Published : Aug 24, 2026, 05:19 AM ISTUpdated : Aug 24, 2026, 11:36 PM IST

Karnataka Latest News Live: ನಾಚಿಕೆಯ ನೋಟ, ಮುದ್ದಾದ ನಗು - ಸೀರೆಯಲ್ಲಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸೋಮವಾರದಿಂದ ವಿವಿಧೆಡೆ ಆರಂಭಿಸಲು ಉದ್ದೇಶಿಸಿದ್ದ ಮೋಡಬಿತ್ತನೆ ಕಾರ್ಯ ಒಂದೆರಡು ದಿನ ತಡವಾಗಲಿದೆ.

ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್‌) ಮತ್ತು ಮೋಡಬಿತ್ತನೆ ನಡೆಸುವ ಗುತ್ತಿಗೆ ಪಡೆದ ಕಂಪನಿಯೊಂದಿಗೆ ಸೋಮವಾರ ಅಧಿಕೃತ ಒಡಂಬಡಿಕೆ ಆಗಲಿದೆ. ನಂತರದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆಎಸ್‌ಎನ್‌ಡಿಎಂಸಿ) ಸಹಯೋಗದಲ್ಲಿ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಈಗಾಗಲೇ ಕೆಲ ಶಾಸಕರು ಸ್ಥಳೀಯವಾಗಿ ತಮ್ಮ ಅನುದಾನದಲ್ಲಿ ಮಳೆ ಕೊರತೆ ನೀಗಿಸಲು ಖಾಸಗಿ ಕಂಪನಿಯಿಂದ ಮೋಡಬಿತ್ತನೆ ಮಾಡಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸರ್ಕಾರವೇ ಈಗ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.

ಈಗಾಗಲೇ ನಿರ್ಧರಿಸಿದಂತೆ ಒಂದು ವಿಮಾನದ ಮೂಲಕ 60 ದಿನಗಳ ಅವಧಿಗೆ 200 ಗಂಟೆಗಳ ವೈಮಾನಿಕ ಹಾರಾಟವನ್ನು ನಡೆಸಲಾಗುತ್ತದೆ. ಖ್ಯಾತಿ ಕ್ಲೈಮೇಟ್‌ ಮಾಡಿಫಿಕೇಷನ್‌ ಕನ್ಸಲ್ಟೆಂಟ್ಸ್‌ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಒಟ್ಟು 28.52 ಕೋಟಿ ರು. ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

11:36 PM (IST) Aug 24

ನಾಚಿಕೆಯ ನೋಟ, ಮುದ್ದಾದ ನಗು - ಸೀರೆಯಲ್ಲಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ

Kannada Actress Ashika Ranganath ತಮ್ಮ ಹೊಸ ಫೋಟೋಶೂಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಸೀರೆಯುಟ್ಟರೂ ಅದಕ್ಕೆ ಮಾಡರ್ನ್ ಟಚ್ ನೀಡಿರುವ ನಟಿಯ ಸ್ಟೈಲಿಶ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

10:53 PM (IST) Aug 24

EPFO - 10 ವರ್ಷದ ಸೇವೆಯ ನಂತರವೂ ಪಿಂಚಣಿ ಕೈತಪ್ಪಬಹುದು! EPFO ಖಾತೆಯಲ್ಲಿ ಈ ಕೆಲಸ ಇಂದೇ ಪೂರ್ಣಗೊಳಿಸಿ!

ಇಪಿಎಫ್ ಖಾತೆಯಲ್ಲಿ ಸೇರ್ಪಡೆ ಅಥವಾ ನಿರ್ಗಮನ ದಿನಾಂಕ ತಪ್ಪಾಗಿದ್ದರೆ, ಅದು ನಿಮ್ಮ ಪಿಂಚಣಿ ಅರ್ಹತೆಗೆ ಧಕ್ಕೆ ತರಬಹುದು ಮತ್ತು ಪಿಎಫ್ ವರ್ಗಾವಣೆಗೆ ಅಡ್ಡಿಯಾಗಬಹುದು. ಈ ಲೇಖನವು, ಉದ್ಯೋಗದಾತರ ಸಹಾಯವಿಲ್ಲದೆ, ಮನೆಯಲ್ಲೇ ಆನ್‌ಲೈನ್ ಮೂಲಕ 'Mark Exit' ಬಳಸಿ ದಿನಾಂಕವನ್ನು ಸರಿಪಡಿಸುವ ಸರಳ ವಿಧಾನವನ್ನು ವಿವರಿಸುತ್ತದೆ.
Read Full Story

10:52 PM (IST) Aug 24

ಹುಲಿಯ ಜಾಡು ಹಿಡಿದ ಅರಣ್ಯ ಇಲಾಖೆ - ಗಂಗಾವತಿಯಲ್ಲಿ ನಡೆಯುತ್ತಿದೆ ಮಹಾ ಕಾರ್ಯಾಚರಣೆ!

