ಚಿಕ್ಕಮಗಳೂರು: ಪರಿಚಯಸ್ಥ ಮುಸ್ಲಿಂ ಯುವತಿ ಜೊತೆ ಮಾತನಾಡುತ್ತಾ ನಿಂತಿದ್ದ ಎನ್ನುವ ಕಾರಣಕ್ಕೆ ವಿನಾಕಾರಣ ಜಗಳ ತೆಗೆದು, ದಲಿತ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಗುರುವಾರ ಚಿಕ್ಕಮಗಳೂರಲ್ಲಿ ನಡೆದಿದೆ. ಈ ಸಂಬಂಧ 3 ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ನಿವಾಸಿಗಳಾದ ನಯಾಜ್, ತಬ್ರೀಜ್, ಹನೀಫ್ ಬಂಧಿತ ಆರೋಪಿಗಳು. ಹಲ್ಲೆ ನಡೆಸಿದ ಉಳಿದ 5 ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ. ಯುವತಿಯೊಂದಿಗೆ ನೀನು ಏಕೆ ಇದೀಯಾ? ಎಂದು ಮುಸ್ಲಿಂ ಯುವಕರು ದಲಿತ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ 8 ಮಂದಿಯ ವಿರುದ್ಧ ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಸೆಕ್ಷನ್ ಅಡಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
09:42 PM (IST) Feb 21
ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ಬಿಜೆಪಿ ರಾಜ್ಯಸಭಾ ಎಂಪಿ ಸುಧಾಂಶು ತ್ರಿವೇದಿ ನೀಡಿದ ಉತ್ತರ ಹಲವರಿಗೆ ಮನಮುಟ್ಟುವಂತೆ ಹೇಳಿದಂತಿದೆ. ಹೊರಗಿನಿಂದ ಬಂದು ಬೆಂಗಳೂರು ನಾವೆ ಬೆಳೆಸಿದ್ದು ಎಂದವರಿಗೆ ಈ ಉತ್ತರ.
09:38 PM (IST) Feb 21
'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ಪಾತ್ರಧಾರಿ ರಿಷಿಕಾ ಹಂಚಿಕೊಂಡ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಇದರಲ್ಲಿ ದುರ್ಗಾ, ಶರತ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಬಿಳಿ ಹೊದಿಕೆ ಹೊದ್ದು ಮಲಗಿದ್ದು, ಎಲ್ಲರೂ ಸತ್ತು ಹೋಗುತ್ತಾರಾ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.
09:16 PM (IST) Feb 21
ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಎಐ ನಿರ್ಮಿತ ಮದುವೆ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಗಿಲ್ಲಿ ನಟ, ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ವಿಡಿಯೋ ಮಾಡಿದವರ ಶ್ರಮವನ್ನು ಶ್ಲಾಘಿಸಿದ್ದಾರೆ.
09:00 PM (IST) Feb 21
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಜಿಲ್ಲಾಡಳಿತವು ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್‌ಗೆ ಒಂದು ತಿಂಗಳ ಕಾಲ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
08:35 PM (IST) Feb 21
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ₹90 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ 30 ವರ್ಷಗಳ ಒಪ್ಪಂದದ ನಂತರ, ನಿಲ್ದಾಣವನ್ನು ‘ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ’ಎಂದು ಮರುನಾಮಕರಣ ಮಾಡಲಾಗುವುದು.
07:38 PM (IST) Feb 21
ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈ0ಗಿಕ ಕಿರುಕುಳ, ಮಕ್ಕಳನ್ನು ಪೋಷಕರು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಇದನ್ನೇ ಬಳಸಿಕೊಂಡ 64ರ ಹರೆಯದ ವೃದ್ಧಿ ಮಕ್ಕಳಿಗೆ ಚಾಕೋಲೇಟ್ ಆಸೆ ತೂರಿಸಿ ಲೈ0ಗಿಕ ಕಿರುಕುಳ ನೀಡಿದ್ದಾನೆ.
06:28 PM (IST) Feb 21
ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಿರ್ವಾಹಕ ಕಾಂತರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
05:56 PM (IST) Feb 21
ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್, ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಖರ್ಗೆ ಭೇಟಿ ಬೆನ್ನಲ್ಲೇ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
05:37 PM (IST) Feb 21
05:20 PM (IST) Feb 21
ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿ.ಕೆ.ಶಿವಕುಮಾರ್ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ಅಸ್ಸಾಂನ ಕಾಮಾಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವುದು ಅಧಿಕಾರ ಸಮರಕ್ಕೆ ಹೊಸ ತಿರುವು ನೀಡಿದ್ದಾರೆ.
03:32 PM (IST) Feb 21
03:24 PM (IST) Feb 21
ಮುಡಾ ಹಗರಣದ ಹೋರಾಟಗಾರ್ತಿ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿನೋದ್ ಎಂಬ ವ್ಯಕ್ತಿಯಿಂದ ದಾರಿ ತಪ್ಪಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ.
02:43 PM (IST) Feb 21
Prema kavya Actress Shweta Koglur 'ಪ್ರೇಮಕಾವ್ಯ' ಧಾರಾವಾಹಿಯಲ್ಲಿ ಖಳನಾಯಕಿ ಸ್ನೇಹಾ ಪಾತ್ರಧಾರಿ ಶ್ವೇತಾ ಕೊಗ್ಲೂರ್, ತಮ್ಮ ಬೋಲ್ಡ್ ಬೀಚ್ ಫೋಟೋಶೂಟ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಂದ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದಾರೆ.
02:40 PM (IST) Feb 21
ಚಿಕ್ಕಮಗಳೂರಿನ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಐಟಿ ಉದ್ಯೋಗಿ ರಂಜಿತಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬೆನ್ನಲ್ಲಿಯೇ ಹೋಂಸ್ಟೇ ಮಾಲೀಕರ ವಿರುದ್ಧ 4 ತಿಂಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ.
01:53 PM (IST) Feb 21
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ನಂತರ ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಶಾಂತಿ ಸಭೆಯು ಹಿಂದೂ ಮುಖಂಡರ ಗೈರುಹಾಜರಿಯಿಂದ ವಿಫಲ.. ಸಭೆಗೆ ಹಾಜರಾದ ಮುಸ್ಲಿಂ ಮುಖಂಡರು, ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಭೆಯಿಂದ ನಿರ್ಗಮಿಸಿದರು.
01:45 PM (IST) Feb 21
01:38 PM (IST) Feb 21
ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ, ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
01:34 PM (IST) Feb 21
01:25 PM (IST) Feb 21
200 ಸೀಟುಗಳನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ. ಇಪಿಎಸ್ ಮುಂದಿನ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಡಿಎಂಕೆ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ..
01:22 PM (IST) Feb 21
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮನೆ ಊಟದ ಮನವಿ ತಿರಸ್ಕರಿಸಿದ ನ್ಯಾಯಾಲಯ, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.
01:15 PM (IST) Feb 21
01:00 PM (IST) Feb 21
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಚಿತ್ರಾಲ್ ರಂಗಸ್ವಾಮಿ ಅವರು ಷೋ ಬಗ್ಗೆ ಕೆಲವು ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಎಲಿಮಿನೇಷನ್‌ಗಳನ್ನು ಮೊದಲೇ ಒಪ್ಪಂದದ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ಸಾರ್ವಜನಿಕ ವೋಟಿಂಗ್ ಪ್ರಕ್ರಿಯೆಯು ಕೇವಲ ನಾಟಕ ಎಂದು ಅವರು ಆರೋಪಿಸಿದ್ದಾರೆ.
12:42 PM (IST) Feb 21
12:23 PM (IST) Feb 21
ಹೇಮಾವತಿ ಉಪನದಿಯಾದ ಜಪಾವತಿಗೆ ಕಾಫಿ ಸಂಸ್ಕರಿಸಿದ ಪಲ್ಫರ್ ನೀರು ಸೇರುತ್ತಿರುವುದರಿಂದ ನೀರು ವಿಷಯುಕ್ತವಾಗಿದೆ. ಇದರಿಂದ ಜಲಚರಗಳು ಸಾವನ್ನಪ್ಪುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.
12:16 PM (IST) Feb 21
12:13 PM (IST) Feb 21
ರಶ್ಮಿಕಾ ಮಂದಣ್ಣ ಬಗ್ಗೆ ವಿಜಯ್, "ರಶ್ಮಿಕಾ ಪ್ರತಿದಿನ ಟೀಕೆ ಮತ್ತು ಅವಹೇಳನಗಳನ್ನು ಎದುರಿಸುತ್ತಾಳೆ. ನಾನಾಗಿದ್ದರೆ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದೆ, ಆದರೆ ರಶ್ಮಿಕಾ ಎಲ್ಲವನ್ನೂ ಪ್ರೀತಿ ಮತ್ತು ತಾಳ್ಮೆಯಿಂದಲೇ ಎದುರಿಸುತ್ತಾಳೆ. ಅವಳು ನಿಜಕ್ಕೂ ಒಬ್ಬ ಅದ್ಭುತ ಮಹಿಳೆ" ಎಂದಿದ್ದಾರೆ ವಿಜಯ್ ದೇವರಕೊಂಡ.
11:58 AM (IST) Feb 21
11:54 AM (IST) Feb 21
11:45 AM (IST) Feb 21
11:19 AM (IST) Feb 21
ಎನ್‌ಐಎಯಿಂದ 5 ಲಕ್ಷ ಬಹುಮಾನ ಘೋಷಿತ ಲಷ್ಕರ್-ಎ-ತೊಯ್ಬಾ ಉಗ್ರ ಜುನೈದ್ ಅಹ್ಮದ್ ಪತ್ತೆಗೆ, ಬೆಂಗಳೂರಿನ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಸಮುದಾಯಕ್ಕೆ ಕರೆ ನೀಡಿದ್ದಾರೆ. ಹಣದಾಸೆಗಾಗಿ ಅಲ್ಲ, ದೇಶಸೇವೆಯಾಗಿ ಉಗ್ರನ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
11:18 AM (IST) Feb 21
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಮದುವೆಗೆ ತಿಂಗಳು ಇರುವಾಗಲೇ ಮುದ್ದುರಂಗಪ್ಪ ಎಂಬ ಯುವಕ ನಾಪತ್ತೆಯಾಗಿದ್ದಾನೆ. ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದ ಈತ, ಮದುವೆ ನಿಮಿತ್ತ ಬಾಡೂಟ ಹಾಕಿಸಿದ ಮರುದಿನವೇ ಕಣ್ಮರೆಯಾಗಿದ್ದು, ಕುಟುಂಬಸ್ಥರು ಆತಂಕದಲ್ಲಿದ್ದಾರೆ.
11:18 AM (IST) Feb 21
11:07 AM (IST) Feb 21
ನಟಿ ಮೇಘನಾ ರಾಜ್ ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಣ್ಣೀರು ಹಣವಾಗಿ ಬದಲಾಯಿತು ಎಂದಿದ್ದಾರೆ.
10:42 AM (IST) Feb 21
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಹೇಮಂತ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತಂಗಿಗೆ ಆಭರಣ ಕೊಡಿಸಿದ್ದಕ್ಕೆ ತಾಯಿಯೊಂದಿಗೆ ಜಗಳವಾಡಿದ್ದ ಹೇಮಂತ್, ತಿರುಪತಿಗೆ ತೆರಳುವ ಸಿದ್ಧತೆಯಲ್ಲಿದ್ದಾಗಲೇ ಈ ದುರಂತ ಘಟನೆ ನಡೆದಿದೆ.
10:26 AM (IST) Feb 21
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ 'ರಣರಂಗ ಬಿಟ್ಟು ಓಡುವ ಹೇಡಿ ನಾನಲ್ಲ' ಎಂದು ಗುಡುಗಿದ್ದಾರೆ. ತಮ್ಮ ರಾಜಕೀಯ ಜೀವನವು ಕಲ್ಲು-ಮುಳ್ಳಿನ ಹಾದಿಯಾಗಿದ್ದು, ತನ್ನ ಹಾಗೂ ಜನರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ಬಗ್ಗುವುದಿಲ್ಲವೆಂದು ವಿರೋಧಿಗಳಿಗೆ ನೇರ ಸವಾಲು
10:05 AM (IST) Feb 21
ಬೆಂಗಳೂರು ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ನೈಋತ್ಯ ರೈಲ್ವೆಯು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಹೊಸ ರೈಲು ಯಶವಂತಪುರದಿಂದ ಮಡಗಾಂವ್‌ಗೆ 12 ಗಂಟೆಗಳಲ್ಲಿ ತಲುಪುವ ನಿರೀಕ್ಷೆಯಿದ್ದರೂ, ಘಟ್ಟ ಪ್ರದೇಶಗಳಲ್ಲಿನ ನಿಧಾನಗತಿಯ ವೇಗವು ಒಂದು ಪ್ರಮುಖ ಸವಾಲಾಗಿದೆ.
10:01 AM (IST) Feb 21
09:55 AM (IST) Feb 21
ರಾಯಚೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ದೇಶದ ಹಿತಾಸಕ್ತಿಯನ್ನೇ ಬಲಿಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಎಐ ತಂತ್ರಜ್ಞಾನದಿಂದ ಉದ್ಯೋಗ ನಷ್ಟ ಎಂಬುದು ಅಪಪ್ರಚಾರ ಎಂದ ಅವರು, ರಾಹುಲ್ ಗಾಂಧಿ 'ಅಪ್ರಬುದ್ಧ ರಾಜಕಾರಣಿ' ಎಂದು ಟೀಕಿಸಿದರು.
09:45 AM (IST) Feb 21
ಬೆಂಗಳೂರಿನಲ್ಲಿ ಇಸ್ರೋ ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಪತ್ನಿಯ ಭವಿಷ್ಯದ ಚಿಂತೆಯಿಂದ ಆಕೆಯನ್ನು ಹತ್ಯೆ ಮಾಡಿದ್ದಾರೆ. ಈ ದುರಂತದ ಬಳಿಕ, ಅಮೆರಿಕದಲ್ಲಿರುವ ಅವರ ಏಕೈಕ ಪುತ್ರಿ ತಾಯಿಯ ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದ್ದಾರೆ.
09:30 AM (IST) Feb 21
ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ನೇಣು ಬಿಗದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. 20 ವರ್ಷದ ಹೇಮಂತ್ ಆತ್ಮ*ಹತ್ಯೆಗೆ ಶರಣಾದ ಯುವಕ.