Published : Jul 25, 2026, 06:49 AM ISTUpdated : Jul 25, 2026, 10:52 PM IST

Karnataka Latest News Live: ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ - ವೀಕೆಂಡ್‌ ಎಂಜಾಯ್‌ ಮಾಡ್ಬೇಕಾದ್ರೆ ಹುಷಾರು!

ಸಾರಾಂಶ

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ (ಪಿಯುಸಿವರೆಗೆ) ಶನಿವಾರ ರಜೆ ಘೋಷಿಸಲಾಗಿದೆ.

ಶೃಂಗೇರಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ, ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತಿವೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳ ಭಾಗದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

10:53 PM (IST) Jul 25

ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ - ವೀಕೆಂಡ್‌ ಎಂಜಾಯ್‌ ಮಾಡ್ಬೇಕಾದ್ರೆ ಹುಷಾರು!

ಬೆಂಗಳೂರಿನ ಬನಶಂಕರಿ 6ನೇ ಹಂತದ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಚಿರತೆಯ ಓಡಾಟದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯು ಪಟಾಕಿ ಸಿಡಿಸಿ ಅದನ್ನು ಓಡಿಸಲು ಯತ್ನಿಸಿದೆ.

Read Full Story

10:37 PM (IST) Jul 25

ಡ್ಯಾಡಿಸ್ ಹೋಮ್.. ಯಶ್ ಅವರ ಬೆಂಗಳೂರಿನ ಕನಸಿನ ಮನೆ ಹೇಗಿದೆ? - ಒಳಾಂಗಣ ನೋಡಿದ್ರೆ ನೀವು ಬೆರಗಾಗ್ತೀರಾ!

Yash Prestige Golfshire Home: ನಗರದ ಗದ್ದಲದಿಂದ ದೂರವಾಗಿ, ಉತ್ತರ ಬೆಂಗಳೂರಿನಲ್ಲಿ ನಟ ಯಶ್ ಅವರು ತಮ್ಮ ಕುಟುಂಬಕ್ಕಾಗಿ ಸುಂದರ ಹಾಗೂ ಶಾಂತಿಯುತವಾದ ಐಷಾರಾಮಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.

Read Full Story

09:19 PM (IST) Jul 25

Chamarajanagar - ರೈತರ ಬೆಳೆ ಒಣಗುತ್ತಿದೆ, ವನ್ಯಜೀವಿಗಳಿಗೆ ನೀರಿಲ್ಲ - ಇಲ್ಲಿದೆ ಉಡುತೊರೆಹಳ್ಳದ ನೋವಿನ ಕಥೆ

Chamarajanagar: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ,ಆಗಾಗಿದೆ ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ.

Read Full Story

08:55 PM (IST) Jul 25

ರಾವಣನ ಪಾತ್ರಕ್ಕೆ ಯಶ್ ಅವರಂತಹ ಔರಾ ಬೇಕಿತ್ತು - ರಣಬೀರ್ ಕಪೂರ್ ಬಿಚ್ಚಿಟ್ಟ ರಹಸ್ಯವೇನು?

ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ನಟ ಯಶ್, ಇದೀಗ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ'ದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read Full Story

08:23 PM (IST) Jul 25

'ಕಂಗ್ರಾಟ್ಸ್ ಮೈ ಡಿಯರ್ ಕಾಕ್ರೋಚ್ಸ್‌..' ಧಮೇಂದ್ರ ಪ್ರಧಾನ್ ರಾಜಿನಾಮೆ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಹೇಳಿದ್ದೇನು?

ನೀಟ್ ಹಗರಣದ ಈ ಹೈ-ವೋಲ್ಟೇಜ್ ಡ್ರಾಮಾ ಈಗ ಸಚಿವರ ರಾಜೀನಾಮೆ ಮೂಲಕ ಒಂದು ಹಂತಕ್ಕೆ ಬಂದು ತಲುಪಿದ್ದು, ಮುಂದಿನ ಬೆಳವಣಿಗೆಗಳು ಯಾವ ಕಡೆ ಸಾಗುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಕಾಶ್ ರಾಜ್ ಅವರ ಈ 'ವಿಕ್ಟರಿ ಪೋಸ್ಟ್' ಸದ್ಯ ಸಂಚಲನ ಸೃಷ್ಟಿಸಿದೆ.

Read Full Story

08:16 PM (IST) Jul 25

ರಾಜ್ ಬಿ ಶೆಟ್ಟಿ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ - ಆ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್

Karavali Kannada Movie: ನಟ ಪ್ರಜ್ವಲ್ ದೇವರಾಜ್ ಅವರ ಪಾಲಿಗೆ 40ನೇ ಸಿನಿಮಾ 'ಕರಾವಳಿ' ಕೂಡ ಅಂತಹದ್ದೇ ಒಂದು ಮಹತ್ವದ ಚಿತ್ರ. ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾ ಅವರ ಜೀವನದ ಭಾಗವಾಗಿತ್ತು.

Read Full Story

07:48 PM (IST) Jul 25

ಸಿ ಅಶ್ವಥ್ ಜೋಡಿ, ನಾಗಮಂಡಲದ ಮ್ಯಾಂಡೋಲಿನ್ ಮಾಂತ್ರಿಕ ಎನ್‌ಎಸ್‌ ಪ್ರಸಾದ್ ಇನ್ನಿಲ್ಲ!

'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ (66) ಹೃದಯಾಘಾತದಿಂದ ನಿಧನರಾದರು. ಕನ್ನಡ ಸುಗಮ ಸಂಗೀತ ಮತ್ತು ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ಸಿ. ಅಶ್ವಥ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದರು.

Read Full Story

07:35 PM (IST) Jul 25

ಆಷಾಢ ಏಕಾದಶಿ - ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಧಾರಣೆ, ವಿಶೇಷ ಪೂಜೆ

Ashada Ekadashi: ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

Read Full Story

07:19 PM (IST) Jul 25

'ಎಸ್.‌ ಜಾನಕಿ ಅಂತ್ಯಸಂಸ್ಕಾರಕ್ಕೆ ಹೋಗಿಲ್ಲ'.. ಟ್ರೋಲ್ ವಿರುದ್ಧ ಗಾಯಕಿ ಅನುರಾಧಾ ಭಟ್ ಹೇಳಿದ್ದೇನು?

“ತಮ್ಮನ್ನು ತಾವು ಜಾನಕಿ ಅಮ್ಮನವರ “ಅಭಿಮಾನಿಗಳು” ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತಿತ್ತು..”

Read Full Story

07:19 PM (IST) Jul 25

ವಿಜಯನಗರ ಅರಸರ ಕಾಲದ ಅಣೆಕಟ್ಟಿಗೆ ಮತ್ತೆ ರೈತರ ಮೊರೆ - ಅಷ್ಟಕ್ಕೂ ಆಗಿದ್ದೇನು?

Gangavathi: ವಿಜಯನಗರ ಕಾಲುವೆಗೆ ತುಂಗಭದ್ರಾ ನದಿಯಿಂದ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅಣೆಕಟ್ಟಿನ ಕೆಳ ಭಾಗದ ಮೋರೆ (ತಡೆಗೋಡೆ)ಗಳನ್ನು ಮುಚ್ಚಿ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ.

Read Full Story

07:14 PM (IST) Jul 25

Property Rights - ತಂದೆ-ತಾಯಿ ತಮ್ಮ ಆಸ್ತಿಯನ್ನು ಒಬ್ಬನೇ ಮಗ ಅಥವಾ ಮಗಳಿಗೆ ಬರೆದುಕೊಡಬಹುದೇ? ಏನು ಹೇಳುತ್ತದೆ ಕಾನೂನು?

ತಂದೆ-ತಾಯಿ ತಮ್ಮ ಆಸ್ತಿಯನ್ನು ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ನೀಡಬಹುದೇ ಎಂಬ ಪ್ರಶ್ನೆಗೆ ಈ ಸ್ಟೋರಿ ಕಾನೂನಾತ್ಮಕ ಉತ್ತರ ನೀಡುತ್ತದೆ. ಸ್ವಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಮಕ್ಕಳ, ವಿಶೇಷವಾಗಿ ಹೆಣ್ಣುಮಕ್ಕಳ ಹಕ್ಕುಗಳನ್ನು ಇದು ಸ್ಪಷ್ಟಪಡಿಸುತ್ತದೆ.

Read Full Story

07:07 PM (IST) Jul 25

ಬಾಡಿಗೆ ಕಟ್ಟಡದಲ್ಲೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ - ಸಾರ್ವಜನಿಕರ ಪರದಾಟ ಹೆಚ್ಚಳ

Gangavathi: ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ.

Read Full Story

06:47 PM (IST) Jul 25

'ಕರಾವಳಿ' ಕಂಬಳದ ಓಟದ ಕಥೆಯಲ್ಲ, ಅದರ ಹಿಂದೆ ಕಾಣದ ಜಗತ್ತಿನ ಕಥೆ - ನಿರ್ದೇಶಕ ಗುರುದತ್ ಗಾಣಿಗ

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಗುರುದತ್ ಗಾಣಿಗ ಈಗ ಸುಮಾರು ಆರು ವರ್ಷಗಳ ಬಳಿಕ ತಮ್ಮ ಹೊಸ ಚಿತ್ರ 'ಕರಾವಳಿ'ಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

Read Full Story

06:44 PM (IST) Jul 25

ಕೆಆರ್‌ಎಸ್‌ನಲ್ಲಿ ತುಂಬಿರುವ ಹೂಳಿನ ಪ್ರಮಾಣವೆಷ್ಟು? ನಮಗೆ ಗೊತ್ತೇ ಇಲ್ಲ ಎಂದ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ!

ಆರ್‌ಟಿಐ ಅರ್ಜಿಯೊಂದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆಘಾತಕಾರಿ ನಿರ್ಲಕ್ಷ್ಯ ಬಯಲಾಗಿದೆ. ಕೆಆರ್‌ಎಸ್‌ ಹೂಳಿನ ಪ್ರಮಾಣದ ಬಗ್ಗೆ ಯಾವುದೇ ದತ್ತಾಂಶವಿಲ್ಲದಿದ್ದರೂ, ಹಳೆಯ ಲೆಕ್ಕಾಚಾರದ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.

Read Full Story

06:29 PM (IST) Jul 25

BJP - ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಮೋದಿ ಸರ್ಕಾರದ 2ನೇ ಸಚಿವರ ವಿಕೆಟ್ ಪತನ, ಹಾಗಾದ್ರೆ ಕುರ್ಚಿ ಕಳೆದುಕೊಂಡ ಮೊದಲ ವಿಕೆಟ್ ಯಾರದ್ದು?

ನೀಟ್ ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ನಡೆದ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕ ಚಳವಳಿಯ ಒತ್ತಡಕ್ಕೆ ಸಿಲುಕಿ ಮೋದಿ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದು, ಈ ಹಿಂದೆ ಇದೇ ರೀತಿ ಹುದ್ದೆ ತೊರೆದ ನಾಯಕ ಯಾರು ಗೊತ್ತಾ?

Read Full Story

06:16 PM (IST) Jul 25

'ದಿ ಒಡಿಸ್ಸಿ' ಸಿನಿಮಾ ನನಗೆ ಮಹಾಭಾರತವನ್ನು ನೆನಪಿಸಿತು - ಮಿಲ್ಕಿ ಬ್ಯೂಟಿ ಆಶಿಕಾ ಹೇಳಿದ್ದೇನು?

Ashika Ranganath: ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' (The Odyssey) ಸಿನಿಮಾ ಕಳೆದ ವಾರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.

Read Full Story

06:09 PM (IST) Jul 25

ಪ್ರಧಾನ್ ರಾಜೀನಾಮೆ ಕೈ ಗೆಲುವಲ್ಲ! ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ಉಗ್ರರಿಗಷ್ಟೇ ಇವನು ಮಂತ್ರಿಯೇ? - ವಿಜಯೇಂದ್ರ ಕಿಡಿ

ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಬೆಂಗಳೂರಿನ ಪ್ರತಿಭಟನೆಯಲ್ಲಿ ದೇಶದ್ರೋಹಿ ಘೋಷಣೆಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

05:59 PM (IST) Jul 25

ನಟಿ ಸುಮನ್ ರಂಗನಾಥನ್ ಮೇಲೆ ಗಂಭೀರ ಆರೋಪ, ಫಿಲಂ ಚೆಂಬರ್‌ಗೆ ದೂರು ನೀಡಲು ಅಗಮಿಸಿದ್ದ ಚಿತ್ರತಂಡ; ಮುಂದೇನಾಯ್ತು..?

"ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಸುಮನ್ ರಂಗನಾಥ್ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ಇದೀಗ ನಟಿ ಮೇಲೆ ದೂರು ದಾಖಲಾಗುವಸುದ್ದಿ ಬಂದಿದೆ.

Read Full Story

05:41 PM (IST) Jul 25

ನನ್ನ ಬಾಯ್‌ಫ್ರೆಂಡ್‌, ಗಂಡನ ಬಗ್ಗೆ ನನಗಿಂತಲೂ ಮೊದಲು ಜನರಿಗೆ ಗೊತ್ತಾಗುತ್ತೆ - ರಾಗಿಣಿ ದ್ವಿವೇದಿ

Ragini Dwivedi: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ಮತ್ತು ಕುಮಾರ್‌ ಬಂಗಾರಪ್ಪ ಫೋಟೋ ನೋಡಿ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

Read Full Story

05:32 PM (IST) Jul 25

ಕನ್ನಡ ಚಿತ್ರರಂಗದಲ್ಲಿ ಯಾರು ತಪ್ಪಿತಸ್ಥರು? ನಿರ್ಮಾಪಕರೋ, ಸ್ಟಾರ್‌ಗಳೋ?

Save Sandalwood: ಹೆಸರು ಹೇಳದೆ, ಹೆಸರು ತಿಳಿಸದೆ ಗಾಳಿಯಲ್ಲಿ ಗುಂಡು ಹಾರಿಸುವವರು ಸಾಕಷ್ಟಿದ್ದಾರೆ. ಯಾವುದೋ ಒಂದು ಸಮಸ್ಯೆ ಕೇಳಿದರೆ, ಅದು ಈಗ ಬೇಡ ಆಮೇಲೆ ಮಾತಾಡೋಣ ಎಂದು ಹೇಳುವರೂ ಇದ್ದಾರೆ.

Read Full Story

05:18 PM (IST) Jul 25

ಹಣದ ಮೌಲ್ಯ ತಿಳಿಯಿರಿ, ಸ್ಟಾರ್‌ಗಳನ್ನು ಹುಟ್ಟುಹಾಕಿ - ಅನಂತ್ ನಾಗ್ ಎಚ್ಚರಿಕೆ

ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸುಮಾರು 15 ವರ್ಷ ಶ್ರಮ ಪಟ್ಟಿದ್ದೇನೆ. ಸಿನಿಮಾ ಕೆಲಸ ಇಲ್ಲದೇ ಇದ್ದಾಗ ಕೆ.ವಿ. ಜಯರಾಮ್ ಜೊತೆ ಕುಳಿತು ಕತೆ ಮಾಡಿದ್ದೇನೆ, ಸ್ಕ್ರಿಪ್ಟ್ ಮಾಡಿದ್ದೇನೆ ಎಂದರು ಅನಂತ್ ನಾಗ್.

Read Full Story

04:48 PM (IST) Jul 25

ಅಜ್ಜ ಹೇಳಿದ ರಾಮಾಯಣದಿಂದ ರಾವಣನಾದೆ - ರಾಕಿಂಗ್ ಸ್ಟಾರ್ ಯಶ್ ಹೇಳಿದ್ರು ಸವಾಲಿನ ಕಥೆ

ನಾನು ಕೇಳಿದ ಮೊದಲ ಕಥೆ ರಾಮಾಯಣ. ಬಹಳ ಚಿಕ್ಕವನಿದ್ದಾಗ ರಾತ್ರಿ ಮಲಗುವ ಮುಂಚೆ ಅಜ್ಜ ಈ ಕಥೆ ಹೇಳುತ್ತಿದ್ದರು. ಇಂದು ಅದೇ ಕಥೆಯನ್ನು ಜಗತ್ತಿನ ಮುಂದೆ ಹೇಳಲು ಹೊರಟಿದ್ದೇನೆ ಎಂದರು ಯಶ್.

Read Full Story

04:35 PM (IST) Jul 25

Karavali Movie Review - ಕಂಬಳದ ವೈಭವವನ್ನು ಕಣ್ಣಿಗೆ ಕಟ್ಟುವ 'ಕರಾವಳಿ' ಸಿನಿಮಾ ಹೇಗಿದೆ?

Karavali Movie Review: ಕಂಬಳದ ವೈಭವದಂತೆ ಚಿತ್ರದಲ್ಲೂ ವೈಭವವಿದೆ. ಹಸಿರು, ಮಳೆ, ಸಮುದ್ರ, ಬೆಟ್ಟ, ಗದ್ದೆ ಸೇರಿ ಸೊಗಸಾದ ವಾತಾವರಣದಲ್ಲಿ ಕತೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಮನಸ್ಸು ತಂಪಾಗುತ್ತದೆ.

Read Full Story

04:17 PM (IST) Jul 25

ಮಳೆ ಕೊರತೆ ನಡುವೆಯೂ ಒಂದೊಳ್ಳೆ ಸುದ್ದಿ.. ಸಂಪೂರ್ಣ ತುಂಬಿದ ಹಾರಂಗಿ ಜಲಾಶಯ..!

ರಾಜ್ಯದಲ್ಲಿ ಮಳೆ ಕೊರತೆಯಿದ್ದರೂ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಈ ವರ್ಷ ಮೊದಲ ಬಾರಿಗೆ ಸಂಪೂರ್ಣ ಭರ್ತಿಯಾಗಿದೆ. ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ, ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದ್ದು, ಇದು ಸಾವಿರಾರು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
Read Full Story

03:21 PM (IST) Jul 25

Cricket - ಶ್ರೇಯಸ್ ಅಯ್ಯರ್ ಸೇರಿ 8 ಆಟಗಾರರು ಟೀಮ್ ಇಂಡಿಯಾದಿಂದ ಔಟ್! ಕಾರಣವೇನು?

ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳು ಒಂದೇ ಸಮಯದಲ್ಲಿ ನಡೆಯುವುದರಿಂದ, ಬಿಸಿಸಿಐ ಎರಡು ವಿಭಿನ್ನ ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪ್ರಬಲ ತಂಡ ಏಷ್ಯನ್ ಗೇಮ್ಸ್‌ಗೆ ತೆರಳಲಿದ್ದು, ಈ ಕಾರಣದಿಂದ 8 ಪ್ರಮುಖ ಆಟಗಾರರು ವಿಂಡೀಸ್ ಸರಣಿಗೆ ಅಲಭ್ಯರಾಗಲಿದ್ದಾರೆ.

Read Full Story

03:04 PM (IST) Jul 25

ಮಸಾಲಾ ಟೀ ಮಾಡ್ತಾರೆ, ಆದ್ರೆ ಮಸಾಲಾ ಕಾಫಿ ಯಾಕೆ ಮಾಡಲ್ಲ? ಈ 'ಮಹಾನ್ ರಹಸ್ಯ'ಕ್ಕೆ ಉತ್ತರ ಇಲ್ಲಿದೆ ನೋಡಿ!

