Breaking: ಮುಡಾ ಕೇಸ್ ಸಿಬಿಐ ತನಿಖೆ ಆಗುತ್ತಾ? ಡಿಸೆಂಬರ್ 10ಕ್ಕೆ ನಿರ್ಧಾರ

By Santosh Naik  |  First Published Nov 26, 2024, 11:21 AM IST

ಮುಡಾ ಕೇಸ್‌ನಲ್ಲಿ ಸಿಬಿಐ ತನಿಖೆ ಆಗುತ್ತಾ ಇಲ್ವಾ ಅನ್ನೋದು ಡಿಸೆಂಬರ್ 10 ರಂದು ನಿರ್ಧಾರವಾಗಲಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ಸಿಬಿಐ ತನಿಖೆ ಕೋರಿಕೆ ಅರ್ಜಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಲಾಗಿದೆ. ಲೋಕಾಯುಕ್ತ ಪೊಲೀಸರು ಮತ್ತು ಇಡಿ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.


ಬೆಂಗಳೂರು (ನ.26): ಮುಡಾ ಕೇಸ್‌ನಲ್ಲಿ ಸಿಬಿಐ ತನಿಖೆ ಶುರು ಮಾಡಲಿದ್ಯಾ? ಇಲ್ವಾ? ಅನ್ನೋದು ಡಿಸೆಂಬರ್‌ 10 ರಂದು ನಿರ್ಧಾರವಾಗಲಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್‌ 10ಕ್ಕೆ ಮುಂದೂಡಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಈಗಾಗಲೇ ಹಲವು ಏಜೆನ್ಸಿಗಳು ತನಿಖೆ ನಡೆಯುತ್ತಿದೆ. ಒಂದೆಡೆ ಇಡಿ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಲೋಕಾಯುಕ್ತ ಪೊಲೀಸರ ತನಿಖೆ ಕೂಡ ನಡೆಯುತ್ತಿದೆ. ಈ ನಡುವೆ ಪ್ರಕರಣ ಸಿಬಿಐಗೆ ಕೋರಿದ್ದ ಅರ್ಜಿ ಇಂದು ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬಂದಿತ್ತು.ಕೋರ್ಟ್ ಗೆ  ಲೋಕಾಯುಕ್ತ ಎಸ್ಪಿ ಉದೇಶ್ ಕೂಡ ಆಗಮಿಸಿದ್ದರು. ತನಿಖಾ ವರದಿ ಸಲ್ಲಿಕೆ ಸೂಚನೆ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಲೋಕಾಯುಕ್ತ ವಕೀಲ ವೆಂಕಟೇಶ ಅರಬಟ್ಟಿ ಅವರಿಂದ ವರದಿ ಸಲ್ಲಿಕೆ ಆಗಬೇಕಿತ್ತು.

Bengaluru: ವೈಟ್‌ಫೀಲ್ಡ್‌-ಕೆಂಗೇರಿ ನಡುವಿನ 'ಪಾರಿಜಾತ' ಸಬರ್ಬನ್‌ ರೈಲು ಪ್ರಾಜೆಕ್ಟ್‌ ಬಹುತೇಕ ರದ್ದು!

Latest Videos

undefined

ಈ ವಿಚಾರಣೆಯಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಅರ್ಜಿಯನ್ನು ಡಿಸೆಂಬರ್‌ 10ಕ್ಕೆ ಮುಂದೂಡಿಕೆ ಮಾಡಿದೆ. ಡಿಸೆಂಬರ್‌ 10ರಂದೇ ವಾದ-ಪ್ರತಿವಾದ ನಡೆಯಲಿದೆ. ಒಂದೇ ದಿನದಲ್ಲಿ ವಾದ-ಪ್ರತಿವಾದ ಮುಗಿಸುವಂತೆ ಪೀಠ ಸೂಚನೆ ನೀಡಿದೆ. ತನಿಖಾ ವರದಿಯನ್ನು ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಕೆ ಮಾಡಬೇಕಿತ್ತು. ಆದರೆ, ಲೋಕಾಯುಕ್ತ ಕೋರ್ಟ್‌ಗೆ ಇದನ್ನು ಸಲ್ಲಿಕೆ ಮಾಡಿಲ್ಲ ಎಂದು ವರದಿಯಾಗಿದೆ.

Bengaluru: ರಾಜಧಾನಿಯಲ್ಲಿ ಸಿಗ್ತಿಲ್ಲ ಜಾಗ, 250 ಮೀಟರ್‌ ಎತ್ತರದ ಸ್ಕೈಡೆಕ್‌ ಸ್ಥಳ ಮತ್ತೆ ಬದಲು?

ಈ ಪ್ರಕರಣವನ್ನು ಸಿಬಿಐಗೆ ವರ್ಗ ಮಾಡಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಕೂಡ ಅರ್ಜಿ ಹಾಕಿದ್ದರು. ಆ ಅರ್ಜಿಯನ್ನೂ ಕೂಡ ಹೈಕೋರ್ಟ್‌ ಮುಂದೂಡಿಕೆ ಮಾಡಿದೆ. 

click me!