Published : Jun 13, 2025, 05:54 AM ISTUpdated : Jun 13, 2025, 11:43 PM IST

Karnataka News Live 13th June 2025: Rainy Season Flower Care - ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!

ಸಾರಾಂಶ

ನವದೆಹಲಿ: ಕೇಂದ್ರ ಸರ್ಕಾರ 2027ರಲ್ಲಿ ನಡೆಸಲಿರುವ ರಾಷ್ಟ್ರೀಯ ಜನಗಣತಿಯು ಭಾರತದ ಪಾಲಿಗೆ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ ಆಗಿರಲಿದೆ. ಈ ಜನ ಗಣತಿಯ ಅಂತಿಮ ಅಂಕಿ-ಅಂಶಗಳು 9 ತಿಂಗಳೊಳಗೇ ಸರ್ಕಾರದ ಕೈಸೇರುವ ನಿರೀಕ್ಷೆ ಇದೆ. ಅಂದರೆ ಅದೇ ವರ್ಷದ ಅಂತ್ಯದಲ್ಲಿ ಜನಗಣತಿಯ ಸಂಪೂರ್ಣ ಅಂಕಿ-ಅಂಶಗಳು ಸಿದ್ದವಾಗಲಿವೆ. ಮೊಬೈಲ್ ಆ್ಯಪ್‌ನಂಥ ತಂತ್ರಜ್ಞಾನ ಬಳಸಿ ಈ ಕಾರ್ಯ ಮಾಡುವ ಹಿನ್ನೆಲೆಯಲ್ಲಿ ಈ ಬದಲಾವಣೆ ಸಾಧ್ಯವಾಗಲಿದೆ. ಈ ಹಿಂದೆ ಜನಗಣತಿ ಅಂಕಿ-ಅಂಶಗಳು ಬಹಿರಂಗವಾಗಬೇಕಿದ್ದರೆ ಸಾಕಷ್ಟು ಸಮಯ ಕಾಯಬೇಕಿತ್ತು. 2011ರ ಜನಗಣತಿ ಮಾಹಿತಿಯನ್ನು ಒಟ್ಟು ಗೂಡಿಸಲು ಸುಮಾರು 2 ವರ್ಷಗಳಷ್ಟು ಸುಧೀರ್ಘ ಸಮಯ ಹಿಡಿದಿತ್ತು. ಆದರೆ ಈ ಬಾರಿ ತಂತ್ರಜ್ಞಾನ ಬಳಸಿಕೊಂಡು ಜನಗಣತಿ ಮಾಡುತ್ತಿರುವ ಕಾರಣ ಅಂಕಿ-ಅಂಶಗಳ ಸಂಗ್ರಹ ಸಲೀಸಾಗಲಿದೆ ಎಂದು ಮೂಲಗಳು ತಿಳಿಸಿವೆ. 2017ರ ಮಾರ್ಚ್‌ನಲ್ಲಿ ಜನಗಣತಿ ನಡೆಸುವುದಾಗಿ ಕೇಂದ್ರ ತಿಳಿಸಿದೆ. ಈ ಜನಗಣತಿ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆಯಲಿದೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ.

11:43 PM (IST) Jun 13

Rainy Season Flower Care - ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!

ಜೂನ್-ಜುಲೈನಲ್ಲಿ ಈ 5 ಹೂವಿನ ಸಸ್ಯಗಳನ್ನು ನೆಡಿ ಮತ್ತು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿಮ್ಮ ತೋಟವು ವರ್ಣರಂಜಿತ ಹೂವುಗಳಿಂದ ಅರಳುವುದನ್ನು ನೋಡಿ. ಜಿನಿಯಾ, ಚೆಂಡು ಹೂವು, ಪೋರ್ಚುಲಕ, ಕ್ಯಾಲೆಡುಲ ಮತ್ತು ಬಾಲ್ಸಮ್‌ನಂತಹ ಸಸ್ಯಗಳು ಬೇಸಿಗೆಯಲ್ಲೂ ಸುಲಭವಾಗಿ ಬೆಳೆಯುತ್ತವೆ

Read Full Story

11:23 PM (IST) Jun 13

ಕೊಡಗು ಕಾಫಿ ತೋಟದ ಲೈನ್ ಮನೆಗಳಲ್ಲಿ 470ಕ್ಕೂ ಹೆಚ್ಚು ಬಾಲ ಗರ್ಭಿಣಿಯರು ಪತ್ತೆ!

ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 470 ಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗಿದ್ದು, ವ್ಯವಸ್ಥೆಯ ದುರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Read Full Story

11:04 PM (IST) Jun 13

ರೀಲ್ಸ್ ಶೋಕಿಗೆ ದಾನ ಮಾಡಿದ್ರೆ ಪುಣ್ಯ ಬರೊಲ್ಲ; ಚಾಣಕ್ಯ ನೀತಿಯಲ್ಲಿ ಉಲ್ಲೇಖ!

ದಾನ ಮಾಡೋದು ಪುಣ್ಯದ ಕೆಲಸ. ಆದರೆ ತಪ್ಪು ರೀತಿಯಲ್ಲಿ ಮಾಡಿದ ದಾನ ಆರ್ಥಿಕ ಸಮಸ್ಯೆ ತರುತ್ತೆ. ಪ್ರದರ್ಶನಕ್ಕಾಗಿ ರೀಲ್ಸ್ ಮಾಡಿ ದಾನ ಮಾಡಿದರೆ ಪುಣ್ಯ ಲಭಿಸುವುದಿಲ್ಲ, ಪಾಪ ಸುತ್ತಿಕೊಳ್ಳಲಿದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.

Read Full Story

10:35 PM (IST) Jun 13

ಗರ್ಭಿಣಿ ಹಸುವಿನ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳು; ಪಶು ಹಿಂಸೆ ವಿರುದ್ಧ ಆಕ್ರೋಶ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಗರ್ಭಿಣಿ ಹಸುವಿನ ಕೆಚ್ಚಲು ಕೊಯ್ದಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಹಸುವಿನ ಮೊಲೆಯ ತುದಿಯನ್ನು ಕತ್ತರಿಸಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read Full Story

10:05 PM (IST) Jun 13

ದುರಂತದ ಬೆನ್ನಲ್ಲೇ ಏರ್ ಇಂಡಿಯಾದ ಎಲ್ಲಾ ಡ್ರೀಮ್‌ಲೈನರ್ ವಿಮಾನ ತಪಾಸಣೆಗೆ ಸರ್ಕಾರದ ಆದೇಶ

ಏರ್ ಇಂಡಿಯಾ ಪತನದ ನಂತರ, DGCA ಬೋಯಿಂಗ್ 787-8/9 ಡ್ರೀಮ್‌ಲೈನರ್ ವಿಮಾನಗಳಿಗೆ ವಿಶೇಷ ಸುರಕ್ಷತಾ ತಪಾಸಣೆಗೆ ಆದೇಶಿಸಿದೆ. ಜೂನ್ 15 ರಿಂದ ಪ್ರಾರಂಭವಾಗುವ ಈ ತಪಾಸಣೆಯಲ್ಲಿ ಎಂಜಿನ್, ಇಂಧನ ಮತ್ತು ಹೈಡ್ರಾಲಿಕ್ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಯಲಿದೆ.

 

Read Full Story

09:52 PM (IST) Jun 13

ಪಾರ್ಕ್​ಗೆ ಬರ್ತಿದ್ದ ಯುವಕ ಇಷ್ಟ ಆದನಂತ ಅವನಿಗೇ ಸಿಂದೂರ ಇಡೋದಾ ಇವ್ಳು? ವಿಡಿಯೋ ನೋಡಿ

ಕಾಲ ಬದಲಾಗೋಯ್ತು ಕಣ್ರೀ ಎನ್ನೋದು ಸುಳ್ಳಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಈ ಘಟನೆ. ಪ್ರತಿದಿನ ಪಾರ್ಕ್​ಗೆ ಬರ್ತಿದ್ದ ಯುವಕನ ಮೇಲೆ ಕ್ರಷ್​ ಆದ ಅದೇ ಪಾರ್ಕ್​ನ ಲೇಡಿ ಗಾರ್ಡ್​ ಅವನಿಗೆ ಗೊತ್ತಿಲ್ಲದೇ ಸಿಂದೂರ ಇಟ್ಟು ಮದ್ವೆಯಾಯ್ತು ಅಂತಿದ್ದಾಳೆ. ವಿಡಿಯೋ ವೈರಲ್​ ಆಗಿದೆ.

 

Read Full Story

09:21 PM (IST) Jun 13

ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆ ಆಯ್ಕೆ ಮಾಡಲು 17 ದಿನಗಳು ಬಾಕಿ! ಇಲ್ಲದಿದ್ದರೆ ಏನಾಗುತ್ತೆ?