Koppal News: ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.

Read Full Story

10:12 PM (IST) Aug 24

Shivamogga - ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಿದ ತಾಯಿ, ಇಬ್ಬರು ಹಸುಗೂಸುಗಳು ನಾಪತ್ತೆ!

ಕೌಟುಂಬಿಕ ಕಲಹದಿಂದ ಮನನೊಂದು, ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ತುಂಗಾ ನದಿಗೆ ಹಾರಿದ್ದಾಳೆ. ಸ್ಥಳೀಯರು ತಾಯಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದರೂ, ಇಬ್ಬರು ಹೆಣ್ಣುಮಕ್ಕಳು ನದಿಯ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.
Read Full Story

09:41 PM (IST) Aug 24

breaking news - ಕರ್ನಾಟಕದಲ್ಲೂ ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್ ಫುಡ್ ಲೈಸೆನ್ಸ್ ಅಮಾನತು..

ವಿಷಕಾರಿ ಧತ್ತೂರಾ ಹಣ್ಣು ಮತ್ತು ಬೀಜಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್ ಕಂಪನಿಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆಯು ಈ ಕಠಿಣ ಕ್ರಮ ಕೈಗೊಂಡಿದೆ.

Read Full Story

09:35 PM (IST) Aug 24

'ನಮ್ಮನೆಗೆ ಲಕ್ಷ್ಮಿ ಬಂದಿದ್ದಾಳೆ' - 25ರ ಹರೆಯದಲ್ಲೇ ತಾಯಿಯಾದ ಕನ್ನಡದ ಯೂಟ್ಯೂಬರ್‌ ಮಧು ಗೌಡ

Kannada YouTuber Madhu Gowda: 25ನೇ ವಯಸ್ಸಿನಲ್ಲಿ ತಾಯಿಯಾದ ಜನಪ್ರಿಯ ಯೂಟ್ಯೂಬರ್‌ ಮಧು ಗೌಡ. ನಿಖಿಲ್‌ ರವೀಂದ್ರ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.

Read Full Story

09:31 PM (IST) Aug 24

BEO ಕಚೇರಿ ಅಧೀಕ್ಷಕ ಮಂಜುನಾಥ್ ಆತ್ಮ*ತ್ಯೆ ಶಂಕೆ; ಡೆತ್ ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು!

ಗಂಗಾವತಿ ಬಿಇಓ ಕಚೇರಿ ಅಧೀಕ್ಷಕ ಮಂಜುನಾಥ್, ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ ನೀಡಿದ ಮೂವರು ಮೇಲಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

08:42 PM (IST) Aug 24

ಯಶ್‌ ಅಂದ್ರೆ ‘ಗೋಲ್ಡನ್‌ ಹಾರ್ಟ್‌’ - ಅಭಿಮಾನಿಗಾಗಿ ಬಾಡಿಗಾರ್ಡ್‌ಗೇ ಸೂಚನೆ ಕೊಟ್ಟ ರಾಕಿಂಗ್‌ ಸ್ಟಾರ್‌

Toxic pre release event ಕಾರ್ಯಕ್ರಮದಲ್ಲಿ ಸೆಲ್ಫಿ ಹಾಗೂ ಆಟೋಗ್ರಾಫ್‌ಗಾಗಿ ಯಶ್‌ ಅವರನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ಬಾಡಿಗಾರ್ಡ್‌ ಹಿಂದೆ ಸರಿಸಲು ಮುಂದಾದಾಗ, ಯಶ್‌ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.

Read Full Story

08:24 PM (IST) Aug 24

Supreme Court - ಶಾಲೆಗಳ ಸ್ಥಿತಿಗೆ ಸುಪ್ರೀಂ ಕೋರ್ಟ್ ಕಳವಳ - ಕುಂಭಮೇಳದ ಶೇ. 0.1ರಷ್ಟು ಹಣ ಸಿಕ್ಕರೂ ನೂರಾರು ಸರ್ಕಾರಿ ಶಾಲೆ ಉಳಿಸಬಹುದಿತ್ತು ಎಂದ ಪೀಠ!

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಸರ್ಕಾರಿ ಶಾಲೆಗಳ ಮುಚ್ಚುವಿಕೆ ಮತ್ತು ಶಿಕ್ಷಣದ ಮೇಲಿನ ನಿರ್ಲಕ್ಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೃಹತ್ ಯೋಜನೆಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುವಾಗ, ಕನಿಷ್ಠ ಸೌಲಭ್ಯಗಳಿಲ್ಲದೆ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವ ದುರಂತವನ್ನು ಉಲ್ಲೇಖಿಸಿ, ಶಿಕ್ಷಣ ಮತ್ತು ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
Read Full Story

07:48 PM (IST) Aug 24

‘ಆ ತಾಯಿಯನ್ನು ನೋಡಿದಾಗ ಶಕ್ತಿ ಬರುತ್ತದೆ’ - ಮಧುರೈ ಮೀನಾಕ್ಷಿ ದೇಗುಲದಲ್ಲಿ ನಟಿ ರಕ್ಷಿತಾ ಪ್ರೇಮ್

Kannada Actress Rakshitha Prem ಅವರು ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಆ ತಾಯಿಯನ್ನು ನೋಡಿದಾಗ ಶಕ್ತಿ ಬರುತ್ತದೆ ಎಂದು ವಿಶೇಷ ಆಧ್ಯಾತ್ಮಿಕ ಅನುಭವ ಎಂದು ಬಣ್ಣಿಸಿದ್ದಾರೆ.

Read Full Story

07:42 PM (IST) Aug 24

Diplomacy - ಮಾಸ್ಕೋ ತಲುಪಿದ 'ಮೋದಿ ಸಿಗೇಚರ್' - ಪುಟಿನ್ ಕೈಗೆ ಜೈಶಂಕರ್ ನೀಡಿದ ಆ ರಹಸ್ಯ ಪತ್ರದಲ್ಲೇನಿದೆ? ಇಲ್ಲಿದೆ ಭಾರತದ ಮಾಸ್ಟರ್ ಪ್ಲಾನ್!

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿ, ಪ್ರಧಾನಿ ಮೋದಿಯವರ ವಿಶೇಷ ಸಂದೇಶವನ್ನು ತಲುಪಿಸಿದರು. ಈ ಭೇಟಿಯು ಭಾರತದ '3D ರಾಜತಾಂತ್ರಿಕತೆ'ಯನ್ನು ಜಗತ್ತಿಗೆ ಪರಿಚಯಿಸಿದ್ದು, ರಷ್ಯಾ, ಅಮೆರಿಕ ಮತ್ತು ಚೀನಾವನ್ನು ಸಮತೋಲನಗೊಳಿಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಗುರಿಯನ್ನು ಸ್ಪಷ್ಟಪಡಿಸಿದೆ.
Read Full Story

06:59 PM (IST) Aug 24

‘ನನ್ನ ಕನಸು ನನಸಾಗಿದೆ’ - ಗೃಹಪ್ರವೇಶದ ಸಂಭ್ರಮದಲ್ಲಿ ಭಾವುಕರಾದ ಬಿಗ್‌ಬಾಸ್‌ ಬೆಡಗಿ ರಿಷಾ ಗೌಡ!

Bigg Boss Kannada 12 ಮೂಲಕ ಕನ್ನಡಿಗರಿಗೆ ಮತ್ತಷ್ಟು ಪರಿಚಿತರಾದ ನಟಿ ರಿಷಾ ಗೌಡ, 20ರ ಹರೆಯದಲ್ಲೇ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಂಡು, ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ತಮ್ಮ ಖುಷಿ ಹಾಗೂ ಭಾವುಕತೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story

06:28 PM (IST) Aug 24

ಈದ್ ಮಿಲಾದ್ ಹಬ್ಬದ ರಜೆಯಲ್ಲಿ ದಿಢೀರ್ ಬದಲಾವಣೆ - ಕರಾವಳಿ ಜಿಲ್ಲೆಗಳಿಗೆ ನಾಳೆಯೇ ಸರ್ಕಾರಿ ರಜೆ!

ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಘೋಷಿಸಲಾಗಿದ್ದ ಸಾರ್ವಜನಿಕ ರಜಾ ದಿನಾಂಕದಲ್ಲಿ ಬದಲಾವಣೆಯಾಗಿದೆ. ಚಂದ್ರದರ್ಶನದ ಆಧಾರದ ಮೇಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದು ರಜೆ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಈ ಮೊದಲೇ ನಿಗದಿಯಾಗಿದ್ದಂತೆ ಆಗಸ್ಟ್ 26 ರಂದು ರಜೆ ಇರಲಿದೆ ಎಂದು ಸರ್ಕಾರ ಆದೇಶಿಸಿದೆ.
Read Full Story

06:26 PM (IST) Aug 24

ಹೈದರಾಬಾದ್‌ನಲ್ಲಿ Toxic ಹವಾ - ಸಕ್ಸಸ್‌ಫುಲ್ ತೆಲುಗು ಸಿನಿಮಾ ಎತ್ತಂಗಡಿ 'ಇದು ಕನ್ನಡಿಗರ ತಾಕತ್ತು' ಎಂದ ಯಶ್‌ ಫ್ಯಾನ್ಸ್‌!

ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ತೆಲುಗಿನ 'ಇರುಮುಡಿ' ಚಿತ್ರವನ್ನು ತೆಗೆದುಹಾಕಿ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕೆ ಜಾಗ ನೀಡಲಾಗಿದೆ. ಈ ಬೆಳವಣಿಗೆಯು ತೆಲುಗು ಮತ್ತು ಕನ್ನಡ ಸಿನಿಪ್ರೇಮಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Read Full Story

06:25 PM (IST) Aug 24

ದಾವಣಗೆರೆ ಶಾಸಕ ಸಮರ್ಥ ಶಾಮನೂರು ಕಾರು ಭೀಕರ ಅಪಘಾತ; ಓವರ್‌ಟೇಕ್ ಮಾಡುವಾಗ ಅನಾಹುತ

ದಾವಣಗೆರೆ ಶಾಸಕ ಸಮರ್ಥ ಶಾಮನೂರು ಅವರ ಕಾರು ಚಿತ್ರದುರ್ಗದ ಹಿರಿಯೂರು ಬಳಿ ಸರಣಿ ಅಪಘಾತಕ್ಕೀಡಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಸಂದೀಪ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಘಟನೆ ಹೇಗೆ ಆಯಿತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

06:16 PM (IST) Aug 24

KPSC ಹಗರಣದ ಅಸಲಿ ಕಹಾನಿ ಏನು? ಐಎಎಸ್ ಜ್ಞಾನೇಂದ್ರ ವಿರುದ್ಧ ₹1 ಕೋಟಿ ಲಂಚದ ಆರೋಪ; ಹೇಗೆ ಬಯಲಾಯ್ತು ರಹಸ್ಯ? ಇಲ್ಲಿದೆ ಅಸಲಿ ಸತ್ಯ!

ಕೆಪಿಎಸ್‌ಸಿ ಪಶುವೈದ್ಯಕೀಯ ಅಧಿಕಾರಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಕೈಗೆತ್ತಿಕೊಂಡಿದೆ. ಕೋಟಿಗಟ್ಟಲೆ ಲಂಚದ ಆರೋಪದ ಮೇಲೆ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಈ ಹಗರಣವು ಕಷ್ಟಪಟ್ಟು ಓದಿದ ಸಾವಿರಾರು ನಿಷ್ಠಾವಂತ ಅಭ್ಯರ್ಥಿಗಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ.

Read Full Story

05:33 PM (IST) Aug 24

ಕೇರಳ ಸುಂದರಿಗೆ Miss Universe India ಕಿರೀಟ.. 19 ವರ್ಷದ ಈ ಬಹುಮುಖ ಪ್ರತಿಭೆ ಯಾರು?

ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಪಟ್ಟ ಗೆದ್ದ ಕೇರಳದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Read Full Story

05:24 PM (IST) Aug 24

ಕನ್ನಡದಾಚೆ ಶಿವಣ್ಣನ ಮತ್ತೊಂದು ಹೆಜ್ಜೆ - ಬಾಲಿವುಡ್‌ ಡೆಬ್ಯೂಗೆ ಸಜ್ಜಾದ ಹ್ಯಾಟ್ರಿಕ್‌ ಹೀರೋ!

ಶಿವರಾಜ್‌ಕುಮಾರ್‌ ಮತ್ತು ಆರ್. ಚಂದ್ರು ಕಾಂಬಿನೇಷನ್‌ನ ಈ ಬಹುಕೋಟಿ ಪ್ರಾಜೆಕ್ಟ್‌ನ ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಆಗಸ್ಟ್‌ 28ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

Read Full Story

05:03 PM (IST) Aug 24

‘ಒಂದೇ ಸಿನಿಮಾದಲ್ಲಿ ನಾಲ್ಕೈದು ಸ್ಟಾರ್ಸ್‌ ನಟಿಸಿದ್ರೆ ಸ್ಯಾಂಡಲ್‌ವುಡ್‌ಗೆ ಒಳ್ಳೆಯದು’ - ನಟ ಕೋಮಲ್

‘ಕೋಣ’ ಚಿತ್ರದ ಬಳಿಕ ನಟ ಕೋಮಲ್ ಕುಮಾರ್ ಮತ್ತೊಮ್ಮೆ ವಿಭಿನ್ನ ಕಥೆ ಮತ್ತು ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕೋಮಲ್ ಕುಮಾರ್, ಸೋನಲ್‌ ಮೊಂಥೆರೋ ಹಾಗೂ ವಿನೋದ್ ಪ್ರಭಾಕರ್..