ಟೀ ಅಂದರೆ ಚಹಾದಲ್ಲಿ ಬಹಳಷ್ಟು ಇತರೆ ರುಚಿಕರ ಐಟಂಗಳನ್ನು ಸೇರಿಸಬಹುದು. ಏಲಕ್ಕಿ, ಹಲವು ಮಸಾಲಾ ಸೇರಿಸಿದ 'ಮಸಾಲಾ ಟೀ', ಜಿಂಜರ್ ಟೀ ಸೇರಿದಂತೆ ಹತ್ತು ಹಲವು ಟೀಗಳಿವೆ. ಅದರೆ ಕಾಫಿ ಎಂದರೆ ಕಾಫಿ ಪುಡಿ ಅಷ್ಟೇ ಸೇರಿಸೋದು. ಆಫ್‌ಕೋರ್ಸ್.. ಕಾಫಿಗೆ ಹಾಲು, ಸಕ್ಕರೆ ಸೇರಿಸಿಯೇ ಮಾಡಲಾಗುತ್ತದೆ. ಏಕೆ ಹೀಗೆ? ಈ ಸ್ಟೋರಿ ನೋಡಿ..

Read Full Story

01:31 PM (IST) Jul 25

ಹಮ್ಮೂ ಇಲ್ಲ, ಬಿಮ್ಮೂ ಇಲ್ಲ! ಕರ್ನಾಟಕದ ಈ ಕುಬೇರ ತಾತನ 'ಸ್ಟಾಕ್ ಮಾರ್ಕೆಟ್' ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!

ಸಾಮಾನ್ಯ ವೇಷಭೂಷಣದಲ್ಲಿ ಕಾಣಿಸಿಕೊಂಡ ಕರ್ನಾಟಕ ಮೂಲದ ವೃದ್ಧರೊಬ್ಬರು 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೇರುಗಳನ್ನು ಹೊಂದಿರುವ ವಿಷಯ ವೈರಲ್ ವಿಡಿಯೋದಿಂದ ಬೆಳಕಿಗೆ ಬಂದಿದೆ. ತಮ್ಮ ಶೇರುಗಳ ಡಿವಿಡೆಂಡ್ ಹಣದಿಂದಲೇ ಸರಳ ಜೀವನ ನಡೆಸುತ್ತಿರುವ ಇವರ ಹೂಡಿಕೆಯ ಜಾಣ್ಮೆ ಮತ್ತು ನಿರಾಡಂಬರ ಬದುಕು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read Full Story

01:15 PM (IST) Jul 25

ನೀಟ್ ಹೋರಾಟದ ಹಿಂದೆ ದೇಶದ್ರೋಹಿಗಳು, ವಿದೇಶಿ ಶಕ್ತಿಗಳ ಕೈವಾಡ? ಮುತಾಲಿಕ್ ಸ್ಫೋಟಕ ಹೇಳಿಕೆ!

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ವಿದೇಶಿ ಶಕ್ತಿಗಳು, ಸಿಜೆಪಿ ಮತ್ತು ಖಾಲಿಸ್ತಾನಿಗಳು ಹೈಜಾಕ್ ಮಾಡಿವೆ ಎಂದು ಆರೋಪಿಸಿದರು.

Read Full Story

01:13 PM (IST) Jul 25

Mangaluru - ಪ್ರೇಯಸಿ ಕೋಪ, ಚರಂಡಿ ಸೇರಿದ ಕಾರಿನ ಕೀ! ಬರ್ತಡೇ ವಿಶ್ ಮಾಡಲು ಬಂದು ಕಡಬದಲ್ಲಿ ಯುವಕ ಪಟ್ಟ ಫಜೀತಿ!

ಕಡಬದಲ್ಲಿ ತನ್ನ ಪ್ರೇಯಸಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದ ಯುವಕನಿಗೆ ಮುನಿಸಿನಿಂದಾಗಿ ಸಂಕಷ್ಟ ಎದುರಾಯಿತು. ಮಾತಿನ ಚಕಮಕಿಯ ಬಳಿಕ ಯುವತಿ ಕಾರಿನ ಕೀಯನ್ನು ಚರಂಡಿಗೆ ಎಸೆದಿದ್ದು, ಸ್ಥಳೀಯರ ಸಹಾಯದೊಂದಿಗೆ 5 ಗಂಟೆಗಳ ಕಾಲ ಹುಡುಕಾಡಿದರೂ ಕೀ ಸಿಗದೆ ಯುವಕ ಪರದಾಡಿದನು.
Read Full Story

01:01 PM (IST) Jul 25

ಕನ್ನಡದ ಕಲ್ಟ್ ಸಿನಿಮಾ ಮನೆಯಲ್ಲೇ ಕುಳಿತು 'ಟಿವಿ'ಯಲ್ಲಿ ನೋಡಿ, ಎಲ್ಲಿ, ಎಷ್ಟು ಗಂಟೆಗೆ? ಈ ಸ್ಟೋರಿ ನೋಡಿ..

ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ 'ಕಲ್ಟ್' ಸಿನಿಮಾ 23 ಜನವರಿ 2026 ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಒಂದು ರೋಮ್ಯಾಂಟಿಕ್ ಆಕ್ಷನ್ ಡ್ರಾಮಾ ಚಲನಚಿತ್ರ. ಇದು ಜುಲೈ 26, 2026ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಯಾವ ಟೈಂಗೆ ಅಂತ ಇಲ್ಲಿ ನೋಡಿ..

Read Full Story

11:42 AM (IST) Jul 25

ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆ.. ತಾಯಿ, ಮಗಳು, ಮಗ ದುರಂತ ಅಂತ್ಯ.. ಅಸಲಿಗೆ ಆಗಿದ್ದೇನು?

ಕೋಲಾರ ತಾಲ್ಲೂಕಿನ ಛತ್ರಕೋಡಿಹಳ್ಳಿ ಬಳಿ ತಾಯಿಯೊಬ್ಬಳು ತನ್ನಿಬ್ಬರು ಯುವ ಮಕ್ಕಳೊಂದಿಗೆ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ನಡೆದ ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

09:49 AM (IST) Jul 25

ಹೂವಿನಹಡಗಲಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ನಾಪತ್ತೆ, ಸಾಮೂಹಿಕ ರಜೆ ಹಾಕಿ ಎಲ್ಲಿಗೆ ಹೋದ್ರು?

ಹೂವಿನಹಡಗಲಿ ತಹಸೀಲ್ದಾರ ಕಚೇರಿಯಲ್ಲಿ ತೀವ್ರ ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ಬೇಸತ್ತ ಸಿಬ್ಬಂದಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ.
Read Full Story

09:35 AM (IST) Jul 25

356 ಎಕರೆಯ ಪಿಲಿಕುಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌, ತಾರಾಲಯಕ್ಕೆ 10 ಕೋಟಿ ರೂ. ವೆಚ್ಚದ ಲೇಸರ್ ತಂತ್ರಜ್ಞಾನ!

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲು ಕರ್ನಾಟಕ ರಾಜ್ಯ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ನಿರ್ದೇಶನ ನೀಡಿದೆ. ಪಿಲಿಕುಳ ಉತ್ಸವ ಆಯೋಜನೆ, ತಾರಾಲಯದ ಉನ್ನತೀಕರಣ ಮತ್ತು ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತಹ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
Read Full Story

08:45 AM (IST) Jul 25

Tumakuru - ಏಕಕಾಲದಲ್ಲಿ 11 ಇಲಾಖೆಗಳ ಸಚಿವರಾಗಿದ್ದ ಹಿರಿಯ ನಾಯಕ ಸಿ. ವೀರಪ್ಪ ನಿಧನ

ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿ

Read Full Story

08:42 AM (IST) Jul 25

‘ವಿಸ್ಕಿ, ಬಿಯರ್ ಹಾಗೂ ರಮ್.. ಸ್ವಾಮಿ.. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ, ಸರ್ಕಾರದ ವಿರುದ್ಧ ಕೋರ್ಟ್ ಗರಂ

‘ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್‌ ನಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು...’ ಎಂಬ ವಾದ ಕೇಳಿ ಅಚ್ಚರಿಗೊಂಡ ಹೈಕೋರ್ಟ್, ಇಂಥ ಕೆಲಸವನ್ನು ಸ್ಕಾಟ್ ಲ್ಯಾಂಡ್ ನಲ್ಲಿ ವಿಸ್ಕಿ ಕಂಡುಹಿಡಿದಾಗ ಮಾಡಲಾಗುತ್ತಿತ್ತು. ಆ ಪದ್ಧತಿ ಭಾರತದಲ್ಲಿ ಮಾಡಬೇಕಿಲ್ಲ ಎಂದು ನುಡಿಯಿತು.

Read Full Story

08:16 AM (IST) Jul 25

BPL ಕಾರ್ಡ್‌ ಆದಾಯ ಮಿತಿ 3 ಲಕ್ಷಕ್ಕೆ ಏರಿಸಲು ಸರ್ಕಾರದ ಚಿಂತನೆ; 2 ತಿಂಗಳಲ್ಲಿ ಇಂದಿರಾ ಕಿಟ್‌

ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಇದರೊಂದಿಗೆ, 'ಅನ್ನಭಾಗ್ಯ' ಯೋಜನೆಯಡಿ 'ಇಂದಿರಾ ಕಿಟ್' ವಿತರಣೆ ಮತ್ತು ಪಡಿತರ ಕಾಳಸಂತೆ ತಡೆಯಲು ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿಸುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
Read Full Story

08:13 AM (IST) Jul 25

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಇತ್ತ ಟಿಬಿ ಡ್ಯಾಂನಲ್ಲಿ ಕೇವಲ 29 ಟಿಎಂಸಿ ನೀರು! ಇಂದಿನ ಜಲಾಶಯಗಳ ನೀರಿನ ಪ್ರಮಾಣ ಎಷ್ಟು?

ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 29 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಸದ್ಯ, ಜಲಾಶಯದ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ!

Read Full Story

08:05 AM (IST) Jul 25

16 ಸಾವಿರ ಗರ್ಭ ನಾಪತ್ತೆಗೆ ‘ಗರ್ಭಪಾತ’ದ ಕತೆ! ಸರ್ಕಾರಕ್ಕೆ ಸುಳ್ಳು ಮಾಹಿತಿಯ ಆರೋಪ

‘ಕನ್ನಡಪ್ರಭ’ ವರದಿಯ ಆಧಾರದ ಮೇಲೆ, ಯಾದಗಿರಿ ಜಿಲ್ಲೆಯಲ್ಲಿ 16,116 ಗರ್ಭಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಗ್ಯ ಇಲಾಖೆಯು ಮುಖ್ಯಮಂತ್ರಿ ಕಚೇರಿಗೆ ಗರ್ಭಪಾತದ ಸುಳ್ಳು ಮಾಹಿತಿ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣವನ್ನು ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ತನಿಖೆಗೆ ಆದೇಶಿಸಿದೆ.
Read Full Story

07:52 AM (IST) Jul 25

Havri - SSLCಯಲ್ಲಿ 98%, PUCಯಲ್ಲಿ 95% - ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ

ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ನೀಟ್‌ ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದರು, ಆದರೆ ಅವರಿಗೆ -11 ಅಂಕ ಬಂದಿದೆ. ತಮ್ಮ ಓಎಂಆರ್‌ ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Read Full Story

07:42 AM (IST) Jul 25

ಸಚಿವ ಸಂಪುಟ ವಿಸ್ತರಣೆ ಬಿಗ್ ಅಪ್ಡೇಟ್; ನೀಟ್ ಪ್ರತಿಭಟನೆ ಮುಗಿಯುತ್ತಿದ್ದಂತೆ ಇತ್ತ ವಿಸ್ತರಣೆಗೆ ತಯಾರಿ!

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಿಂದ ಮುಂದೂಲ್ಪಟ್ಟಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವ ಸಂದರ್ಭದಲ್ಲಾದರೂ ಆಗಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದರು.

Read Full Story

More Trending News