Chikkamagaluru: ಧಾರಾಕಾರ ಮಳೆಗೆ ನೆಲಕಚ್ಚಿದ ಕಾಫಿ, ಅಡಿಕೆ, ಕಾಳು ಮೆಣಸಿನ ಬೆಳೆಗಳು!

By Govindaraj S  |  First Published Jul 16, 2022, 11:36 PM IST

ಮಲೆನಾಡಿನಲ್ಲಿ ಸುರಿಯುತ್ತಿರುವ ರಣಮಳೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜು.16): ಮಲೆನಾಡಿನಲ್ಲಿ ಸುರಿಯುತ್ತಿರುವ ರಣಮಳೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಮಳೆಗೆ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಕಾಳು ಮೆಣಸಿನ ಬೆಳೆಗಳು  ನೆಲಕಚ್ಚುವ ಆತಂಕ ಎದುರಾಗಿದ್ದು ಮೊದಲೇ ಸಾಲದ ಸುಳಿಯಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Latest Videos

undefined

ನೆಲಕಚ್ಚಿದ ಕಾಫಿ ಅಡಿಕೆ, ಕಾಳು, ಮೆಣಸಿನ ಬೆಳೆಗಳು: ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಅಧಿಕ ಮಳೆ, ಶೀತದಿಂದ ಕೊಳೆ ರೋಗ ತಗುಲಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಮಳೆಯೊಂದಿಗೆ  ಶೀತವಾತಾವರಣ  ಕಾಳು ಮೆಣಸು ಹಾಗೂ ಅಡಕೆ ಬೆಳೆ ಮೇಲೆ  ಸಂಪೂರ್ಣ ಹಾಳಾಗಲಿದೆ. ಮಳೆಗೆ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕೊಳೆ ಕಾಫಿ ಗಿಡಗಳ ಎಲೆ ಉದುರುತ್ತಿವೆ. ಇದರ ಜತೆ ಈ ವರ್ಷ ಕಾಫಿ ಕಾಯಿಗಳು ಉದುರುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಇಳಿಜಾರು ಭಾಗದಲ್ಲಿರುವ ಕಾಫಿ ಚಿಕ್ಕಮಗಳೂರು ತೋಟಗಳಿಗೆ ಹೆಚ್ಚಿನ ಮಟ್ಟದ ಹಾನಿಯಾಗಿಲ್ಲ, ಕಾಫಿ ಫಸಲು ಕೂಡ ಹೆಚ್ಚು ಉದುರುತ್ತಿಲ್ಲ. ಆದರೆ ಸಮತಟ್ಟು ಜಾಗದಲ್ಲಿರುವ ಕಾಫಿ ತೋಟಗಳಲ್ಲಿನ ಫಸಲು ನೆಲಕಚ್ಚುತ್ತಿದೆ. ಕೆಲವು ಕಾಫಿ ಬೆಳೆಗಾರರು ಮುಂಜಾಗ್ರತಾ ಕ್ರಮವಾಗಿ ಕಾಫಿ ಗಿಡ ಹಾಗೂ ಕಾಳು ಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದ್ದಾರೆ.

Chikkamagaluru ಕಣ್ಣೆದುರೇ ಮನೆ ಕಳೆದಕೊಂಡ ಸಂತ್ರಸ್ಥರ ಕಣ್ಣೀರು, ವಸ್ತು, ಪುಸ್ತಕಗಳೆಲ್ಲವೂ ನೀರು ಪಾಲು

ವರ್ಷದ ಫಸಲು ಕೈತಪ್ಪುವ ಆತಂಕ: ಕವಿಯುತ್ತಿರುವ ಮಂಜು ಕಾಳುಮೆಣಸು ಹಾಗ ದುಷ್ಪರಿಣಾಮ ಬೀರುತ್ತಿದೆ. ಕಾಳು ಮೆಣಸು ತೆನೆ ತಿರುಗಿ ನೆಲಕಚ್ಚುತ್ತಿವೆ. ಬಹುತೇಕ ತೋಟಗಳಲ್ಲಿ ಫಸಲು ಹಲವು ರೋಗಗಳಿಗೆ ತುತ್ತಾಗಿ ಬೀಳುಗಲ್ಲಿ  ಇರುವ ಮೆಣಸಿನ ಬಳ್ಳಿಗಳು ಹವಾಮಾನವೈಪರಿತ್ಯದಿಂದ  ಹಾಳಾಗುತ್ತಿವೆ. ಅಡಕೆ ಮರದಲ್ಲಿ ಎಳೆಯ ಉದುರುತ್ತಿದ್ದು, ಈ ವರ್ಷದ ಫಸಲು ಕೈತಪ್ಪಲಿ  ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಮಲೆನಾಡು ದಿನೇ ದಿನೇ ನಲುಗುತ್ತಿದೆ. 

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಸಲಹೆ: ಜಿಲ್ಲೆಯಲ್ಲಿ  ಸುರಿಯುತ್ತಿರುವ ಮಳೆಯಿಂದ ಕಾಫಿ ಕಾಯಿ ಉದುರುವಿಕೆ ಹಾಗೂ ಮುಂಗಾರಿನ ಕೊಳೆ ರೋಗಗಳ ನಿರ್ವಹಣೆಯ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಸಲಹೆ ನೀಡಿದೆ. ಕಾಯಿ ಬೆಳವಣಿಗೆಯ ಆರಂಭಿಕ ಹಂತದಲ್ಲಿ ನಿರಂತರ ಮಳೆ  ಬೇರು ವಲಯದ ಜಲಾವೃತ ಮತ್ತು ತೇವಾಂಶ ಹೆಚ್ಚಿಸುವುದರ ಮೂಲಕ ನೆಟ್ ಸೀಟ್ ಸ್ಥಿತಿಯನ್ನು ಉಂಟು ಮಾಡಿ ಬಲಿಯುವ ಮುನ್ನವೇ ಕಾಯಿಗಳ ಉದುರುವಿಕೆಗೆ ಕಾರಣವಾಗುತ್ತದೆ. ಇಂತಹ ಬಿಕ್ಕಟ್ಟಿನ ವಾತಾವರಣವು, ಅರೇಬಿಕಾ ಹಾಗೂ ರೊಬಸ್ಟಾ ಕಾಫಿ ಎರಡರಲ್ಲೂ ಕೊಳೆ ರೋಗ ಹಾಗೂ ತೊಟ್ಟು ಕೊಳೆ ರೋಗಗಳು ಹೆಚ್ಚಾಗಲು ಅನುಕೂಲಕರವಾಗಿದೆ.

ಕೊನೆಗೂ ಚಿಕ್ಕಮಗಳೂರಿಗೆ ಉಸ್ತುವಾರಿ ನೇಮಿಸಿದ ಸರ್ಕಾರ, ಆದೇಶ ಆಗುತ್ತಿದ್ದಂತೆಯೇ ಜಿಲ್ಲೆಗೆ ದೌಡು

ಹೆಚ್ಚಿನ ನೀರು ಬಸಿದು ಹೋಗಲು ಚರಂಡಿಗಳು ಹಾಗೂ ತೊಟ್ಟಿಲು ಗುಂಡಿಗಳನ್ನು ಸ್ವಚ್ಛಗೊಳಿಸುವುದು,ಮುಂಗಾರಿನಲ್ಲಿ, ಬೇರು ವಲಯದಲ್ಲಿ ನೀರು ನಿಲ್ಲುವುದನ್ನು ತಡೆಯಲು ಹಾಗೂ ನೀರು ತ್ವರಿತವಾಗಿ ಆವಿಯಾಗಲು, ಗಿಡಗಳ ಬುಡದಿಂದ ದರಗನ್ನು ತೆಗೆದು ನಾಲ್ಕು ಗಿಡಗಳ ನಡುವೆ ರಾಶಿ ಮಾಡುವುದು, ಗಿಡಗಳಲ್ಲಿ ಸಾಕಷ್ಟು ಗಾಳಿಯಾಡಲು, ಗಿಡಗಳನೆತ್ತಿ ಬಿಡಿಸುವುದು ಹಾಗೂ ಪುಡಿ ಚಿಗುರು ಮತ್ತು ಕಂಬ ಚಿಗುರುಗಳನ್ನು ತೆಗೆಯುವುದು, ಮುಂಗಾರಿನಲ್ಲಿ ಮಳೆಯು ಬಿಡುವು ಕೊಟ್ಟ ಸಮಯದಲ್ಲಿ, ಬೇರುಗಳ ಕ್ರಿಯಾಶೀಲವಾಗಿಸಲು ಹಾಗೂ ಕಾಯಿಗಳು ಬೆಳೆಯಲು ಎಕರೆಗೆ ಒಂದುಚೀಲ ಯೂರಿಯಾ ಗೊಬ್ಬರವನ್ನು ಹಾಕುವ ಬಗ್ಗೆ ಸಲಹೆಯನ್ನು ನೀಡಲಾಗಿದೆ.

click me!