ಕೊರೋನಾ ಗುಣಮುಖರ ಮೇಲೆ ಪಟಾಕಿ ಗಂಭೀರ ಪರಿಣಾಮ

Kannadaprabha News   | Asianet News
Published : Nov 03, 2021, 06:35 AM IST
ಕೊರೋನಾ ಗುಣಮುಖರ ಮೇಲೆ ಪಟಾಕಿ ಗಂಭೀರ ಪರಿಣಾಮ

ಸಾರಾಂಶ

ಕೊರೋನಾ ಮೂರನೇ ಅಲೆ ಬರುವ ಆತಂಕದ ನಡುವೆ ಬಂದಿರುವ ಬೆಳಕಿನ ಹಬ್ಬ ದೀಪಾವಳಿ  ದೀಪಾವಳಿ ಸಂಭ್ರಮಕ್ಕಾಗಿ ಹಚ್ಚುವ ಪಟಾಕಿ ಕೊರೋನಾ ಸೋಂಕು ತಗುಲಿ ಗುಣಮುಖರಾಗಿರುವವರ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ

 ಬೆಂಗಳೂರು(ಅ.03):  ಕೊರೋನಾ (Covid) ಮೂರನೇ ಅಲೆ ಬರುವ ಆತಂಕದ ನಡುವೆ ಬಂದಿರುವ ಬೆಳಕಿನ ಹಬ್ಬ ದೀಪಾವಳಿ (Deepavali) ಸಂಭ್ರಮಕ್ಕಾಗಿ ಹಚ್ಚುವ ಪಟಾಕಿ (Crackers) ಕೊರೋನಾ ಸೋಂಕು ತಗುಲಿ ಗುಣಮುಖರಾಗಿರುವವರ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು (expert Doctors) ಎಚ್ಚರಿಸಿದ್ದಾರೆ.

ಪಟಾಕಿಯಿಂದ ಬೆಳಕು (Light) ಮತ್ತು ಶಬ್ಧ ಬರಲು ಕಾರ್ಬನ್‌ ಆಕ್ಸೈಡ್‌ (Carbon oxide) , ಲೆಡ್‌, ಕ್ರೋಮಿಯಂ  ಮತ್ತು ನೈಟ್ರೈಡ್‌ ಆಕ್ಸೈಡ್‌ ಸೇರಿದಂತಹ ಹಲವು ವಿಷಕಾರಕ ರಾಸಾಯನಿಕ (Poisonous Chemicals ) ಅಂಶಗಳನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಅಂಶಗಳ ಸುಟ್ಟು ಹೊರಬರುವ ಹೊಗೆ ಮನುಷ್ಯರ ಆರೋಗ್ಯಕ್ಕೆ ತೀವ್ರ ತರದ ತೊಂದರೆ ಉಂಟು ಮಾಡಲಿದೆ. ಅದರಲ್ಲೂ ಕೊರೋನಾ ಸೋಂಕಿನಿಂದ ಗುಣಮುಖರಾದವರ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.

ದೀಪಾವಳಿ ಹಬ್ಬದ ವೇಳೆ ಅಸ್ತಮಾ ಇರುವವರು ಏನು ಮಾಡಬೇಕು?

ಪ್ರಸ್ತುತ ವಿಶ್ವಾದ್ಯಂತ ಕೊರೋನಾ ಮೂರನೇ ಅಲೆ ಬರುವ ಮನ್ಸೂಚನೆ ಇದೆ. ಕೆಲವು ದೇಶಗಳಲ್ಲಿ ಈಗಾಗಲೇ ಮೂರನೇ ಅಲೆ ಕಾಣಿಸಿಕೊಳ್ಳುವ ಲಕ್ಷಣ ಕಂಡು ಬಂದಿದೆ. ಇಂತಹ ಪರಿಸ್ಥಿತಿ ನಡುವೆ ಬಳಕೆ ಮೂರನೇ ಅಲೆಯಲ್ಲಿ ಹೆಚ್ಚು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇರುತ್ತದೆ ಎಂದು ಇಎಸ್‌ಐ ಆಸ್ಪತ್ರೆಯ ವೈದ್ಯ ಡಾ.ಭೀಮರಾಯ ದೇವರಮನಿ (Dr Bhimaraya Devaramani) ಅಭಿಪ್ರಾಯ ಪಟ್ಟಿದ್ದಾರೆ.

ಉಸಿರು ನಾಳ ಸಂಕುಚಿತ?:

ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿಗೆ ಶ್ವಾಸಕೋಶಕ್ಕೆ ಹಾನಿಯಾಗಿದೆ. ಇದೀಗ ವಿಷಕಾರಿಕ ಹೊಗೆ ಸೇವನೆ ಮಾಡಿದಲ್ಲಿ ಉಸಿರು ನಾಳ ಸಂಕುಚಿತಗೊಳ್ಳುವ ಸಾಧ್ಯೆತೆಯಿದ್ದು, ಉಸಿರಾಟದ ಸಮಸ್ಯೆ ಎದುರಾಗಲಿದೆ (Breating Issues). ಜೊತೆಗೆ, ಕೆಮ್ಮು ಹೆಚ್ಚಳವಾಗಿ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಜತೆಗೆ ದೀರ್ಘ ಕಾಲದಿಂದ ಅಸ್ತಮ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಸಿರು ಕಟ್ಟುವುದು, ಚರ್ಮ ಕೆರೆತ, ಗಂಟಲಲ್ಲಿ ಕಿರಿಕಿರಿ ಉಂಟಾಗಲಿದೆ. ವಿಷಕಾರಕ ಹೊಗೆಯ ದೀರ್ಘಕಾಲದ ಸೇವನೆಯಿಂದ ಚರ್ಮ ಮತ್ತು ಶ್ವಾಸಕೋಶ ಕ್ಯಾನ್ಸ್‌ರ್‌ ಬರುವುದಕ್ಕೆ ಅವಕಾಶವಿದೆ. ಈ ಎಲ್ಲ ಕಾರಣಗಳಿಂದ ಪಟಾಕಿ ಬಳಕೆ ನಿಯಂತ್ರಣದಲ್ಲಿಡಬೇಕಾದ ಅಗತ್ಯವಿದೆ ಎಂದು ವಿವರಿಸಿದರು.

ಕೊರೋನಾ ಕೇಸ್‌ ಹೆಚ್ಚಾಗಲು ಅವಕಾಶ:

ಸದ್ಯ ರಾಜ್ಯದಲ್ಲಿ (State) ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಪಟಾಕಿ ಹೊರಚೆಲ್ಲುವ ಹೊಗೆ ಗಾಳಿಯಲ್ಲಿ ಮಿಶ್ರಣವಾಗಿ ಮಂಜಿನ ರೂಪದಲ್ಲಿ(Fog) ನಿರ್ಮಾಣವಾಗಲಿದೆ. ಈ ಗಾಳಿ ಉಸಿರಾಡುವುದರಿಂದ ಕೊರೋನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲು ಅವಕಾಶ ನೀಡಿದಂತಾಗುತ್ತದೆ. ಜೊತೆಗೆ, ಗಾಳಿಯಿಂದ ಹರಡುವ ರೋಗಗಳು ಪ್ರಮಾಣವೂ ವೃದ್ಧಿಯಾಗಲಿದೆ ಎಂದು ಡಾ. ಭೀಮರಾಯ ತಿಳಿಸಿದ್ದಾರೆ.

ಪಟಾಕಿ ಬಳಕೆ ಹೀಗಿರಲಿ

* ಬಯಲು ಪ್ರದೇಶದಲ್ಲಿ ಪಟಾಕಿಗಳನ್ನು ಸಿಡಿಸಿ

* ಗಾಳಿಯನ್ನು ಶುದ್ಧೀಕರಿಸುವ ಮಾಸ್ಕ್‌ ಧರಿಸಿ

* ಮಕ್ಕಳು, ಮಹಿಳೆಯರು, ಕೊರೋನಾ ಸೋಂಕಿತರು ಪಟಾಕಿಯಿಂದ ದೂರವಿರಿ

* ಪಟಾಕಿ ಮುಟ್ಟಿದ ಬಳಿಕ ತಕ್ಷಣ ಕೈತೊಳೆದುಕೊಳ್ಳಿ

* ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ

* ಪಟಾಕಿ ಸಿಡಿಸುವ ವೇಳೆ ಹತ್ತಿರದಲ್ಲಿ ಬಕೆಟ್‌ ನೀರು ಇಟ್ಟುಕೊಳ್ಳಿ

ಕೊರೋನಾ ಸೋಂಕಿನಿಂದ ಶ್ವಾಸಕೋಶದ ಸಮಸ್ಯೆ ಉಂಟಾಗಿರುವವರಿಗೆ ಪಟಾಕಿ ಹೊಗೆ ತೀವ್ರ ತೊಂದರೆ ಉಂಟು ಮಾಡಲಿದೆ. ಪಟಾಕಿ ಹೊಗೆ ಉಸಿರಾಡುವುದರಿಂದ ಆರೋಗ್ಯದ ಹದಗೆಡಲಿದೆ. ಆಸ್ತಮ ಸೇರಿದಂತೆ ದೀರ್ಘ ಕಾಲದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವವರಿಗೆ ರೋಗ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇದೆ.

- ಡಾ.ಸಿ.ನಾಗರಾಜ್‌, ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು