ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ: ಸಿಎಂ| ಮಸೂದೆಗೆ ಅಡ್ಡಿ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ| ಕಲಾಪ ಮುಂದಕ್ಕೆ: ಸಭಾಪತಿ ವಿರುದ್ಧ ಗರಂ
ಬೆಂಗಳೂರು(ಡಿ.12): ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಗೋಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ತಿನ ಕಲಾಪ ಸಲಹಾ ಸಮಿತಿಯಲ್ಲಿ ಡಿ.15ರವರೆಗೆæ ಸದನದ ಕಲಾಪ ನಡೆಸುವಂತೆ ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಸಭಾಪತಿಗಳು ಸಹ ಇದ್ದರು. ಆದರೆ ಈಗ ಏಕಾಏಕಿ ಸದನವನ್ನು ಸಭಾಪತಿಗಳು ಮುಂದೂಡಿಕೆ ಮಾಡಿದ್ದು ಸರಿಯಲ್ಲ. ಸದನ ಮುಂದೂಡುವ ಅಧಿಕಾರವೂ ಅವರಿಗಿಲ್ಲ. ಹಾಗಾಗಿ ಮಂಗಳವಾರ ಮತ್ತೆ ಸದನ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಈ ಮೂಲಕ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಕ್ಕೆ ಕೊನೆಯ ಪ್ರಯತ್ನ ನಡೆಸುವ ಪರೋಕ್ಷ ಸುಳಿವು ನೀಡಿದರು.
undefined
ಗೋಹತ್ಯೆ ನಿಷೇಧ ಕಾಯ್ದೆ ಏಕೆ ಬೇಕು?
‘ಶ್ರದ್ಧಾ ಭಕ್ತಿಯಿಂದ ಗೋ ಮಾತೆಗೆ ಪೂಜೆ ಸಲ್ಲಿಸಿದ್ದೇವೆ. ಹಿಂದೂ ಧರ್ಮದಲ್ಲಿ ಗೋವುಗಳನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುವುದು ಜಗತ್ತಿಗೆ ಗೊತ್ತಿರುವ ಸಂಗತಿ. ಕೃಷಿ ಪ್ರಧಾನ ಭಾರತದಲ್ಲಿ ಪಶು ಸಂಗೋಪನೆ ಕೃಷಿಕರಿಗೆ ಆದಾಯ ನೀಡುವ ಉಪ ಕಸುಬಾಗಿದೆ. ಕೃಷಿ ಚಟುವಟಿಕೆಗಳಿಗೆ ರಾಸುಗಳನ್ನು ಬಳಸಲಾಗುತ್ತದೆ. ಹೀಗಾಗಿ ನಮ್ಮ ರಾಜ್ಯದ ಗೋ ಸಂಪತ್ತಿನ ರಕ್ಷಣೆಗೆ ಸರ್ಕಾರ ಕಾನೂನು ಜಾರಿಗೊಳಿಸಿದೆ’ ಎಂದು ಹೇಳಿದರು.
'ಮೋದಿ ಸರ್ಕಾರ ಬಂದ್ಮೇಲೆ ದನದ ಮಾಂಸ ಹೆಚ್ಚಳ, ಬಿಜೆಪಿ ಬೆಂಬಲಿಗರಿಂದಲೇ ರಫ್ತು'
ಸರ್ಕಾರವೇ ಖರೀದಿಸಲಿ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುನ್ನ ಸರ್ಕಾರ ಎಲ್ಲ ಅನುತ್ಪಾದಕ ಜಾನುವಾರು ಖರೀದಿಸಬೇಕು ಅಥವಾ ಅವುಗಳ ಸಾಕಣೆ ವೆಚ್ಚ ನೀಡಬೇಕು. ಇದಕ್ಕೆ ಸಿದ್ಧವಿದ್ದರೆ ಅಧಿವೇಶನ ಕರೆಯಲಿ, ನಾವು ಭಾಗವಹಿಸುತ್ತೇವೆ. ಇಲ್ಲವಾದಲ್ಲಿ ಈ ಕಾಯ್ದೆಯ ವಿರುದ್ಧ ತಾಲೂಕು ಮಟ್ಟದಲ್ಲಿ ಜನಜಾಗೃತಿ ಆಂದೋಲನ ನಡೆಸುತ್ತೇವೆ.
- ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರು