Published : Feb 17, 2026, 06:50 AM ISTUpdated : Feb 17, 2026, 08:57 PM IST

Karnataka News Live: ಹೂಮಳೆ ಬೆಡಗಿ ಸುಮನ್ ನಗರ್ಕರ್‌ಗೆ ಈಗ ಎವರೆಸ್ಟ್ ಏರೋ ಕನಸಂತೆ!

ಸಾರಾಂಶ

ಧಾರವಾಡ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹ*ತ್ಯೆ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಜಾಮೀನು ಕೇಳಿದ್ದ ಆರೋಪಿ ಫಯಾಜ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈಗಾಗಲೇ ಎರಡು ಬಾರಿ ಆರೋಪಿ ಫಯಾಜ್ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿ ತಿರಸ್ಕರಿಸಿತ್ತು. ಇದೀಗ 3ನೇ ಬಾರಿಯೂ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪೀಠವು ತಿರಸ್ಕರಿಸಿದೆ. 2024ರ ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ನೇಹಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊ*ಲೆ ಮಾಡಿದ್ದ.

ಆರೋಪಿ ಫಯಾಜ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು ನ್ಯಾಯಕ್ಕೆ‌ ಸಂದ ಜಯ. ಸಂಪೂರ್ಣವಾಗಿ ನ್ಯಾಯಾಂಗ ಬಗ್ಗೆ ವಿಶ್ವಾಸವಿದೆ. ಆರೋಪಿ ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ವಿಚಾರಣೆಯಲ್ಲಿ ತುಸು ವಿಳಂಬವಾಗುತ್ತಿದೆ. ಇಷ್ಟಾಗಿಯೂ ನ್ಯಾಯ ನಮ್ಮ ಪರವಾಗಿದೆ ಎಂಬ ವಿಶ್ವಾಸವಿದೆ ಎಂದು ನೇಹಾ ಕುಟುಂಬದ ಪರ ನ್ಯಾಯವಾದಿ ರಾಘವೇಂದ್ರ ಮುತ್ತಗಿಕರ ಮಾಧ್ಯಮಗಳಿಗೆ ತಿಳಿಸಿದರು.

08:57 PM (IST) Feb 17

ಹೂಮಳೆ ಬೆಡಗಿ ಸುಮನ್ ನಗರ್ಕರ್‌ಗೆ ಈಗ ಎವರೆಸ್ಟ್ ಏರೋ ಕನಸಂತೆ!

ಸುಮನ್ ನಗರ್ಕರ್ (Suman Nagarkar) ಅನ್ನೋ ಬೆಳದಿಂಗಳ ಬಾಲೆ ಕನ್ನಡ ಚಿತ್ರಗಳಲ್ಲಿ ನಟಿಸದೇ ಅದೆಷ್ಟೋ ಕಾಲವಾಗಿದೆ. ಈ ನಟಿಗೆ ನಟನೆ ಮಾತ್ರವಲ್ಲದೇ ಲೈಫ್‌ಸ್ಟೈಲ್ ಬಗ್ಗೆ ಅಭಿರುಚಿ ಇದೆ. ಈ ಪ್ರತಿಭಾವಂತೆ ಇದೀಗ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಅದು ಎವರೆಸ್ಟ್ ಕನಸು.

 

Read Full Story

08:50 PM (IST) Feb 17

ಬೆಂಗಳೂರು ಖಾಸಗಿ ಶಾಲೆಯಲ್ಲೂ ಬಡ್ತಿ ಗುದ್ದಾಟ - ರೌಡಿಗಳಿಂದ ಶಿಕ್ಷಕಿ ಮೇಲೆ ಹಲ್ಲೆ ಮಾಡಿಸಿದ ಉಪ ಪ್ರಾಂಶುಪಾಲೆ!

ಬೆಂಗಳೂರಿನ ಬಸವನಗುಡಿಯ ಶಾಲೆಯೊಂದರಲ್ಲಿ, ಬಡ್ತಿ ನೀಡಿದ್ದಕ್ಕೆ ಅಸೂಯೆಗೊಂಡ ಉಪಪ್ರಾಂಶುಪಾಲೆಯೊಬ್ಬರು ರೌಡಿಗಳನ್ನು ಕರೆಸಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿ, ಅವರ ಪತಿ ಹಾಗೂ 16 ವರ್ಷದ ಮಗಳ ಮೇಲೆ ಈ ಗ್ಯಾಂಗ್ ಪೈಶಾಚಿಕವಾಗಿ ಹಲ್ಲೆ ನಡೆಸಲಾಗಿದೆ.

Read Full Story

08:36 PM (IST) Feb 17

ಪುತ್ತೂರು - ಇದ್ದಕ್ಕಿದ್ದಂತೆ ತರಗತಿ ಬಿಟ್ಟು ಬಂದು ರಸ್ತೆಗಿಳಿದ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು!

ಪುತ್ತೂರಿನಲ್ಲಿ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಉಂಟಾದ ಧೂಳಿನ ಸಮಸ್ಯೆಯಿಂದಾಗಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.

Read Full Story

08:08 PM (IST) Feb 17

ಕಾರು ಡಿಕ್ಕಿ ಹೊಡೆದು 23ರ ಯುವಕನ ಬಲಿ ಪಡೆದ ಅಪ್ರಾಪ್ತನಿಗೆ ಸಿಕ್ತು ವಾರದಲ್ಲೇ ಜಾಮೀನು - ಇದೊಬ್ಬ ಮಗನ ಕಳೆದುಕೊಂಡು ತಾಯಿಯ ಆಕ್ರಂದನ

ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕನೋರ್ವ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 23 ವರ್ಷದ ಯುವ ತರುಣ ಸಾವಿಗೀಡಾದ ಘಟನೆ ವಾರದ ಹಿಂದೆ ನಡೆದಿತ್ತು. ಆದರೆ ಘಟನೆ ನಡೆದ ಒಂದು ವಾರದಲ್ಲಿ ಆ ಅಪ್ರಾಪ್ತ ಬಾಲಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

07:39 PM (IST) Feb 17

ಶೂಟಿಂಗ್‌ ಸೆಟ್‌ನಲ್ಲಿ Karna Serial ಕರ್ಣ-ನಿಧಿ ಕದ್ದುಮುಚ್ಚಿ ರೊಮಾನ್ಸ್‌ - ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ ನೋಡಿ

ಕರ್ಣ ಸೀರಿಯಲ್‌ನಲ್ಲಿ ಕರ್ಣ ಮತ್ತು ನಿಧಿ ಜೋಡಿಯ ಪ್ರೀತಿಯ ಗುಟ್ಟು ಇನ್ನೂ ರಹಸ್ಯವಾಗಿಯೇ ಇದೆ. ಆದರೆ, ಅಭಿಮಾನಿಗಳು ಮೆಚ್ಚಿರುವ ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವ ತೆರೆಮರೆಯ ವಿಡಿಯೋವೊಂದು ವೈರಲ್ ಆಗಿದೆ. 

Read Full Story

07:34 PM (IST) Feb 17

ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, ಡಾಲರ್ ಮೌಲ್ಯ ಏರಿಕೆ ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ!

ಜಾಗತಿಕ ರಾಜಕೀಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಏರಿಕೆಯಿಂದಾಗಿ ಚಿನ್ನದ ಬೆಲೆಗಳು ಒಂದು ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಫೆಬ್ರವರಿ 17 ರಂದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

Read Full Story

07:19 PM (IST) Feb 17

ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು - ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ, ಪ್ರಯಾಣಿಕರ ಪರದಾಟ!

ಬಿಡದಿ ರೈಲ್ವೆ ನಿಲ್ದಾಣದ ಬಳಿ ಗೂಡ್ಸ್ ರೈಲೊಂದು ತಾಂತ್ರಿಕ ಕಾರಣಗಳಿಂದ ಹಳಿ ತಪ್ಪಿದ ಪರಿಣಾಮ, ಬೆಂಗಳೂರು ಮತ್ತು ಮೈಸೂರು ನಡುವಿನ ರೈಲು ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ. ಈ ಘಟನೆಯಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದ್ದು, ರೈಲ್ವೆ ಇಲಾಖೆ ದುರಸ್ತಿ ಕಾರ್ಯ ಕೈಗೊಂಡಿದೆ.
Read Full Story

06:18 PM (IST) Feb 17

ಕೋಲಾರದಲ್ಲಿ ಜಗತ್ತಿನ 4ನೇ ಅತಿದೊಡ್ಡ ಹೆಲಿಕಾಪ್ಟರ್ ಘಟಕ; 20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಎಂ.ಬಿ. ಪಾಟೀಲ

ಫ್ರಾನ್ಸ್‌ನ 'ಏರ್ ಬಸ್' ಮತ್ತು ಭಾರತದ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್' ಸಹಭಾಗಿತ್ವದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಘಟಕ ಕೋಲಾರದಲ್ಲಿ ಚಾಲನೆಗೊಂಡಿದೆ. ಪ್ರಧಾನಿ ಮೋದಿಯಿಂದ ಉದ್ಘಾಟನೆಗೊಂಡ ಈ ಘಟಕ, ಮುಂದಿನ 20 ವರ್ಷಗಳಲ್ಲಿ 500 ಹೆಲಿಕಾಪ್ಟರ್‌ ತಯಾರಿಸುವ ಗುರಿ ಹೊಂದಿದೆ.

Read Full Story

06:08 PM (IST) Feb 17

ಮುಡಾ ಮಾಜಿ ಆಯುಕ್ತ ಒಬ್ಬ ಕರೆಪ್ಟ್ ಬಾಸ್ಟೆರ್ಡ್ ಅಧಿಕಾರಿ, ಸಿದ್ದರಾಮಯ್ಯ ಇದು ನಿನ್ನ ಆಡಳಿತನಾ? ಏಕವಚನದಲ್ಲಿ ವಿಶ್ವನಾಥ್ ಕಿಡಿ

ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಮುಂಬಡ್ತಿ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಯನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

05:16 PM (IST) Feb 17

ಅದೊಂದು ಸುಳಿವಿನಿಂದ ಸಿಕ್ಕಿಬಿದ್ಲು! ಬಾಯ್‌ಫ್ರೆಂಡ್‌ ಸೇರಲು ಖತರ್‌ನಾಕ್ ಪ್ಲಾನ್ ಮಾಡಿದ್ದ ಪ್ರಿಯಾಂಕಾ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ

ಸಂಬಂಧಿಕರ ಮದುವೆಗೆಂದು ಹೋಗಿ ನಾಪತ್ತೆಯಾಗಿದ್ದ ಪ್ರಿಯಾಂಕಳ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೆರೆಯ ಬಳಿ ಬಟ್ಟೆ ಬ್ಯಾಗ್ ಎಸೆದು ತಾನು ಸತ್ತಂತೆ ಬಿಂಬಿಸಿ, ಪ್ರಿಯಕರನೊಂದಿಗೆ ಪರಾರಿಯಾಗಲು ಆಕೆ ರೂಪಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆಯ ನಾಟಕ ಬಯಲಾಗಿದೆ.

Read Full Story

05:06 PM (IST) Feb 17

SSLC ಪರೀಕ್ಷೆ ಮಾರ್ಚ್ 18ರಿಂದ ಆರಂಭ, ಈ ಬಾರಿ ಹಲವು ಬದಲಾವಣೆಗಳು, ಫಲಿತಾಂಶದ ದಿನಾಂಕವೂ ಪ್ರಕಟ!

ರಾಜ್ಯದಲ್ಲಿ SSLC ಪರೀಕ್ಷೆ-1 ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದ್ದು, ಒಟ್ಟು 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.  ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Read Full Story

04:57 PM (IST) Feb 17

ಸಖತ್‌ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್‌ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?

Love Mocktail 3 movie: ಡಾರ್ಲಿಂಗ್‌ ಕೃಷ್ಣ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾದ `ಒಬ್ಬಂಟಿಯಾದೆ ನಾ' ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್‌ ಆಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಿರುವ ಸಿನಿಮಾ ‘ಲವ್ ಮಾಕ್ಟೇಲ್ 3’. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

04:50 PM (IST) Feb 17

ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ದಾರುಣ ಸಾವು; ಊಟಕ್ಕೆಂದು ಹೊರಟಾಗ ಗುದ್ದಿದ ಬುಲೆಟ್, ಚಿಕಿತ್ಸೆ ಫಲಿಸದೇ ದುರ್ಮರಣ!

ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಊಟಕ್ಕೆಂದು ರಸ್ತೆ ದಾಟುತ್ತಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ ಅವರಿಗೆ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Read Full Story

04:40 PM (IST) Feb 17

ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ, ಯಾವ ದಿನ ಯಾವ ಸಬ್ಜೆಕ್ಟ್ ಇಲ್ಲಿದೆ ಸಂಪೂರ್ಣ ಮಾಹಿತಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 28 ರಿಂದ ನಡೆಯಲಿದ್ದು, 7.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮುಂದಿನ ವರ್ಷದಿಂದ ಫೇಷಿಯಲ್ ಅಟೆಂಡೆನ್ಸ್ ಜಾರಿ.

Read Full Story

04:29 PM (IST) Feb 17

ಮಂಗಳೂರಿನಲ್ಲಿ ಕಟ್ಟಿದ 3 ಕೋಟಿ ಮನೆ ತಿಂಗಳಲ್ಲೇ ನಾಶ; ಮತ್ತೆ ಲಕ್ಷುರಿ ಮನೆ ಕಟ್ಟಿದ Madhyama Kutumba; ಖರ್ಚು?

ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮೂಲದ ಕುಟುಂಬವೊಂದು ಮನೆ ಕಟ್ಟಿತ್ತು. ಆದರೆ ಮನೆ ಕಟ್ಟಿದ ತಿಂಗಳಿಗೆ ಇಂಟಿರಿಯರ್‌ ಎಲ್ಲವೂ ಫಂಗಸ್‌ ಆಗಿ, ಹಾಳಾಗಿತ್ತು. ಈಗ ಮತ್ತೆ ಹೊಸದಾಗಿ ಇಂಟಿರಿಯರ್‌ ಡಿಸೈನ್‌ ಮಾಡಿ ಮನೆ ಕಟ್ಟಿಸಿದ್ದಾರೆ.

 

Read Full Story

04:24 PM (IST) Feb 17

ಜಗತ್ತಿನ ಪ್ರೇಮಿಗಳ ಲವ್ ಪ್ರಪೋಸ್‌ಗೆ ಹೂವು ಕೊಟ್ಟ ಕನ್ನಡಿಗರು; 6 ಕೋಟಿ ಗುಲಾಬಿ ರಫ್ತು ಮಾಡಿದ ಕೆಂಪೇಗೌಡ ಏರ್‌ಪೋರ್ಟ್!

ಪ್ರೇಮಿಗಳ ದಿನದ ಸೀಸನ್‌ನಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವು 60 ದಶಲಕ್ಷಕ್ಕೂ ಹೆಚ್ಚು ಗುಲಾಬಿಗಳನ್ನು ರಫ್ತು ಮಾಡಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 64ರಷ್ಟು ಏರಿಕೆ ಕಂಡಿದ್ದು, ಸಿಂಗಾಪುರ ಅಂತರಾಷ್ಟ್ರೀಯವಾಗಿ ಮತ್ತು ದೆಹಲಿ, ಕೋಲ್ಕತ್ತಾ ದೇಶೀಯ ಮಾರುಕಟ್ಟೆಗಳಾಗಿವೆ.

Read Full Story

04:00 PM (IST) Feb 17

ಉದ್ಯಮಿ ಸಿಜೆ ರಾಯ್ ಸಾವಿನ ನಿಗೂಢ ಕಾರಣಕ್ಕೆ ಶೀಘ್ರ ತೆರೆ, ಅಂತಿಮ ಹಂತದತ್ತ ಎಸ್ಐಟಿ ತನಿಖೆ, ವರದಿ ಸಲ್ಲಿಕೆಗೆ ಸಿದ್ಧತೆ

ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಪ್ರಕರಣದ ಎಸ್ಐಟಿ ತನಿಖೆ ಅಂತಿಮ ಹಂತದಲ್ಲಿದೆ. ಐಟಿ ದಾಳಿ, ವ್ಯವಹಾರ, ಮತ್ತು ವೈಯಕ್ತಿಕ ಒತ್ತಡ ಸೇರಿದಂತೆ ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಕೆಯಾಗಲಿದೆ. ಈ ವರದಿ ಸಲ್ಲಿಕೆಯಾದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ.

Read Full Story

03:36 PM (IST) Feb 17

ಹೊಸ ಸೀರಿಯಲ್‌ ಮರ್ಯಾದೆ ರಾಮಣ್ಣ ಪ್ರಸಾರ; ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗುತ್ತೆ?

Maryade Ramanna Serial Kannada: ಇತ್ತೀಚೆಗೆ ಹೊಸ ಧಾರಾವಾಹಿಗಳು ಆರಂಭ ಆಗುತ್ತಿವೆ. ಜಗದ್ಧಾತ್ರಿ ಹಾಗೂ ಕೃಷ್ಣರುಕ್ಕು ಧಾರಾವಾಹಿಗಳು ಬರಲಿವೆ ಎನ್ನಲಾಗಿತ್ತು. ಈಗ ಇನ್ನೊಂದು ಸೀರಿಯಲ್‌ ಕೂಡ ಬರಲಿದ್ದು, ಪ್ರೋಮೋ ರಿಲೀಸ್‌ ಆಗಿದೆ. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ.

 

Read Full Story

03:27 PM (IST) Feb 17

ಶಾಸಕರ ಫಾರಿನ್ ಟೂರ್ ಖಾಸಗಿ ಎಂದ ಯತೀಂದ್ರ; ಇಲ್ಲ ಕಣಣ್ಣೋ ಇದು ಸರ್ಕಾರದ ಇಲಾಖಾ ಅಧ್ಯಯನ ಎಂದ ಪ್ರದೀಪ್ ಈಶ್ವರ!

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಗೊಂದಲ ಸೃಷ್ಟಿಯಾಗಿದೆ. ಇದು ವೈಯಕ್ತಿಕ ಪ್ರವಾಸ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರೆ, ಇದು ಮಜಾ ಮಾಡುವುದಕ್ಕಲ್ಲ, ಇಲಾಖೆಯ ಅಧ್ಯಯನ ಪ್ರವಾಸ ಎಂದು ಶಾಸಕ ಪ್ರದೀಪ್ ಈಶ್ವರ್ ಸಮರ್ಥಿಸಿಕೊಂಡಿದ್ದಾರೆ.

Read Full Story

03:07 PM (IST) Feb 17

ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ

ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾಭಾರತಿ ಭಟ್‌ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಇವರ ಮದುವೆ ಮೇಕಪ್‌ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗ್ತಿದೆ. ಅಲ್ಲಿ ಬಂದ ನೆಗೆಟಿವ್‌ ಕಾಮೆಂಟ್‌ಗೆ ಗೀತಾಭಾರತಿ ಭಟ್‌ ತಿರುಗೇಟು ನೀಡಿದ್ದರು.

 

Read Full Story

02:55 PM (IST) Feb 17

ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ A-1 ಆರೋಪಿ ಪವಿತ್ರಾ ಗೌಡ, ಮಗಳ ಪರೀಕ್ಷೆಯ ಕಾರಣ ನೀಡಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ತಾಯಿಯ ಅನಾರೋಗ್ಯದ ಕಾರಣ ನೀಡಿದ್ದರೂ ಜಾಮೀನು ಸಿಕ್ಕಿರಲಿಲ್ಲ.  

Read Full Story

02:43 PM (IST) Feb 17

ದೇವನಹಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ? ಒಂದೇ ಕುಟುಂಬದ ಹಲವರ ಹೆಸರಲ್ಲಿ ನೂರಾರು ಎಕ್ರೆ ಜಮೀನು

ದೇವನಹಳ್ಳಿ ತಾಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು, ಮಾಜಿ ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾವಿರಾರು ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

Read Full Story

02:39 PM (IST) Feb 17

ರಾಜ್ಯದ ಕೈ ಶಾಸಕರು ಹಾಗೂ ಸಚಿವರ ವಿದೇಶ ಪ್ರವಾಸ - ಎಲ್ಲರ ಗುಟ್ಟು ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ!

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸವು ಸಂಪೂರ್ಣ ವೈಯಕ್ತಿಕವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತಮ್ಮ ಮೇಲಿನ 'ಟ್ರಾನ್ಸ್‌ಫರ್ ಮಿನಿಸ್ಟರ್' ಆರೋಪವನ್ನು ತಳ್ಳಿಹಾಕಿದ ಅವರು, ಸಿಎಂ ಬದಲಾವಣೆ ಚರ್ಚೆಯಿಂದ ಅಂತರ ಕಾಯ್ದುಕೊಂಡರು.

Read Full Story

02:27 PM (IST) Feb 17

ಬೆಂಗಳೂರಿನ ಹಲವೆಡೆ 50 ಕೋಟಿಯ ಡ್ರಗ್ಸ್ ಬೇಟೆ - ವಿದೇಶಿ ಫುಟ್ಬಾಲ್ ಆಟಗಾರ ಸೇರಿ ಕೇರಳಿಗರು ಅರೆಸ್ಟ್!

ಬೆಂಗಳೂರು ಪೊಲೀಸರು ನಗರದಾದ್ಯಂತ ಸರಣಿ ಕಾರ್ಯಾಚರಣೆ ನಡೆಸಿ, ವಿದೇಶಿ ಪ್ರಜೆಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸುಮಾರು 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಸಾಗಾಟ ಬೆಳಕಿಗೆ ಬಂದಿದೆ.

Read Full Story

02:18 PM (IST) Feb 17

ಜೈಲಿನಲ್ಲಿ ದಚ್ಚು ಬರ್ತ್‌ಡೇ; ಅತ್ತ ಮನೆ ಬಾಗಿಲಿಗೆ ಕೈಮುಗಿದು ಅಭಿಮಾನ ತೋರಿದ ಆಂಟಿ, ಪೊಲೀಸರಿಗೆ ಆವಾಜ್‌!

Actor Darshan Thoogudeepa: ನಟ ದರ್ಶನ್‌ ತೂಗುದೀಪ ಜನ್ಮದಿನದ ಪ್ರಯುಕ್ತ ಅವರ ಮನೆ ಮುಂದೆ ಅಭಿಮಾನಿಗಳು ಸೇರಿದ್ದಾರೆ. ಅಷ್ಟೇ ಅಲ್ಲದೆ ಆಂಟಿಯೋರ್ವರು ಬಾಯಿಗೆ ಬಂದ ಹಾಗೆ ಬೈದು, ಪೊಲೀಸರಿಗೆ ಅವಾಜ್‌ ಹಾಕಿ ಹೋಗಿದ್ದಾರೆ.

 

Read Full Story

01:30 PM (IST) Feb 17

US Ambassador - ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಮೆರಿಕ ರಾಯಭಾರಿ; ಬೆಂಗಳೂರೇ ಇಂಡೋ-ಯುಎಸ್ ಸಂಬಂಧದ ಕಿರೀಟ!

ಭಾರತದಲ್ಲಿರುವ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು. ಅಲ್ಲದೇ  ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾಗಿ, ಸೇನೆಯ ವೆಸ್ಟರ್ನ್ ಕಮಾಂಡ್‌ಗೆ ಭೇಟಿ ನೀಡಿ  ರಕ್ಷಣಾ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು.

Read Full Story

01:29 PM (IST) Feb 17

ಸ್ವಿಗ್ಗಿ, ಜೊಮಾಟೋಗೆ ರಾಜ್ಯ ಸರ್ಕಾರದ ಬರೆ, ಶೇ.1ರಷ್ಟು ಕಲ್ಯಾಣ ಶುಲ್ಕ ವಿಧಿಸಲು ಅಧಿಸೂಚನೆ!

karnataka govt notifies 1 percent welfare fee ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಶುಲ್ಕವನ್ನು ಅಧಿಸೂಚಿಸಿದೆ. ಇದರ ಅಡಿಯಲ್ಲಿ, ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್‌ನಂತಹ ಅಗ್ರಿಗೇಟರ್‌ಗಳು ಪ್ರತಿ ವಹಿವಾಟಿನ ಮೇಲೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

Read Full Story

01:27 PM (IST) Feb 17

ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!

Actor Shine Shetty Movie: ರಂಗಸ್ಥಳ ಸ್ಟುಡಿಯೋಸ್ ನಿರ್ಮಾಣದ ಹೊಸ ಕನ್ನಡ ಸಿನಿಮಾ ಶಂಕರಾಭರಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶೈನ್‌ ಶೆಟ್ಟಿ, ದಿವಾಕರ್‌ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

 

Read Full Story

01:21 PM (IST) Feb 17

ಶಿವಮೊಗ್ಗ ರೈತನ ಸೇಡು - ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿದ ಸರ್ಕಾರಿ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ!

ಲಂಚ ಪಡೆದು ಜೈಲು ಪಾಲಾದ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿಯನ್ನು ನೋಡಲು ರೈತ ವಿಶುಕುಮಾರ್ ಜೈಲಿಗೆ ಭೇಟಿ ನೀಡಿದ್ದಾರೆ. ತನ್ನ ಶ್ರೀಗಂಧದ ಮರಕ್ಕೆ ಕಡಿಮೆ ಬೆಲೆ ನಿಗದಿಪಡಿಸಿದ್ದ ಅಧಿಕಾರಿಗೆ ಸೊಳ್ಳೆಬತ್ತಿ, ಬ್ರೆಡ್ ನೀಡಿ, ವ್ಯಂಗ್ಯವಾಗಿ ಪ್ರತಿಭಟಿಸಿ, ಸಾರ್ವಜನಿಕವಾಗಿ ಮಾನ ಹರಾಜು ಹಾಕಿದ್ದಾರೆ.

Read Full Story

12:54 PM (IST) Feb 17

ಕೊಪ್ಪಳದಲ್ಲಿ ತಪ್ಪಿದ ಭಾರಿ ಅನಾಹುತ - ಕಾರ್ಯಕ್ರಮಕ್ಕೂ ಮುನ್ನವೇ ನೆಲಕ್ಕುರುಳಿದ ಗ್ಯಾರಂಟಿ ಉತ್ಸವದ ಬೋರ್ಡ್!

ಕೊಪ್ಪಳದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 'ಗ್ಯಾರಂಟಿ ಉತ್ಸವ'ದ ವೇಳೆ, ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬೃಹತ್ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನೂರಾರು ಜನರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story

12:45 PM (IST) Feb 17

ಮಕ್ಕಳು ಕಲ್ಲು ತೂರಿಲ್ಲ, ಪಾನಿಪುರಿ ತಿನ್ನೋಕೆ ಹೋಗಿದ್ರು - ಅಪ್ರಾಪ್ತರ ಕುಟುಂಬದ ಹೇಳಿಕೆ

ಚಿಕ್ಕಮಗಳೂರಿನ ವಿಜಯಪುರದಲ್ಲಿ ನಡೆದ ಕಲ್ಲು ತೂರಾಟದ ನಂತರ ಕೋಮು ಘರ್ಷಣೆ ನಡೆದಿದ್ದು, ಇಬ್ಬರು ಅಪ್ರಾಪ್ತರು ಹಲ್ಲೆಗೊಳಗಾಗಿದ್ದಾರೆ. ಪಾನಿಪುರಿ ತಿನ್ನಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತರು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ.

Read Full Story

12:43 PM (IST) Feb 17

ಶೂ ಒಳಗಡೆ ಮನೆ ಬೀಗ ಇಟ್ಟು ಹೋಗುತ್ತೀರಾ? ಎಚ್ಚರವಿರಲಿ, ಮನೆ ಬಾಡಿಗೆ ಹುಡುಕಿಕೊಂಡು ಬಂದು ಕೀ ನೋಡಿ ಕಳ್ಳನಾದವನ ಕಥೆ!

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್, ಶೂ ರ್ಯಾಕ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದಾನೆ. ಕಳ್ಳತನದ ನಂತರ ಪಶ್ಚಾತ್ತಾಪದಿಂದ ದೇವಸ್ಥಾನಕ್ಕೆ ತೆರಳಿದ್ದ ಆರೋಪಿಯನ್ನು ಪೊಲೀಸರು ಸಿಸಿಟಿವಿ ಸಹಾಯದಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ.

Read Full Story

12:32 PM (IST) Feb 17

ಮಹಿಳೆಯ ಮಾಂಗಲ್ಯ ಕಿತ್ತು ಪರಾರಿ ಯತ್ನ; 1 ಕಿಮೀ ಚೇಸ್ ಮಾಡಿ ಕಳ್ಳನ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸ್!

ಬೆಂಗಳೂರಿನಲ್ಲಿ ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನನ್ನು, ಪೊಲೀಸ್ ಕಾನ್ಸ್‌ಟೇಬಲ್ ಹಣಮಂತ ಪುಟಾಣಿ ಸುಮಾರು ಒಂದು ಕಿಲೋಮೀಟರ್ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತ ಆರೋಪಿ ಸೈಯದ್ ಜಾಫರ್‌ನಿಂದ 6 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

12:02 PM (IST) Feb 17

NIMHANS - ದೇಶದ ಮೊದಲ ಸಂಯೋಜಿತ ಚಿಕಿತ್ಸಾ ವಿಭಾಗ ಈಗ ನಿಮ್ಹಾನ್ಸ್‌ನಲ್ಲಿ! ಈ ಹೊಸ ವಿಭಾಗದ ವಿಶೇಷತೆ ಏನು?

ನಿಮ್ಹಾನ್ಸ್‌ನ ಸಂಯೋಜಿತ ಚಿಕಿತ್ಸಾ ವಿಭಾಗವು ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಯನ್ನು ಸಮನ್ವಯಗೊಳಿಸಿ ಮನೋರೋಗ ಹಾಗೂ ನರರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ. ದೇಶದಲ್ಲೇ ಮೊದಲನೆಯದಾದ ಈ ವಿಭಾಗದಲ್ಲಿ, ಕಳೆದ ಐದು ವರ್ಷಗಳಲ್ಲಿ 10,000ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

Read Full Story

11:54 AM (IST) Feb 17

ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ

ಕಿಚ್ಚನ ಪ್ರೀತಿಯ ಮಡದಿ ಪ್ರಿಯಾ ಸುದೀಪ್ ಎಲ್ಲದ್ರಲ್ಲೂ ಎತ್ತಿದ ಕೈ. ಸಿನಿಮಾ, ಕ್ರಿಕೆಟ್ ನಲ್ಲಿ ಮಾತ್ರವಲ್ಲ ಕಾರ್ ರೇಸ್ ನಲ್ಲೂ ಆಸಕ್ತಿ ಹೊಂದಿರುವ ಪ್ರಿಯಾ ಸುದೀಪ್ ಗೆ ಇಷ್ಟವಾಗುವ ಕಾರ್ ಯಾವ್ದು ಗೊತ್ತಾ?

Read Full Story

11:39 AM (IST) Feb 17

ಪ್ರತ್ಯೇಕ ಅಗ್ನಿ ಅವಘಡ - ದಾವಣಗೆರೆಯಲ್ಲಿ ಕಾರುಗಳು, ಇಳಕಲ್‌ನಲ್ಲಿ ಬೈಕ್‌ಗಳು ಸುಟ್ಟು ಕರಕಲು - ಲಕ್ಷಾಂತರ ರೂ. ಹಾನಿ!

ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತಗಳಲ್ಲಿ ಗ್ಯಾರೇಜ್‌ಗಳಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ. ದಾವಣಗೆರೆಯಲ್ಲಿ ಕಾರುಗಳು ಭಸ್ಮವಾದರೆ, ಇಳಕಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
Read Full Story

11:28 AM (IST) Feb 17

ಬಿಎಂಟಿಸಿ ನಿವೃತ್ತ ಕಂಡಕ್ಟರ್ ಗೆ ಕೋಟಿಗಟ್ಟಲೆ ಆಸ್ತಿ ತಂದ ಕುತ್ತು, ಇಂದಿರಾನಗರದಲ್ಲಿ ಮಕ್ಕಳಿಂದಲೇ ತಂದೆ ಹತ್ಯೆ!

ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ನಿವೃತ್ತ ಬಿಎಂಟಿಸಿ ಕಂಡಕ್ಟರ್ ಮುನಿಕೃಷ್ಣಪ್ಪ ಅವರನ್ನು ಅವರ ಮಕ್ಕಳೇ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

Read Full Story

11:15 AM (IST) Feb 17

ಇವತ್ತು ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದೆ ಆಸ್ಟ್ರೇಲಿಯಾ! ಕಾಂಗರೂ ಪಡೆಗೆ ಇದೆಂಥಾ ಪರಿಸ್ಥಿತಿ

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಹಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಇದೀಗ ಮಾಜಿ ನಾಯಕ ಆಸ್ಟ್ರೇಲಿಯಾ, ಇಂದು ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.

 

Read Full Story

10:58 AM (IST) Feb 17

Bengaluru - ಪೊಲೀಸ್ ಯುನಿಫಾರ್ಮ್ ಧರಿಸಿ 20 ಲಕ್ಷ ರು. ನಗದು, 500 ಗ್ರಾಂ ಚಿನ್ನಾಭರಣ ಸುಲಿಗೆ

ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ, ಪೊಲೀಸ್ ಸಮವಸ್ತ್ರ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿದ್ದಾರೆ. ಚಾಕು ತೋರಿಸಿ ದಂಪತಿಯನ್ನು ಬೆದರಿಸಿ, 20 ಲಕ್ಷ ರು. ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
Read Full Story

10:37 AM (IST) Feb 17

2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್‌ ಮಹೇಂದರ್‌ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ

Director S Mahendar: ಕನ್ನಡದ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಎಸ್‌ ಮಹೇಂದರ್‌ ಅವರು ನಟ ಕೂಡ ಹೌದು, ಅವರು ಎರಡನೇ ಮದುವೆಯಾಗಿ, ಮಗ ಕೂಡ ಇದ್ದಾನೆ. ಈಗ ಎಸ್‌ ಮಹೇಂದರ್‌ ಅವರು ಎರಡನೇ ಪತ್ನಿ ಹಾಗೂ ಮಗಳು ಗೌರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

 

Read Full Story

More Trending News