ಸರ್ಕಾರಿ ನೌಕರರು ನಿವೃತ್ತಿಗಾಗಿ NPS ಅಥವಾ UPS ಆಯ್ಕೆ ಮಾಡಲು ಜೂನ್ 30 ಕೊನೆಯ ದಿನಾಂಕ. ಸಮಯ ಮಿತಿಯೊಳಗೆ ಆಯ್ಕೆ ಮಾಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ವರದಿ ಓದಿ.

Read Full Story

09:18 PM (IST) Jun 13

ಭಾರತದಿಂದ ಪ್ರೇರಿತ, ಮರ್ಸಿಡಿಸ್ ಬೆಂಜ್ AMG G 63 ಕಾರು ಲಾಂಚ್, ಕೇವಲ 30 ಕಾರು ಮಾತ್ರ

ಕೇವಲ 30 ಕಾರು ಮಾತ್ರ ಲಭ್ಯ. ಕಾರು ಖರೀದಿಸುವ ಮಾಲೀಕನ ಹೆಸರು ಕಾರಿನ ಗ್ರ್ಯಾಬ್ ಹ್ಯಾಂಡಲ್‌ನಲ್ಲಿ ಇರಲಿದೆ. ಭಾರತೀಯರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಮರ್ಸಿಡಿಸ್ ಬೆಂಜ್ AMG G 63 ಬಿಡುಗಡೆಯಾಗಿದೆ.

Read Full Story

08:57 PM (IST) Jun 13

ಕಾವ್ಯಾ ಮಾರನ್‌ ಜೊತೆ ಅನಿರುದ್ಧ್‌ ಲವ್‌? ಈ ಹಿಂದೆ ದೊಡ್ಡ ದೊಡ್ಡ ನಟಿಯರನ್ನು ಡೇಟ್‌ ಮಾಡಿದ್ದ ಸಂಗೀತ ನಿರ್ದೇಶಕ!

ಸಂಗೀತ ನಿರ್ದೇಶಕ ಅನಿರುದ್ ಆಗಾಗ ಪ್ರೇಮ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳೋದು ಸಾಮಾನ್ಯ. ಈಗ ಕಾವ್ಯಾ ಮಾರನ್ ಜೊತೆಗಿನ ಪ್ರೇಮ ಸುದ್ದಿ ಬೆಂಕಿ ಹರಡಿದ ಹಾಗೆ ಹಬ್ಬುತ್ತಿದೆ.
Read Full Story

08:47 PM (IST) Jun 13

ರಿವರ್ ರಾಫ್ಟಿಂಗ್ ವೇಳೆ ಉಕ್ಕಿ ಹರಿದ ನದಿಗೆ ಬಿದ್ದ ಪ್ರವಾಸಿಗ, ಗೈಡ್ ರಕ್ಷಣೆ ವಿಡಿಯೋ ವೈರಲ್!

ರಿವರ್ ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ರಾಫ್ಟಿಂಗ್ ಗೈಡ್ ಮತ್ತು ತಂಡದವರು ಸಾಹಸದಿಂದ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೈಡ್‌ನ ಧೈರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

Read Full Story

08:31 PM (IST) Jun 13

ಅಂಬಾನಿ, ಅದಾನಿ ಅಲ್ಲ, ಬೆಂಟ್ಲಿ ಕಾರು ಖರೀದಿಗೆ ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಈ ಉದ್ಯಮಿ

ಅಂಬಾನಿ, ಅದಾನಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಈ ಉದ್ಯಮಿ ರೀತಿ ಯಾರೂ ಡೆಲಿವರಿ ಪಡೆದುಕೊಂಡಿಲ್ಲ. ಕಾರಣ ಈ ಉದ್ಯಮಿ ರೋಸ್ ಗೋಲ್ಡ್ ಬಣ್ಣದ ಅತ್ಯಂತ ದುಬಾರಿ ಬೆಂಟ್ಲಿ ಬೆಂಟಿಯಾಗ್ ಕಾರು ಖರೀದಿಸಿದ್ದಾರೆ. ಆದರೆ ಕಾರು ಡೆಲಿವರಿ ಪಡೆಯಲು ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.

Read Full Story

08:12 PM (IST) Jun 13

₹250 ಕೋಟಿ ಮೌಲ್ಯದ ಆಸ್ತಿಯನ್ನ ತನ್ನ 2 ವರ್ಷದ ಮಗಳಿಗೆ ಬಿಟ್ಟ ಈ ಸ್ಟಾರ್ ಹೀರೋ ಯಾರು?

ಮಕ್ಕಳು ದೊಡ್ಡವರಾದ ನಂತರ ಪೋಷಕರು ತಮ್ಮ ಆಸ್ತಿಯನ್ನು ಹಂಚಿಕೊಳ್ಳುವುದು ಸಾಮಾನ್ಯ, ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ತನ್ನ ಒಬ್ಬಳೇ ಮಗಳಿಗೆ 2 ವರ್ಷ ತುಂಬುವ ಮೊದಲೇ 250 ಕೋಟಿ ಆಸ್ತಿಯನ್ನು ದಾನ ಮಾಡಿದ. ಹೀರೋ ಯಾರು? ಹೀಗೆ ಏಕೆ ನಿರ್ಧಾರ ಮಾಡಿದ? ತಿಳಿಯಿರಿ.

Read Full Story

07:54 PM (IST) Jun 13

ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹39 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 516 ಲೀಟರ್ ಮದ್ಯ, ಖಾಲಿ ಬಾಟಲಿಗಳು ಮತ್ತು ಸಿಗರೇಟು ಬಾಕ್ಸ್‌ಗಳನ್ನು ನಾಶಪಡಿಸಲಾಗಿದೆ.

Read Full Story

07:53 PM (IST) Jun 13

ನಿಮ್ಗೆ ಒಳ್ಳೇದಾಗ್ಬೇಕು ಅಂದ್ರೆ ಮನೆನಲ್ಲಿ ಕನ್ನಡಿನ ಈ ಜಾಗದಲ್ಲಿ ಇಡಿ... ಇದು ವಾಸ್ತು ಪ್ರಕಾರ ಟಿಪ್ಸ್!

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕನ್ನಡಿಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಕನ್ನಡಿ ಇಡಬಾರದು.

Read Full Story

07:47 PM (IST) Jun 13

ಮಾವಿನಲ್ಲಿ 4000 ವರ್ಷ ಇತಿಹಾಸವಿರುವ ಭಾರತ ಹಿಂದಿಕ್ಕಿದ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಚಾಲೆಂಜ್

ಮಾವು ಕೃಷಿಯಲ್ಲಿ ಭಾರತಕ್ಕೆ 4,000 ವರ್ಷದ ಇತಿಹಾಸವಿದೆ. ಆದರೆ ನಿನ್ನೆ ಮೊನ್ನೆ ಬಂದಿರುವ ಮೆಕ್ಸಿಕೋ ದೇಶ ಮಾವು ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕಿದೆ. ಇದೀಗ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಸವಾಲು ಹಾಕಿದ್ದಾರೆ.

 

Read Full Story

07:38 PM (IST) Jun 13

ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಲ್ಲಿ NTCA ನಿಯಮ ಗಾಳಿಗೆ - ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನು ಕರೆತಂದ ಅರಣ್ಯ ಸಿಬ್ಬಂದಿಯ ಎಡವಟ್ಟು!

ಬಂಡೀಪುರದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದಡಿಯಲ್ಲಿ APC ಕ್ಯಾಂಪ್‌ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ NTCA ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. 

Read Full Story

07:07 PM (IST) Jun 13

ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್ - ಓಲಾ, ಉಬರ್, ರಾಪಿಡೋ ಸೇವೆ ನಿಷೇಧ ಮುಂದುವರಿಕೆ!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವನ್ನು ಹೈಕೋರ್ಟ್ ಮುಂದುವರೆಸಿದೆ. ಸರ್ಕಾರ ನಿಯಮಾವಳಿ ರೂಪಿಸದ ಕಾರಣ ಮಧ್ಯಂತರ ಅನುಮತಿಯನ್ನು ನಿರಾಕರಿಸಲಾಗಿದೆ. ಜೂನ್ 24 ರಂದು ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.
Read Full Story

06:57 PM (IST) Jun 13

ಯಾರಿಗೆಲ್ಲಾ ಸಿಕ್ಕಿದೆ ಬಿಗ್ ಬಾಸ್ 19 ಆಫರ್? ಸ್ಪರ್ಧಿಗಳ ಸಂಪೂರ್ಣ ಲಿಸ್ಟ್

ಬಿಗ್ ಬಾಸ್ 19ನೇ ಆವೃತ್ತಿ ಆರಂಭಕ್ಕೆ ತಯಾರಿ ಆರಂಭಗೊಂಡಿದೆ. ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈಗಾಗಲೇ ಹಲವು ಸೆಲೆಬ್ರೆಟಿಗಳಿಗೆ ಕರೆ ಮಾಡಲಾಗಿದೆ. ಯಾರಿಗೆಲ್ಲಾ ಬಿಗ್ ಬಾಸ್ ಆಫರ್ ನೀಡಲಾಗಿದೆ? 

 

Read Full Story

06:49 PM (IST) Jun 13

ಯೋಗೀಶ್ ಗೌಡ ಕೊಲೆ ಕೇಸ್; ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲಿಗೆ!

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕುಲಕರ್ಣಿ ಶರಣಾಗಿದ್ದಾರೆ.
Read Full Story

06:32 PM (IST) Jun 13

ವಿಶ್ವದ ಮತ್ತೊಬ್ಬ ಕ್ರಿಕೆಟ್ ದಿಗ್ಗಜನ ಮಗಳೊಂದಿಗೆ ಸಾರಾ ತೆಂಡೂಲ್ಕರ್ ಸ್ನೇಹ; ಇಲ್ಲಿವೆ ವೈರಲ್ ಫೋಟೋಸ್!

ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ಒಟ್ಟಿಗೆ ಟ್ರಿಪ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ವಾರ್ನರ್ ಬ್ರದರ್ಸ್ ಮೂವಿ ವರ್ಲ್ಡ್‌ನಿಂದ ಕಿರ್ರಾ ಬೀಚ್‌ವರೆಗೆ ಅವರ ಸಂತೋಷದ ಕ್ಷಣಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story

06:31 PM (IST) Jun 13

ಏರ್‌ ಇಂಡಿಯಾ ವಿಮಾನ ದುರಂತ - ಕ್ಲೈಮ್ ಇತ್ಯರ್ಥಕ್ಕೆ ನಿಯಮ ಸಡಿಲಿಸಿದ ಎಲ್‌ಐಸಿ!

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್‌ಐಸಿ ಪರಿಹಾರ ಘೋಷಿಸಿದೆ. ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ತಿಳಿಸಿದೆ.
Read Full Story

06:26 PM (IST) Jun 13

ಭಾರತದ ಆರ್ಥಿಕತೆ ಟೀಕಿಸಿದ ಹಾಟ್‌ಮೇಲ್ ಸಹ-ಸಂಸ್ಥಾಪಕ ಭಾರತೀಯ-ಅಮೆರಿಕನ್ ಉದ್ಯಮಿ! ನೆಟ್ಟಿಗರ ಕ್ಲಾಸ್

ಹಾಟ್‌ಮೇಲ್‌ನ ಸಹ-ಸಂಸ್ಥಾಪಕ ಸಬೀರ್ ಭಾಟಿಯಾ, ಭಾರತದ ಆರ್ಥಿಕತೆಯ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತದ ಜಿಡಿಪಿ ಬೆಳವಣಿಗೆಯನ್ನು ಪ್ರಶ್ನಿಸಿದ ಅವರು, ಬಡತನದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ಭಾರೀ ಚರ್ಚೆಗೆ ಕಾರಣವಾಗಿವೆ.
Read Full Story

06:22 PM (IST) Jun 13

ಜಗತ್ತಿನಲ್ಲೇ ಬೋಯಿಂಗ್ ಸುರಕ್ಷಿತ ಅನ್ನೋ ಸುಳ್ಳು | ಸಿಎಂ ಸಿದ್ದು ಭೂತದ ಕಂಬ ಇದ್ದಂತೆ, ಡಿಕೆಶಿ ಸಿಎಂ ಆಗ್ತಾರಾ? ಇಬ್ರಾಹಿಂ ಹೇಳಿದ್ದೇನು?

ವಿಮಾನ. ದುರಂತದ ಕಾರಣ, ಬೋಯಿಂಗ್ ವಿಮಾನಗಳ ಸುರಕ್ಷತೆ, ವಿಮಾನ ನಿಲ್ದಾಣಗಳ ಭದ್ರತೆ ಕುರಿತು ಕಳವಳ.. ಜಾತಿ ಗಣತಿ ಮರುಸಮೀಕ್ಷೆ ಮತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವಿನ ಸಂಬಂಧದ ಬಗ್ಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

Read Full Story

05:55 PM (IST) Jun 13

ಅಹಮದಾಬಾದ್ ವಿಮಾನ ದುರಂತ - ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿದ ಆಸೀಸ್-ದಕ್ಷಿಣ ಆಫ್ರಿಕಾ ಪ್ಲೇಯರ್ಸ್!

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸಂತಾಪ ಸೂಚಿಸಲಾಗಿದೆ. ಆಟಗಾರರು ಮತ್ತು ಅಂಪೈರ್‌ಗಳು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು. ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರೀಡಾ ತಾರೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
Read Full Story

05:55 PM (IST) Jun 13

ಪತ್ನಿ ಚಿತಾಭಸ್ಮ ವಿಸರ್ಜಿಸಲು ಭಾರತಕ್ಕೆ ಬಂದಿದ್ದ ವ್ಯಕ್ತಿ ವಿಮಾನ ಅಪಘಾತದಲ್ಲಿ ಸಾವು, ಲಂಡನ್‌ನಲ್ಲಿ ಇಬ್ಬರು ಹೆಣ್ಮಕ್ಕಳು ಅನಾಥ!

ಲಂಡನ್‌ನಲ್ಲಿ ಮೃತಪಟ್ಟ ಪತ್ನಿಯ ಅಸ್ಥಿಯನ್ನು ಭಾರತಕ್ಕೆ ತಂದು ವಿಸರ್ಜಿಸಿದ ವ್ಯಕ್ತಿ ಅಹಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಲಂಡನ್‌ನಲ್ಲಿರುವ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.
Read Full Story

05:52 PM (IST) Jun 13

ಧರ್ಮೇಂದ್ರ-ಪ್ರಕಾಶ್ ಕೌರ್ 71ನೇ ವಿವಾಹ ವಾರ್ಷಿಕೋತ್ಸವದ ಫೋಟೋ ಇಲ್ಲಿದೆ ನೋಡಿ..!

ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ 71ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು! ಬಾಬಿ ಡಿಯೋಲ್ ಸುಂದರ ಕುಟುಂಬ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರೀತಿ ಕಾಲಾನಂತರದಲ್ಲಿ ಹೇಗೆ ಗಾಢವಾಗಿದೆ ಎಂಬುದನ್ನು ನೋಡಿ.
Read Full Story

05:46 PM (IST) Jun 13

Ahmedabad plane crash - ದೇಶದ ದೊಡ್ಡ ಪ್ರಧಾನಿ ಎಂದು ಕರೆಸಿಕೊಳ್ಳುವ ಮೋದಿ ರಾಜೀನಾಮೆ ನೀಡಬೇಕಿತ್ತು - ಶರಣಬಸಪ್ಪ ದರ್ಶನಾಪುರ

ಅಹಮದಾಬಾದ್ ವಿಮಾನ ದುರಂತದ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಸಚಿವ ಶರಣಬಸಪ್ಪ ದರ್ಶನಾಪುರ ಒತ್ತಾಯಿಸಿದ್ದಾರೆ. 

Read Full Story

05:45 PM (IST) Jun 13

ಮುಸ್ಲಿಂ ದೇಶದಲ್ಲಿನ ಪ್ರಧಾನ ಕಚೇರಿ ಸ್ಥಳಾಂತರಿಸಿದ ಅಜೀಂ ಪ್ರೇಮ್‌ ಜಿ ಒಡೆತನದ ಬೆಂಗಳೂರಿನ ವಿಪ್ರೋ

ಐಟಿ ದಿಗ್ಗಜ ವಿಪ್ರೋ ತನ್ನ ಮಧ್ಯಪ್ರಾಚ್ಯ ಪ್ರಧಾನ ಕಚೇರಿಯನ್ನು ಸೌದಿ ಅರೇಬಿಯಾದ ರಿಯಾದ್‌ಗೆ ಸ್ಥಳಾಂತರಿಸಿದೆ ಮತ್ತು ಮೊಹಮ್ಮದ್ ಮೌಸಾ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ಕಂಪನಿಯು PMU ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
Read Full Story

05:42 PM (IST) Jun 13

ಶೀಘ್ರದಲ್ಲೇ ರಾಜೀನಾಮೆ ನೀಡಿ ನಿಮ್ಮ ಆರೈಕೆ ಮಾಡುತ್ತೇನೆ, ದುರಂತ ವಿಮಾನ ಪೈಲೆಟ್‌ನ ಕೊನೆಯ ಕರೆ

ಏರ್ ಇಂಡಿಯಾ ದುರಂತ ವಿಮಾನದ ಪೈಲೆಟ್ ಸುಮೀತ್ ಸರ್ಬಾಲ್ ತಂದೆ ಜೊತೆ ಮಾತನಾಡಿದ ಕೊನೆಯ ಕರೆಯ ಮಾಹಿತಿ ಬಹಿರಂಗವಾಗಿದೆ. ಈ ಮಾತುಗಳು ಹಲವರನ್ನು ಭಾವುಕರನ್ನಾಗಿ ಮಾಡಿದೆ.

