿಗೆ ತರಲು ಉತ್ಸುಕರಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.
10:52 AM (IST) Jun 14
10:26 AM (IST) Jun 14
ಬೆಂಗಳೂರು ನಗರದಲ್ಲಿ ಬೀಳುವ ಮರಗಳ ಸಮಸ್ಯೆ ತಡೆಯಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಗುಲ್ ಮೊಹರ್, ಸ್ಪೆತೋಡಿಯಾ ಬದಲಿಗೆ ನೇರಳೆ, ಬುಗುರಿಯಂತಹ ಸುಮಾರು 1 ಲಕ್ಷ ಉಪಯುಕ್ತ ಗಿಡಗಳನ್ನು ನೆಡಲು ತೀರ್ಮಾನ, ಇವುಗಳಿಂದ ಭವಿಷ್ಯದಲ್ಲಿ ನಗರದ ನಿವಾಸಿಗಳಿಗೆ ಉಚಿತ ಹಣ್ಣು ಮತ್ತು ಔಷಧೀಯ ಲಾಭಗಳು ದೊರೆಯಲಿವೆ.
09:57 AM (IST) Jun 14
Kannada vs Hindi apartment issue: ಕರ್ನಾಟಕದಲ್ಲಿ ಅದರಲ್ಲಿ ಬೆಂಗಳೂರಿನಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಈಗ ಬೆಂಗಳೂರಿನಲ್ಲಿ ಕನ್ನಡ ಕಲಿಯುತ್ತಿರುವ ತಮಿಳುನಾಡಿನ ಮಹಿಳೆಗೆ ಹಿಂದಿ ಮಾತನಾಡಿ ಎಂದು ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ವಿಡಿಯೋ ವೈರಲ್ ಆಗ್ತಿದೆ.
09:28 AM (IST) Jun 14
Sri raghavendra mahatme serial director: ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ಜೀವನದ ಪವಿತ್ರ ಪಯಣವಿದೆ. ಗುರು ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ವಾರ ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನವಾಗಿದೆ.
08:55 AM (IST) Jun 14
08:32 AM (IST) Jun 14
2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದಾರೆ.
08:25 AM (IST) Jun 14
08:12 AM (IST) Jun 14
ಭಾರತದಲ್ಲಿ ನಕ್ಸಲ್ ಚಟುವಟಿಕೆ ನಡೆಸಲು 92 ಕೋಟಿ ರೂ. ವಿದೇಶಿ ದೇಣಿಗೆ ನೀಡಿದ ಆರೋಪದ ಮೇಲೆ ಅಮೆರಿಕದ 'ದಿ ತಿಮೋತಿ ಇನಿಶಿಯೇಟಿವ್' (ಟಿಟಿಐ) ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
08:07 AM (IST) Jun 14
07:54 AM (IST) Jun 14
07:38 AM (IST) Jun 14
ವಿಜಯನಗರ ಸಾಮ್ರಾಜ್ಯದ 16ನೇ ಶತಮಾನದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
07:16 AM (IST) Jun 14
07:06 AM (IST) Jun 14
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆಯಾಗಿದ್ದು, ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಾಮಂಜೂರು ಸಮೀಪದ ಕೆತ್ತಿಕಲ್ಲು ಗುಡ್ಡ ಮತ್ತೆ ಕುಸಿದಿದೆ. ಈ ಘಟನೆಯಿಂದಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಯಾಗಿದ್ದು, ಒಂದು ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿದೆ.