ಬೊಬ್ರವಾಡದಲ್ಲಿ ಎಲ್ಲರ ಗಮನ ಸೆಳೆದ ಹಾರುವ ರತ್ನ!

By Kannadaprabha NewsFirst Published Dec 18, 2023, 7:52 AM IST
Highlights

ಭಾರತದ ಹಾರುವ ರತ್ನವೆಂದೇ ಪ್ರಸಿದ್ಧವಾದ ಅಟ್ಲಾಸ್ ಪತಂಗವು ಭಾನುವಾರ ಇಲ್ಲಿನ ಬೇಳಾಬಂದರಿನ ಐಟಿಐ ಕಾಲೇಜಿನ ಉಪನ್ಯಾಸಕ, ಬೊಬ್ರವಾಡದ ಕೃಷ್ಣ ನಾಯ್ಕ ಅವರ ನಿವಾಸದ ಬಳಿ ಕಂಡು ಬಂದಿತು. ಬೃಹತ್ ಗಾತ್ರದ ಸಾಟುರ್ನಿಡೆ ಕುಟುಂಬಕ್ಕೆ ಸೇರಿದ ಈ ಪತಂಗವು ಪಶ್ಚಿಮ ಘಟ್ಟ ಮತ್ತು ಉಷ್ಣವಲಯದ ಕಾಡುಗಳಲ್ಲಿ ಆಗಾಗ ತನ್ನ ಇರುವಿಕೆ ಸಾಬೀತುಪಡಿಸುತ್ತಿದೆ.

ಅಂಕೋಲಾ (ಡಿ.18): ಭಾರತದ ಹಾರುವ ರತ್ನವೆಂದೇ ಪ್ರಸಿದ್ಧವಾದ ಅಟ್ಲಾಸ್ ಪತಂಗವು ಭಾನುವಾರ ಇಲ್ಲಿನ ಬೇಳಾಬಂದರಿನ ಐಟಿಐ ಕಾಲೇಜಿನ ಉಪನ್ಯಾಸಕ, ಬೊಬ್ರವಾಡದ ಕೃಷ್ಣ ನಾಯ್ಕ ಅವರ ನಿವಾಸದ ಬಳಿ ಕಂಡು ಬಂದಿತು. ಬೃಹತ್ ಗಾತ್ರದ ಸಾಟುರ್ನಿಡೆ ಕುಟುಂಬಕ್ಕೆ ಸೇರಿದ ಈ ಪತಂಗವು ಪಶ್ಚಿಮ ಘಟ್ಟ ಮತ್ತು ಉಷ್ಣವಲಯದ ಕಾಡುಗಳಲ್ಲಿ ಆಗಾಗ ತನ್ನ ಇರುವಿಕೆ ಸಾಬೀತುಪಡಿಸುತ್ತಿದೆ.

ಜೀವ ವಿಜ್ಞಾನಿಗಳ ಪ್ರಕಾರ ಅಳಿವಿನ ಅಂಚಿನಲ್ಲಿರುವ ಇವುಗಳ ಆವಾಸ ಸ್ಥಾನವು ಅರಣ್ಯ ನಾಶ ಪರಿಸರ ಮಾಲಿನ್ಯದಿಂದ ಧಕ್ಕೆಗೊಳಗಾಗಿದೆ. ಪಾಶ್ಚಿಮಾತ್ಯರಲ್ಲಿ ಇವುಗಳನ್ನು ಸಂಗ್ರಹಿಸುವ ಪ್ರವೃತ್ತಿ ಕಂಡುಬರುತ್ತದೆ. ಅಪೂರ್ವ ವರ್ಣ ವಿನ್ಯಾಸದಿಂದ ಗಮನ ಸೆಳೆಯುವ ಇದರ ರೆಕ್ಕೆಗಳು ೨೫ ಸೆಂ.ಮೀ. ವರೆಗೆ ಅಗಲವಾಗಿರುತ್ತದೆ.

ರೆಕ್ಕೆಗಳ ಅಂಚಿನಲ್ಲಿರುವ ಪಾರದರ್ಶಕ ಕಿಟಕಿಗಳಂತಹ ತ್ರಿಕೋನಾಕೃತಿಯ ಕಣ್ಣುಗಳು ಶತ್ರುಗಳಿಂದ ರಕ್ಷಣೆ ಪಡೆದುಕೊಳ್ಳಲು ನೆರವಾಗುತ್ತವೆ. ೮ರಿಂದ ೧೦ ಕಿಮೀ ವರೆಗೆ ತನ್ನ ಎಂಟೆನಾಗಳಿಂದ ಸಂಗಾತಿಗೆ ಸಂದೇಶ ರವಾನಿಸುವ ಸಾಮರ್ಥ್ಯ ಈ ಪತಂಗಕ್ಕಿರುತ್ತದೆ.

 

ದೇಶದಲ್ಲಿ 78 ರೀತಿಯ ಪಕ್ಷಿಗಳು ಪತ್ತೆ: ಇಷ್ಟೊಂದು ವೈವಿಧ್ಯತೆ ಭಾರತದಲ್ಲಿ ಮಾತ್ರ

click me!