Read Full Story

05:16 PM (IST) Jun 13

ಇರಾನ್ ಮೇಲೆ ಇಸ್ರೇಲ್ ಭಯಾನಕ ದಾಳಿ; ಆರಬ್ ರಾಷ್ಟ್ರಗಳಿಂದ ತೀವ್ರ ಖಂಡನೆ!

Middle East Tensions Escalate: ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಬೇಕು ಮತ್ತು ಚರ್ಚೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದು ಅರಬ್ ರಾಷ್ಟ್ರಗಳ ನಿಲುವು.

Read Full Story

05:03 PM (IST) Jun 13

ನೋಡಿದ್ರಾ 'ತಿಮ್ಮನ ಮೊಟ್ಟೆಗಳು' ಟ್ರೇಲರ್‌...? ನೋಡಿದವ್ರು ಅದೇನ್ ಹೇಳ್ತಿದಾರೆ ಅಂತ ಗೊತ್ತಾ..?

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಹಿರಿಯ ನಟ ಸುಚೇಂದ್ರ ಪ್ರಸಾದ್ ತಿಳಿಸಿದರು. ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

Read Full Story

05:02 PM (IST) Jun 13

ಜೂಡಿದಾರ್‌ನಲ್ಲಿ ಇಟ್ಟುಕೊಂಡಿದ್ದ ₹10 ಕೋಟಿ ಡ್ರಗ್ಸ್ ಮಾಲ್ ಸಮೇತ ಸಿಕ್ಕಿಬಿದ್ದ ಯುವತಿ ಪ್ರಿನ್ಸೆಸ್!

ಬೆಂಗಳೂರಿನಲ್ಲಿ ಯುವತಿಯೊಬ್ಬಳು ₹10 ಕೋಟಿ ಮೌಲ್ಯದ 5 ಕೆಜಿಗೂ ಹೆಚ್ಚು ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಬಂಧಿತಳಾಗಿದ್ದಾಳೆ. ಈಕೆ 3 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದು, ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Read Full Story

04:55 PM (IST) Jun 13

ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಕೆನಡಾದ ಏಕೈಕ ಪ್ರಜೆ, ಭಾರತೀಯ ಮೂಲದ ದಂತವೈದ್ಯೆ!

ಟೊರೊಂಟೊದ ಎಟೋಬಿಕೋಕ್‌ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್ ಅವರು ಸೋಶಿಯಲ್‌ ಟ್ರಿಪ್‌ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಸಿಟಿವಿ ನ್ಯೂಸ್ ಟೊರೊಂಟೊ ವರದಿ ಮಾಡಿದೆ.

 

Read Full Story

04:48 PM (IST) Jun 13

ಇಂಗ್ಲೆಂಡ್‌ನಿಂದ ದಿಢೀರ್ ತವರಿಗೆ ವಾಪಾಸ್ ಬಂದ ಗೌತಮ್ ಗಂಭೀರ್! ಟೀಂ ಇಂಡಿಯಾ ಪಾಳಯದಲ್ಲಿ ಆತಂಕ

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐತಿಹಾಸಿಕ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದಿಢೀರ್ ಎನ್ನುವಂತೆ ಗೌತಮ್ ಗಂಭೀರ್ ತವರಿಗೆ ವಾಪಾಸ್ಸಾಗಿದ್ದಾರೆ. ಅಷ್ಟಕ್ಕೂ ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 

Read Full Story

04:46 PM (IST) Jun 13

ಭಾರೀ ಮಳೆಯಲ್ಲಿ ಬೈಕ್‌ನಿಂದ ಜಾರಿ ಚರಂಡಿಗೆ ಬಿದ್ದ ವ್ಯಕ್ತಿ; 2 ಕಿ.ಮೀ. ದೂರದಲ್ಲಿ ಶವ ಪತ್ತೆ

ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತುಂಬಿ ಹರಿದ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದರು. ಎರಡು ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ 2 ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ.