Read Full Story

04:59 PM (IST) Aug 24

Chikkamgaluru - ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಟಿಪ್ಪು ಸುಲ್ತಾನ್ ಕಟೌಟ್‌ಗೆ ದೇಶದ್ರೋಹಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಘಟನೆಗೆ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದೆ.
Read Full Story

04:46 PM (IST) Aug 24

Onion Price - ಗ್ರಾಹಕರಿಗೆ ರಿಲೀಫ್‌, ಆದರೆ ಈರುಳ್ಳಿ ಬೆಳೆದ ರೈತನಿಗೆ ಆತಂಕ? ಆಡಳಿತದ ಹೊಸ ಪ್ಲಾನ್‌ ಅನ್ನದಾತನಿಗೆ ತಂದಿಡ್ತಾ ಸಂಕಷ್ಟ!

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ 'ಕಾಂದಾ ಎಕ್ಸ್‌ಪ್ರೆಸ್' ಮೂಲಕ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ. ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದು, ಕಡಿಮೆ ಇಳುವರಿ ಪಡೆದ ರೈತರು ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ, ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ದೂಡಿದೆ.
Read Full Story

04:19 PM (IST) Aug 24

'ಯಶ್‌ ಅಣ್ಣ, ಸ್ಟೇಜ್‌ಗೆ ಬನ್ನಿ.. ನಿಮ್ಮ ಜೊತೆ ಫೋಟೋ ಬೇಕು' - ಶಾಸಕ ಮಲ್ಲಾರೆಡ್ಡಿ ಮನವಿ ವೈರಲ್

MLA Malla Reddy On Toxic: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ.

Read Full Story

03:57 PM (IST) Aug 24

ವಾಹನ ಸವಾರರೇ ಗಮನಿಸಿ - ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಇಂದಿನಿಂದ 60 ದಿನ ಬಂದ್!

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಮತ್ತು ಇತರ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಆಗಸ್ಟ್ 24ರಿಂದ 60 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು, ಬೆಂಗಳೂರು ಸಂಚಾರ ಪೊಲೀಸರು ಎರಡು ಹಂತಗಳಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
Read Full Story

02:35 PM (IST) Aug 24

ಟ್ರಾಫಿಕ್‌ ಸಮಸ್ಯೆಗೆ ಡಿಫರೆಂಟ್‌ ಪರಿಹಾರ, ಔಟರ್‌ ರಿಂಗ್‌ ರೋಡ್‌ನಲ್ಲಿ ಟೆಕ್‌ಪಾರ್ಕ್‌ನ ಒಳಗಡೆ ಶಿಫ್ಟ್‌ ಆಗಲಿದೆ ಬಿಎಂಟಿಸಿ ಬಸ್‌ ಸ್ಟಾಪ್‌?

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿನ ನಿರಂತರ ಸಂಚಾರ ದಟ್ಟಣೆಯನ್ನು ನಿವಾರಿಸಲು, ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಪ್ರಮುಖ ಟೆಕ್ ಪಾರ್ಕ್‌ಗಳ ಆವರಣದೊಳಗೆ ಸ್ಥಳಾಂತರಿಸಲು ಸಂಚಾರ ಪೊಲೀಸರು ಹೊಸ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

Read Full Story

02:29 PM (IST) Aug 24

H1N1 Virus - ರಾಜ್ಯದಲ್ಲಿ 4,212 ಹಂದಿ ಜ್ವರ ಪ್ರಕರಣ, ಆರೋಗ್ಯ ಇಲಾಖೆಯಿಂದ ಅಲರ್ಟ್

ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ಸಭೆ ನಡೆಸಿ, ರಾಜ್ಯದಲ್ಲಿ H1N1 ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಸಿ ನೀರು ಕುಡಿಯುವುದು, ಮಾಸ್ಕ್ ಧರಿಸುವುದು ಸೇರಿದಂತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದ್ದಾರೆ.

Read Full Story

01:26 PM (IST) Aug 24

ಓಣಂ ಹಬ್ಬಕ್ಕೆ ಕೇರಳಕ್ಕೆ ಹೊರಟ ಪ್ರಯಾಣಿಕರಿಗೆ ಆಘಾತ - ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ 6 ಗಂಟೆ ವಿಳಂಬ!

ಓಣಂ ಹಬ್ಬದಂದು ಬೆಂಗಳೂರಿನಿಂದ ಎರ್ನಾಕುಲಂಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 'ಹಾಟ್ ಆಕ್ಸಲ್' ತಾಂತ್ರಿಕ ದೋಷದಿಂದಾಗಿ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಯಿತು. ಈ ಘಟನೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದು, ಈ ಮಾರ್ಗಕ್ಕೆ ಹೆಚ್ಚುವರಿ ರೈಲಿನ (ರೇಕ್) ಅವಶ್ಯಕತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
Read Full Story

01:25 PM (IST) Aug 24

ಭಾರತದ 'ಬ್ರಾಂಡ್' ಆಗಿರುವ ನಟ ಯಶ್ 'ಯಶೋಗಾಥೆ'ಯ ಎ ಟು ಝಡ್ ಮಾಹಿತಿ ಇಲ್ಲಿದೆ ನೋಡಿ.. ಮಿಸ್ ಮಾಡಿದ್ರೆ ಗ್ರೇಟ್ ಲಾಸ್!

ಕರ್ನಾಟಕದಲ್ಲಿ ಹುಟ್ಟಿ-ಬೆಳದು ಇಂದು ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ ಆಗಿದ್ದು, ಸದ್ಯವೇ ಅಧಿಕೃತವಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಲಿರುವ ನಟ ಯಶ್ ಅವರ ಯಶೋಗಾಥೆ. ಇದು ಅಂತಿಂಥ ಸ್ಟೋರಿ ಅಲ್ಲ, ಚಿತ್ರರಂಗದಲ್ಲಿ ಸಾಧನೆ ಮಾಡಬೇಕು, ಜಗತ್ತೇ ತಿರುಗಿ ನೋಡುವಂತೆ ಬೆಳೆಯಬೇಕು ಎಂಬಂಥವರಿಗೆ ಸ್ಪೂರ್ತಿಯ ಸೆಲೆ, ಸಾಧನೆಯ ಕಲೆ. ತಡವೇಕೆ? ಬೇಗ ಈ ಸ್ಟೋರಿ ನೋಡಿ..

Read Full Story

01:07 PM (IST) Aug 24

ಶಿರಸಿಯಲ್ಲಿ 100 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ - ಪಶ್ಚಿಮ ಘಟ್ಟದಲ್ಲಿ ಬೃಹತ್ ಕಾರ್ಯಾಚರಣೆ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಬನವಾಸಿ ಹೆದ್ದಾರಿ ಬಳಿಯ 110 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ 37 ವರ್ಷಗಳ ನಂತರ ಯಶಸ್ವಿಯಾಗಿ ವಶಕ್ಕೆ ಪಡೆದಿದೆ. ಈ ಭೂಮಿಯು 'ಕಾಮಧೇನು ಸಹಕಾರಿ ಸಂಸ್ಥೆ'ಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಅವಧಿ ಮುಗಿದರೂ ಕಾನೂನು ಸಂಘರ್ಷದಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು.

Read Full Story

01:03 PM (IST) Aug 24

Shivamogga - ಸರ್ಕಾರಿ ಶಾಲೆಯನ್ನು ‘ಮಕ್ಕಳ ಮನೆ’ಯಾಗಿಸಿದ ಶಿಕ್ಷಕಿಗೆ ರಾಷ್ಟ್ರಪ್ರಶಸ್ತಿ..! ಈ ಶಾಲೆಯ ವಿಶೇಷತೆ ಏನು?

ಶಿವಮೊಗ್ಗದ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಶಾಲೆಯ ಶಿಕ್ಷಕಿ ಎಸ್. ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 22 ವರ್ಷಗಳಿಂದ ತಮ್ಮ ನವೀನ ಬೋಧನಾ ವಿಧಾನಗಳು ಮತ್ತು ಸಮುದಾಯದ ಸಹಭಾಗಿತ್ವದಿಂದ ಶಾಲೆಯನ್ನು 'ಮಕ್ಕಳ ಮನೆ'ಯಾಗಿ ಪರಿವರ್ತಿಸಿ, ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ.
Read Full Story

12:35 PM (IST) Aug 24

ರೈಲು ಪ್ರಯಾಣಿಕರಿಗೆ ನೆಮ್ಮದಿ ಸುದ್ದಿ - ಸರ್ವರ್ ಸಮಸ್ಯೆಗೆ ಬ್ರೇಕ್, ಇನ್ಮುಂದೆ ನಿಮಿಷಕ್ಕೆ 1 ಲಕ್ಷ ಟಿಕೆಟ್ ಬುಕಿಂಗ್!

IRCTC ತನ್ನ 'ನೆಕ್ಸ್ಟ್ ಜನರೇಷನ್ ಇ-ಟಿಕೆಟಿಂಗ್' ವ್ಯವಸ್ಥೆಯನ್ನು ನವೀಕರಿಸುತ್ತಿದ್ದು, ತತ್ಕಾಲ್ ಬುಕಿಂಗ್ ಸಮಯದಲ್ಲಿ ಆಗುವ ಸರ್ವರ್ ಕ್ರ್ಯಾಶ್ ಮತ್ತು ನಿಧಾನಗತಿಯನ್ನು ತಡೆಯಲಿದೆ. ಈ ನವೀಕರಣವು ಬುಕಿಂಗ್ ಸಾಮರ್ಥ್ಯವನ್ನು ನಿಮಿಷಕ್ಕೆ 1 ಲಕ್ಷ ಟಿಕೆಟ್‌ಗಳಿಗೆ ಹೆಚ್ಚಿಸಲಿದ್ದು, ಅನಗತ್ಯ ಕ್ಯಾಪ್ಚಾಗಳನ್ನು ತೆಗೆದುಹಾಕಿ, ಸರಳ ಮತ್ತು ವೇಗದ ಬುಕಿಂಗ್ ಅನುಭವವನ್ನು ನೀಡಲಿದೆ.
Read Full Story

12:35 PM (IST) Aug 24

ಕರಣ್ ಶರ್ಮಾ ಹೆಸರಿನಲ್ಲಿದೆ ಅಪರೂಪದಲ್ಲೇ ಅಪರೂಪದ ಐಪಿಎಲ್ ರೆಕಾರ್ಡ್..!

ಟೀಂ ಇಂಡಿಯಾ ಕ್ರಿಕೆಟಿಗ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸತತ ಮೂರು ಸೀಸನ್‌ಗಳಲ್ಲಿ ಮೂರು ವಿಭಿನ್ನ ತಂಡಗಳ ಪರ ಐಪಿಎಲ್ ಟ್ರೋಫಿ ಗೆದ್ದಿರುವ ಅಪರೂಪದ ದಾಖಲೆಯನ್ನು ಅವರು ಹೊಂದಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಯುಪಿ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.
Read Full Story

12:07 PM (IST) Aug 24

ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ - ಹಲವು ಟ್ರೈನ್‌ ವ್ಯಾಪ್ತಿ ಬದಲಾವಣೆ, ಇಲ್ಲಿದೆ ರೈಲುಗಳ ಪಟ್ಟಿ

ಅಕ್ಟೋಬರ್ 1 ರಿಂದ ಮಂಗಳೂರು ರೈಲ್ವೆ ಪ್ರದೇಶವು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಟ್ಟು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳ್ಳಲಿದೆ. ಈ ಬದಲಾವಣೆಯಿಂದಾಗಿ ವಂದೇ ಭಾರತ್ ಸೇರಿದಂತೆ 12ಕ್ಕೂ ಹೆಚ್ಚು ಪ್ರಮುಖ ರೈಲುಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದ್ದು, ಇದು ಕರಾವಳಿ ಕರ್ನಾಟಕದ ರೈಲ್ವೆ ಸುಧಾರಣೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.
Read Full Story

12:07 PM (IST) Aug 24

8ನೇ ವೇತನ ಆಯೋಗ - 50 ಲಕ್ಷ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ ಸಾಧ್ಯತೆ!

8ನೇ ಕೇಂದ್ರ ವೇತನ ಆಯೋಗದ ಜಾರಿಯ ನಿರೀಕ್ಷೆಯಲ್ಲಿರುವ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರ ವೇತನ ಏರಿಕೆಯು 'ಫಿಟ್‌ಮೆಂಟ್ ಫ್ಯಾಕ್ಟರ್' ಮೇಲೆ ಅವಲಂಬಿತವಾಗಿದೆ.

Read Full Story

11:58 AM (IST) Aug 24

Toxic Countdown Day 02 - ಟಾಕ್ಸಿಕ್ ಕೌಂಟ್‌ಡೌನ್ 02.. ಅಡ್ವಾನ್ಸ್‌ ಬುಕಿಂಗ್‌ನಲ್ಲಿ ದಾಖಲೆ.. ಯಶ್ 'ಟಾಕ್ಸಿಕ್' ಬಿಡುಗಡೆಗೂ ಮೊದಲೇ ಭಾರೀ ಆರ್ಭಟ! ಏನೆಲ್ಲಾ ಆಗಿದೆ ನೋಡಿ..

ಸಿನಿಮಾ ಬಿಡುಗಡೆಗೆ ಇನ್ನು 02 ದಿನಗಳು ಮಾತ್ರ ಬಾಕಿ. ಕರ್ನಾಟಕದಲ್ಲಿ 2 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗಿದೆ. ಇನ್ನು ಮಹಾರಾಷ್ಟ್ರದಿಂದ ಬ್ಲಾಕ್ ಮಾಡಲಾದ ಸೀಟುಗಳ ಮೊತ್ತ 2 ಕೋಟಿ ರೂಪಾಯಿಗೂ ಅಧಿಕವಾಗಿದೆ.

Read Full Story

11:40 AM (IST) Aug 24

ಸಿಇಟಿ ತಾತ್ಕಾಲಿಕ ಫಲಿತಾಂಶ ರಾತ್ರಿ ಪ್ರಕಟ, ಸಂಜೆ 4ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಇಟಿ 2ನೇ ಸುತ್ತು ಮತ್ತು ವೈದ್ಯಕೀಯ/ದಂತ ವೈದ್ಯಕೀಯ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, ಇದು ಅಂತಿಮ ಪಟ್ಟಿಯಲ್ಲದ ಕಾರಣ ಪ್ರವೇಶಾತಿಗಾಗಿ ಕಾಲೇಜುಗಳಿಗೆ ತೆರಳದಂತೆ ಸೂಚಿಸಲಾಗಿದೆ.
Read Full Story

11:18 AM (IST) Aug 24

Bagalakote - ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್; ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು, ಆಗಿದ್ದೇನು?

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಯುವಕನೊಬ್ಬನ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಗಾಯಗಳಾಗಿವೆ. ಘಟನೆಯಲ್ಲಿ ಕಾಲು, ಹೊಟ್ಟೆ ಬಳಿ ಸುಟ್ಟ ಗಾಯಗಳಾಗಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Read Full Story

10:33 AM (IST) Aug 24

ಬೆಂಗಳೂರಿನ 2 ರೈಲು ನಿಲ್ದಾಣಗಳಲ್ಲಿ 6 ಹೊಸ ಪ್ಲಾಟ್‌ಫಾರ್ಮ್, ₹560 ಕೋಟಿ ವೆಚ್ಚದ ಯೋಜನೆಗೆ ಗ್ರೀನ್ ಸಿಗ್ನಲ್!

ನೈಋತ್ಯ ರೈಲ್ವೆಯು ಬೆಂಗಳೂರಿನ ಕೆಎಸ್‌ಆರ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ವಿಸ್ತರಣೆಗೆ ಬೃಹತ್ ಯೋಜನೆ ರೂಪಿಸಿದೆ. ಈ ಯೋಜನೆಯಡಿ, ಕೆಎಸ್‌ಆರ್ ನಿಲ್ದಾಣದಲ್ಲಿ 2 ಮತ್ತು ಯಶವಂತಪುರದಲ್ಲಿ 4 ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು, ಇದಕ್ಕೆ ರೈಲ್ವೆ ಮಂಡಳಿಯು ಅಧಿಕೃತ ಅನುಮೋದನೆ ನೀಡಿದೆ.
Read Full Story

10:01 AM (IST) Aug 24

ಫ್ರೀಡಂ ಪಾರ್ಕ್‌ನ ನೂತನ ಕಟ್ಟಡದಲ್ಲಿ ಪ್ರತಿಭಟನೆ ಮಾಡಲು 1 ಲಕ್ಷ ರೂಪಾಯಿ ಬಾಡಿಗೆ!

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾಕಾರರಿಗಾಗಿ ನಿರ್ಮಿಸಿದ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡವು, ಬಿಬಿಎಂಪಿ ವಿಧಿಸಿರುವ ದುಬಾರಿ ಬಾಡಿಗೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದಿದೆ. ಇದರಿಂದಾಗಿ ಹೋರಾಟಗಾರರು ಮಳೆ-ಬಿಸಿಲಿನಲ್ಲಿಯೇ ಪ್ರತಿಭಟಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಈ ಕಟ್ಟಡವು ರಾತ್ರಿ ವೇಳೆ ಪುಂಡುಪೋಕರಿಗಳ ಅಡ್ಡೆಯಾಗಿದೆ.
Read Full Story

09:39 AM (IST) Aug 24

ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ - ಡಿಸ್ಕೌಂಟ್ ಲಭ್ಯ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ, ಪುಣೆ ಮತ್ತು ಪಿಂಪ್ರಿ ನಡುವೆ ಪ್ರತಿದಿನ 'ರಾಜರಥ' ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ನೂತನ ಬಸ್ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಗುರಿ ಹೊಂದಿದ್ದು, ವೇಳಾಪಟ್ಟಿ, ದರ ಮತ್ತು ಮುಂಗಡ ಬುಕ್ಕಿಂಗ್ ವಿವರಗಳನ್ನು ಒದಗಿಸಲಾಗಿದೆ.
Read Full Story

08:46 AM (IST) Aug 24

ತದಡಿ-ಅಘನಾಶಿನಿ ಬಾರ್ಜ್‌ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ

ತದಡಿ-ಅಘನಾಶಿನಿ ನಡುವಿನ ಬಾರ್ಜ್ ಸೇವೆಗೆ ಕೊನೆಗೂ ದರಪಟ್ಟಿ ಅಳವಡಿಸಲಾಗುತ್ತಿದ್ದು, ಇಲಾಖೆ ನಿಗದಿತ ದರಕ್ಕಿಂತ ಹೆಚ್ಚಳ ಮಾಡಲಾಗಿದೆ. ಈ ಹೊಸ ದರಪಟ್ಟಿಯು ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ದರ ತಾರತಮ್ಯದ ಅನುಮಾನ ಮೂಡಿಸಿ, ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.
Read Full Story

More Trending News