Read Full Story

04:32 PM (IST) Jun 13

ಬಂಡೀಪುರ ಹುಲಿ ಅಭಯಾರಣ್ಯಕ್ಕೆ ಭಯ; 'ಫ್ರೆಂಡ್ಸ್ ಆಫ್ ಬಂಡೀಪುರ’ ಕಾರ್ಯಕ್ರಮಕ್ಕೆ ಪರಿಸರ ಪ್ರಿಯರ ವಿರೋಧ

ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದ ಮೂಲಕ ಪ್ರವಾಸಿಗರಿಗೆ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಈ ಚಟುವಟಿಕೆಹಳಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಉಲ್ಲಂಘನೆ ಮತ್ತು ಹುಲಿ ಮೀಸಲಿನ ಭದ್ರತೆಗೆ ಧಕ್ಕೆ ಆಗುತ್ತಿದೆ.

Read Full Story

04:27 PM (IST) Jun 13

ಕಂಪನಿಯ 10ನೇ ವಾರ್ಷಿಕೋತ್ಸವಕ್ಕೆ 25 ಉದ್ಯೋಗಿಗಳಿಗೆ ಹುಂಡೈ ಕ್ರೆಟಾ ಕಾರ್‌ ಗಿಫ್ಟ್‌ ನೀಡಿದ ಮಾಲೀಕ!

ಚೆನ್ನೈನ ಅಜಿಲಿಸಿಯಂ ತನ್ನ 10ನೇ ವಾರ್ಷಿಕೋತ್ಸವದಲ್ಲಿ 25 ಉದ್ಯೋಗಿಗಳಿಗೆ ಹುಂಡೈ ಕ್ರೆಟಾ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಸಂಸ್ಥಾಪಕರು ಉದ್ಯೋಗಿಗಳ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read Full Story

04:21 PM (IST) Jun 13

ಚೊಚ್ಚಲ ಏಕದಿನ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಆಟಗಾರರಿವರು! ಈ ಪಟ್ಟಿಯಲ್ಲಿ ಏಕೈಕ ಭಾರತೀಯ!

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದೊಡ್ಡ ದಾಖಲೆಗಳನ್ನು ಬರೆದ ಬ್ಯಾಟ್ಸ್‌ಮನ್‌ಗಳು ಬಹಳಷ್ಟಿದ್ದಾರೆ. ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ.

 

Read Full Story

04:01 PM (IST) Jun 13

ಭಾರತದ ದಿ ಗ್ರೇಟ್ ಖಲಿ ಹೊಡೆತಕ್ಕೆ WWE ರಿಂಗ್‌ನಲ್ಲಿ ಸತ್ತೇ ಹೋದ ಕುಸ್ತಿಪಟು!

ಡಬ್ಲ್ಯೂಡಬ್ಲ್ಯೂಇ ತಾರೆ ದಿ ಗ್ರೇಟ್ ಖಲಿ ತರಬೇತಿಯ ಸಮಯದಲ್ಲಿ ಆಕಸ್ಮಿಕವಾಗಿ ಯುವ ಕುಸ್ತಿಪಟು ಬ್ರಿಯಾನ್ ಒಂಗ್ ಅವರ ಸಾವಿಗೆ ಕಾರಣರಾದರು. ಈ ಘಟನೆಯಿಂದಾಗಿ ಖಲಿ ಭಾರಿ ದಂಡ ಮತ್ತು ಖಿನ್ನತೆಯನ್ನು ಎದುರಿಸಬೇಕಾಯಿತು. ನಂತರ ಅವರು ಡಬ್ಲ್ಯೂಡಬ್ಲ್ಯೂಇಗೆ ಮರಳಿ ಯಶಸ್ಸು ಗಳಿಸಿದರು.
Read Full Story

03:59 PM (IST) Jun 13

8 ವಾರದ ಕನಿಷ್ಠಕ್ಕೆ ಇಳಿದ ಭಾರತೀಯ ರೂಪಾಯಿ, ಹಣ ಕಳಿಸಲು ಯುಎಇ ಎನ್‌ಆರ್‌ಐಗಳು ಇನ್ನಷ್ಟು ಕಾಯುವುದು ಅನಿವಾರ್ಯ!

ಇಸ್ರೇಲ್-ಇರಾನ್ ಸಂಘರ್ಷದ ನಂತರ ತೈಲ ಬೆಲೆ ಏರಿಕೆ ರೂಪಾಯಿ ಮೇಲೆ ಪರಿಣಾಮ ಬೀರುತ್ತದೆ.

 

Read Full Story

More Trending News